نُبذَةٌ فِي العَقِيدَةِ الإِسْلَامِيَّة (شَرْحُ أُصُولِ الإِيمَانِ)
ಇಸ್ಲಾಮೀ ಅಖೀದದ (ವಿಶ್ವಾಸ ಸಂಹಿತೆಯ) ಸಂಕ್ಷಿಪ್ತ ಪರಿಚಯ
بِقَلَم فَضِيلَة الشَّيخ العَلَّامَة
مُحَمَّدِ بْنِ صَالِحٍ العُثَيمِين
غَفَرَ اللَّهُ لَهُ وَلِوَالِدَيْهِ وَلِلْمُسْلِمِين
ಲೇಖಕರು: ಫದೀಲತು ಶ್ಶೈಖ್ ಅಲ್-ಅಲ್ಲಾಮಾ
ಮುಹಮ್ಮದ್ ಬಿನ್ ಸ್ವಾಲಿಹ್ ಅಲ್-ಉಸೈಮೀನ್
ಅಲ್ಲಾಹು ಅವರಿಗೆ, ಅವರ ತಂದೆ-ತಾಯಿಗೆ ಮತ್ತು ಎಲ್ಲಾ ಮುಸ್ಲಿಮರಿಗೆ ಕ್ಷಮಿಸಲಿ
بِسْمِ اللَّهِ الرَّحْمَنِ الرَّحِيمِ
ಇಸ್ಲಾಮೀ ಅಖೀದದ
(ವಿಶ್ವಾಸ ಸಂಹಿತೆಯ) ಸಂಕ್ಷಿಪ್ತ ಪರಿಚಯ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ
ಪರಿಚಯ
ಸರ್ವಸ್ತುತಿ ಅಲ್ಲಾಹನಿಗೆ ಮೀಸಲು. ನಾವು ಅವನನ್ನು ಸ್ತುತಿಸುತ್ತೇವೆ, ಅವನಲ್ಲಿ ಸಹಾಯ ಬೇಡುತ್ತೇವೆ, ಅವನಲ್ಲಿ ಕ್ಷಮೆ ಯಾಚಿಸುತ್ತೇವೆ ಮತ್ತು ಅವನ ಕಡೆಗೆ ಪಶ್ಚಾತ್ತಾಪಪಡುತ್ತೇವೆ. ನಮ್ಮ ಶರೀರಗಳ ಕೆಡುಕುಗಳಿಂದ ಮತ್ತು ನಮ್ಮ ಕರ್ಮಗಳ ದುಷ್ಫಲದಿಂದ ನಾವು ಅಲ್ಲಾಹನಲ್ಲಿ ರಕ್ಷೆ ಬೇಡುತ್ತೇವೆ. ಅಲ್ಲಾಹನ ಮಾರ್ಗದರ್ಶನದಲ್ಲಿರುವವನು ಪಥಭ್ರಷ್ಟನಾಗಲಾರ. ಅಲ್ಲಾಹು ಪಥಭ್ರಷ್ಟಗೊಳಿಸಿದವನು ಮಾರ್ಗದರ್ಶನವನ್ನು ಪಡೆಯಲಾರ. ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ಮುಹಮ್ಮದ್ (ಸ) ರವರು ಅವನ ದಾಸ ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅವರ ಮೇಲೆ, ಅವರ ಕುಟುಂಬದ ಮೇಲೆ, ಅವರ ಸಹಾಬಾಗಳ ಮೇಲೆ ಮತ್ತು ಅವರನ್ನು ಅತ್ಯುತ್ತಮವಾಗಿ ಅನುಸರಿಸಿದವರ ಮೇಲೆ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.
ಮುಂದುವರಿದು ಹೇಳುವುದೇನೆಂದರೆ: ಖಂಡಿತವಾಗಿಯೂ ಏಕ ದೇವತ್ವದ ಜ್ಞಾನವು ಎಲ್ಲಾ ಜ್ಞಾನಗಳಲ್ಲಿ ಅತ್ಯಂತ ಗೌರವಾನ್ವಿತ, ಅತ್ಯಂತ ಶ್ರೇಷ್ಠ, ಮತ್ತು ಕಡ್ಡಾಯವಾಗಿ ತಿಳಿಯಬೇಕಾದ ಜ್ಞಾನವಾಗಿದೆ. ಏಕೆಂದರೆ ಇದು ಸರ್ವಶಕ್ತನಾದ ಅಲ್ಲಾಹನ, ಅವನ ನಾಮಗಳ, ಅವನ ಗುಣಲಕ್ಷಣಗಳ, ಅವನ ದಾಸರ ಮೇಲೆ ಅವನಿಗಿರುವ ಹಕ್ಕುಗಳ ಬಗ್ಗೆಯಿರುವ ಜ್ಞಾನವಾಗಿದೆ. ಇದು ಸರ್ವಶಕ್ತನಾದ ಅಲ್ಲಾಹನ ಮಾರ್ಗದ ಕೀಲಿಯಾಗಿದೆ ಮತ್ತು ಅವನ ಕಾನೂನುಗಳ ಅಡಿಪಾಯವಾಗಿದೆ.
ಆದ್ದರಿಂದಲೇ ಅದರ ಕಡೆ ಆಹ್ವಾನಿಸುವ ವಿಷಯದಲ್ಲಿ ಪ್ರವಾದಿಗಳು ಒಮ್ಮತಾಭಿಪ್ರಾಯವನ್ನು ಹೊಂದಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَمَآ أَرۡسَلۡنَا مِن قَبۡلِكَ مِن رَّسُولٍ إِلَّا نُوحِيٓ إِلَيۡهِ أَنَّهُۥ لَآ إِلَٰهَ إِلَّآ أَنَا۠ فَٱعۡبُدُونِ25﴾
“ನನ್ನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನನ್ನನ್ನು ಆರಾಧಿಸಿರಿ ಎಂಬ ದಿವ್ಯಸಂದೇಶವನ್ನು ನೀಡಿಯೇ ಹೊರತು ತಮಗಿಂತ ಮುಂಚೆ ಯಾವುದೇ ಸಂದೇಶವಾಹಕರನ್ನೂ ನಾವು ಕಳುಹಿಸಿಲ್ಲ.”
[ಅಲ್-ಅಂಬಿಯಾ:25]
ಅಲ್ಲಾಹನು ಸ್ವತಃ ತನ್ನ ಏಕತೆಯ ಮೇಲೆ ಸಾಕ್ಷ್ಯವಹಿಸಿದ್ದಾನೆ, ಅಲ್ಲಾಹನ ಮಲಕ್ಗಳು ಮತ್ತು ಜ್ಞಾನವುಳ್ಳವರು ಸಹ ಈ ವಿಷಯದ ಬಗ್ಗೆ ಸಾಕ್ಷ್ಯ ನೀಡಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿شَهِدَ ٱللَّهُ أَنَّهُۥ لَآ إِلَٰهَ إِلَّا هُوَ وَٱلۡمَلَٰٓئِكَةُ وَأُوْلُواْ ٱلۡعِلۡمِ قَآئِمَۢا بِٱلۡقِسۡطِۚ لَآ إِلَٰهَ إِلَّا هُوَ ٱلۡعَزِيزُ ٱلۡحَكِيمُ 18﴾
“ತನ್ನ ಹೊರತು ಅನ್ಯ ಆರಾಧ್ಯರಿಲ್ಲವೆಂದು ಅಲ್ಲಾಹು ಸಾಕ್ಷ್ಯವಹಿಸಿರುವನು. ಮಲಕ್ಗಳೂ ಜ್ಞಾನವುಳ್ಳವರೂ (ಅದಕ್ಕೆ ಸಾಕ್ಷಿಗಳಾಗಿರುವರು). ಅವನು ನ್ಯಾಯಪಾಲಿಸುವವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.” [ಆಲಿ ಇಮ್ರಾನ್:18].
ಏಕ ದೇವತ್ವಕ್ಕೆ ಇಂತಹ ಉನ್ನತ ಸ್ಥಾನಮಾನವಿರುವುದರಿಂದಾಗಿ ಅದನ್ನು ಕಲಿಯುವ ಮೂಲಕ, ಕಲಿಸುವ ಮೂಲಕ, ಅದರ ಕುರಿತು ಚಿಂತಿಸುವ ಮೂಲಕ ಮತ್ತು ಅದರ ಪ್ರಕಾರ ವಿಶ್ವಾಸವಿಡುವ ಮೂಲಕ ಪ್ರತಿಯೊಬ್ಬ ಮುಸ್ಲಿಮನೂ ಅದರ ಕುರಿತು ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಇದರಿಂದ ತನ್ನ ಧರ್ಮವನ್ನು ಸುಭದ್ರವಾದ ತಳಹದಿಯ ಮೇಲೆ, ತೃಪ್ತಿ ಮತ್ತು ಸಮರ್ಪಣೆಯ ಆಧಾರದ ಮೇಲೆ ನಿರ್ಮಿಸಿ ಅದರ ಪ್ರತಿಫಲಗಳನ್ನು ಪಡೆದು ಸೌಭಾಗ್ಯವಂತನಾಗಲು ಸಾಧ್ಯವಾಗುತ್ತದೆ.
ಅಲ್ಲಾಹನೇ ತೌಫೀಕ್ ದಯಪಾಲಿಸುವವನು.
ಲೇಖಕರು
ಇಸ್ಲಾಮ್ ಧರ್ಮ
ಇಸ್ಲಾಮ್ ಧರ್ಮ: ಇದು ಅಲ್ಲಾಹನು ಪ್ರವಾದಿ ಮುಹಮ್ಮದ್ صلي الله عليه وسلم ರವರೊಂದಿಗೆ ಕಳುಹಿಸಿದ ಧರ್ಮವಾಗಿದೆ. ಇದರೊಂದಿಗೆ ಅಲ್ಲಾಹನು ಧರ್ಮಗಳನ್ನು ಕೊನೆಗೊಳಿಸಿ ಈ ಧರ್ಮವನ್ನು ತನ್ನ ದಾಸರಿಗೆ ಪರಿಪೂರ್ಣಗೊಳಿಸಿದನು ಮತ್ತು ಇದರ ಮೂಲಕ ಅವರಿಗೆ ತನ್ನ ಅನುಗ್ರಹವನ್ನು ನೆರವೇರಿಸಿಕೊಟ್ಟು ಇಸ್ಲಾಮನ್ನು ಅವರಿಗೆ ಒಂದು ಧರ್ಮವಾಗಿ ತೃಪ್ತಿಪಟ್ಟನು. ಅವನು ಇದಲ್ಲದ ಬೇರೆ ಧರ್ಮವನ್ನು ಯಾರಿಂದಲೂ ಎಂದಿಗೂ ಸ್ವೀಕರಿಸಲಾರನು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَۗ وَكَانَ ٱللَّهُ بِكُلِّ شَيۡءٍ عَلِيمٗا 40﴾
"ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಕಟ್ಟಕಡೆಯವರಾಗಿರುವರು. ಅಲ್ಲಾಹು ಎಲ್ಲ ವಿಷಯಗಳ ಬಗ್ಗೆ ಅರಿವುಳ್ಳವನಾಗಿರುವನು." [ಅಲ್-ಅಹ್ಝಾಬ್:40]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗاۚ...﴾
“ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ತೀಕರಿಸಿ ಕೊಟ್ಟಿರುವೆನು. ನನ್ನ ಅನುಗ್ರಹವನ್ನು ನಾನು ನಿಮಗೆ ನೆರವೇರಿಸಿಕೊಟ್ಟಿರುವೆನು. ಇಸ್ಲಾಮನ್ನು ಧರ್ಮವಾಗಿ ನಾನು ನಿಮಗೆ ತೃಪ್ತಿಪಟ್ಟಿರುವೆನು.”
[ಅಲ್-ಮಾಇದ:3].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿إِنَّ ٱلدِّينَ عِندَ ٱللَّهِ ٱلۡإِسۡلَٰمُ...﴾
“ಖಂಡಿತವಾಗಿಯೂ ಅಲ್ಲಾಹನ ಬಳಿ ಧರ್ಮವೆಂದರೆ ಇಸ್ಲಾಮ್ ಮಾತ್ರವಾಗಿದೆ.” [ಆಲಿ ಇಮ್ರಾನ್:19].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَمَن يَبۡتَغِ غَيۡرَ ٱلۡإِسۡلَٰمِ دِينٗا فَلَن يُقۡبَلَ مِنۡهُ وَهُوَ فِي ٱلۡأٓخِرَةِ مِنَ ٱلۡخَٰسِرِينَ 85﴾
“ಯಾರಾದರೂ ಇಸ್ಲಾಮಿಗೆ (ಅಲ್ಲಾಹನಿಗಿರುವ ಶರಣಾಗತಿಗೆ) ಹೊರತಾಗಿರುವುದನ್ನು ಧರ್ಮವಾಗಿ ಅರಸುವುದಾದರೆ ಅದನ್ನು ಅವನಿಂದ ಎಂದಿಗೂ ಸ್ವೀಕರಿಸಲಾಗದು. ಪರಲೋಕದಲ್ಲಿ ಅವನು ನಷ್ಟ ಹೊಂದಿದದವರ ಪೈಕಿ ಸೇರಿದವನಾಗುವನು.”
[ಆಲಿ ಇಮ್ರಾನ್:85].
ಇದೇ ಧರ್ಮದ ಪ್ರಕಾರ ಜೀವಿಸಬೇಕೆಂದು ಅಲ್ಲಾಹನು ತನ್ನ ಎಲ್ಲಾ ದಾಸರಿಗೆ ಕಡ್ಡಾಯಗೊಳಿಸಿದ್ದಾನೆ. ಅಲ್ಲಾಹನು ಪ್ರವಾದಿ ಮುಹಮ್ಮದ್ صلي الله عليه وسلم ರವರನ್ನು ಕರೆದು ಹೇಳುತ್ತಾನೆ:
﴿قُلۡ يَٰٓأَيُّهَا ٱلنَّاسُ إِنِّي رَسُولُ ٱللَّهِ إِلَيۡكُمۡ جَمِيعًا ٱلَّذِي لَهُۥ مُلۡكُ ٱلسَّمَٰوَٰتِ وَٱلۡأَرۡضِۖ لَآ إِلَٰهَ إِلَّا هُوَ يُحۡيِۦ وَيُمِيتُۖ فَـَٔامِنُواْ بِٱللَّهِ وَرَسُولِهِ ٱلنَّبِيِّ ٱلۡأُمِّيِّ ٱلَّذِي يُؤۡمِنُ بِٱللَّهِ وَكَلِمَٰتِهِۦ وَٱتَّبِعُوهُ لَعَلَّكُمۡ تَهۡتَدُونَ 158﴾
“ಹೇಳಿರಿ: ಓ ಮನುಷ್ಯರೇ! ಖಂಡಿತವಾಗಿಯೂ ನಾನು ನಿಮ್ಮೆಲ್ಲರೆಡೆಗೆ (ಕಳುಹಿಸಲಾಗಿರುವ) ಅಲ್ಲಾಹನ ಸಂದೇಶವಾಹಕನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಆಧಿಪತ್ಯವು ಯಾರಿಗಾಗಿದೆಯೋ ಅವನ (ಸಂದೇಶವಾಹಕನು). ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಜೀವವನ್ನು ನೀಡುವವನೂ ಮೃತಪಡಿಸುವವನೂ ಆಗಿರುವನು. ಆದ್ದರಿಂದ ನೀವು ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ, ಅಂದರೆ ಅಲ್ಲಾಹನಲ್ಲಿ ಮತ್ತು ಅವನ ಸೂಕ್ತಿಗಳಲ್ಲಿ ವಿಶ್ವಾಸವಿಡುವ ನಿರಕ್ಷರಿಯಾದ ಆ ಪ್ರವಾದಿಯಲ್ಲೂ ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗವನ್ನು ಪಡೆಯಲೂಬಹುದು.”
[ಅಲ್-ಅಅ್ರಾಫ್:158]
ಸಹೀಹ್ ಮುಸ್ಲಿಮ್ನಲ್ಲಿ ಹೀಗಿದೆ: ಅಬೂ ಹುರೈರ رضي الله عنه ರಿಂದ ವರದಿ. ಪ್ರವಾದಿ صلى الله عليه وسلم ರವರು ಹೇಳಿದರು:
«وَالَّذِي نَفْسُ مُحَمَّدٍ بِيَدِهِ لَا يَسْمَعُ بِي أَحَدٌ مِنْ هَذِهِ الْأُمَّةِ يَهُودِيٌّ وَلَا نَصْرَانِيٌّ، ثُمَّ يَمُوتُ وَلَمْ يُؤْمِنْ بِالَّذِي أُرْسِلْتُ بِهِ إِلَّا كَانَ مِنْ أَصْحَابِ النَّارِ».
“ಮುಹಮ್ಮದ್ರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಈ ಸಮುದಾಯದಲ್ಲಿ ಸೇರಿದ ಯಾವುದೇ ವ್ಯಕ್ತಿ, ಅವನು ಯಹೂದಿಯಾಗಿರಲಿ ಅಥವಾ ಕ್ರಿಶ್ಚಿಯನ್ ಆಗಿರಲಿ, ನನ್ನ ಬಗ್ಗೆ ಕೇಳಿ ನನ್ನ ಜೊತೆ ಕಳುಹಿಸಲಾದ ಧರ್ಮದಲ್ಲಿ ವಿಶ್ವಾಸವಿಡದೆ ಮರಣ ಹೊಂದಿದರೆ, ಅವನು ನರಕವಾಸಿಗಳಲ್ಲಿ ಸೇರುತ್ತಾನೆ.1
ಇಸ್ಲಾಮ್ ಧರ್ಮದಲ್ಲಿ ವಿಶ್ವಾಸವಿಡುವುದು: ಅಂದರೆ ಪ್ರವಾದಿ صلي الله عليه وسلم ರವರು ತಂದ ಧರ್ಮವನ್ನು ಸ್ವೀಕರಿಸಿ ಅದನ್ನು ಅನುಸರಿಸುವ ಮೂಲಕ ದೃಢೀಕರಿಸುವುದು. ಕೇವಲ ದೃಢೀಕರಿಸಿದರೆ ಸಾಲದು. ಆದುದರಿಂದಲೇ ಪ್ರವಾದಿ صلي الله عليه وسلم ರವರು ತಂದ ಧರ್ಮವನ್ನು ದೃಢೀಕರಿಸಿ ಅದನ್ನು ಅತ್ಯುತ್ತಮ ಧರ್ಮವೆಂದು ಸಾಕ್ಷಿ ನುಡಿದ ಅಬೂತಾಲಿಬ್ ಪ್ರವಾದಿ صلي الله عليه وسلم ರಲ್ಲಿ ವಿಶ್ವಾಸವಿಟ್ಟವರಾಗಲಿಲ್ಲ.
ಇಸ್ಲಾಮ್ ಧರ್ಮವು ಹಿಂದಿನ ಧರ್ಮಗಳು ಒಳಗೊಂಡಿರುವ ಎಲ್ಲಾ ಹಿತಗಳನ್ನು ಒಳಗೊಂಡಿದೆ. ಎಲ್ಲಾ ಸ್ಥಳ-ಕಾಲ-ಸಮುದಾಯಗಳಿಗೂ ಯೋಗ್ಯವೆಂಬ ವಿಶೇಷತೆ ಇದಕ್ಕಿದೆ. ಸರ್ವಶಕ್ತನಾದ ಅಲ್ಲಾಹನು ತನ್ನ ಪ್ರವಾದಿಯನ್ನು ಕರೆದು ಹೇಳುತ್ತಾನೆ:
﴿وَأَنزَلۡنَآ إِلَيۡكَ ٱلۡكِتَٰبَ بِٱلۡحَقِّ مُصَدِّقٗا لِّمَا بَيۡنَ يَدَيۡهِ مِنَ ٱلۡكِتَٰبِ وَمُهَيۡمِنًا عَلَيۡهِ...﴾
“(ಓ ಪ್ರವಾದಿಯವರೇ!) ತಮಗೆ ನಾವು ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ.”
[ಅಲ್-ಮಾಇದ:48].
ಈ ಧರ್ಮವು ಎಲ್ಲಾ ಸ್ಥಳ-ಕಾಲ-ಸಮುದಾಯಗಳಿಗೂ ಯೋಗ್ಯವಾಗಿದೆ ಎಂದರೆ, ಈ ಧರ್ಮವನ್ನು ಅನುಸರಿಸುವುದರಿಂದ ಯಾವುದೇ ಕಾಲದ ಅಥವಾ ಸ್ಥಳದ ಸಾಮುದಾಯಿಕ ಹಿತಾಸಕ್ತಿಗಳಿಗೆ ಇದು ವಿರುದ್ಧವಾಗುವುದಿಲ್ಲ. ಬದಲಾಗಿ ಅದರಲ್ಲೇ ಅದರ ಹಿತವಿದೆ. ಕೆಲವರು ಬಯಸುವಂತೆ ಧರ್ಮವು ಎಲ್ಲಾ ಕಾಲ, ಸ್ಥಳ ಮತ್ತು ಸಮುದಾಯಕ್ಕೆ ವಿಧೇಯವಾಗಿದೆ ಎಂಬುದು ಇದರ ಅರ್ಥವಲ್ಲ.
ಇಸ್ಲಾಮ್ ಧರ್ಮವು ಸತ್ಯ ಧರ್ಮವಾಗಿದ್ದು ಯಾರು ಇದನ್ನು ಅಳವಡಿಸಿಕೊಳ್ಳಬೇಕಾದ ರೀತಿಯಲ್ಲೇ ಅಳವಡಿಸಿಕೊಳ್ಳುತ್ತಾರೋ ಅವರಿಗೆ ವಿಜಯವನ್ನು ಕರುಣಿಸುವೆನು ಮತ್ತು ಈ ಧರ್ಮವನ್ನು ಇತರೆಲ್ಲಾ ಧರ್ಮಗಳ ಮೇಲೆ ಪ್ರಕಟಗೊಳಿಸುವೆನು ಎಂದು ಅಲ್ಲಾಹನು ಖಾತ್ರಿ ನೀಡಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿هُوَ ٱلَّذِيٓ أَرۡسَلَ رَسُولَهُۥ بِٱلۡهُدَىٰ وَدِينِ ٱلۡحَقِّ لِيُظۡهِرَهُۥ عَلَى ٱلدِّينِ كُلِّهِۦ وَلَوۡ كَرِهَ ٱلۡمُشۡرِكُونَ 9﴾
“ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ, ಅದನ್ನು ಸರ್ವ ಧರ್ಮಗಳ ಮೇಲೂ ಪ್ರಕಟಗೊಳಿಸಿ ತೋರಿಸುವ ಸಲುವಾಗಿ ತನ್ನ ಸಂದೇಶವಾಹಕರನ್ನು ಕಳುಹಿಸಿದವನು ಅವನಾಗಿರುವನು. ಬಹುದೇವಾರಾಧಕರಿಗೆ (ಅದು) ಅಸಹ್ಯಕರವಾದರೂ ಸರಿಯೇ!” [ಅಸ್ಸಫ್ಫ್:9].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَعَدَ ٱللَّهُ ٱلَّذِينَ ءَامَنُواْ مِنكُمۡ وَعَمِلُواْ ٱلصَّٰلِحَٰتِ لَيَسۡتَخۡلِفَنَّهُمۡ فِي ٱلۡأَرۡضِ كَمَا ٱسۡتَخۡلَفَ ٱلَّذِينَ مِن قَبۡلِهِمۡ وَلَيُمَكِّنَنَّ لَهُمۡ دِينَهُمُ ٱلَّذِي ٱرۡتَضَىٰ لَهُمۡ وَلَيُبَدِّلَنَّهُم مِّنۢ بَعۡدِ خَوۡفِهِمۡ أَمۡنٗاۚ يَعۡبُدُونَنِي لَا يُشۡرِكُونَ بِي شَيۡـٔٗاۚ وَمَن كَفَرَ بَعۡدَ ذَٰلِكَ فَأُوْلَٰٓئِكَ هُمُ ٱلۡفَٰسِقُونَ 55﴾
“ನಿಮ್ಮ ಪೈಕಿ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರೊಂದಿಗೆ, ಅಲ್ಲಾಹು ಅವರಿಗಿಂತ ಮುಂಚಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯವನ್ನು ನೀಡಿದಂತೆ ಖಂಡಿತವಾಗಿಯೂ ಅವನು ಅವರಿಗೂ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮದ ವಿಷಯದಲ್ಲಿ ಅವನು ಅವರಿಗೆ ಅಧಿಕಾರವನ್ನು ನೀಡುವನು ಮತ್ತು ಅವರಿಗುಂಟಾದ ಭಯಭೀತಿಯ ಬಳಿಕ ಅವನು ಅವರಿಗೆ ನಿರ್ಭೀತಿಯನ್ನು ಬದಲಿಸಿ ಕೊಡುವನು ಎಂದು ವಾಗ್ದಾನ ಮಾಡಿರುವನು. ಅವರು ನನ್ನನ್ನು (ಮಾತ್ರ) ಆರಾಧಿಸುವರು ಮತ್ತು ನನ್ನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಲಾರರು. ಯಾರಾದರೂ ಅದರ ಬಳಿಕವೂ ಕೃತಘ್ನತೆ ತೋರಿದರೆ ಅವರೇ ಧಿಕ್ಕಾರಿಗಳಾಗಿರುವರು.” [ಅನ್ನೂರ್:55].
ಇಸ್ಲಾಮ್ ಧರ್ಮವು ವಿಶ್ವಾಸ ಮತ್ತು ಧರ್ಮಶಾಸ್ತ್ರವನ್ನು ಒಳಗೊಂಡಿರುವ ಧರ್ಮವಾಗಿದೆ. ಅದು ಅದರ ವಿಶ್ವಾಸ ಮತ್ತು ಧರ್ಮಶಾಸ್ತ್ರದಲ್ಲಿ ಸಂಪೂರ್ಣವಾಗಿದೆ: (ಅದು ಈ ಕೆಳಗಿರುವ ಆದೇಶಗಳನ್ನು ಒಳಗೊಂಡಿದೆ)
1- ಅದು ಅಲ್ಲಾಹನ ಏಕ ದೇವತ್ವದ ಆದೇಶ ನೀಡುತ್ತದೆ ಮತ್ತು ಸಹಭಾಗಿತ್ವವನ್ನು ವಿರೋಧಿಸುತ್ತದೆ.
2- ಅದು ಸತ್ಯವನ್ನು ಆಜ್ಞಾಪಿಸುತ್ತದೆ ಮತ್ತು ಸುಳ್ಳನ್ನು ವಿರೋಧಿಸುತ್ತದೆ.
3- ಅದು ನ್ಯಾಯವನ್ನು ಆಜ್ಞಾಪಿಸುತ್ತದೆ ಮತ್ತು ಅನ್ಯಾಯವನ್ನು ವಿರೋಧಿಸುತ್ತದೆ. ನ್ಯಾಯ ಎಂದರೆ ಒಂದೇ ರೀತಿಯ ವಸ್ತುಗಳ ನಡುವಿನ ಸಮಾನತೆ ಮತ್ತು ವಿಭಿನ್ನ ರೀತಿಯ ವಸ್ತುಗಳ ನಡುವಿನ ವ್ಯತ್ಯಾಸವಾಗಿದೆ. ನ್ಯಾಯವೆಂದರೆ ಅನಿರ್ದಿಷ್ಟವಾದ ಸಮಾನತೆಯಲ್ಲ. ಕೆಲವರು ಇಂತಹ ಅನಿರ್ದಿಷ್ಟ ಸಮಾನತೆಯ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ: “ಇಸ್ಲಾಮ್ ಧರ್ಮವೆಂದರೆ ಸಮಾನತೆಯ ಧರ್ಮವಾಗಿದೆ.” ಅವರು ಇದನ್ನು ಅನಿರ್ದಿಷ್ಟವಾಗಿ ಹೇಳುತ್ತಾರೆ. ಆದರೆ ವಾಸ್ತವವಾಗಿ, ವಿಭಿನ್ನ ರೀತಿಯ ವಸ್ತುಗಳ ನಡುವೆ ಸಮಾನತೆ ತರುವುದು ಅನ್ಯಾಯವಾಗಿದೆ. ಇಸ್ಲಾಂ ಧರ್ಮವು ಇದನ್ನು ಬೋಧಿಸುವುದಿಲ್ಲ. ಹಾಗೆ ಮಾಡುವವರು ಪ್ರಶಂಸಾರ್ಹರೂ ಅಲ್ಲ.
4- ಅದು ಪ್ರಾಮಾಣಿಕತೆಯನ್ನು ಆಜ್ಞಾಪಿಸುತ್ತದೆ ಮತ್ತು ವಂಚನೆಯನ್ನು ವಿರೋಧಿಸುತ್ತದೆ.
5- ಅದು ಕರಾರುಗಳನ್ನು ನೆರವೇರಿಸಲು ಆಜ್ಞಾಪಿಸುತ್ತದೆ ಮತ್ತು ಮೋಸ ಮಾಡುವುದನ್ನು ವಿರೋಧಿಸುತ್ತದೆ.
6- ಅದು ತಂದೆ-ತಾಯಿಯರೊಂದಿಗೆ ಉತ್ತಮವಾಗಿ ವರ್ತಿಸಬೇಕೆಂದು ಆದೇಶಿಸುತ್ತದೆ ಮತ್ತು ಅವರಿಗೆ ಅವಿಧೇಯತೆ ತೋರುವುದನ್ನು ವಿರೋಧಿಸುತ್ತದೆ.
7- ಅದು ರಕ್ತ ಸಂಬಂಧಗಳನ್ನು ಜೋಡಿಸಬೇಕೆಂದು ಆದೇಶಿಸುತ್ತದೆ ಮತ್ತು ರಕ್ತ ಸಂಬಂಧಗಳನ್ನು ಕಡಿಯುವುದನ್ನು ವಿರೋಧಿಸುತ್ತದೆ.
8- ಅದು ನೆರೆಹೊರೆಯವರೊಂದಿಗೆ ಉತ್ತಮ ರೀತಿಯಿಂದ ವರ್ತಿಸಬೇಕೆಂದು ಆದೇಶಿಸುತ್ತದೆ ಮತ್ತು ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದನ್ನು ವಿರೋಧಿಸುತ್ತದೆ.
ಒಟ್ಟಿನಲ್ಲಿ, ಇಸ್ಲಾಮ್ ಧರ್ಮವು ಎಲ್ಲಾ ಒಳ್ಳೆಯ ಸ್ವಭಾವಗಳನ್ನು ಆದೇಶಿಸುತ್ತದೆ ಮತ್ತು ಎಲ್ಲಾ ಕೆಟ್ಟ ಸ್ವಭಾವಗಳನ್ನು ವಿರೋಧಿಸುತ್ತದೆ. ಹಾಗೆಯೇ ಅದು ಎಲ್ಲಾ ಸತ್ಕರ್ಮಗಳನ್ನು ಆದೇಶಿಸುತ್ತದೆ ಮತ್ತು ಎಲ್ಲಾ ದುಷ್ಕರ್ಮಗಳನ್ನು ವಿರೋಧಿಸುತ್ತದೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿إِنَّ ٱللَّهَ يَأۡمُرُ بِٱلۡعَدۡلِ وَٱلۡإِحۡسَٰنِ وَإِيتَآيِٕ ذِي ٱلۡقُرۡبَىٰ وَيَنۡهَىٰ عَنِ ٱلۡفَحۡشَآءِ وَٱلۡمُنكَرِ وَٱلۡبَغۡيِۚ يَعِظُكُمۡ لَعَلَّكُمۡ تَذَكَّرُونَ 90﴾
“ಖಂಡಿತವಾಗಿಯೂ ಅಲ್ಲಾಹು ನ್ಯಾಯ ಪಾಲಿಸಲು, ಒಳಿತನ್ನು ಮಾಡಲು ಮತ್ತು ಸಂಬಂಧಿಕರಿಗೆ (ನೆರವು) ನೀಡಲು ಆಜ್ಞಾಪಿಸುತ್ತಿರುವನು. ನೀಚಕೃತ್ಯಗಳನ್ನು, ದುರಾಚಾರಗಳನ್ನು ಮತ್ತು ಅತಿಕ್ರಮಗಳನ್ನು ಅವನು ವಿರೋಧಿಸುತ್ತಿರುವನು. ನೀವು ಚಿಂತಿಸಿ ಗ್ರಹಿಸುವ ಸಲುವಾಗಿ ಅವನು ನಿಮಗೆ ಉಪದೇಶ ನೀಡುತ್ತಿರುವನು.” [ಅನ್ನಹ್ಲ್:90]
ಇಸ್ಲಾಮಿನ ಸ್ತಂಭಗಳು
ಇಸ್ಲಾಮಿನ ಸ್ತಂಭಗಳೆಂದರೆ ಇಸ್ಲಾಂ ಧರ್ಮವನ್ನು ನಿರ್ಮಿಸಲಾಗಿರುವ ಐದು ಅಡಿಪಾಯಗಳು. ಒಟ್ಟು ಐದು ಸ್ಥಂಭಗಳಿವೆ: ಇಬ್ನು ಉಮರ್ رضي الله عنهما ರವರು ವರದಿ ಮಾಡಿರುವ ಹದೀಸಿನಲ್ಲಿ ಅವುಗಳನ್ನು ಉಲ್ಲೇಖಿಸಲಾಗಿದೆ. ಪ್ರವಾದಿ صلي الله عليه وسلم ರವರು ಹೇಳಿದರು: “ಇಸ್ಲಾಮ್ ಧರ್ಮವನ್ನು ಐದು ಸ್ಥಂಭಗಳ ಮೇಲೆ ನಿರ್ಮಿಸಲಾಗಿದೆ. ಅಲ್ಲಾಹನು ಏಕೈಕ ಆರಾಧ್ಯನೆಂದು ನಂಬುವುದು - ಇನ್ನೊಂದು ವರದಿಯಲ್ಲಿ خمس ಎಂಬ ಪದ ಉಲ್ಲೇಖವಾಗಿದೆ- ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ صلي الله عليه وسلم ರವರು ಅವನ ದಾಸ ಮತ್ತು ಸಂದೇಶವಾಹಕರೆಂದು ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ಕೊಡುವುದು, ರಮಜಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ಹಜ್ಜ್ ಯಾತ್ರೆ ಕೈಗೊಳ್ಳುವುದು.” ಆಗ ಒಬ್ಬ ವ್ಯಕ್ತಿ ಕೇಳಿದರು: “ಹಜ್ಜ್ ಮತ್ತು ರಮಜಾನ್ ತಿಂಗಳ ಉಪವಾಸವೇ?” ಇಬ್ನು ಉಮರ್ ಹೇಳಿದರು: “ಅಲ್ಲ, ರಮಜಾನ್ ತಿಂಗಳ ಉಪವಾಸ ಮತ್ತು ಹಜ್ಜ್. ನಾನು ಇದೇ ಪ್ರಕಾರ ಪ್ರವಾದಿರವರು ಹೇಳುವುದನ್ನು ಕೇಳಿದ್ದೇನೆ.”
«بُنِيَ الْإِسْلَامُ عَلَى خَمْسَةٍ: عَلَى أَنْ يُوَحِّدَ اللَّه - وَفِي رِوَايَةٍ عَلَى خَمْسٍ -: شَهَادَةِ أَنْ لَا إِلَهَ إِلَّا اللَّهُ، وَأَنَّ مُحَمَّدًا عَبْدُهُ وَرَسُولُهُ، وَإِقَامِ الصَّلَاةِ، وَإِيتَاءِ الزَّكَاةِ، وَصِيَامِ رَمَضَانَ، وَالْحَجِّ».
"ಇಸ್ಲಾಂ ಧರ್ಮವನ್ನು ಐದು ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ: ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರಾದ ಬೇರೆ ಆರಾಧ್ಯನಿಲ್ಲ ಮತ್ತು ಮುಹಮ್ಮದ್ (ಸ) ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷ್ಯ ನುಡಿಯುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು." ಆಗ ಒಬ್ಬ ವ್ಯಕ್ತಿ ಮೊದಲು ಹಜ್ ನಂತರ ರಮದಾನಿನ ಉಪವಾಸ ಎಂದಾಗ, ಅಬ್ದುಲ್ಲಾ ಇಬ್ನು ಉಮರ್ (ಅಲ್ಲಾಹು ಅವರಿಬ್ಬರಿಂದ ಸಂಪ್ರೀತನಾಗಲಿ) ಹೇಳಿದರು:
«لَا، صِيَامُ رَمَضَانَ، وَالْحَجُّ».
"ಅಲ್ಲ, ಮೊದಲು ರಮದಾನಿನ ಉಪವಾಸ ನಂತರ ಹಜ್ಜ್." ನಾನು ಅಲ್ಲಾಹನ ಪ್ರವಾದಿ ﷺ ರವರಿಂದ ಇದೇ ಕ್ರಮದಲ್ಲಿ ಹೇಳಿದ್ದನ್ನು ಆಲಿಸಿದ್ದೇನೆ2
1- ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್ صلي الله عليه وسلم ರವರು ಅವನ ದಾಸ ಮತ್ತು ಸಂದೇಶವಾಹಕರೆಂದು ಸಾಕ್ಷ್ಯ ವಹಿಸುವುದು ಎಂದರೆ: ಈ ಸಾಕ್ಷ್ಯದ ಕುರಿತು ಸಂಪೂರ್ಣ ಹಾಗೂ ದೃಢವಾದ ನಂಬಿಕೆಯಿಟ್ಟು ನಾಲಿಗೆಯಿಂದ ಅದನ್ನು ಉಚ್ಛರಿಸುವುದು. ಅಂದರೆ ಈ ಸಾಕ್ಷ್ಯಿ ನುಡಿಯುವವನಿಗೆ ಅವನು ಅದನ್ನು ವೀಕ್ಷಿಸುತ್ತಿದ್ದಾನೆಂಬ ಖಚಿತತೆ ಮತ್ತು ದೃಢತೆ ಇರಬೇಕು. ಸಾಕ್ಷ್ಯ ನೀಡಲಾಗುವಂತಹ ವಿಷಯವು ಒಂದಕ್ಕಿಂತ ಹೆಚ್ಚಾಗಿದ್ದರೂ ಈ ಸಾಕ್ಷ್ಯವನ್ನು ಒಂದೇ ಸ್ತಂಭವನ್ನಾಗಿ ಮಾಡಲಾಗಿರುವುದು ಏಕೆಂದರೆ:
ಒಂದೋ ಪ್ರವಾದಿ صلي الله عليه وسلم ರವರು ಅಲ್ಲಾಹನ ಸಂದೇಶವನ್ನು ತಲುಪಿಸುವವರಾಗಿದ್ದಾರೆ ಎಂಬ ಕಾರಣದಿಂದ. ಅವರು ಅಲ್ಲಾಹನ ದಾಸರು ಮತ್ತು ಸಂದೇಶವಾಹಕರಾಗಿದ್ದಾರೆಂಬ ಸಾಕ್ಷ್ಯವು ಅಲ್ಲಾಹನು ಏಕೈಕ ನೈಜ ಆರಾಧ್ಯನಾಗಿದ್ದಾನೆಂಬ ಸಾಕ್ಷ್ಯದ ಪರಿಪೂರ್ಣತೆಯಲ್ಲಿ ಒಳಗೊಳ್ಳುತ್ತದೆ.
ಅಥವಾ ಈ ಎರಡೂ ಸಾಕ್ಷ್ಯಗಳು ಸತ್ಕರ್ಮಗಳು ಸಿಂಧುವಾಗುವುದಕ್ಕಿರುವ ಮತ್ತು ಸ್ವೀಕಾರವಾಗುವುದಕ್ಕಿರುವ ಅಡಿಪಾಯವಾಗಿದೆ ಎಂಬ ಕಾರಣದಿಂದ. ಅಲ್ಲಾಹನಿಗೆ ನಿಷ್ಕಳಂಕತೆ ತೋರದೆ ಮತ್ತು ಪ್ರವಾದಿ صلي الله عليه وسلم ರನ್ನು ಅನುಸರಿಸದೆ ಮಾಡುವ ಯಾವುದೇ ಸತ್ಕಾರ್ಯವು ಸಿಂಧುವಾಗವುದಿಲ್ಲ ಮತ್ತು ಸ್ವೀಕಾರವಾಗುವುದಿಲ್ಲ.
ಅಲ್ಲಾಹನಿಗೆ ನಿಷ್ಕಳಂಕತೆ ತೋರುವುದರಿಂದ ಅಲ್ಲಾಹನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ ಎಂಬ ಸಾಕ್ಷ್ಯ ವಚನ ಪೂರ್ತಿಯಾಗುತ್ತದೆ ಮತ್ತು ಪ್ರವಾದಿಯವರನ್ನು ಅನುಸರಿಸುವುದರಿಂದ ಮುಹಮ್ಮದ್ صلي الله عليه وسلم ರವರು ಅವನ ದಾಸ ಮತ್ತು ಸಂದೇಶವಾಹಕರು ಎಂಬ ಸಾಕ್ಷ್ಯ ವಚನ ಪೂರ್ತಿಯಾಗುತ್ತದೆ.
ಹೃದಯ ಮತ್ತು ಮನಸ್ಸನ್ನು ಸೃಷ್ಟಿಗಳ ದಾಸ್ಯದಿಂದ ಹಾಗೂ ಪ್ರವಾದಿಗಳ ಹೊರತಾದ ಇತರರ ಅನುಸರಣೆಯಿಂದ ಮುಕ್ತಗೊಳಿಸುವುದು ಈ ಮಹಾ ಸಾಕ್ಷ್ಯದ ಪ್ರತಿಫಲಗಳಲ್ಲಿ ಒಂದಾಗಿದೆ.
2- ನಮಾಝ್ ಸಂಸ್ಥಾಪಿಸುವುದು ಎಂದರೆ ನಿಗದಿತ ಸಮಯಗಳಲ್ಲಿ, ನಿಗದಿತ ರೂಪ ಮತ್ತು ಹಾವಭಾವಗಳೊಂದಿಗೆ ಸರಿಯಾಗಿ ಪೂರ್ಣ ರೀತಿಯಲ್ಲಿ ಅಲ್ಲಾಹನನ್ನು ಆರಾಧಿಸುವುದಾಗಿದೆ.
ಮಾನಸಿಕ ಸಂತೃಪ್ತಿ ಮತ್ತು ಕಣ್ಮನ ತಣಿಯುವುದಲ್ಲದೆ ಇದು ನೀಚಕೃತ್ಯಗಳು ಮತ್ತು ದುರಾಚಾರಗಳಿಂದ ತಡೆಯುವುದು ಇದರ ಪ್ರತಿಫಲಗಳಾಗಿವೆ.
3- ಝಕಾತ್ ನೀಡುವುದು ಎಂದರೆ ಝಕಾತ್ ನೀಡಲಿಕ್ಕೆ ಅರ್ಹವಾದ ಸಂಪತ್ತಿನಲ್ಲಿ ಕಡ್ಡಾಯ ಮೊತ್ತವನ್ನು ಪಾವತಿಸುವ ಮೂಲಕ ಅಲ್ಲಾಹನನ್ನು ಆರಾಧಿಸುವುದು.
ಕೆಟ್ಟ ಸ್ವಭಾವ (ಜಿಪುಣತನ ಇತ್ಯಾದಿ) ಗಳಿಂದ ಮನಸ್ಸನ್ನು ಶುಚಿಗೊಳಿಸುವುದು ಮತ್ತು ಇಸ್ಲಾಮ್ ಹಾಗೂ ಮುಸ್ಲಿಮರ ಅವಶ್ಯಕತೆಗಳನ್ನು ಪೂರೈಸುವುದು ಇದರ ಪ್ರತಿಫಲಗಳಾಗಿವೆ.
4- ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಎಂದರೆ ರಮದಾನ್ ತಿಂಗಳ ಹಗಲಿನಲ್ಲಿ ತಿನ್ನುವ ಮತ್ತು ಕುಡಿಯುವ ವಸ್ತುಗಳನ್ನು ಮತ್ತು ದೇಹೇಚ್ಛೆಗಳನ್ನು ತೊರೆಯುವ ಮೂಲಕ ಅಲ್ಲಾಹನನ್ನು ಆರಾಧಿಸುವುದು.
ಅಲ್ಲಾಹನ ಸಂಪ್ರೀತಿಯನ್ನು ಪಡೆಯಲಿಕ್ಕೆ ಇಷ್ಟವಾಗುವ ವಸ್ತುಗಳನ್ನು ತೊರೆಯುವುದರ ಮೂಲಕ ಮನಸ್ಸನ್ನು ಪಳಗಿಸುವುದು ಇದರ ಪ್ರತಿಫಲವಾಗಿದೆ.
5- ಹಜ್ಜ್: ಹಜ್ಜಿನ ವಿಧಿ ವಿಧಾನಗಳನ್ನು ನೆರವೇರಿಸಲು ಅಲ್ಲಾಹನ ಪವಿತ್ರ ಭವನಕ್ಕೆ ಯಾತ್ರೆ ಮಾಡುವ ಮೂಲಕ ಅಲ್ಲಾಹನನ್ನು ಆರಾಧಿಸುವುದು.
ಅಲ್ಲಾಹನ ಅನುಸರಣೆ ಮತ್ತು ವಿಧೇಯತೆಗಾಗಿ ಸಾಧ್ಯವಾದಷ್ಟು ಆರ್ಥಿಕ ಮತ್ತು ದೈಹಿಕ ಪ್ರಯತ್ನವನ್ನು ಮಾಡಲು ಮನಸ್ಸನ್ನು ಪಳಗಿಸುವುದು ಇದರ ಪ್ರತಿಫಲಗಳಲ್ಲಿ ಒಂದಾಗಿದೆ. ಆದ್ದರಿಂದ ಹಜ್ಜ್ ಯಾತ್ರೆಯು ಅಲ್ಲಾಹನ ಮಾರ್ಗದಲ್ಲಿ ಮಾಡಲಾಗುವ ಜಿಹಾದಿನ ಒಂದು ಭಾಗವಾಗಿದೆ.
ನಾವು ಮೇಲೆ ಉಲ್ಲೇಖಿಸಿದ ಇಸ್ಲಾಮಿನ ಸ್ತಂಭಗಳ ಪ್ರತಿಫಲಗಳು ಮತ್ತು ನಾವು ಉಲ್ಲೇಖಿಸದ ಪ್ರತಿಫಲಗಳೆಲ್ಲವೂ ಈ ಸಮುದಾಯವನ್ನು ಶುದ್ಧ, ಸ್ವಚ್ಛ, ಅಲ್ಲಾಹನ ಧರ್ಮದಲ್ಲಿ ಸ್ಥಿರವಾಗಿರುವ ಮತ್ತು ಸೃಷ್ಟಿಗಳೊಂದಿಗೆ ನ್ಯಾಯ ಮತ್ತು ಸತ್ಯದಿಂದ ವರ್ತಿಸುವ ಇಸ್ಲಾಮೀ ಸಮುದಾಯವನ್ನಾಗಿ ಮಾಡುತ್ತವೆ. ಏಕೆಂದರೆ ಈ ಮೂಲಭೂತ ವಿಷಯಗಳು ಸುಧಾರಣೆಯಾಗುವುದರೊಂದಿಗೆ ಇಸ್ಲಾಂ ಧರ್ಮದ ಉಳಿದ ವಿಧಿ-ವಿಧಾನಗಳು ಸುಧಾರಣೆಯಾಗುತ್ತವೆ. ಒಂದು ಸಮುದಾಯದ ಧಾರ್ಮಿಕ ವ್ಯವಹಾರಗಳು ಸುಧಾರಣೆಯಾಗುವುದರೊಂದಿಗೆ ಅದರ ಸ್ಥಿತಿಗತಿಗಳು ಸುಧಾರಣೆಯಾಗುತ್ತವೆ. ಒಂದು ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಎಷ್ಟರ ಮಟ್ಟಿಗೆ ಸುಧಾರಣೆಯಿರುವುದಿಲ್ಲವೋ ಅಷ್ಟರ ಮಟ್ಟಿಗೆ ಅದರ ಪರಿಸ್ಥಿತಿ ಹದಗೆಟ್ಟಿರುತ್ತದೆ.
ಯಾರು ಈ ಮಾತಿನ ವಿವರಣೆ ಬಯಸುತ್ತಾನೋ ಅವನು ಅಲ್ಲಾಹನ ಈ ವಚನವನ್ನು ಪಠಿಸಲಿ:
﴿وَلَوۡ أَنَّ أَهۡلَ ٱلۡقُرَىٰٓ ءَامَنُواْ وَٱتَّقَوۡاْ لَفَتَحۡنَا عَلَيۡهِم بَرَكَٰتٖ مِّنَ ٱلسَّمَآءِ وَٱلۡأَرۡضِ وَلَٰكِن كَذَّبُواْ فَأَخَذۡنَٰهُم بِمَا كَانُواْ يَكۡسِبُونَ 96 أَفَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا بَيَٰتٗا وَهُمۡ نَآئِمُونَ 97 أَوَأَمِنَ أَهۡلُ ٱلۡقُرَىٰٓ أَن يَأۡتِيَهُم بَأۡسُنَا ضُحٗى وَهُمۡ يَلۡعَبُونَ 98 أَفَأَمِنُواْ مَكۡرَ ٱللَّهِۚ فَلَا يَأۡمَنُ مَكۡرَ ٱللَّهِ إِلَّا ٱلۡقَوۡمُ ٱلۡخَٰسِرُونَ 99﴾
“ಆ ನಾಡುಗಳಲ್ಲಿರುವವರು ವಿಶ್ವಾಸವಿಟ್ಟವರೂ, ಭಯಭಕ್ತಿ ಪಾಲಿಸುವವರೂ ಆಗಿರುತ್ತಿದ್ದರೆ ನಾವವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಅನುಗ್ರಹಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ನಿಷೇಧಿಸಿದರು. ಆದ್ದರಿಂದ ಅವರು ಮಾಡಿಟ್ಟಿರುವುದರ ಫಲವಾಗಿ ನಾವು ಅವರನ್ನು ಹಿಡಿದೆವು. ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ? ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ? ಅವರು ಅಲ್ಲಾಹನ ತಂತ್ರದ ಬಗ್ಗೆ ನಿರ್ಭೀತರಾಗಿರುವರೇ? ನಷ್ಟ ಹೊಂದಿರುವ ಜನರಲ್ಲದೆ ಇನ್ನಾರೂ ಅಲ್ಲಾಹನ ತಂತ್ರದ ಬಗ್ಗೆ ನಿರ್ಭೀತರಾಗಿರಲಾರರು.”
ಅವರು ರಾತ್ರಿ ಮಲಗಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ?
ಅಥವಾ ಅವರು ಹಗಲಿನಲ್ಲಿ ಆಟವಾಡುತ್ತಿರುವಾಗ ನಮ್ಮ ಶಿಕ್ಷೆಯು ಅವರ ಬಳಿಗೆ ಬರುವುದರ ಬಗ್ಗೆ ನಾಡಿನ ನಿವಾಸಿಗಳು ನಿರ್ಭೀತರಾಗಿರುವರೇ?
ಅವರು ಅಲ್ಲಾಹುವಿನ ತಂತ್ರದ ಬಗ್ಗೆ ನಿರ್ಭೀತರಾಗಿರುವರೇ? ನಷ್ಟ ಹೊಂದಿರುವ ಜನರಲ್ಲದೆ ಇನ್ನಾರೂ ಅಲ್ಲಾಹುವಿನ ತಂತ್ರದ ಬಗ್ಗೆ ನಿರ್ಭೀತರಾಗಿರಲಾರರು." [ಅಲ್-ಅಅ್ರಾಫ್: 96- 99]
ಗತ ಕಾಲದ ಇತಿಹಾಸವನ್ನು ಗಮನಿಸಿದರೆ ಅದರಲ್ಲಿ ಬುದ್ಧಿವಂತರಿಗೆ ನೀತಿಪಾಠವಿದೆ, ಮತ್ತು ಹೃದಯಗಳ ಮೇಲೆ ಪರದೆ ಬೀಳದವರಿಗೆ ಅಂತರ್ದೃಷ್ಟಿಯಿದೆ. ಸಹಾಯ ಯಾಚಿಸಲಾಗುವವನು ಅಲ್ಲಾಹು ಮಾತ್ರ.
ಇಸ್ಲಾಮೀ ಅಖೀದದ (ವಿಶ್ವಾಸ) ಬುನಾದಿಗಳು
ಇಸ್ಲಾಮ್ ಧರ್ಮವು -ನಾವು ಮೇಲೆ ವಿವರಿಸಿದಂತೆ- ವಿಶ್ವಾಸ ಮತ್ತು ಧರ್ಮಶಾಸ್ತ್ರವಾಗಿದೆ. ಅದರ ಕೆಲವು ವಿಧಿ-ವಿಧಾನಗಳ ಬಗ್ಗೆ ಮತ್ತು ಅದರ ವಿಧಿ-ವಿಧಾನಗಳಿಗೆ ಮತ್ತು ಆದೇಶಗಳಿಗೆ ಬುನಾದಿಯಾಗಿರುವ ಸ್ತಂಭಗಳ ಬಗ್ಗೆ ನಾವು ವಿವರಿಸಿದೆವು.
ಇಸ್ಲಾಮೀ ವಿಶ್ವಾಸವು ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ, ಅಂತಿಮ ದಿನದಲ್ಲಿ, ಮತ್ತು ಒಳಿತು ಮತ್ತು ಕೆಡುಕಿನ ವಿಧಿಯಲ್ಲಿ ವಿಶ್ವಾಸವಿಡುವುದು ಎಂಬ ಬುನಾದಿಗಳನ್ನು ಆಧರಿಸಿದೆ.
ಪವಿತ್ರ ಕುರ್ಆನ್ ಮತ್ತು ಪ್ರವಾದಿ صلي الله عليه وسلم ರವರ ಸುನ್ನತ್ತಿನಲ್ಲಿ ಈ ಬುನಾದಿಗಳ ಕುರಿತು ಪುರಾವೆಗಳಿವೆ.
ಪವಿತ್ರ ಕುರ್ಆನಿನಲ್ಲಿ ಅಲ್ಲಾಹನ ವಚನ ಹೀಗಿದೆ:
﴿لَّيۡسَ ٱلۡبِرَّ أَن تُوَلُّواْ وُجُوهَكُمۡ قِبَلَ ٱلۡمَشۡرِقِ وَٱلۡمَغۡرِبِ وَلَٰكِنَّ ٱلۡبِرَّ مَنۡ ءَامَنَ بِٱللَّهِ وَٱلۡيَوۡمِ ٱلۡأٓخِرِ وَٱلۡمَلَٰٓئِكَةِ وَٱلۡكِتَٰبِ وَٱلنَّبِيِّـۧنَ...﴾
“ನೀವು ನಿಮ್ಮ ಮುಖಗಳನ್ನು ಪೂರ್ವದೆಡೆಗೆ ಅಥವಾ ಪಶ್ಚಿಮದೆಡೆಗೆ ತಿರುಗಿಸುವುದು ಪುಣ್ಯವಲ್ಲ. ಆದರೆ ಅಲ್ಲಾಹನಲ್ಲ್ಲಿ, ಅಂತ್ಯದಿನದಲ್ಲಿ, ಮಲಕ್ಗಳಲ್ಲ್ಲಿ, ಗ್ರಂಥದಲ್ಲಿ ಮತ್ತು ಪ್ರವಾದಿಗಳಲ್ಲಿ ವಿಶ್ವಾಸವಿಡುವವನು ಯಾರೋ ಅವನೇ ಪುಣ್ಯವಂತನು.”
[ಅಲ್-ಬಕರಃ :177] ವಿಧಿಯ ಕುರಿತು ಅಲ್ಲಾಹನು ಹೇಳುತ್ತಾನೆ:
﴿إِنَّا كُلَّ شَيۡءٍ خَلَقۡنَٰهُ بِقَدَرٖ 49 وَمَآ أَمۡرُنَآ إِلَّا وَٰحِدَةٞ كَلَمۡحِۭ بِٱلۡبَصَرِ 50﴾
“ಖಂಡಿತವಾಗಿಯೂ ಪ್ರತಿಯೊಂದು ವಸ್ತುವನ್ನೂ ನಾವು ಒಂದು ನಿರ್ಣಯದ ಪ್ರಕಾರ ಸೃಷ್ಟಿಸಿರುವೆವು. ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಕೇವಲ ಒಂದು ಘೋಷಣೆ ಮಾತ್ರವಾಗಿದೆ.”
ನಮ್ಮ ಆಜ್ಞೆಯು ಕಣ್ಣೆವೆಯಿಕ್ಕುವಂತೆ ಕೇವಲ ಒಂದು ಘೋಷಣೆ ಮಾತ್ರವಾಗಿದೆ."
[ಅಲ್-ಕಮರ್: 49- 50]
ಪ್ರವಾದಿ صلي الله عليه وسلم ರವರ ಹದೀಸಿನಲ್ಲಿರುವಂತೆ ಜಿಬ್ರೀಲ್ عليه السلام ರು ವಿಶ್ವಾಸದ ಕುರಿತು ಪ್ರಶ್ನಿಸಿದಾಗ ಅವರು ಹೀಗೆ ಉತ್ತರಿಸುತ್ತಾರೆ:
«الإِيمَانُ: أَنْ تُؤْمِنَ بِاللَّهِ، وَمَلَائِكَتِهِ، وَكُتُبِهِ، وَرُسُلِهِ، وَالْيَوْمِ الْآخِرِ، وَتُؤْمِنَ بِالْقَدَرِ: خَيْرِهِ وَشَرِّهِ».
ವಿಶ್ವಾಸವೆಂದರೆ: ಅಲ್ಲಾಹನಲ್ಲಿ, ಅವನ ಮಲಕ್ಗಳಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ, ಅಂತ್ಯ ದಿನದಲ್ಲಿ ಮತ್ತು ವಿಧಿಯಲ್ಲಿ – ಅದರ ಒಳಿತು ಮತ್ತು ಕೆಡುಕಿನಲ್ಲಿ ವಿಶ್ವಾಸವಿರಿಸುವುದು.3
ಅಲ್ಲಾಹನಲ್ಲಿ ವಿಶ್ವಾಸವಿಡುವುದು
ಅಲ್ಲಾಹನಲ್ಲಿರುವ ವಿಶ್ವಾಸವು ನಾಲ್ಕು ವಿಷಯಗಳನ್ನು ಒಳಗೊಂಡಿದೆ:
ಮೊದಲನೆಯದು: ಅಲ್ಲಾಹನ ಅಸ್ತಿತ್ವದಲ್ಲಿ ವಿಶ್ವಾಸವಿಡುವುದು:
ಪ್ರಕೃತಿ, ಸಹಜ ಗುಣ, ಬುದ್ಧಿ, ಧರ್ಮಶಾಸ್ತ್ರ ಮತ್ತು ಇಂದ್ರಿಯಗಳು ಅಲ್ಲಾಹನ ಅಸ್ತಿತ್ವಕ್ಕೆ ಸಾಕ್ಷಿಗಳಾಗಿವೆ.
1- ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವಕ್ಕೆ ಪ್ರಕೃತಿ, ಸಹಜ ಗುಣವು ಸಾಕ್ಷಿಯಾಗಿರುವುದು ಹೇಗೆಂದರೆ: ಪ್ರತಿಯೊಂದು ಜೀವಿಯನ್ನೂ, ಯಾವುದೇ ಪೂರ್ವಾಲೋಚನೆ/ಅಥವಾ ಶಿಕ್ಷಣವಿಲ್ಲದೆ ಸಹಜವಾಗಿಯೇ ತನ್ನ ಸೃಷ್ಟಿಕರ್ತನ ಮೇಲೆ ವಿಶ್ವಾಸವಿಡುವ ಸ್ಥಿತಿಯಲ್ಲಿ ಸೃಷ್ಟಿಸಲಾಗಿದೆ. ಯಾರಾದರೂ ಅವನ ಹೃದಯದಲ್ಲಿ ಅವನನ್ನು ಈ ಗುಣದಿಂದ ದೂರಮಾಡುವಂತಹ ಆಲೋಚನೆಗಳನ್ನು ಹಾಕಿದ್ದರಲ್ಲದೆ ಅವನು ಈ ಪ್ರಕೃತಿ ಸಹಜ ಗುಣವನ್ನು ಬಿಟ್ಟುಬಿಡುವುದಿಲ್ಲ. ಪ್ರವಾದಿ صلي الله عليه وسلم ರವರು ಹೇಳುತ್ತಾರೆ: “ಪ್ರತಿಯೊಂದು ಮಗುವೂ ಪ್ರಕೃತಿ ಸಹಜ ಗುಣದಲ್ಲೇ ಹುಟ್ಟುತ್ತದೆ. ನಂತರ ಅವನ ತಂದೆ ತಾಯಿಗಳು ಅವನನ್ನು ಯಹೂದಿಯಾಗಿ, ಕ್ರೈಸ್ತನಾಗಿ ಅಥವಾ ಅಗ್ನಿಯಾರಾಧಕನಾಗಿ ಪರಿವರ್ತಿಸುತ್ತಾರೆ.”
«مَا مِنْ مَوْلُودٍ إِلَّا يُولَدُ عَلَى الْفِطْرَةِ، فَأَبَوَاهُ يُهَوِّدَانِهِ أَوْ يُنَصِّرَانِهِ أَوْ يُمَجِّسَانِهِ».
“ಪ್ರತಿಯೊಂದು ಮಗುವೂ ಸಹಜ ಪ್ರಕೃತಿಯಲ್ಲೇ ಹುಟ್ಟುತ್ತದೆ. ನಂತರ ಆ ಮಗುವಿನ ತಂದೆ ತಾಯಿಗಳು ಅದನ್ನು ಯಹೂದಿಯಾಗಿ, ಕ್ರೈಸ್ತನಾಗಿ ಅಥವಾ ಅಗ್ನಿಯಾರಾಧಕನಾಗಿ ಪರಿವರ್ತಿಸುತ್ತಾರೆ.”4
2- ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವಕ್ಕೆ ಬುದ್ಧಿಯು ಸಾಕ್ಷಿಯಾಗಿರುವುದು ಹೇಗೆಂದರೆ: ಈ ಸಂಪೂರ್ಣ ಸೃಷ್ಟಿಗಳನ್ನು ಸೃಷ್ಟಿಸಿದ ಒಬ್ಬ ಸೃಷ್ಟಿಕರ್ತನಿರಬೇಕಾದುದು ಅನಿವಾರ್ಯ. ಏಕೆಂದರೆ ಅವು ಸ್ವತಃ ತಮ್ಮನ್ನು ತಾವೇ ಸೃಷ್ಟಿಸಿಕೊಳ್ಳಲು ಅಥವಾ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ.
ಅವು ಸ್ವತಃ ತಮ್ಮನ್ನು ತಾವೇ ಸೃಷ್ಟಿಸಿಕೊಳ್ಳಲು ಏಕೆ ಸಾಧ್ಯವಿಲ್ಲವೆಂದರೆ,ಯಾವುದೇ ಒಂದು ವಸ್ತು ತನ್ನನ್ನು ತಾನೇ ಸೃಷ್ಟಿಸುವುದಿಲ್ಲ .ಸೃಷ್ಟಿಯಾಗುವ ಮೊದಲು ಅದು ಅಸ್ತಿತ್ವದಲ್ಲೇ ಇಲ್ಲದಿರುವಾಗ ಅದು ಸೃಷ್ಟಿಸಲು ಹೇಗೆ ಸಾಧ್ಯ?
ಅದು ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬರಲು ಏಕೆ ಸಾಧ್ಯವಿಲ್ಲವೆಂದರೆ, ಯಾವುದೇ ಒಂದು ಹೊಸ ವಸ್ತು ಅಸ್ತಿತ್ವಕ್ಕೆ ಬರಬೇಕಾದರೆ ಅದಕ್ಕೆ ಅಸ್ತಿತ್ವ ನೀಡುವವನಿರಬೇಕಾದುದು ಅತ್ಯಗತ್ಯ. ಈ ಅದ್ಭುತ ವ್ಯವಸ್ಥೆಯೊಂದಿಗೆ, ಅನ್ಯೋನ್ಯ ಸಾಮರಸ್ಯದೊಂದಿಗೆ, ಕಾರಣ ಮತ್ತು ಕಾರಣಕರ್ತರು ಹಾಗೂ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳು ಪರಸ್ಪರ ಒಗ್ಗಟ್ಟಾಗಿ ಬೆಸೆದುಕೊಂಡಿರುವ ರೀತಿಯಲ್ಲಿ ಅದು ಅಸ್ತಿತ್ವದಲ್ಲಿರುವುದು ಅದರ ಅಸ್ತಿತ್ವವು ಆಕಸ್ಮಿಕವೆಂಬುದನ್ನು ಬಲವಾಗಿ ನಿರಾಕರಿಸುತ್ತದೆ. ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದ ವಸ್ತು ಅದರ ಮೂಲ ಅಸ್ತಿತ್ವದಲ್ಲೇ ವ್ಯವಸ್ಥಿತವಾಗಿರುವುದಿಲ್ಲ. ಹೀಗಿರುವಾಗ, ಅದರ ಉಳಿವು ಮತ್ತು ಬೆಳವಣಿಗೆಯಲ್ಲಿ ಅದು ವ್ಯವಸ್ಥಿತವಾಗಿರಲು ಹೇಗೆ ಸಾಧ್ಯ?
ಈ ಸೃಷ್ಟಿಗಳು ತಮ್ಮನ್ನು ತಾವೇ ಸೃಷ್ಟಿಸುವುದು, ಅಥವಾ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬರುವುದು ಸಾಧ್ಯವಿಲ್ಲ ಎಂದಾದರೆ, ಅವುಗಳಿಗೆ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದು ಸಾಬೀತಾಗುತ್ತದೆ. ಆ ಸೃಷ್ಟಿಕರ್ತನೇ ಸರ್ವಲೋಕಗಳ ಸಂರಕ್ಷಕನಾದ ಅಲ್ಲಾಹು.
ಸರ್ವಶಕ್ತನಾದ ಅಲ್ಲಾಹನು ಸೂರ ತೂರ್ನಲ್ಲಿ ಈ ತರ್ಕಬದ್ಧವಾದ ಮತ್ತು ಖಡಾಖಂಡಿತವಾದ ಪುರಾವೆಗಳನ್ನು ಉಲ್ಲೇಖಿಸುತ್ತಾ ಹೇಳುತ್ತಾನೆ:
﴿أَمۡ خُلِقُواْ مِنۡ غَيۡرِ شَيۡءٍ أَمۡ هُمُ ٱلۡخَٰلِقُونَ 35﴾
“ಅಥವಾ, ಯಾವುದೇ ವಸ್ತುವಿನಿಂದಲೂ ಅಲ್ಲದೆ ಅವರು ಸೃಷ್ಟಿಸಲ್ಪಟ್ಟಿರುವರೇ? ಅಥವಾ, ಸ್ವತಃ ಅವರೇ ಸೃಷ್ಟಿಕರ್ತರಾಗಿರುವರೇ?” [ಅತ್ತೂರ್:35]. ಅಂದರೆ: ಅವರು ಸೃಷ್ಟಿಕರ್ತನಿಲ್ಲದೆ ಸೃಷ್ಟಿಯಾಗಿಲ್ಲ, ಅಥವಾ ಅವರು ತಮ್ಮನ್ನು ತಾವೇ ಸೃಷ್ಟಿಮಾಡಿಕೊಂಡಿಲ್ಲ. ಆದ್ದರಿಂದ ಅವರನ್ನು ಸೃಷ್ಟಿಸಿದ್ದು ಸರ್ವಶಕ್ತನಾದ ಅಲ್ಲಾಹನೆಂದು,ಸಾಬೀತಾಗುತ್ತದೆ. ಆದ್ದರಿಂದ ಪ್ರವಾದಿ صلي الله عليه وسلم ರವರು ಸೂರ ತೂರ್ ಅನ್ನು ಪಠಿಸುವುದನ್ನು ಜುಬೈರ್ ಬಿನ್ ಮುತ್ಇಮ್ رضي الله عنه ರವರು ಕೇಳುತ್ತಿದ್ದಾಗ, ಮತ್ತು ಪ್ರವಾದಿಯವರು ಈ ಸೂಕ್ತಿಗಳನ್ನು ತಲುಪಿದಾಗ:
﴿أَمۡ خُلِقُواْ مِنۡ غَيۡرِ شَيۡءٍ أَمۡ هُمُ ٱلۡخَٰلِقُونَ 35 أَمۡ خَلَقُواْ ٱلسَّمَٰوَٰتِ وَٱلۡأَرۡضَۚ بَل لَّا يُوقِنُونَ 36 أَمۡ عِندَهُمۡ خَزَآئِنُ رَبِّكَ أَمۡ هُمُ ٱلۡمُصَۜيۡطِرُونَ 37﴾
“ಅಥವಾ, ಯಾವುದೇ ವಸ್ತುವಿನಿಂದಲೂ ಅಲ್ಲದೆ ಅವರು ಸೃಷ್ಟಿಸಲ್ಪಟ್ಟಿರುವರೇ? ಅಥವಾ, ಸ್ವತಃ ಅವರೇ ಸೃಷ್ಟಿಕರ್ತರಾಗಿರುವರೇ? ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವರು ಅವರಾಗಿರುವರೇ? ಅಲ್ಲ, ಅವರು ದೃಢವಾಗಿ ವಿಶ್ವಾಸವಿಡುವುದಿಲ್ಲ. ಅಥವಾ, ತಮ್ಮ ಪ್ರಭುವಿನ ಖಜಾನೆಗಳು ಅವರ ಬಳಿಯಿವೆಯೇ? ಅಥವಾ ಅಧಿಕಾರ ಚಲಾಯಿಸುವವರು ಅವರಾಗಿರುವರೇ?”
ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವರು ಅವರಾಗಿರುವರೇ? ಅಲ್ಲ, ಅವರು ದೃಢವಾಗಿ ವಿಶ್ವಾಸವಿಡುವುದಿಲ್ಲ.
ಅಥವಾ, ತಮ್ಮ ಪ್ರಭುವಿನ ಖಜಾನೆಗಳು ಅವರ ಬಳಿಯಿವೆಯೇ? ಅಥವಾ ಅಧಿಕಾರ ಚಲಾಯಿಸುವವರು ಅವರಾಗಿರುವರೇ?" [ಅತ್ತೂರ್:35-37].
ಆಗ ಜುಬೈರ್ ಬಹುದೇವಾರಾಧಕರಾಗಿದ್ದರು. ಅವರು ಹೇಳಿದರು: "ನನ್ನ ಹೃದಯ ಒಡೆದು ಹಾರಿ ಹೋಗುವಂತಾಗಿತ್ತು. ಇದು ಸತ್ಯವಿಶ್ವಾಸವು ಮೊದಲ ಬಾರಿ ನನ್ನ ಹೃದಯದಲ್ಲಿ ನೆಲೆಗೊಂಡ ಸಮಯವಾಗಿತ್ತು.”5 "ನನ್ನ ಹೃದಯ ಒಡೆದು ಹಾರಿ ಹೋಗುವಂತಾಗಿತ್ತು. ಇದು ಸತ್ಯವಿಶ್ವಾಸವು ಮೊದಲ ಬಾರಿ ನನ್ನ ಹೃದಯದಲ್ಲಿ ನೆಲೆಗೊಂಡ ಸಮಯವಾಗಿತ್ತು.”
ಇದನ್ನು ವಿವರಿಸಲು ನಾವು ಇಲ್ಲಿ ಒಂದು ಉದಾಹರಣೆಯನ್ನು ನೀಡುತ್ತಿದ್ದೇವೆ: ಒಬ್ಬ ವ್ಯಕ್ತಿ ಒಂದು ಭದ್ರ ಅರಮನೆಯ ಬಗ್ಗೆ ನಿಮಗೆ ಹೇಳುತ್ತಾನೆ. ಅದನ್ನು ತೋಟಗಳು ಮತ್ತು ಉದ್ಯಾನಗಳು ಆವರಿಸಿಕೊಂಡಿವೆ. ಅದರ ನಡುವೆ ನದಿಗಳು ಹರಿಯುತ್ತವೆ. ಅದರಲ್ಲಿ ಹಾಸಿಗೆಗಳು ಮತ್ತು ಸೋಫಗಳು ತುಂಬಿಕೊಂಡಿವೆ. ಆ ಅರಮನೆಯನ್ನು ಸುಖ-ಸವಲತ್ತು ಮತ್ತು ಅಲಂಕಾರದ ಎಲ್ಲಾ ರೀತಿಯ ಸಾಮಾನುಗಳಿಂದ ಅಲಂಕರಿಸಲಾಗಿದೆ. ಆ ವ್ಯಕ್ತಿ ಹೇಳುತ್ತಾನೆ: “ಈ ಅರಮನೆ ಮತ್ತು ಅದರಲ್ಲಿರುವ ಎಲ್ಲವೂ ಸ್ವಯಂ ಅಸ್ತಿತ್ವಕ್ಕೆ ಬಂದಿದೆ. ಅಥವಾ ಯಾವುದೇ ನಿರ್ಮಾತೃನಿಲ್ಲದೆ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂದಿದೆ.” ಆಗ ನೀವು ತಕ್ಷಣ ಅದನ್ನು ನಿರಾಕರಿಸುತ್ತೀರಿ ಮತ್ತು ಅದು ಸುಳ್ಳೆಂದು ಹೇಳುತ್ತೀರಿ. ಅವನ ಮಾತನ್ನು ಅಸಂಬದ್ಧ ಎಂದು ಪರಿಗಣಿಸುತ್ತೀರಿ. ಹಾಗಾದರೆ ಭೂಮಿ, ಆಕಾಶ, ಗ್ರಹಗಳು, ಕಾಲಗಳು ಮತ್ತು ಅದ್ಭುತ ವ್ಯವಸ್ಥೆಗಳನ್ನು ಒಳಗೊಂಡ ಈ ಬೃಹತ್ ವಿಶ್ವವು ಸ್ವಯಂ ಅಸ್ತಿತ್ವಕ್ಕೆ ಬಂತು ಅಥವಾ ಯಾವುದೇ ನಿರ್ಮಾತೃನಿಲ್ಲದೆ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬಂತು ಎಂದು ಹೇಳಬಹುದೇ!?
3- ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವಕ್ಕೆ ಧರ್ಮಶಾಸ್ತ್ರವು ಸಾಕ್ಷಿಯಾಗಿರುವುದು ಹೇಗೆಂದರೆ: ಎಲ್ಲಾ ದೈವಿಕ ಗ್ರಂಥಗಳೂ ಅಲ್ಲಾಹನ ಅಸ್ತಿತ್ವದ ಬಗ್ಗೆ ಮಾತನಾಡುತ್ತವೆ. ಆ ಗ್ರಂಥಗಳಲ್ಲಿರುವ ಮಾನವನ ಹಿತಕ್ಕೆ ಅನುಕೂಲವಾಗಿರುವ ನ್ಯಾಯಪೂರ್ಣ ನಿಯಮಗಳು, ಅವು ಸೃಷ್ಟಿಗಳ ಹಿತಕ್ಕಾಗಿ ಯುಕ್ತಿಪೂರ್ಣನೂ ಸರ್ವಜ್ಞನೂ ಆದ ಸಂರಕ್ಷಕನಿಂದ ಅವತೀರ್ಣವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ. ಆ ಗ್ರಂಥಗಳಲ್ಲಿರುವ, ಇಂದು ಸತ್ಯವೆಂದು ರುಜುವಾತಾಗಿರುವ ವೈಜ್ಞಾನಿಕ ಮಾಹಿತಿಗಳು, ಆ ಗ್ರಂಥವು ಅದರಲ್ಲಿರುವ ಮಾಹಿತಿಗಳನ್ನು ಆವಿಷ್ಕರಿಸಲು ಶಕ್ತನಾಗಿರುವ ಸಂರಕ್ಷಕನಿಂದ ಅವತೀರ್ಣವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ.
4- ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವಕ್ಕೆ ಇಂದ್ರಿಯವು ಸಾಕ್ಷಿಯಾಗಿರುವುದು ಹೇಗೆಂದರೆ, ಇದರಲ್ಲಿ ಎರಡು ರೀತಿಗಳಿವೆ:
ಮೊದಲನೆಯದು: ಪ್ರಾರ್ಥಿಸುವವರ ಪ್ರಾರ್ಥನೆಗಳಿಗೆ ಉತ್ತರ ಸಿಗುವುದನ್ನು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ದೊರಕುವುದನ್ನು ನಾವು ನೋಡುತ್ತೇವೆ ಮತ್ತು (ಅಂತಹ ಸುದ್ದಿಗಳನ್ನು) ಕೇಳುತ್ತೇವೆ. ಇವು ಅಲ್ಲಾಹನ ಅಸ್ತಿತ್ವಕ್ಕೆ ಖಡಾಖಂಡಿತ ಪುರಾವೆಗಳಾಗಿವೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَنُوحًا إِذۡ نَادَىٰ مِن قَبۡلُ فَٱسۡتَجَبۡنَا لَهُۥ...﴾
“ನೂಹ್ರನ್ನು (ಸ್ಮರಿಸಿರಿ). ಅವರು ಇದಕ್ಕೆ ಮುಂಚೆ ಕರೆದು ಪ್ರಾರ್ಥಿಸಿದ ಸಂದರ್ಭ. ಆಗ ನಾವು ಅವರ ಕರೆಗೆ ಉತ್ತರಿಸಿದೆವು.” [ಅಲ್-ಅಂಬಿಯಾ:76] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿إِذۡ تَسۡتَغِيثُونَ رَبَّكُمۡ فَٱسۡتَجَابَ لَكُمۡ...﴾
“ನೀವು ನಿಮ್ಮ ಪ್ರಭುವಿನೊಂದಿಗೆ ಸಹಾಯವನ್ನು ಬೇಡಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ಅವನು ನಿಮಗೆ ಸಹಾಯ ಮಾಡುವೆನು ಎಂದು ಉತ್ತರವಿತ್ತನು.” [ಅಲ್-ಅನ್ಫಾಲ್:9].
ಸಹೀಹ್ ಬುಖಾರಿಯಲ್ಲಿ ಅನಸ್ ಬಿನ್ ಮಾಲಿಕ್ رضي الله عنه ರವರಿಂದ ಹೀಗೆ ವರದಿಯಾಗಿದೆ: ಒಮ್ಮೆ ಶುಕ್ರವಾರದಂದು ಪ್ರವಾದಿ صلي الله عليه وسلم ರವರು ಜುಮಾ ಪ್ರವಚನ ನೀಡುತ್ತಿದ್ದಾಗ ಒಬ್ಬ ಗ್ರಾಮೀಣ ವ್ಯಕ್ತಿ ಮಸೀದಿಗೆ ಬಂದು ಹೇಳಿದನು: “ಪ್ರವಾದಿಯವರೇ! ಸೊತ್ತುಗಳು (ಜಾನುವಾರುಗಳು) ನಾಶವಾಗುತ್ತಿವೆ, ಕುಟುಂಬಗಳು ಹಸಿವಿನಿಂದ ಒದ್ದಾಡುತ್ತಿವೆ. ನಮಗೆ (ಮಳೆ ಸುರಿಸುವಂತೆ) ಅಲ್ಲಾಹನಲ್ಲಿ ಪ್ರಾರ್ಥಿಸಿರಿ." ಪ್ರವಾದಿಯವರು ಎರಡೂ ಕೈಗಳನ್ನು ಮೇಲೆತ್ತಿ ಪ್ರಾರ್ಥಿಸಿದರು. ಆಗ ಮೋಡಗಳು ಬೆಟ್ಟಗಳಂತೆ ಸಂಗ್ರಹವಾಗಿ, ಪ್ರವಾದಿ صلي الله عليه وسلم ರವರು ಭಾಷಣ ಪೀಠದಿಂದ ಕೆಳಗೆ ಇಳಿಯುವುದಕ್ಕೆ ಮುಂಚೆಯೇ ಅವರ ಗಡ್ಡದಿಂದ ಮಳೆ ಹನಿಗಳು ತೊಟ್ಟಿಕ್ಕುವುದನ್ನು ನಾನು ನೋಡಿದೆ.
«إنَّ أعرابيًّا دَخَلَ يَوْمَ الجُمُعَةِ -والنَّبِيُّ صلَّى اللَّهُ عَلَيهِ وَسَلَّمَ يَخْطُبُ- فَقَالَ: يَا رسُولَ اللَّهِ، هَلَكَ المَالُ، وجَاعَ العِيَالُ، فَادْعُ اللَّهَ لنَا؛ فَرَفَعَ يَدَيْهِ ودَعَا، فَثَارَ السَّحَابُ أمثَالَ الجِبَالِ، فَلَمْ يَنْزِلْ عَنْ مِنْبَرِهِ حتَّى رَأَيْتُ المَطَرَ يَتَحَادَرُ عَنْ لِحْيَتِهِ».
ಒಂದು ಶುಕ್ರವಾರ ಪ್ರವಾದಿ ﷺ ರವರು ಪ್ರವಚನ ನೀಡುತ್ತಿರುವಾಗ ಒಬ್ಬ ಮರುಭೂಮಿ ನಿವಾಸಿ ಪ್ರವಾದಿಯವರ ಮಸೀದಿಗೆ ಬಂದರು. ಅವರು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಮಳೆಯ ಅಭಾವದಿಂದಾಗಿ ನಮ್ಮ ಎಲ್ಲಾ ಆಸ್ತಿಗಳು ನಾಶವಾಗಿವೆ ಮತ್ತು ನಮ್ಮ ಮಡದಿ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ದಯವಿಟ್ಟು ಮಳೆಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿ." ಪ್ರವಾದಿ ﷺ ರವರು ಕೈಗಳನ್ನು ಮೇಲಕ್ಕೆತ್ತಿ ಪ್ರಾರ್ಥಿಸಿದರು. ಆಗ ದೊಡ್ಡ ಬೆಟ್ಟಗಳಂತಹ ಮೋಡಗಳು ಎಲ್ಲಾ ಕಡೆಯಿಂದ ಬಂದವು. ಅವರು ತಮ್ಮ ಪ್ರವಚನ ಪೀಠದಿಂದ ಇನ್ನೂ ಕೆಳಗಿಳಿದಿರಲಿಲ್ಲ, ಅವರ ಗಡ್ಡದ ಮೇಲೆ ಮಳೆ ಹನಿಗಳು ಬೀಳುವುದನ್ನು ನಾನು ನೋಡಿದೆ."6
ಮುಂದಿನ ಶುಕ್ರವಾರ, ಅದೇ ಗ್ರಾಮೀಣ ವ್ಯಕ್ತಿ ಅಥವಾ ಇನ್ನಾರೋ ಎದ್ದು ನಿಂತು, “ಪ್ರವಾದಿಯವರೇ! ಕಟ್ಟಡಗಳು ಕುಸಿಯುತ್ತಿವೆ, ಜಾನುವಾರುಗಳು ಮುಳುಗುತ್ತಿವೆ. (ಮಳೆ ನಿಲ್ಲಲು) ಪ್ರಾರ್ಥಿಸಿರಿ” ಎಂದು ಹೇಳಿದನು. ಆಗ ಪ್ರವಾದಿ صلي الله عليه وسلم ರವರು ಎರಡು ಕೈಗಳನ್ನು ಮೇಲಕ್ಕೆತ್ತಿ, “ಓ ಅಲ್ಲಾಹನೇ! ನಮ್ಮ ಸುತ್ತಮುತ್ತಲಿನಲ್ಲಿ ಮಳೆ ಸುರಿಸು. ನಮ್ಮ ಮೇಲೆ ಬೇಡ” ಎಂದು ಪ್ರಾರ್ಥಿಸಿದರು. ಪ್ರವಾದಿ صلي الله عليه ರವರು ಯಾವ ಕಡೆಗೆ ಕೈಯಿಂದ ಸನ್ನೆ ಮಾಡುತ್ತಿದ್ದರೋ ಅಲ್ಲಿ ಮಳೆ ಸುರಿಯುತ್ತಿತ್ತು.
«اللَّهُمَّ حَوَالَيْنَا وَلَا عَلَيْنَا».
"ಓ ಅಲ್ಲಾಹ್ ನಮ್ಮ ಸುತ್ತಮುತ್ತಲು ಸುರಿಸು, ನಮ್ಮ ಮೇಲೆ ಸುರಿಸಬೇಡ." ನಂತರ ಅವರು ಅಲ್ಲಿ ಇಲ್ಲಿ ಸುತ್ತಮುತ್ತ ಸನ್ನೆ ಮಾಡುತ್ತಿದ್ದಂತೆ ಮೋಡಗಳಲ್ಲಿ ಬಿರುಕು ಕಾಣಿಸಿಕೊಂಡಿತು ಅವು ತಕ್ಷಣ ಚದುರಿಹೋದವು."7
ಪ್ರಾಮಾಣಿಕವಾಗಿ ಅಲ್ಲಾಹನಲ್ಲಿ ಆಶ್ರಯ ಬೇಡುವವರ ಮತ್ತು ಪ್ರಾರ್ಥನೆ ಸ್ವೀಕಾರವಾಗಲಿರುವ ಷರತ್ತುಗಳನ್ನು ಪೂರೈಸುವವರ ಪ್ರಾರ್ಥನೆಗಳಿಗೆ ಈಗಲೂ ಉತ್ತರ ಸಿಗುವುದನ್ನು ನಾವು ನೋಡುತ್ತಲೇ ಇದ್ದೇವೆ.
ಎರಡನೆಯದು: ಜನರು (ನೇರವಾಗಿ) ನೋಡಿರುವ ಅಥವಾ (ಪಾರಂಪರಿಕವಾಗಿ) ಕೇಳಿರುವ, ಪವಾಡಗಳೆಂದು ಕರೆಯಲಾಗುವ ಪ್ರವಾದಿಗಳ ಚಿಹ್ನೆಗಳು ಅವರನ್ನು ಕಳುಹಿಸಿದ ಒಬ್ಬ ದೇವನಿದ್ದಾನೆ, ಅಂದರೆ ಸರ್ವಶಕ್ತನಾದ ಅಲ್ಲಾಹನಿದ್ದಾನೆ ಎಂಬುದಕ್ಕೆ ಖಚಿತ ಪುರಾವೆಗಳಾಗಿವೆ. ಏಕೆಂದರೆ ಅವು ಮನುಷ್ಯನ ಸಾಮರ್ಥ್ಯಕ್ಕೆ ಅತೀತವಾಗಿವೆ. ತನ್ನ ಪ್ರವಾದಿಗಳನ್ನು ಬೆಂಬಲಿಸಲು ಮತ್ತು ಅವರಿಗೆ ಸಹಾಯ ಮಾಡಲು ಅಲ್ಲಾಹು ಅವುಗಳನ್ನು ಅವರ ಮೂಲಕ ಜರುಗಿಸುತ್ತಾನೆ.
ಉದಾಹರಣೆಗಳು: ಮೂಸಾ عليه السلام ತೋರಿಸಿದ ಪವಾಡ. ಬೆತ್ತದಿಂದ ಸಮುದ್ರಕ್ಕೆ ಹೊಡೆಯಿರಿ ಎಂದು ಸರ್ವಶಕ್ತನಾದ ಅಲ್ಲಾಹನು ಹೇಳಿದಾಗ ಅವರು ಹೊಡೆದರು. ಆಗ ಸಮುದ್ರದಲ್ಲಿ ಹನ್ನೆರಡು ಒಣ ಮಾರ್ಗಗಳು ಉಂಟಾದವು. ಈ ಮಾರ್ಗಗಳ ನಡುವೆ ನೀರು ಪರ್ವತಗಳಂತೆ ನಿಂತು ಬಿಟ್ಟಿತು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿فَأَوۡحَيۡنَآ إِلَىٰ مُوسَىٰٓ أَنِ ٱضۡرِب بِّعَصَاكَ ٱلۡبَحۡرَۖ فَٱنفَلَقَ فَكَانَ كُلُّ فِرۡقٖ كَٱلطَّوۡدِ ٱلۡعَظِيمِ 63﴾
“ಆಗ ನಾವು ಮೂಸಾರಿಗೆ, ತಾವು ತಮ್ಮ ಬೆತ್ತದಿಂದ ಸಮುದ್ರಕ್ಕೆ ಬಡಿಯಿರಿ ಎಂದು ದಿವ್ಯಸಂದೇಶ ನೀಡಿದೆವು. ಆಗ ಅದು (ಸಮುದ್ರ) ಇಬ್ಭಾಗವಾಗಿ ಅದರ (ನೀರಿನ) ಪ್ರತಿಯೊಂದು ಹೋಳು ದೊಡ್ಡ ಪರ್ವತದಂತಾಯಿತು.” [ಅಶ್ಶುಅರಾ:63].
ಎರಡನೇ ಉದಾಹರಣೆ: ಈಸಾ عليه السلام ರವರ ಪವಾಡ. ಅವರು ಅಲ್ಲಾಹನ ಅಪ್ಪಣೆಯೊಂದಿಗೆ ಸತ್ತವರನ್ನು ಜೀವಂತಗೊಳಿಸುತ್ತಿದ್ದರು ಮತ್ತು ಅವರನ್ನು ಅವರ ಸಮಾಧಿಗಳಿಂದ ಹೊರತೆಗೆಯುತ್ತಿದ್ದರು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...وَأُحۡيِ ٱلۡمَوۡتَىٰ بِإِذۡنِ ٱللَّهِ...﴾
“ಮತ್ತು ನಾನು ಅಲ್ಲಾಹನ ಅನುಮತಿಯೊಂದಿಗೆ ಸತ್ತವರನ್ನು ಬದುಕಿಸುವೆನು.” [ಆಲು ಇಮ್ರಾನ್:49] ಮತ್ತು ಅಲ್ಲಾಹನು ಹೇಳುತ್ತಾನೆ:
﴿...وَإِذۡ تُخۡرِجُ ٱلۡمَوۡتَىٰ بِإِذۡنِي...﴾
“ನನ್ನ ಅನುಮತಿ ಪ್ರಕಾರ ತಾವು ಮರಣಹೊಂದಿದವರನ್ನು ಹೊರತರುವ ಸಂದರ್ಭದಲ್ಲೂ” [ಅಲ್-ಮಾಇದ:110].
ಮೂರನೇ ಉದಾಹರಣೆ: ಪ್ರವಾದಿ ಮುಹಮ್ಮದ್ صلي الله عليه وسلم ರವರ ಪವಾಡ. ಖುರೈಷರು ಪವಾಡ ತೋರಿಸಬೇಕೆಂದು ಹೇಳಿದಾಗ ಅವರು ಚಂದ್ರನ ಕಡೆಗೆ ಸನ್ನೆ ಮಾಡಿದರು. ಆಗ ಅದು ಇಬ್ಭಾಗವಾಯಿತು. ಜನರು ಅದನ್ನು ವೀಕ್ಷಿಸಿದರು. ಇದರ ಕುರಿತು ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿ٱقۡتَرَبَتِ ٱلسَّاعَةُ وَٱنشَقَّ ٱلۡقَمَرُ 1 وَإِن يَرَوۡاْ ءَايَةٗ يُعۡرِضُواْ وَيَقُولُواْ سِحۡرٞ مُّسۡتَمِرّٞ2﴾
“ಆ (ಅಂತ್ಯ)ಘಳಿಗೆಯು ಆಸನ್ನವಾಗಿರುವುದು ಮತ್ತು ಚಂದ್ರನು ಹೋಳಾಗಿರುವನು. ಅವರು ಯಾವುದೇ ದೃಷ್ಟಾಂತವನ್ನು ಕಂಡರೂ ವಿಮುಖರಾಗುವರು ಮತ್ತು ಇದು ಜರುಗುತ್ತಲೇ ಇರುವ ಮಾಂತ್ರಿಕತೆಯಾಗಿದೆ ಎನ್ನುವರು.” [ಅಲ್-ಕಮರ್:1-2]
ಈ ಎಲ್ಲಾ ಪವಾಡಗಳು ಮತ್ತು ಕುರುಹುಗಳು ಇಂದ್ರಿಯಾನುಭವಕ್ಕೆ ಸಂಬಂಧಿಸಿವೆ. ಸರ್ವಶಕ್ತನಾದ ಅಲ್ಲಾಹನು ತನ್ನ ಸಂದೇಶವಾಹಕರನ್ನು ಬೆಂಬಲಿಸಲು ಮತ್ತು ಸಹಾಯ ಮಾಡಲು ಜರುಗಿಸಿದ ಈ ಎಲ್ಲಾ ಇಂದ್ರಿಯಾನುಭವದ ಪವಾಡಗಳು ಸರ್ವಶಕ್ತನಾದ ಅಲ್ಲಾಹನ ಅಸ್ತಿತ್ವಕ್ಕೆ ನಿರ್ಣಾಯಕ ಪುರಾವೆಗಳಾಗಿವೆ.
ಅಲ್ಲಾಹನಲ್ಲಿರುವ ವಿಶ್ವಾಸವು ಒಳಗೊಂಡಿರುವ ಇನ್ನೊಂದು ವಿಷಯ ಅಲ್ಲಾಹನ ರುಬೂಬಿಯತ್ (ಪ್ರಭುತ್ವ) ನಲ್ಲಿರುವ ವಿಶ್ವಾಸ: ಅಂದರೆ ಅವನೇ ಏಕೈಕ ರಬ್ಬ್ (ಸಂರಕ್ಷಕ) ಮತ್ತು ಅವನಿಗೆ ಯಾವುದೇ ಪಾಲುದಾರ ಮತ್ತು ಸಹಾಯಕರಿಲ್ಲ ಎಂಬ ವಿಶ್ವಾಸ.
ಯಾರಿಗೆ ಸೃಷ್ಟಿ ಮಾಡುವ ಶಕ್ತಿ, ಸೃಷ್ಟಿಗಳ ಮೇಲೆ ಒಡೆತನ, ಸೃಷ್ಟಿಗಳ ಮೇಲೆ ಆಜ್ಞೆ ಮಾಡುವ ಅಧಿಕಾರವಿದೆಯೋ ಅವನೇ ರಬ್ಬ್ . ಅಲ್ಲಾಹನಲ್ಲದೆ ಬೇರೆ ಸೃಷ್ಟಿಕರ್ತನಿಲ್ಲ, ಅಲ್ಲಾಹನಲ್ಲದೆ ಬೇರೆ ಅಧಿಪತಿಯಿಲ್ಲ ಮತ್ತು ಅಲ್ಲಾಹನಿಗಲ್ಲದೆ ಇನ್ನಾರಿಗೂ ಆಜ್ಞಾಧಿಕಾರವಿಲ್ಲ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...أَلَا لَهُ ٱلۡخَلۡقُ وَٱلۡأَمۡرُ...﴾
“ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನಿಗೇ ಆಗಿವೆ.” [ಅಲ್-ಅಅ್ರಾಫ್:54] ಅಲ್ಲಾಹನು ಹೇಳುತ್ತಾನೆ:
﴿...ذَٰلِكُمُ ٱللَّهُ رَبُّكُمۡ لَهُ ٱلۡمُلۡكُۚ وَٱلَّذِينَ تَدۡعُونَ مِن دُونِهِۦ مَا يَمۡلِكُونَ مِن قِطۡمِيرٍ﴾
“ಅವನೇ ನಿಮ್ಮ ಪ್ರಭುವಾದ ಅಲ್ಲಾಹು. ಆಧಿಪತ್ಯವು ಅವನಿಗಾಗಿದೆ. ಅವನ ಹೊರತು ನೀವು ಯಾರೊಂದಿಗೆ ಪ್ರಾರ್ಥಿಸುತ್ತಿರುವಿರೋ ಅವರ ಸ್ವಾಧೀನದಲ್ಲಿ ಖರ್ಜೂರದ ಪೊರೆಯೂ ಇಲ್ಲ.” [ಫಾತಿರ್:13].
ಸೃಷ್ಟಿಗಳಲ್ಲಿ ಯಾರಾದರೂ ಅಲ್ಲಾಹನ ರುಬೂಬಿಯತ್ತನ್ನು ನಿರಾಕರಿಸಿದ್ದಾಗಿ ತಿಳಿದುಬಂದಿಲ್ಲ. ಆದರೆ ಮನಸ್ಸಿನಲ್ಲಿ ನಂಬಿಕೆಯಿದ್ದೂ ಸಹ ಅಹಂಕಾರದಿಂದ ಅದನ್ನು ನಿರಾಕರಿಸಿದವರ ಹೊರತು. ಉದಾಹರಣೆಗೆ ಫಿರ್ಔನ್ನಂತವರು. ಅವನು ತನ್ನ ಜನರೊಡನೆ ಹೇಳಿದನು: “ನಾನು ನಿಮ್ಮ ಅತ್ಯುನ್ನತನಾದ ಪ್ರಭುವಾಗಿರುವೆನು ಎಂದು ಅವನು ಹೇಳಿದನು.” [ಅನ್ನಾಝಿಆತ್:24]. ಇನ್ನೊಂದು ಸಲ ಅವನು ಹೇಳಿದನು: “ಓ ಮುಖಂಡರೇ! ನಿಮಗೆ ನನ್ನ ಹೊರತು ಅನ್ಯ ಆರಾಧ್ಯರಿರುವುದಾಗಿ ನಾನು ಅರಿತಿಲ್ಲ.” [ಅಲ್-ಖಸಸ್:38]. ಆದರೆ ಅವನಿಗೆ ಆ ನಂಬಿಕೆಯಿರಲಿಲ್ಲ.
﴿فَقَالَ أَنَا۠ رَبُّكُمُ ٱلۡأَعۡلَىٰ 24﴾
"ನಾನು ನಿಮ್ಮ ಅತ್ಯುನ್ನತನಾದ ಪ್ರಭುವಾಗಿರುವೆನು’ ಎಂದು ಅವನು ಹೇಳಿದನು. [ಅನ್ನಾಝಿ'ಆತ್:24]. ಮತ್ತೊಂದು ಸಂದರ್ಭದಲ್ಲಿ ಹೇಳಿದನು:
﴿...يَٰٓأَيُّهَا ٱلۡمَلَأُ مَا عَلِمۡتُ لَكُم مِّنۡ إِلَٰهٍ غَيۡرِي...﴾
ಫಿರ್ಔನ್ ಹೇಳಿದನು: ‘ಓ ಮುಖಂಡರೇ! ನಿಮಗೆ ನನ್ನ ಹೊರತು ಅನ್ಯ ಆರಾಧ್ಯರಿರುವುದಾಗಿ ನಾನು ಅರಿತಿಲ್ಲ..." [ಅಲ್-ಕಸಸ್ : 38] ಫಿರ್ಔನನ ಈ ಹೇಳಿಕೆಯು ಅವನ ನಂಬಿಕೆಯ ಆಧಾರದ ಮೇಲೆ ಇರಲಿಲ್ಲ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವುಗಳ ಬಗ್ಗೆ ಅವರ ಮನಸ್ಸುಗಳು ದೃಢಪ್ರಜ್ಞೆಯನ್ನು ಗಳಿಸಿದ ಬಳಿಕವೂ ಅಕ್ರಮ ಮತ್ತು ಅಹಂಕಾರದ ನಿಮಿತ್ತ ಅವರು ಅದನ್ನು ನಿಷೇಧಿಸಿದರು.” [ಅನ್ನಮ್ಲ್:14].
﴿وَجَحَدُواْ بِهَا وَٱسۡتَيۡقَنَتۡهَآ أَنفُسُهُمۡ ظُلۡمٗا وَعُلُوّٗاۚ...﴾
"ಅವುಗಳ ಬಗ್ಗೆ ಅವರ ಮನಸ್ಸುಗಳು ದೃಢಪ್ರಜ್ಞೆಯನ್ನು ಗಳಿಸಿದ ಬಳಿಕವೂ ಅಕ್ರಮ ಮತ್ತು ಅಹಂಕಾರದ ನಿಮಿತ್ತ ಅವರು ಅದನ್ನು ನಿಷೇಧಿಸಿದರು." [ಅನ್ನಮ್ಲ್ :14] ಅದೇ ರೀತಿ ಮೂಸಾ عليه السلام ರು ಫಿರ್ಔನನಿಗೆ ಹೇಳಿದ ಮಾತನ್ನು ಅಲ್ಲಾಹನು ಕುರ್ಆನಿನಲ್ಲಿ ಉಲ್ಲೇಖಿಸಿದ್ದಾನೆ: “ಅವರು (ಮೂಸಾ) ಹೇಳಿದರು: ಕಣ್ತೆರೆಸುವ ದೃಷ್ಟಾಂತಗಳಾಗಿ ಇವುಗಳನ್ನು ಅವತೀರ್ಣಗೊಳಿಸಿದವನು ಆಕಾಶಗಳ ಮತ್ತು ಭೂಮಿಯ ಪ್ರಭುವೇ ವಿನಾ ಇನ್ನಾರೂ ಅಲ್ಲವೆಂದು ಖಂಡಿತವಾಗಿಯೂ ನೀನು ಅರಿತುಕೊಂಡಿರುವೆ. ಓ ಫಿರ್ಔನ್! ಖಂಡಿತವಾಗಿಯೂ ನೀನು ನಾಶ ಹೊಂದಿದವನಾಗಿರುವೆ ಎಂದು ನಾನು ಭಾವಿಸುತ್ತಿರುವೆನು.” [ಅಲ್-ಇಸ್ರಾ:102].
﴿...لَقَدۡ عَلِمۡتَ مَآ أَنزَلَ هَٰٓؤُلَآءِ إِلَّا رَبُّ ٱلسَّمَٰوَٰتِ وَٱلۡأَرۡضِ بَصَآئِرَ وَإِنِّي لَأَظُنُّكَ يَٰفِرۡعَوۡنُ مَثۡبُورٗا﴾
ಅವರು ಹೇಳಿದರು: ‘ಕಣ್ತೆರೆಸುವ ದೃಷ್ಟಾಂತಗಳಾಗಿ ಇವುಗಳನ್ನು ಅವತೀರ್ಣಗೊಳಿಸಿದವನು ಆಕಾಶಗಳ ಮತ್ತು ಭೂಮಿಯ ಪ್ರಭುವೇ ವಿನಾ ಇನ್ನಾರೂ ಅಲ್ಲವೆಂದು ಖಂಡಿತವಾಗಿಯೂ ನೀನು ಅರಿತುಕೊಂಡಿರುವೆ. ಓ ಫಿರ್ಔನ್! ಖಂಡಿತವಾಗಿಯೂ ನೀನು ನಾಶ ಹೊಂದಿದವನಾಗಿರುವೆ ಎಂದು ನಾನು ಭಾವಿಸುತ್ತಿರುವೆನು." [ಅಲ್-ಇಸ್ರಾ:102] ಆದ್ದರಿಂದಲೇ, ಅರಬ್ ಬಹುದೇವಾರಾಧಕರು ಅಲ್ಲಾಹನ ಉಲೂಹಿಯ್ಯತ್ತಿನಲ್ಲಿ (ಆರಾಧನೆಯಲ್ಲಿ) ಇತರರನ್ನು ಸಹಭಾಗಿಗಳಾಗಿ ಮಾಡುತ್ತಿದ್ದರೂ ಸಹ ಅಲ್ಲಾಹನ ರುಬೂಬಿಯ್ಯತ್ತನ್ನು (ಪ್ರಭುತ್ವವನ್ನು) ಒಪ್ಪಿಕೊಳ್ಳುತ್ತಿದ್ದರು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿قُل لِّمَنِ ٱلۡأَرۡضُ وَمَن فِيهَآ إِن كُنتُمۡ تَعۡلَمُونَ 84 سَيَقُولُونَ لِلَّهِۚ قُلۡ أَفَلَا تَذَكَّرُونَ85 قُلۡ مَن رَّبُّ ٱلسَّمَٰوَٰتِ ٱلسَّبۡعِ وَرَبُّ ٱلۡعَرۡشِ ٱلۡعَظِيمِ 86 سَيَقُولُونَ لِلَّهِۚ قُلۡ أَفَلَا تَتَّقُونَ 87 قُلۡ مَنۢ بِيَدِهِۦمَلَكُوتُ كُلِّ شَيۡءٖ وَهُوَ يُجِيرُ وَلَا يُجَارُ عَلَيۡهِ إِن كُنتُمۡ تَعۡلَمُونَ 88 سَيَقُولُونَ لِلَّهِۚ قُلۡ فَأَنَّىٰ تُسۡحَرُونَ 89﴾
“(ಓ ಪ್ರವಾದಿಯವರೇ!) ಕೇಳಿರಿ: ಭೂಮಿ ಮತ್ತು ಅದರಲ್ಲಿರುವುದು ಯಾರಿಗೆ ಸೇರಿದ್ದಾಗಿದೆ? ನೀವು ಅರಿತಿದ್ದರೆ (ಹೇಳಿರಿ). ಅವರು ಹೇಳುವರು: (ಅದು) ಅಲ್ಲಾಹನದ್ದಾಗಿದೆ. ತಾವು ಹೇಳಿರಿ: ಆದರೂ ನೀವು ಚಿಂತಿಸಿ ಗ್ರಹಿಸುವುದಿಲ್ಲವೇ? ಕೇಳಿರಿ: ಸಪ್ತಗಗನಗಳ ಪ್ರಭು ಮತ್ತು ಮಹಾ ಸಿಂಹಾಸನದ ಪ್ರಭು ಯಾರು? ಅವರು ಹೇಳುವರು: (ಪ್ರಭುತ್ವವು) ಅಲ್ಲಾಹನದ್ದಾಗಿದೆ. ತಾವು ಹೇಳಿರಿ: ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ? ಕೇಳಿರಿ: ಸರ್ವ ವಸ್ತುಗಳ ಆಧಿಪತ್ಯವು ಯಾರ ಕೈಯ್ಯಲ್ಲಿದೆ? ಅವನು ಅಭಯವನ್ನು ನೀಡುವನು ಮತ್ತು ಅವನಿಗೆ ವಿರುದ್ಧವಾಗಿ (ಯಾರಿಗೂ) ಅಭಯ ನೀಡಲು ಸಾಧ್ಯವಾಗದು. ನಿಮಗೆ ತಿಳಿದಿದ್ದರೆ (ಹೇಳಿರಿ). ಅವರು ಹೇಳುವರು: (ಅವೆಲ್ಲವೂ) ಅಲ್ಲಾಹನಿಗಿರುವುದಾಗಿವೆ. ತಾವು ಹೇಳಿರಿ: ಹೀಗಿದ್ದೂ ನೀವು ಮಾಯಾಜಾಲದಲ್ಲಿ ಸಿಲುಕಿ ಬಿಡುವುದಾದರೂ ಹೇಗೆ?”
[ಅಲ್-ಮುಅ್ಮಿನೂನ್:84-89].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَلَئِن سَأَلۡتَهُم مَّنۡ خَلَقَ ٱلسَّمَٰوَٰتِ وَٱلۡأَرۡضَ لَيَقُولُنَّ خَلَقَهُنَّ ٱلۡعَزِيزُ ٱلۡعَلِيمُ 9﴾
“ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಯಾರು? ಎಂದು ತಾವು ಅವರೊಂದಿಗೆ ಕೇಳಿದರೆ ಅವುಗಳನ್ನು ಸೃಷ್ಟಿಸಿದವನು ಪ್ರತಾಪಶಾಲಿಯೂ ಸರ್ವಜ್ಞನೂ ಆಗಿರುವವನು ಎಂದು ಖಂಡಿತವಾಗಿಯೂ ಅವರು ಹೇಳುವರು.” [ಅಝ್ಝುಖ್ರುಫ್:9].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُۖ فَأَنَّىٰ يُؤۡفَكُونَ 87﴾
“ಅವರನ್ನು ಸೃಷ್ಟಿಸಿದ್ದು ಯಾರು? ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ಅಲ್ಲಾಹು ಎನ್ನುವರು. ಆದರೂ ಅವರು ತಪ್ಪಿಸಲ್ಪಡುತ್ತಿರುವುದು ಹೇಗೆ?” [ಅಝ್ಝುಖ್ರುಫ್:87].
ಅಲ್ಲಾಹನ ಆಜ್ಞೆಯು ನೈಸರ್ಗಿಕ ಮತ್ತು ಧಾರ್ಮಿಕ ನಿಯಮಗಳನ್ನು ಒಳಗೊಂಡಿದೆ. ಅವನು ವಿಶ್ವದ ನಿಯಂತ್ರಕನಾಗಿದ್ದು, ಅವನ ಯುಕ್ತಿಗೆ ಅನುಗುಣವಾಗಿ ಅದರಲ್ಲಿ ತನ್ನ ತೀರ್ಪನ್ನು ಜಾರಿಗೊಳಿಸುವಂತೆಯೇ, ತನ್ನ ಯುಕ್ತಿಗೆ ಅನುಗುಣವಾಗಿ ಅದರಲ್ಲಿ ಆರಾಧನಾ ಕರ್ಮಗಳನ್ನು ನಿರ್ಮಿಸುವ ಮೂಲಕ ಮತ್ತು ವ್ಯವಹಾರ ನಿಯಮಗಳನ್ನು ರಚಿಸುವ ಮೂಲಕ ಅದರ ಆಡಳಿತಗಾರನಾಗಿದ್ದಾನೆ. ಆದ್ದರಿಂದ ಯಾರಾದರೂ ಅಲ್ಲಾಹನೊಂದಿಗೆ ಇತರರನ್ನು ಆರಾಧನಾ ಕರ್ಮಗಳನ್ನು ನಿರ್ಮಿಸುವವರಾಗಿ ಮತ್ತು ವ್ಯವಹಾರ ನಿಯಮಗಳನ್ನು ರಚಿಸುವವರಾಗಿ ಮಾಡಿಕೊಂಡರೆ ಅವರು ಅಲ್ಲಾಹನೊಂದಿಗೆ ಶಿರ್ಕ್ (ಸಹಭಾಗಿತ್ವ) ಮಾಡಿದವರಾಗುತ್ತಾರೆ. ಅವರ ವಿಶ್ವಾಸವು ಪೂರ್ತಿಯಾಗುವುದಿಲ್ಲ.
ಅಲ್ಲಾಹನಲ್ಲಿರುವ ವಿಶ್ವಾಸವು ಒಳಗೊಂಡಿರುವ ಮೂರನೇ ವಿಷಯ: ಅಲ್ಲಾಹನ ಉಲೂಹಿಯ್ಯತ್ ನಲ್ಲಿರುವ ವಿಶ್ವಾಸ. ಅರ್ಥಾತ್: ಅವನೇ ಏಕೈಕ ನೈಜ ಸತ್ಯ ಆರಾಧ್ಯನು. ಅವನೊಂದಿಗೆ ಯಾವುದೇ ಸಹಭಾಗಿಗಳಿಲ್ಲ. "ಇಲಾಹ್” (ಆರಾಧ್ಯ) ಅಂದರೆ “ಮಅ್ಲೂಹ್” (ಆರಾಧಿಸಲ್ಪಡುವವನು) ಎಂದರ್ಥ. ಅಂದರೆ ಪ್ರೀತಿ ಮತ್ತು ಗೌರವಗಳೊಡನೆ ಆರಾಧಿಸಲ್ಪಡುವವನು ಎಂದರ್ಥ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನು. ಅವನ ಹೊರತು ಅನ್ಯ ಆರಾಧ್ಯರೇ ಇಲ್ಲ. ಅವನು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವನು.” [ಅಲ್-ಬಖರ:163]
﴿وَإِلَٰهُكُمۡ إِلَٰهٞ وَٰحِدٞۖ لَّآ إِلَٰهَ إِلَّا هُوَ ٱلرَّحۡمَٰنُ ٱلرَّحِيمُ 163﴾
"ನಿಮ್ಮ ಆರಾಧ್ಯನು ಏಕಮೇವ ಆರಾಧ್ಯನಾಗಿರುವನು. ಅವನ ಹೊರತು ಅನ್ಯ ಆರಾಧ್ಯರೇ ಇಲ್ಲ. ಅವನು ಪರಮ ದಯಾಮಯನೂ ಕರುಣಾನಿಧಿಯೂ ಆಗಿರುವನು." [ಅಲ್-ಬಖರ:163] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ತನ್ನ ಹೊರತು ಅನ್ಯ ಆರಾಧ್ಯರಿಲ್ಲವೆಂದು ಅಲ್ಲಾಹು ಸಾಕ್ಷ್ಯವಹಿಸಿರುವನು. ಮಲಕ್ಗಳೂ ಜ್ಞಾನವುಳ್ಳವರೂ (ಅದಕ್ಕೆ ಸಾಕ್ಷಿಗಳಾಗಿರುವರು). ಅವನು ನ್ಯಾಯಪಾಲಿಸುವವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.”
[ಆಲು ಇಮ್ರಾನ್:18].
﴿شَهِدَ ٱللَّهُ أَنَّهُۥ لَآ إِلَٰهَ إِلَّا هُوَ وَٱلۡمَلَٰٓئِكَةُ وَأُوْلُواْ ٱلۡعِلۡمِ قَآئِمَۢا بِٱلۡقِسۡطِۚ لَآ إِلَٰهَ إِلَّا هُوَ ٱلۡعَزِيزُ ٱلۡحَكِيمُ 18﴾
"ತನ್ನ ಹೊರತು ಅನ್ಯ ಆರಾಧ್ಯರಿಲ್ಲವೆಂದು ಅಲ್ಲಾಹು ಸಾಕ್ಷ್ಯವಹಿಸಿರುವನು. ಮಲಕ್ (ದೇವದೂತರು)ಗಳೂ ಜ್ಞಾನವುಳ್ಳವರೂ (ಅದಕ್ಕೆ ಸಾಕ್ಷಿಗಳಾಗಿರುವರು). ಅವನು ನ್ಯಾಯಪಾಲಿಸುವವನಾಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನು ಪ್ರತಾಪಶಾಲಿಯೂ, ಯುಕ್ತಿ ಪೂರ್ಣನೂ ಆಗಿರುವನು." [ಆಲಿ ಇಮ್ರಾನ್:18] ಆದ್ದರಿಂದ, ಯಾರಾದರೂ ಅಲ್ಲಾಹನ ಜೊತೆಗೆ ಇತರರನ್ನು ಆರಾಧ್ಯರನ್ನಾಗಿ ಮಾಡಿಕೊಂಡರೆ, ಅವನ ಊಲೂಹಿಯ್ಯತ್ನಲ್ಲಿರುವ ವಿಶ್ವಾಸ ನಿರರ್ಥಕವಾಗುತ್ತದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿ذَٰلِكَ بِأَنَّ ٱللَّهَ هُوَ ٱلۡحَقُّ وَأَنَّ مَا يَدۡعُونَ مِن دُونِهِۦ هُوَ ٱلۡبَٰطِلُ وَأَنَّ ٱللَّهَ هُوَ ٱلۡعَلِيُّ ٱلۡكَبِيرُ 62﴾
“ಅದು ಏಕೆಂದರೆ ಅಲ್ಲಾಹು ಸತ್ಯವಾಗಿರುವನು, ಅವನ ಹೊರತು ಅವರು ಏನನ್ನು ಕರೆದು ಪ್ರಾರ್ಥಿಸುತ್ತಿರುವರೋ ಅದು ಮಿಥ್ಯೆಯಾಗಿದೆ ಮತ್ತು ಅಲ್ಲಾಹು ಅತ್ಯುನ್ನತನೂ ಮಹಾನನೂ ಆಗಿರುವನು ಎಂಬುದರಿಂದಾಗಿದೆ.” [ಅಲ್-ಹಜ್:62] ಇತರ ದೇವರುಗಳನ್ನು "ಇಲಾಹ್"(ಆರಾಧ್ಯ) ಎಂದು ಕರೆಯುವುದರಿಂದ ಅವರು ಆರಾಧನೆಯ ಹಕ್ಕನ್ನು ಪಡೆಯುವುದಿಲ್ಲ. ಲಾತ್, ಉಝ್ಝಾ ಮತ್ತು ಮನಾತದ (ಮಕ್ಕಾ ಬಹುದೇವವಿಶ್ವಾಸಿಗಳ ದೇವರುಗಳು) ಕುರಿತು ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿إِنۡ هِيَ إِلَّآ أَسۡمَآءٞ سَمَّيۡتُمُوهَآ أَنتُمۡ وَءَابَآؤُكُم مَّآ أَنزَلَ ٱللَّهُ بِهَا مِن سُلۡطَٰنٍۚ...﴾
“ಅವು ನೀವು ಮತ್ತು ನಿಮ್ಮ ಪೂರ್ವಿಕರು ನಾಮಕರಣ ಮಾಡಿರುವ ಕೆಲವು ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನು ಇಳಿಸಿಕೊಟ್ಟಿಲ್ಲ.” [ಅನ್ನಜ್ಮ್:23].
ಹೂದ್ عليه السلام ರು ತಮ್ಮ ಜನರೊಂದಿಗೆ ಹೇಳಿದ್ದನ್ನು ಅಲ್ಲಾಹನು ಉಲ್ಲೇಖಿಸುತ್ತಾನೆ:
﴿...أَتُجَٰدِلُونَنِي فِيٓ أَسۡمَآءٖ سَمَّيۡتُمُوهَآ أَنتُمۡ وَءَابَآؤُكُم مَّا نَزَّلَ ٱللَّهُ بِهَا مِن سُلۡطَٰنٖ...﴾
“ಅವು (ನಿಮ್ಮ ಆರಾಧ್ಯರು) ನೀವು ಮತ್ತು ನಿಮ್ಮ ಪೂರ್ವಿಕರು ನಾಮಕರಣ ಮಾಡಿರುವ ಕೆಲವು ಹೆಸರುಗಳಲ್ಲದೆ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನು ಇಳಿಸಿಕೊಟ್ಟಿಲ್ಲ.” [ಅಲ್-ಅಅ್ರಾಫ್:71]
ಯೂಸುಫ್ عليه السلام ರು ತನ್ನ ಸೆರೆಮನೆಯ ಇಬ್ಬರು ಗೆಳೆಯರಿಗೆ ಹೇಳಿದ್ದನ್ನು ಅಲ್ಲಾಹನು ಉಲ್ಲೇಖಿಸುತ್ತಾನೆ:
﴿يَٰصَٰحِبَيِ ٱلسِّجۡنِ ءَأَرۡبَابٞ مُّتَفَرِّقُونَ خَيۡرٌ أَمِ ٱللَّهُ ٱلۡوَٰحِدُ ٱلۡقَهَّارُ 39 مَا تَعۡبُدُونَ مِن دُونِهِۦٓ إِلَّآ أَسۡمَآءٗ سَمَّيۡتُمُوهَآ أَنتُمۡ وَءَابَآؤُكُم مَّآ أَنزَلَ ٱللَّهُ بِهَا مِن سُلۡطَٰنٍ...﴾
“ಓ ನನ್ನ ಸೆರೆಮನೆಯ ಇಬ್ಬರು ಗೆಳೆಯರೇ! ವ್ಯತ್ಯಸ್ತರಾದ ಅನೇಕ ಪ್ರಭುಗಳಿರುವುದು ಉತ್ತಮವೋ, ಅಥವಾ ಏಕೈಕನೂ ಸರ್ವಾಧಿಕಾರಿಯೂ ಆಗಿರುವ ಅಲ್ಲಾಹನೋ? ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವುದು ನೀವು ಮತ್ತು ನಿಮ್ಮ ಪೂರ್ವಿಕರು ಹೆಸರಿಟ್ಟಿರುವ ಕೆಲವು ಹೆಸರುಗಳನ್ನೇ ವಿನಾ ಇನ್ನೇನೂ ಅಲ್ಲ. ಅವುಗಳ ಬಗ್ಗೆ ಅಲ್ಲಾಹು ಯಾವುದೇ ಆಧಾರ ಪ್ರಮಾಣವನ್ನೂ ಅವತೀರ್ಣಗೊಳಿಸಿಲ್ಲ.” [ಯೂಸುಫ್:39-40].
ಆದುದರಿಂದಲೇ ಎಲ್ಲಾ ಪ್ರವಾದಿಗಳು ತಮ್ಮ ತಮ್ಮ ಸಮುದಾಯದವರೊಂದಿಗೆ ಹೀಗೆ ಹೇಳುತ್ತಿದ್ದರು:
﴿...ٱعۡبُدُواْ ٱللَّهَ مَا لَكُم مِّنۡ إِلَٰهٍ غَيۡرُهُ...﴾
“ನೀವು ಅಲ್ಲಾಹನನ್ನು ಆರಾಧಿಸಿರಿ.ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ.”
[ಅಲ್-ಅಅ್ರಾಫ್:59] ಆದರೆ ಬಹುದೇವಾರಾಧಕರು ಅದನ್ನು ನಿರಾಕರಿಸಿ, ಅಲ್ಲಾಹನ ಜೊತೆಗೆ ಇತರರನ್ನು ಆರಾಧ್ಯರನ್ನಾಗಿ ಮಾಡಿಕೊಂಡು ಅವರನ್ನು ಆರಾಧಿಸುತ್ತಿದ್ದರು ಮತ್ತು ಅವರೊಡನೆ ವಿಜಯವನ್ನು ಹಾಗೂ ಸಹಾಯವನ್ನು ಬೇಡುತ್ತಿದ್ದರು.
ಬಹುದೇವಾರಾಧಕರು ಅವರನ್ನು ತಮ್ಮ ಆರಾಧ್ಯರೆಂದು ಸ್ವೀಕರಿಸುವುದನ್ನು ಅಲ್ಲಾಹನು ಎರಡು ತರ್ಕಬದ್ಧ ಪುರಾವೆಗಳ ಮೂಲಕ ಅಸಿಂಧುಗೊಳಿಸಿದ್ದಾನೆ:
ಒಂದು: ಇವರು ಆರಾಧ್ಯರನ್ನಾಗಿ ಮಾಡಿಕೊಂಡಿರುವ ಈ ಆರಾಧ್ಯರಲ್ಲಿ ಉಲೂಹಿಯ್ಯತ್ (ಆರಾಧನಾರ್ಹತೆ) ಗೆ ಸಂಬಂಧಿಸಿದ ಯಾವುದೇ ವಿಶೇಷತೆಗಳಿಲ್ಲ. ಇವೆಲ್ಲವೂ ಸೃಷ್ಟಿಗಳಾಗಿದ್ದು ಸೃಷ್ಟಿಕರ್ತರಲ್ಲ. ತಮ್ಮ ಭಕ್ತರಿಗೆ ಯಾವುದೇ ಲಾಭವನ್ನು ಕೊಡಲು ಅಥವಾ ಅವರಿಂದ ಹಾನಿಯನ್ನು ತಡೆಗಟ್ಟಲು ಇವರಿಗೆ ಸಾಧ್ಯವಿಲ್ಲ. ಅವರ ಜೀವನ, ಮರಣ ಇವರ ನಿಯಂತ್ರಣದಲ್ಲಿಲ್ಲ. ಆಕಾಶಗಳ ಯಾವುದೇ ಒಡೆತನ ಇವರ ಕೈಯಲ್ಲಿಲ್ಲ. ಇವರು ಅದರ ಪಾಲುದಾರರೂ ಅಲ್ಲ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವರು ಅವನ ಹೊರತು ಅನ್ಯ ಆರಾಧ್ಯರನ್ನು ಮಾಡಿಕೊಂಡಿರುವರು. ಅವರು (ಆರಾಧ್ಯರು) ಏನನ್ನೂ ಸೃಷ್ಟಿಸಲಾರರು. ಅವರು ಸೃಷ್ಟಿಸಲ್ಪಟ್ಟವರಾಗಿರುವರು. ಅವರು ಸ್ವತಃ ತಮಗಾಗಿ ಯಾವುದೇ ಹಾನಿಯನ್ನೋ ಲಾಭವನ್ನೋ ಸ್ವಾಧೀನಪಡಿಸಲಾರರು. ಮರಣವನ್ನೋ, ಬದುಕನ್ನೋ ಅಥವಾ ಪುನರುತ್ಥಾನವನ್ನೋ ಅವರು ಸ್ವಾಧೀನಪಡಿಸಲಾರರು.” [ಅಲ್-ಫುರ್ಖಾನ್:3].
﴿وَٱتَّخَذُواْ مِن دُونِهِۦٓ ءَالِهَةٗ لَّا يَخۡلُقُونَ شَيۡـٔٗا وَهُمۡ يُخۡلَقُونَ وَلَا يَمۡلِكُونَ لِأَنفُسِهِمۡ ضَرّٗا وَلَا نَفۡعٗا وَلَا يَمۡلِكُونَ مَوۡتٗا وَلَا حَيَوٰةٗ وَلَا نُشُورٗا 3﴾
"ಅವರು ಅವನ ಹೊರತು ಅನ್ಯ ಆರಾಧ್ಯರನ್ನು ಮಾಡಿಕೊಂಡಿರುವರು. ಅವರು (ಆರಾಧ್ಯರು) ಏನನ್ನೂ ಸೃಷ್ಟಿಸಲಾರರು. ಅವರು ಸೃಷ್ಟಿಸಲ್ಪಟ್ಟವರಾಗಿರುವರು. ಅವರು ಸ್ವತಃ ತಮಗಾಗಿ ಯಾವುದೇ ಹಾನಿಯನ್ನೋ ಲಾಭವನ್ನೋ ಸ್ವಾಧೀನಪಡಿಸಲಾರರು. ಮರಣವನ್ನೋ, ಬದುಕನ್ನೋ ಅಥವಾ ಪುನರುತ್ಥಾನವನ್ನೋ ಅವರು ಸ್ವಾಧೀನಪಡಿಸಲಾರರು."
[ಅಲ್- ಫುರ್ಖಾನ್:3]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: ಹೇಳಿರಿ: “ಅಲ್ಲಾಹನ ಹೊರತು ನೀವು ವಾದಿಸುತ್ತಿರುವ ಎಲ್ಲರನ್ನೂ ಕರೆದು ಪ್ರಾರ್ಥಿಸಿರಿ. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಒಂದು ಅಣುವಿನ ತೂಕದಷ್ಟು ಕೂಡ ಅವರು ಸ್ವಾಧೀನಪಡಿಸಲಾರರು. ಅವೆರಡರಲ್ಲಿ ಅವರಿಗೆ ಯಾವುದೇ ಸಹಭಾಗಿತ್ವವೂ ಇಲ್ಲ. ಅವರ ಪೈಕಿ ಅವನಿಗೆ ಸಹಾಯಕರಾಗಿ ಯಾರೂ ಇಲ್ಲ. ಅವನು ಯಾರಿಗೆ ಅನುಮತಿ ನೀಡಿರುವನೋ ಅವರಿಗೇ ಹೊರತು ಅವನ ಬಳಿ ಶಿಫಾರಸ್ಸು ಪ್ರಯೋಜನ ಪಡಲಾರದು.”
[ಸಬಅ್:22-23]
﴿قُلِ ٱدۡعُواْ ٱلَّذِينَ زَعَمۡتُم مِّن دُونِ ٱللَّهِ لَا يَمۡلِكُونَ مِثۡقَالَ ذَرَّةٖ فِي ٱلسَّمَٰوَٰتِ وَلَا فِي ٱلۡأَرۡضِ وَمَا لَهُمۡ فِيهِمَا مِن شِرۡكٖ وَمَا لَهُۥ مِنۡهُم مِّن ظَهِيرٖ 22 وَلَا تَنفَعُ ٱلشَّفَٰعَةُ عِندَهُۥٓ إِلَّا لِمَنۡ أَذِنَ لَهُۥ...﴾
"ಹೇಳಿರಿ: ‘ಅಲ್ಲಾಹುವಿನ ಹೊರತು ನೀವು ವಾದಿಸುತ್ತಿರುವ ಎಲ್ಲರನ್ನೂ ಕರೆದು ಪ್ರಾರ್ಥಿಸಿರಿ. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಒಂದು ಅಣುವಿನ ತೂಕದಷ್ಟು ಕೂಡ ಅವರು ಸ್ವಾಧೀನಪಡಿಸಲಾರರು. ಅವೆರಡರಲ್ಲಿ ಅವರಿಗೆ ಯಾವುದೇ ಸಹಭಾಗಿತ್ವವೂ ಇಲ್ಲ. ಅವರ ಪೈಕಿ ಅವನಿಗೆ ಸಹಾಯಕರಾಗಿ ಯಾರೂ ಇಲ್ಲ .ಅವನು ಯಾರಿಗೆ ಅನುಮತಿ ನೀಡಿರುವನೋ ಅವರಿಗೇ ಹೊರತು ಅವನ ಬಳಿ ಶಿಫಾರಸು ಪ್ರಯೋಜನ ಪಡಲಾರದು." [ಸಬಅ್: 22-23]
وقال تعالى: ﴿أَيُشۡرِكُونَ مَا لَا يَخۡلُقُ شَيۡـٔٗا وَهُمۡ يُخۡلَقُونَ 191 وَلَا يَسۡتَطِيعُونَ لَهُمۡ نَصۡرٗا وَلَآ أَنفُسَهُمۡ يَنصُرُونَ 192﴾
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವರೇ (ಆ ಆರಾಧ್ಯರೇ) ಸೃಷ್ಟಿಸಲ್ಪಟ್ಟವರಾಗಿರುವಾಗ ಏನನ್ನೂ ಸೃಷ್ಟಿಸದವರನ್ನು ಅವರು (ಅವನಿಗೆ) ಸಹಭಾಗಿಯನ್ನಾಗಿ ಮಾಡುವುದೇ? ಅವರಿಗೆ ಯಾವುದೇ ಸಹಾಯವನ್ನು ಮಾಡಲು ಅವರಿಗೆ (ಆ ಸಹಭಾಗಿಗಳಿಗೆ) ಸಾಧ್ಯವಾಗದು. ಸ್ವತಃ ತಮಗೇ ಸಹಾಯ ಮಾಡಲೂ ಅವರಿಂದಾಗದು.” [ಅಲ್-ಅ'ಅರಾಫ್: 191-192]
ಆ ಆರಾಧ್ಯರುಗಳ ಸ್ಥಿತಿ ಹೀಗಿರುವಾಗ, ಅವರನ್ನು ಆರಾಧ್ಯರೆಂದು ನಂಬಿದವರು ಎಷ್ಟು ದೊಡ್ಡ ಅವಿವೇಕಿಗಳು, ಮತ್ತು ಮೂರ್ಖರೆಂದು ಆಲೋಚಿಸಿ ನೋಡಿ.
ಎರಡು: ಅಲ್ಲಾಹನೇ ಏಕೈಕ ಸಂರಕ್ಷಕ ಮತ್ತು ಸೃಷ್ಟಿಕರ್ತ, ಎಲ್ಲಾ ವಸ್ತುಗಳ ಆಧಿಪತ್ಯವಿರುವುದು ಅವನ ಕೈಯಲ್ಲಿ, ಅವನೇ ಆಶ್ರಯ ನೀಡುವವನು, ಅವನಿಗೆ ಯಾರೂ ಆಶ್ರಯ ನೀಡುವುದಿಲ್ಲ ಎಂದು ಈ ಬಹುದೇವಾರಾಧಕರು ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ ರುಬೂಬಿಯ್ಯತ್ನಲ್ಲಿ (ಪ್ರಭುತ್ವದಲ್ಲಿ) ಅವನು ಏಕನೆಂದು ಹೇಳಿದಂತೆ ಉಲೂಹಿಯ್ಯತ್ನಲ್ಲೂ (ಆರಾಧನಾರ್ಹತೆಯಲ್ಲೂ) ಅವನು ಏಕನೆಂದು ಹೇಳುವುದು ಇವರಿಗೆ ಅನಿವಾರ್ಯವಾಗುತ್ತದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ. ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ಪ್ರಭುವನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನು ಮಾಡದಿರಿ.” [ಅಲ್-ಬಖರ:21-22].
﴿يَٰٓأَيُّهَا ٱلنَّاسُ ٱعۡبُدُواْ رَبَّكُمُ ٱلَّذِي خَلَقَكُمۡ وَٱلَّذِينَ مِن قَبۡلِكُمۡ لَعَلَّكُمۡ تَتَّقُونَ21 ٱلَّذِي جَعَلَ لَكُمُ ٱلۡأَرۡضَ فِرَٰشٗا وَٱلسَّمَآءَ بِنَآءٗ وَأَنزَلَ مِنَ ٱلسَّمَآءِ مَآءٗ فَأَخۡرَجَ بِهِۦ مِنَ ٱلثَّمَرَٰتِ رِزۡقٗا لَّكُمۡۖ فَلَا تَجۡعَلُواْ لِلَّهِ أَندَادٗا وَأَنتُمۡ تَعۡلَمُونَ 22﴾
"ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ. ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ಪ್ರಭುವನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹುವಿಗೆ ಪ್ರತಿಸ್ಪರ್ಧಿಗಳನ್ನು ಮಾಡದಿರಿ."
[ಅಲ್-ಬಖರ: 21-22]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವರನ್ನು ಸೃಷ್ಟಿಸಿದ್ದು ಯಾರು? ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು. ಆದರೂ ಅವರು ತಪ್ಪಿಸಲ್ಪಡುತ್ತಿರುವುದು ಹೇಗೆ?” [ಅಝ್ಝುಖ್ರುಫ್:87].
﴿وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُۖ فَأَنَّىٰ يُؤۡفَكُونَ 87﴾
"ಅವರನ್ನು ಸೃಷ್ಟಿಸಿದ್ದು ಯಾರು?’ ಎಂದು ತಾವು ಅವರೊಂದಿಗೆ ಕೇಳಿದರೆ ಖಂಡಿತವಾಗಿಯೂ ಅವರು ‘ಅಲ್ಲಾಹು’ ಎನ್ನುವರು. ಆದರೂ ಅವರು ತಪ್ಪಿಸಲ್ಪಡುತ್ತಿರುವುದು ಹೇಗೆ?" [ಅಝ್ಝುಖ್ರುಫ್: 87].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಹೇಳಿರಿ: ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನು ಯಾರು? ಶ್ರವಣವನ್ನೂ ದೃಷ್ಟಿಯನ್ನೂ ಅಧೀನದಲ್ಲಿರಿಸಿದವನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವವನು ಯಾರು? ಕಾರ್ಯನಿಯಂತ್ರಣ ಮಾಡುವವನು ಯಾರು? ಅವರು ಹೇಳುವರು: ‘ಅಲ್ಲಾಹು’. ಹೇಳಿರಿ: ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ? ನಿಮ್ಮ ನೈಜ ಪ್ರಭುವಾದ ಅಲ್ಲಾಹು ಅವನೇ ಆಗಿರುವನು. ಆದ್ದರಿಂದ ಸತ್ಯದಾಚೆಗೆ ದುರ್ಮಾರ್ಗವಲ್ಲದೆ ಇನ್ನೇನಿದೆ? ಹೀಗಿದ್ದೂ ನೀವು ಹೇಗೆ ತಪ್ಪಿಸಲ್ಪಡುತ್ತಿರುವಿರಿ?” [ಯೂನುಸ್:31-32].
﴿قُلۡ مَن يَرۡزُقُكُم مِّنَ ٱلسَّمَآءِ وَٱلۡأَرۡضِ أَمَّن يَمۡلِكُ ٱلسَّمۡعَ وَٱلۡأَبۡصَٰرَ وَمَن يُخۡرِجُ ٱلۡحَيَّ مِنَ ٱلۡمَيِّتِ وَيُخۡرِجُ ٱلۡمَيِّتَ مِنَ ٱلۡحَيِّ وَمَن يُدَبِّرُ ٱلۡأَمۡرَۚ فَسَيَقُولُونَ ٱللَّهُۚ فَقُلۡ أَفَلَا تَتَّقُونَ 31 فَذَٰلِكُمُ ٱللَّهُ رَبُّكُمُ ٱلۡحَقُّۖ فَمَاذَا بَعۡدَ ٱلۡحَقِّ إِلَّا ٱلضَّلَٰلُۖ فَأَنَّىٰ تُصۡرَفُونَ32﴾
"ಹೇಳಿರಿ: ‘ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಅನ್ನಾಧಾರವನ್ನು ಒದಗಿಸುವವನು ಯಾರು? ಶ್ರವಣವನ್ನೂ ದೃಷ್ಟಿಯನ್ನೂ ಅಧೀನದಲ್ಲಿರಿಸಿದವನು ಯಾರು? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವವನು ಯಾರು? ಕಾರ್ಯನಿಯಂತ್ರಣ ಮಾಡುವವನು ಯಾರು?’ ಅವರು ಹೇಳುವರು: ‘ಅಲ್ಲಾಹು’ ಹೇಳಿರಿ: ‘ಆದರೂ ನೀವು ಭಯಭಕ್ತಿ ಪಾಲಿಸಲಾರಿರೇ? ’ನಿಮ್ಮ ನೈಜ ಪ್ರಭುವಾದ ಅಲ್ಲಾಹು ಅವನೇ ಆಗಿರುವನು. ಆದ್ದರಿಂದ ಸತ್ಯದಾಚೆಗೆ ದುರ್ಮಾರ್ಗ ವಲ್ಲದೆ ಇನ್ನೇನಿದೆ? ಹೀಗಿದ್ದೂ ನೀವು ಹೇಗೆ ತಪ್ಪಿಸಲ್ಪಡುತ್ತಿರುವಿರಿ?"
[ಯೂನುಸ್ : 31-32]
ಅಲ್ಲಾಹನಲ್ಲಿರುವ ವಿಶ್ವಾಸವು ಒಳಗೊಂಡಿರುವ ನಾಲ್ಕನೇ ವಿಷಯ: ಅಲ್ಲಾಹನ ಹೆಸರುಗಳು ಮತ್ತು ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು:
ಅಂದರೆ: ಅಲ್ಲಾಹನು ತನ್ನ ಗ್ರಂಥದಲ್ಲಿ ಮತ್ತು ಅವನ ಸಂದೇಶವಾಹಕರ ಸುನ್ನತ್ನಲ್ಲಿ ತನಗಾಗಿ ಯಾವ ಹೆಸರುಗಳನ್ನು ಮತ್ತು ಗುಣಲಕ್ಷಣಗಳನ್ನು ದೃಢೀಕರಿಸಿದ್ದಾನೋ ಅವುಗಳನ್ನು ಯಾವುದೇ ದುರ್ವ್ಯಾಖ್ಯಾನ, ನಿರಾಕರಣೆ, ಸ್ವರೂಪ ಮತ್ತು ಹೋಲಿಕೆ ಇಲ್ಲದೆ ಅವನಿಗೆ ಹೊಂದಿಕೆಯಾಗುವ ರೀತಿಯಲ್ಲಿ ದೃಢೀಕರಿಸುವುದು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ಕೃತ್ರಿಮವನ್ನು ತೋರಿಸುವವರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು.” [ಅಲ್-ಅಅ್ರಾಫ್:180]
﴿وَلِلَّهِ ٱلۡأَسۡمَآءُ ٱلۡحُسۡنَىٰ فَٱدۡعُوهُ بِهَاۖ وَذَرُواْ ٱلَّذِينَ يُلۡحِدُونَ فِيٓ أَسۡمَٰٓئِهِۦۚ سَيُجۡزَوۡنَ مَا كَانُواْ يَعۡمَلُونَ 180﴾
"ಅಲ್ಲಾಹುವಿಗೆ ಅತ್ಯುತ್ತಮವಾದ ನಾಮಗಳಿವೆ. ಆದ್ದರಿಂದ ನೀವು ಅವನನ್ನು ಆ ನಾಮಗಳಿಂದ ಕರೆಯಿರಿ. ಅವನ ನಾಮಗಳಲ್ಲಿ ವಕ್ರತೆ ತೋರಿಸುವವರಾರೋ ಅವರನ್ನು ಬಿಟ್ಟುಬಿಡಿರಿ. ಅವರು ಮಾಡಿಕೊಂಡಿರುವುದರ ಫಲವನ್ನು ತರುವಾಯ ಅವರಿಗೆ ನೀಡಲಾಗುವುದು." [ಅಲ್-ಅಅರಾಫ್:180] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತವಾದ ಅವಸ್ಥೆಯಿರುವುದು ಅವನಿಗಾಗಿದೆ. ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು.” [ಅರ್ರೂಮ್:27]
﴿...وَلَهُ ٱلۡمَثَلُ ٱلۡأَعۡلَىٰ فِي ٱلسَّمَٰوَٰتِ وَٱلۡأَرۡضِۚ وَهُوَ ٱلۡعَزِيزُ ٱلۡحَكِيمُ﴾
"...ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತವಾದ ಅವಸ್ಥೆಯಿರುವುದು ಅವನಿಗಾಗಿದೆ. ಅವನು ಪ್ರತಾಪ ಶಾಲಿಯೂ, ಯುಕ್ತಿಪೂರ್ಣನೂ ಆಗಿರುವನು." [ಅರ್ರೂಮ್: 27] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಆಲಿಸುವವನೂ ಎಲ್ಲವನ್ನು ವೀಕ್ಷಿಸುವವನೂ ಆಗಿರುವನು.” [ಅಶ್ಶೂರಾ:11].
﴿...لَيۡسَ كَمِثۡلِهِۦ شَيۡءٞۖ وَهُوَ ٱلسَّمِيعُ ٱلۡبَصِيرُ﴾
“ಅವನಂತೆ ಯಾವುದೂ ಇಲ್ಲ; ಮತ್ತು ಅವನು ಎಲ್ಲವನ್ನೂ ಕೇಳುವವನು ಹಾಗೂ ಎಲ್ಲವನ್ನೂ ನೋಡುವವನಾಗಿದ್ದಾನೆ.” [ಅಶ್ಶೂರಾ:11]
ಈ ವಿಚಾರದಲ್ಲಿ ಎರಡು ಗುಂಪುಗಳು ದಾರಿ ತಪ್ಪಿವ
ಮೊದಲ ಗುಂಪು ಮುಅತ್ತಿಲಗಳು: ಇವರು ಅಲ್ಲಾಹನ ನಾಮ ಮತ್ತು ಗುಣಲಕ್ಷಣಗಳನ್ನು ಅಥವಾ ಅವುಗಳಲ್ಲಿ ಕೆಲವನ್ನು ನಿರಾಕರಿಸಿದರು. ಅಲ್ಲಾಹನಿಗೆ ಈ ನಾಮಗಳು ಮತ್ತು ಗುಣಲಕ್ಷಣಗಳನ್ನು ದೃಢೀಕರಿಸಿದರೆ ಅದು ಅಲ್ಲಾಹನನ್ನು ಸೃಷ್ಟಿಗಳೊಂದಿಗೆ ಹೋಲಿಸಿದಂತಾಗುತ್ತದೆ ಎಂದು ಅವರು ವಾದಿಸಿದರು. ಆದರೆ ಈ ವಾದವು ಈ ಕೆಳಗಿನ ಕಾರಣಗಳಿಂದಾಗಿ ಸಂಪೂರ್ಣ ಅಸಂಬದ್ಧ ಮತ್ತು ಅಸಿಂಧುವಾಗಿದೆ:
ಒಂದು: ಈ ವಾದವು ಕೆಲವು ಸುಳ್ಳು ಸಂಗತಿಗಳನ್ನು ಸ್ವೀಕರಿಸುವುದನ್ನು ಅನಿವಾರ್ಯಗೊಳಿಸುತ್ತದೆ. ಉದಾಹರಣೆಗೆ, ಅಲ್ಲಾಹನ ವಚನಗಳಲ್ಲಿ ವಿರೋಧಾಭಾಸಗಳಿವೆ ಎಂದು ಒಪ್ಪಿಕೊಳ್ಳುವುದನ್ನು ಅನಿವಾರ್ಯಗೊಳಿಸುತ್ತದೆ. ಏಕೆಂದರೆ, ಅಲ್ಲಾಹನು ತನಗೆ ಈ ಹೆಸರುಗಳು ಮತ್ತು ಗುಣಲಕ್ಷಣಗಳಿರುವುದಾಗಿ ದೃಢೀಕರಿಸಿದ್ದಾನೆ. ಅದೇ ಸಮಯ ತನಗೆ ಹೋಲಿಕೆಯಾಗಿ ಯಾರಾದರೂ ಇರುವುದನ್ನು ನಿಷೇಧಿಸಿದ್ದಾನೆ. ಒಂದು ವೇಳೆ, ಈ ನಾಮ ಮತ್ತು ಗುಣಲಕ್ಷಣಗಳನ್ನು ದೃಢೀಕರಿಸುವುದು (ಅಲ್ಲಾಹನನ್ನು ಸೃಷ್ಟಿಗಳೊಂದಿಗೆ) ಹೋಲಿಸುವುದಕ್ಕೆ ಕಾರಣವಾಗುತ್ತದೆಂದು ಒಪ್ಪಿಕೊಳ್ಳುವುದಾದರೆ ಅಲ್ಲಾಹನ ವಚನಗಳಲ್ಲಿ ವಿರೋಧಾಭಾಸವಿದೆಯೆಂದು ಒಪ್ಪಿಕೊಳ್ಳುವುದು ಮತ್ತು ಅಲ್ಲಾಹನ ವಚನಗಳು ಪರಸ್ಪರ ಒಂದು ಇನ್ನೊಂದು ನಿಷೇಧಿಸುತ್ತದೆ ಎಂದು ಹೇಳುವುದು ಅನಿವಾರ್ಯವಾಗುತ್ತದೆ.
ಎರಡನೆಯ ಕಾರಣ: ಯಾವುದೇ ಎರಡು ವಸ್ತುಗಳ ಹೆಸರು ಅಥವಾ ಗುಣಗಳು ಪರಸ್ಪರ ಹೊಂದಾಣಿಕೆಯಾಗುತ್ತವೆ ಎಂಬ ಕಾರಣದಿಂದ ಅವೆರಡು ವಸ್ತುಗಳು ಒಂದೇ ಆಗಿವೆ ಎಂದು ಹೇಳುವುದು ಅನಿವಾರ್ಯವಾಗುವುದಿಲ್ಲ. ಉದಾಹರಣೆಗೆ, ಇಬ್ಬರು ವ್ಯಕ್ತಿಗಳನ್ನು ನೋಡಿ. ಅವರಿಬ್ಬರೂ ಮನುಷ್ಯರು, ಇಬ್ಬರೂ ಕೇಳುತ್ತಾರೆ, ನೋಡುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ಇದರಿಂದ ಅವರು ಮಾನವೀಯತೆಯಲ್ಲಿ, ಕೇಳುವುದರಲ್ಲಿ, ನೋಡುವುದರಲ್ಲಿ ಮತ್ತು ಮಾತನಾಡುವುದರಲ್ಲಿ ಒಂದೇ ರೀತಿ ಆಗಿದ್ದಾರೆ ಎಂದು ಹೇಳುವುದು ಸಾಧ್ಯವಿಲ್ಲ.
ಪ್ರಾಣಿಗಳನ್ನು ನೋಡಿ. ಎಲ್ಲಾ ಪ್ರಾಣಿಗಳಿಗೂ ಕೈ, ಕಾಲು ಮತ್ತು ಕಣ್ಣುಗಳಿವೆ. ಇದರಿಂದ ಎಲ್ಲಾ ಪ್ರಾಣಿಗಳ ಕೈ, ಕಾಲು ಮತ್ತು ಕಣ್ಣುಗಳು ಒಂದೇ ರೀತಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ.
ಆದ್ದರಿಂದ ಹೆಸರು ಮತ್ತು ಗುಣಗಳಲ್ಲಿ ಹೊಂದಾಣಿಕೆಯಿರುವ ಹೊರತಾಗಿಯೂ ಜೀವಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸ ಗೋಚರವಾಗುತ್ತದೆ. ಹೀಗಿರುವಾಗ, ಸೃಷ್ಟಿಕರ್ತ ಮತ್ತು ಸೃಷ್ಟಿಗಳ ನಡುವಿನ ವ್ಯತ್ಯಾಸವು ಇನ್ನಷ್ಟು ಸ್ಪಷ್ಟ ಮತ್ತು ಅಗಾಧವಾಗಿದೆ.
ಎರಡನೆಯ ಗುಂಪು ಮುಶಬ್ಬಿಹಗಳು: ಇವರು ಅಲ್ಲಾಹನನ್ನು ಅವನ ಸೃಷ್ಟಿಗಳೊಂದಿಗೆ ಹೋಲಿಸುತ್ತಾ ಅಲ್ಲಾಹನ ನಾಮ ಮತ್ತು ಗುಣಲಕ್ಷಣಗಳನ್ನು ದೃಢೀಕರಿಸುತ್ತಾರೆ. “ಇದು (ಕುರ್ಆನ್ ಮತ್ತು ಸುನ್ನತ್ತಿನ) ಸ್ಪಷ್ಟವಚನಗಳು ಸೂಚಿಸುವ ಅರ್ಥವಾಗಿದೆ, ಏಕೆಂದರೆ ದಾಸರು ಅರ್ಥಮಾಡಿಕೊಳ್ಳುವ ಶೈಲಿಯಲ್ಲೇ ಅಲ್ಲಾಹು ದಾಸರೊಡನೆ ಮಾತನಾಡುತ್ತಾನೆ” ಎಂದು ಅವರು ವಾದಿಸುತ್ತಾರೆ. ಈ ಕೆಳಗಿನ ಕಾರಣಗಳಿಂದಾಗಿ ಇವರ ಈ ವಾದವು ಅರ್ಥಹೀನವಾಗಿದೆ:
ಒಂದು: ಅಲ್ಲಾಹನನ್ನು ಸೃಷ್ಟಿಯೊಂದಿಗೆ ಹೋಲಿಸುವುದನ್ನು ಬುದ್ಧಿ ಮತ್ತು ಷರಿಯತ್ (ಇಸ್ಲಾಮಿ ಧರ್ಮಶಾಸ್ತ್ರ) ಎರಡೂ ಅರ್ಥಹೀನವೆಂದು ಹೇಳುತ್ತವೆ. ಆದರೆ ಕುರ್ಆನ್ ಹಾಗೂ ಸುನ್ನತ್ತಿನ ಸ್ಪಷ್ಟ ವಚನಗಳು ಅರ್ಥಹೀನವಾಗಿರಲು ಸಾಧ್ಯವಿಲ್ಲ.
ಎರಡು: ಅರ್ಥದ ಮೂಲದಿಂದ ನೋಡುವಾಗ ಮಾತ್ರ ಅಲ್ಲಾಹನು ತನ್ನ ದಾಸರೊಡನೆ ಅವರು ಅರ್ಥಮಾಡಿಕೊಳ್ಳುವ ಶೈಲಿಯಲ್ಲಿ ಮಾತನಾಡಿದ್ದಾನೆ. ಆದರೆ ಆ ಅರ್ಥದ ನಿಜಸ್ಥಿತಿಯ ಬಗ್ಗೆ ಹೇಳುವುದಾದರೆ, ಆ ಮಾತು ಅಲ್ಲಾಹನು ಅವನ ಅಸ್ತಿತ್ವ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿ ತನಗೆ ಮಾತ್ರ ವಿಶೇಷಗೊಳಿಸಿದ ಜ್ಞಾನದಲ್ಲಿ ಸೇರಿದ್ದಾಗಿದೆ.
ಉದಾಹರಣೆಗೆ, ತಾನು “ಕೇಳುವವನು” ಎಂದು ಅಲ್ಲಾಹನು ದೃಢೀಕರಿಸಿದ್ದಾನೆ. ಅರ್ಥದ ಮೂಲದಿಂದ ನೋಡುವಾಗ “ಕೇಳುವಿಕೆ” ಎಂದರೆ ಏನೆಂದು ಎಲ್ಲರಿಗೂ ತಿಳಿದಿದೆ. (ಅದು ಶಬ್ದಗಳನ್ನು ಗ್ರಹಿಸುವುದಾಗಿದೆ). ಆದರೆ ಅಲ್ಲಾಹನ “ಕೇಳುವಿಕೆ”ಗೆ ಸಂಬಂಧಿಸಿ ಇದರ ನಿಜಸ್ಥಿತಿಯೇನೆಂದು ಯಾರಿಗೂ ತಿಳಿದಿಲ್ಲ. ಏಕೆಂದರೆ, ಕೇಳುವಿಕೆಯ ನಿಜಸ್ಥಿತಿಯ ವಿಷಯದಲ್ಲಿ ಸೃಷ್ಟಿಗಳ ನಡುವೆಯೇ ಸ್ಪಷ್ಟ ವ್ಯತ್ಯಾಸಗಳಿವೆ. ಆದ್ದರಿಂದ, ಅದರಲ್ಲಿ ಸೃಷ್ಟಿಗಳು ಮತ್ತು ಸೃಷ್ಟಿಕರ್ತನ ನಡುವಿನ ವ್ಯತ್ಯಾಸವು ಇನ್ನಷ್ಟು ಸ್ಪಷ್ಟ ಮತ್ತು ಅಗಾಧವಾಗಿದೆ.
ತಾನು ಸಿಂಹಾಸನದಲ್ಲಿ “ಇಸ್ತಿವಾ” ಆಗಿದ್ದೇನೆ (ಆರೂಢನಾಗಿದ್ದೇನೆ) ಎಂದು ಅಲ್ಲಾಹನು ತನ್ನ ಬಗ್ಗೆ ತಿಳಿಸಿದ್ದಾನೆ. ಅರ್ಥದ ಮೂಲದಿಂದ ನೋಡುವಾಗ ಇಸ್ತಿವಾ (ಆರೂಢನಾಗುವುದು) ಎಂದರೆ ಏನೆಂದು ಎಲ್ಲರಿಗೂ ತಿಳಿದಿದೆ. ಆದರೆ ಅಲ್ಲಾಹನು ಸಿಂಹಾಸನಾರೂಢನಾಗುವುದಕ್ಕೆ ಸಂಬಂಧಿಸಿದಂತೆ, ಅವನು ಆರೂಢನಾಗುವುದರ ನಿಜಸ್ಥಿತಿಯು ನಮಗೆ ತಿಳಿದಿಲ್ಲ. ಏಕೆಂದರೆ, ಆರೂಢ ಆಗುವುದರ ನಿಜಸ್ಥಿತಿಯಲ್ಲಿ ಸೃಷ್ಟಿಗಳ ನಡುವೆಯೇ ಸ್ಪಷ್ಟ ವ್ಯತ್ಯಾಸಗಳಿವೆ. ಉದಾಹರಣೆಗೆ, ಅಲುಗಾಡದ ಕುರ್ಚಿಯಲ್ಲಿ ಆರೂಢನಾಗುವುದು ಮತ್ತು ಪಳಗದ, ಬೆದರುವ ಒಂಟೆಯ ಮೇಲೆ ಆರೂಢನಾಗುವುದು ಎರಡೂ ಬೇರೆ ಬೇರೆ. ಸೃಷ್ಟಿಗಳ ವಿಷಯದಲ್ಲೇ ಇಷ್ಟೊಂದು ಸ್ಪಷ್ಟ ವ್ಯತ್ಯಾಸಗಳಿವೆ. ಆದ್ದರಿಂದ, ಸೃಷ್ಟಿಗಳು ಮತ್ತು ಸೃಷ್ಟಿಕರ್ತನ ನಡುವಿನ ವ್ಯತ್ಯಾಸವು ಇನ್ನಷ್ಟು ಸ್ಪಷ್ಟ ಮತ್ತು ಅಗಾಧವಾಗಿದೆ.
ನಾವು ಮೇಲೆ ವಿವರಿಸಿದಂತೆ ಅಲ್ಲಾಹನಲ್ಲಿ ವಿಶ್ವಾಸವಿರಿಸುವುದರಿಂದ ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವು ಹೀಗಿವೆ:
ಒಂದು: ಸರ್ವಶಕ್ತನಾದ ಅಲ್ಲಾಹನ ಹೊರತು ಇತರ ಯಾರಲ್ಲೂ ಯಾವುದೇ ನಿರೀಕ್ಷೆ ಮತ್ತು ಭಯಗಳನ್ನು ಹೊಂದದೆ, ಇತರ ಯಾರನ್ನೂ ಆರಾಧಿಸದೆ, ಅವನನ್ನು ಪೂರ್ಣವಾಗಿ ಏಕೈಕಗೊಳಿಸಲು ಸಾಧ್ಯವಾಗುತ್ತದೆ.
ಎರಡು: ಸರ್ವಶಕ್ತನಾದ ಅಲ್ಲಾಹನ ಅತ್ಯುತ್ತಮ ನಾಮಗಳು ಮತ್ತು ಅತ್ಯುನ್ನತ ಗುಣಲಕ್ಷಣಗಳ ಬೇಡಿಕೆಯಂತೆ ಅಲ್ಲಾಹನನ್ನು ಪೂರ್ಣವಾಗಿ ಪ್ರೀತಿಸಲು ಮತ್ತು ಗೌರವಿಸಲು ಸಾಧ್ಯವಾಗುತ್ತದೆ.
ಮೂರು: ಸರ್ವಶಕ್ತನಾದ ಅಲ್ಲಾಹನು ಆಜ್ಞಾಪಿಸಿದ್ದನ್ನು ಪಾಲಿಸುವ ಮೂಲಕ ಮತ್ತು ಅವನು ವಿರೋಧಿಸಿದ್ದನ್ನು ತೊರೆಯುವ ಮೂಲಕ ಅವನನ್ನು ಪೂರ್ಣವಾಗಿ ಆರಾಧಿಸಲು ಸಾಧ್ಯವಾಗುತ್ತದೆ.
ಮಲಕ್ಗಳಲ್ಲಿ ವಿಶ್ವಾಸವಿಡುವುದು
ಮಲಕ್ಗಳು ಎಂದರೆ (ಕಣ್ಣಿಗೆ ಕಾಣದ) ಅಗೋಚರ ಜಗತ್ತಿನವರು. ಅವರು ಸೃಷ್ಟಿಗಳಾಗಿದ್ದು ಅಲ್ಲಾಹನನ್ನು ಆರಾಧಿಸುವವರು. ಅವರಿಗೆ ಪ್ರಭುತ್ವದಲ್ಲಿ (ಪ್ರಪಂಚದ ನಿಯಂತ್ರಣದಲ್ಲಿ) ಯಾವುದೇ ಪಾಲಿಲ್ಲ. ಅವರಿಗೆ ಆರಾಧನಾರ್ಹತೆಯೂ ಇಲ್ಲ. ಅಲ್ಲಾಹನು ಅವರನ್ನು ಬೆಳಕಿನಿಂದ ಸೃಷ್ಟಿಸಿದನು. ಅವರು ತನ್ನ ಆಜ್ಞೆಗೆ ಪೂರ್ಣವಾಗಿ ಶರಣಾಗುವಂತೆ ಮಾಡಿದನು ಮತ್ತು ಅದಕ್ಕಾಗಿ ಅವರಿಗೆ ಶಕ್ತಿಯನ್ನೂ ನೀಡಿದನು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವವರೆಲ್ಲರೂ ಅವನಿಗೆ ಸೇರಿದವರಾಗಿರುವರು. ಅವನ ಬಳಿಯಿರುವವರು (ಮಲಕ್ಗಳು) ಅವನನ್ನು ಆರಾಧಿಸುವುದನ್ನು ಬಿಟ್ಟು ಅಹಂಕಾರಪಡಲಾರರು. ಅವರಿಗೆ ದಣಿವೂ ಆಗಲಾರದು. ಅವರು ರಾತ್ರಿ ಹಗಲು (ಅಲ್ಲಾಹನ ಪರಿಪಾವನತೆಯನ್ನು) ಕೊಂಡಾಡುತ್ತಿರುವರು. ಅವರಿಗೆ ಸುಸ್ತಾಗಲಾರದು.”
[ಅಲ್ ಅಂಬಿಯಾ:19-20].
﴿...وَمَنۡ عِندَهُۥ لَا يَسۡتَكۡبِرُونَ عَنۡ عِبَادَتِهِۦ وَلَا يَسۡتَحۡسِرُونَ 19 يُسَبِّحُونَ ٱلَّيۡلَ وَٱلنَّهَارَ لَا يَفۡتُرُونَ 20﴾
"ಅವನ ಬಳಿಯಿರುವವರು (ಮಲಕ್ಗಳು) ಅವನನ್ನು ಆರಾಧಿಸುವುದನ್ನು ಬಿಟ್ಟು ಅಹಂಕಾರಪಡಲಾರರು. ಅವರಿಗೆ ದಣಿವೂ ಆಗಲಾರದು. ಅವರು ರಾತ್ರಿ ಹಗಲು (ಅಲ್ಲಾಹುವಿನ ) ಪರಿಪಾವನತೆಯನ್ನು ಕೊಂಡಾಡುತ್ತಿರುವರು. ಅವರಿಗೆ ಸುಸ್ತಾಗಲಾರದು."
[ಅಲ್-ಅಂಬಿಯಾ:19-20]
ಅವರು ಬಹಳ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ನಿಖರ ಸಂಖ್ಯೆ ಅಲ್ಲಾಹನ ಹೊರತು ಯಾರಿಗೂ ತಿಳಿದಿಲ್ಲ. ಸಹೀಹುಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಂನಲ್ಲಿರುವ ಅನಸ್ (رضي الله عنه) ರವರು ವರದಿ ಮಾಡಿದ ಮೆಅರಾಜ್ ಘಟನೆಯನ್ನು ವಿವರಿಸುವ ಹದೀಸಿನಲ್ಲಿ ಹೀಗಿದೆ: ಆಕಾಶದಲ್ಲಿ ಪ್ರವಾದಿ (صلي الله عليه وسلم) ರನ್ನು ಬೈತುಲ್-ಮಅಮೂರ್ಗೆ ಒಯ್ಯಲಾಯಿತು. ಅಲ್ಲಿ ಪ್ರತಿದಿನ ಎಪ್ಪತ್ತು ಸಾವಿರ ಮಲಕ್ಗಳು ನಮಾಜ್ ನಿರ್ವಹಿಸುತ್ತಾರೆ. ಅವರು ಒಮ್ಮೆ (ನಮಾಜ್ ನಿರ್ವಹಿಸಿ) ಅಲ್ಲಿಂದ ನಿರ್ಗಮಿಸಿದರೆ ನಂತರ ಅದನ್ನು ಪ್ರವೇಶಿಸುವುದಿಲ್ಲ. ಅದೇ ಅವರ ಕೊನೆಯ ಭೇಟಿಯಾಗಿರುತ್ತದೆ.
ಮಲಕ್ಗಳಲ್ಲಿರುವ ವಿಶ್ವಾಸವು ನಾಲ್ಕು ವಿಷಯಗಳನ್ನು ಒಳಗೊಂಡಿದೆ:
ಒಂದು: ಅವರ ಅಸ್ತಿತ್ವದಲ್ಲಿ ವಿಶ್ವಾಸವಿಡುವುದು
ಎರಡು: ಅವರ ಪೈಕಿ ನಮಗೆ ಯಾರದ್ದೆಲ್ಲಾ ಹೆಸರು ತಿಳಿದಿದೆಯೋ (ಉದಾ: ಜಿಬ್ರೀಲ್) ಅವರ ಹೆಸರುಗಳೊಂದಿಗೆ ಅವರಲ್ಲಿ ವಿಶ್ವಾಸವಿಡುವುದು. ನಮಗೆ ಹೆಸರು ತಿಳಿದಿಲ್ಲದ ಮಲಕ್ಗಳಲ್ಲಿ ಮೊತ್ತವಾಗಿ ವಿಶ್ವಾಸವಿಡುವುದು.
ಮೂರು: ಮಲಕ್ಗಳ ಪೈಕಿ ಯಾರ ರೂಪಗಳ ಬಗ್ಗೆ ನಮಗೆ ತಿಳಿದಿದೆಯೋ ಆ ರೂಪದಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ, ಜಿಬ್ರೀಲ್ عليه السلام ರ ರೂಪದಲ್ಲಿ ವಿಶ್ವಾಸವಿಡುವುದು. ಅಂತರಿಕ್ಷವನ್ನು ಪೂರ್ಣವಾಗಿ ಮುಚ್ಚುವಂತೆ ಆರು ನೂರು ರೆಕ್ಕೆಗಳನ್ನು ಹೊಂದಿರುವ ಅವರ ಮೂಲರೂಪದಲ್ಲೇ ನಾನು ಅವರನ್ನು ನೋಡಿದ್ದೇನೆಂದು ಪ್ರವಾದಿ صلي الله عليه وسلم ರವರು ತಿಳಿಸಿದ್ದಾರೆ.
ಕೆಲವೊಮ್ಮೆ ಮಲಕ್ಗಳು ಅಲ್ಲಾಹನ ಆದೇಶದಂತೆ ಮಾನವ ರೂಪದಲ್ಲೂ ಕಾಣಿಸಿಕೊಳ್ಳುತ್ತಾರೆ. ಒಮ್ಮೆ ಅಲ್ಲಾಹನು ಜಿಬ್ರೀಲ್عليه السلامರನ್ನು ಮರ್ಯಮ್ (عليها السلام)ರ ಬಳಿಗೆ ಕಳುಹಿಸಿದನು. ಅವರು ಪೂರ್ಣ ಮನುಷ್ಯ ರೂಪದಲ್ಲಿ ಮರ್ಯಮರ ಮುಂದೆ ಪ್ರತ್ಯಕ್ಷರಾದರು. ಅಂತೆಯೇ, ಒಮ್ಮೆ ಪ್ರವಾದಿ صلي الله عليه وسلم ರವರು ತಮ್ಮ ಸಹಾಬಾಗಳ ಮಧ್ಯೆ ಕುಳಿತಿದ್ದಾಗ ಜಿಬ್ರೀಲ್ عليه السلام ರವರು ಶುಭ್ರ ಬಿಳಿ ಉಡುಪು ಧರಿಸಿದ, ಕಡುಗಪ್ಪು ಕೂದಲಿನ ಮನುಷ್ಯ ರೂಪದಲ್ಲಿ ಬಂದರು. ಪ್ರಯಾಣದ ಯಾವುದೇ ಕುರುಹು ಅವರಲ್ಲಿ ಗೋಚರಿಸುತ್ತಿರಲಿಲ್ಲ. ಸಹಾಬಿಗಳಲ್ಲಿ ಯಾರಿಗೂ ಅವರ ಪರಿಚಯವಿರಲಿಲ್ಲ. ಅವರು ತಮ್ಮ ಮೊಣಕಾಲನ್ನು ಪ್ರವಾದಿ ಮುಹಮ್ಮದ್ صلي الله عليه وسلم ರವರ ಮೊಣಕಾಲಿಗೆ ಜೋಡಿಸಿ ಕುಳಿತು ತಮ್ಮ ಅಂಗೈಗಳನ್ನು ಪ್ರವಾದಿ صلي الله عليه وسلم ರವರ ತೊಡೆಗಳ ಮೇಲಿಟ್ಟರು. ನಂತರ ಪ್ರವಾದಿ(ಸ) ರೊಂದಿಗೆ ಇಸ್ಲಾಮ್, ಈಮಾನ್, ಇಹ್ಸಾನ್ ಮತ್ತು ಅಂತ್ಯದಿನದ ಬಗ್ಗೆ – ಅದರ ಚಿಹ್ನೆಗಳ ಬಗ್ಗೆ – ಕೇಳಿದರು. ಪ್ರವಾದಿ صلي الله عليه وسلم ರವರು ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರು ಹೊರಟುಹೋದ ನಂತರ ಪ್ರವಾದಿ(ಸ) ರವರು ಸಹಾಬಾಗಳನ್ನು ಕರೆದು, “ಇವರು ಜಿಬ್ರೀಲ್عليه السلام. ಇವರು ನಿಮಗೆ ನಿಮ್ಮ ಧರ್ಮವನ್ನು ಕಲಿಸಲು ಬಂದಿದ್ದರು” ಎಂದು ಹೇಳಿದರು.
«هَذَا جِبْرِيلُ؛ أَتَاكُمْ يُعَلِّمُكُمْ دِينَكُمْ».
"ಇವರು ಜಿಬ್ರೀಲ್ ನಿಮಗೆ ನಿಮ್ಮ ಧರ್ಮವನ್ನು ಕಲಿಸಲಿಕ್ಕೆ ಬಂದಿದ್ದರು."8
ಅದೇ ರೀತಿ ಅಲ್ಲಾಹನು ಇಬ್ರಾಹೀಮ್ ಮತ್ತು ಲೂತ್ (عليهما السلام)ರವರ ಬಳಿಗೆ ಕಳುಹಿಸಿದ ಮಲಕ್ಗಳು ಕೂಡ ಮನುಷ್ಯರ ರೂಪದಲ್ಲೇ ಬಂದಿದ್ದರು.
ಮಲಕ್ಗಳಲ್ಲಿರುವ ವಿಶ್ವಾಸವು ಒಳಗೊಂಡಿರುವ ನಾಲ್ಕನೆಯ ವಿಷಯ: ಅಲ್ಲಾಹನ ಆಜ್ಞೆ ಪ್ರಕಾರ ಅವರು ನಿರ್ವಹಿಸುತ್ತಿರುವ ಕೆಲಸ-ಕಾರ್ಯಗಳಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ, ಸರ್ವಶಕ್ತನಾದ ಅಲ್ಲಾಹನ ತಸ್ಬೀಹ್ ಪಠಿಸುವುದು ಮತ್ತು ಹಗಲೂ ರಾತ್ರಿ ಯಾವುದೇ ಆಯಾಸ ಅಥವಾ ಬಿಡುವಿಲ್ಲದೆ ನಿರಂತರವಾಗಿ ಅವನನ್ನು ಆರಾಧಿಸುವುದು ಇತ್ಯಾದಿ.
ಕೆಲವು ಮಲಕ್ಗಳಿಗೆ ವಿಶೇಷವಾದ ಹೊಣೆಗಳನ್ನು ವಹಿಸಿಕೊಡಲಾಗಿದೆ.
ಉದಾಹರಣೆಗೆ: ಜಿಬ್ರೀಲ್ ಅಮೀನ್ ರಿಗೆ ಅಲ್ಲಾಹನ ದಿವ್ಯವಾಣಿಯನ್ನು ತಲುಪಿಸುವ ಹೊಣೆಯನ್ನು ವಹಿಸಿಕೊಡಲಾಗಿದೆ. ಅಲ್ಲಾಹನು ಅವರನ್ನು ತನ್ನ ದಿವ್ಯ ವಾಣಿಯೊಂದಿಗೆ ಪ್ರವಾದಿಗಳು ಮತ್ತು ಸಂದೇಶವಾಹಕರ ಬಳಿಗೆ ಕಳುಹಿಸುತ್ತಾನೆ.
ಮೀಕಾಯೀಲ್ ರಿಗೆ ಮಳೆ ಮತ್ತು ಬೆಳೆಗಳ ಹೊಣೆಯನ್ನು ವಹಿಸಿಕೊಡಲಾಗಿದೆ.
ಇಸ್ರಾಫೀಲ್ ರಿಗೆ ಪುನರುತ್ಥಾನದ ಸಮಯದಲ್ಲಿ ಮತ್ತು ಸೃಷ್ಟಿಗಳನ್ನು ಪುನರ್ಜೀವಗೊಳಿಸುವ ಸಮಯದಲ್ಲಿ ಕಹಳೆ ಊದುವ ಹೊಣೆಯನ್ನು ವಹಿಸಿಕೊಡಲಾಗಿದೆ.
ಮಲಕುಲ್ ಮೌತ್ (ಮರಣದ ಮಲಕ್) ಗೆ ಮರಣದ ಸಮಯದಲ್ಲಿ ಆತ್ಮವನ್ನು ವಶಪಡಿಸುವ ಹೊಣೆಯನ್ನು ವಹಿಸಿಕೊಡಲಾಗಿದೆ.
ಮಾಲಿಕ್ ರಿಗೆ ನರಕದ ಕಾವಲು ಕಾಯುವ ಹೊಣೆಯನ್ನು ವಹಿಸಿಕೊಡಲಾಗಿದೆ.
ಗರ್ಭದಲ್ಲಿರುವ ಭ್ರೂಣದ (ಅಂದರೆ ಮಗುವಿನ) ಹೊಣೆಯನ್ನು ಕೆಲವು ಮಲಕ್ಗಳಿಗೆ ವಹಿಸಿಕೊಡಲಾಗಿದೆ. ಗರ್ಭದಲ್ಲಿ ಮಗುವಿಗೆ 4 ತಿಂಗಳಾಗುವಾಗ ಅಲ್ಲಾಹನು ಅದರ ಬಳಿಗೆ ಮಲಕನ್ನು ಕಳುಹಿಸಿ, ಅದರ ಜೀವನಾಧಾರ, ಆಯುಷ್ಯ, ಕರ್ಮ, ಅದೃಷ್ಟವಂತನೋ ಅಥನಾ ನತದೃಷ್ಟನೋ ಎಂದು ದಾಖಲಿಸಲು ಆಜ್ಞಾಪಿಸುತ್ತಾನೆ.
ಕೆಲವು ಮಲಕ್ಗಳಿಗೆ ಆದಮರ ಸಂತತಿಗಳ ಕರ್ಮಗಳನ್ನು ಸುರಕ್ಷಿತವಾಗಿ ಬರೆದಿಡುವ ಹೊಣೆಯನ್ನು ವಹಿಸಿಕೊಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೊಡನೆ ಇಬ್ಬರು ಮಲಕ್ಗಳಿದ್ದಾರೆ. ಒಬ್ಬರು ಅವನ ಬಲಭಾಗದಲ್ಲಿ ಮತ್ತು ಇನ್ನೊಬ್ಬರು ಎಡಭಾಗದಲ್ಲಿ.
ಮನುಷ್ಯನನ್ನು ಸಮಾಧಿಯಲ್ಲಿ ಇಡಲಾದರೆ ಅವನನ್ನು ಪ್ರಶ್ನಿಸುವ ಹೊಣೆಯನ್ನು ವಹಿಸಿಕೊಡಲಾದ ಮಲಕ್ಗಳಿದ್ದಾರೆ. ಎರಡು ಮಲಕ್ಗಳು ಅವನ ಬಳಿಗೆ ಬಂದು ಅವನ ರಬ್ಬ್ (ಪ್ರಭು), ಅವನ ಧರ್ಮ ಮತ್ತು ಅವನ ಪ್ರವಾದಿಯ ಬಗ್ಗೆ ಪ್ರಶ್ನಿಸುತ್ತಾರೆ.
ಮಲಕ್ಗಳಲ್ಲಿ ವಿಶ್ವಾಸವಿಡುವುದರಿಂದ ಉಂಟಾಗುವ ಮಹಾನ್ ಪ್ರಯೋಜನಗಳು:
ಒಂದು: ಸರ್ವಶಕ್ತನಾದ ಅಲ್ಲಾಹನ ಘನತೆ, ಮಹಿಮೆ, ಶಕ್ತಿ ಮತ್ತು ಪರಮಾಧಿಕಾರದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಏಕೆಂದರೆ ಸೃಷ್ಟಿಯ ಮಹಾತ್ಮೆಯು ಸೃಷ್ಟಿಕರ್ತನ ಮಹಾತ್ಮೆಗೆ ಪುರಾವೆಯಾಗಿದೆ.
ಎರಡು: ಆದಮರ ಸಂತತಿಗಳ ಬಗ್ಗೆ ಸರ್ವಶಕ್ತನಾದ ಅಲ್ಲಾಹನಿಗಿರುವ ಕಾಳಜಿಯನ್ನು ತಿಳಿಯುವುದರಿಂದ ಅವನಿಗೆ ಕೃತಜ್ಞತೆ ಸಲ್ಲಿಸಲು ಕಾರಣವಾಗುತ್ತದೆ. ಏಕೆಂದರೆ ಆದಮರ ಸಂತತಿಗಳನ್ನು ರಕ್ಷಿಸುವುದು, ಅವರ ಕರ್ಮಗಳನ್ನು ದಾಖಲಿಸುವುದು ಮುಂತಾದ ಹೊಣೆಗಳನ್ನು ಅವನು ಮಲಕ್ಗಳಿಗೆ ವಹಿಸಿಕೊಟ್ಟಿದ್ದಾನೆ.
ಮೂರು: ಸದಾ ಅಲ್ಲಾಹನ ಆರಾಧನೆಯಲ್ಲಿ ನಿರತರಾಗಿರುವ ಮಲಕ್ಗಳ ಬಗ್ಗೆ ತಿಳಿಯುವುದರಿಂದ ಅವರನ್ನು ಪ್ರೀತಿಸಲು ಕಾರಣವಾಗುತ್ತದೆ.
ಕೆಲವು ಪಥಭ್ರಷ್ಟ ಜನರು ಮಲಕ್ಗಳು ಸಶರೀರಿಗಳು ಎಂಬುದನ್ನು ನಿರಾಕರಿಸುತ್ತಾರೆ. ಅವರ ಪ್ರಕಾರ ಮಲಕ್ಗಳೆಂದರೆ ಸೃಷ್ಟಿಗಳಲ್ಲಿ ಅಡಗಿರುವ ಒಳಿತಿನ ಸ್ಫೂರ್ತಿ. ಆದರೆ ಈ ವಾದವು ಅಲ್ಲಾಹನ ಗ್ರಂಥ, ಪ್ರವಾದಿಯವರ صلى الله عليه وسلم ಸುನ್ನತ್ ಮತ್ತು ಮುಸ್ಲಿಮರ ಒಮ್ಮತಾಭಿಪ್ರಾಯವನ್ನು ನಿಷೇಧಿಸುತ್ತದೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಮತ್ತು ಮಲಕ್ಗಳನ್ನು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ ದೂತರನ್ನಾಗಿ ಕಳುಹಿಸಿರುವ ಅಲ್ಲಾಹನಿಗೆ ಸ್ತುತಿ. ಸೃಷ್ಟಿಯಲ್ಲಿ ಅವನಿಚ್ಛಿಸುವುದನ್ನು ಅವನು ಅಧಿಕಗೊಳಿಸುವನು. ಖಂಡಿತವಾಗಿಯೂ ಅಲ್ಲಾಹು ಸರ್ವ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.” [ಫಾತಿರ್:1].
﴿ٱلۡحَمۡدُ لِلَّهِ فَاطِرِ ٱلسَّمَٰوَٰتِ وَٱلۡأَرۡضِ جَاعِلِ ٱلۡمَلَٰٓئِكَةِ رُسُلًا أُوْلِيٓ أَجۡنِحَةٖ مَّثۡنَىٰ وَثُلَٰثَ وَرُبَٰعَ...﴾
"ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿರುವ ಮತ್ತು ಎರಡು, ಮೂರು ಹಾಗೂ ನಾಲ್ಕು ರೆಕ್ಕೆಗಳುಳ್ಳ ಮಲಕ್ಗಳನ್ನು ದೂತರನ್ನಾಗಿ ಕಳುಹಿಸಿರುವ ಅಲ್ಲಾಹುವಿಗೆ ಸ್ತುತಿ." [ ಫಾತಿರ್: 1]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಸತ್ಯನಿಷೇಧಿಗಳ ಮುಖಗಳಿಗೆ ಮತ್ತು ಹಿಂಭಾಗಗಳಿಗೆ ಬಡಿಯುತ್ತಾ ಮಲಕ್ಗಳು ಅವರನ್ನು ಮೃತ ಪಡಿಸುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! (ಮಲಕ್ಗಳು ಅವರೊಂದಿಗೆ ಹೇಳುವರು:) ‘ಜ್ವಲಿಸುತ್ತಿರುವ ಅಗ್ನಿಯ ಶಿಕ್ಷೆಯನ್ನು ನೀವು ಆಸ್ವಾದಿಸಿರಿ.” [ಅಲ್-ಅನ್ಫಾಲ್:50].
﴿وَلَوۡ تَرَىٰٓ إِذۡ يَتَوَفَّى ٱلَّذِينَ كَفَرُواْ ٱلۡمَلَٰٓئِكَةُ يَضۡرِبُونَ وُجُوهَهُمۡ وَأَدۡبَٰرَهُم...﴾
"ಸತ್ಯನಿಷೇಧಿಗಳ ಮುಖಗಳಿಗೆ ಮತ್ತು ಹಿಂಭಾಗಗಳಿಗೆ ಬಡಿಯುತ್ತಾ ಮಲಕ್ಗಳು ಅವರನ್ನು ಮೃತಪಡಿಸುವ ಸಂದರ್ಭವನ್ನು ತಾವು ಕಂಡಿರುತ್ತಿದ್ದರೆ! ." [ಅಲ್-ಅನ್ಫಾಲ್: 50]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...وَلَوۡ تَرَىٰٓ إِذِ ٱلظَّٰلِمُونَ فِي غَمَرَٰتِ ٱلۡمَوۡتِ وَٱلۡمَلَٰٓئِكَةُ بَاسِطُوٓاْ أَيۡدِيهِمۡ أَخۡرِجُوٓاْ أَنفُسَكُمُ...﴾
"...ಆ ಅಕ್ರಮಿಗಳು ಮರಣ ಸಂಕಟದಲ್ಲಿರುವ ದೃಶ್ಯವನ್ನು ತಾವು ಕಂಡಿರುತ್ತಿದ್ದರೆ! ನೀವು ನಿಮ್ಮ ಆತ್ಮಗಳನ್ನು ಹೊರತಳ್ಳಿರಿ ಎಂದು ಹೇಳುತ್ತಾ ಮಲಕ್ಗಳು ಅವರೆಡೆಗೆ ತಮ್ಮ ಕೈಗಳನ್ನು ಚಾಚಿ ಕೊಂಡಿರುವರು."
[ಅಲ್-ಅನ್ಆಮ್: 93]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಕೊನೆಗೆ ಅವರ ಹೃದಯಗಳಿಂದ ಭೀತಿಯು ದೂರವಾದಾಗ ಅವರು ಕೇಳುವರು: ನಿಮ್ಮ ಪ್ರಭು ಏನು ಹೇಳಿರುವನು? ಅವರು ಉತ್ತರಿಸುವರು: ಸತ್ಯವನ್ನು (ಹೇಳಿರುವನು). ಅವನು ಉನ್ನತನೂ ಮಹಾನನೂ ಆಗಿರುವನು.”
[ಸಬಅ್:23].
﴿...حَتَّىٰٓ إِذَا فُزِّعَ عَن قُلُوبِهِمۡ قَالُواْ مَاذَا قَالَ رَبُّكُمۡۖ قَالُواْ ٱلۡحَقَّۖ وَهُوَ ٱلۡعَلِيُّ ٱلۡكَبِيرُ﴾
"...ಕೊನೆಗೆ ಅವರ ಹೃದಯಗಳಿಂದ ಭೀತಿಯು ದೂರವಾದಾಗ ಅವರು ಕೇಳುವರು: ‘ನಿಮ್ಮ ಪ್ರಭು ಏನು ಹೇಳಿರುವನು?’ ಅವರು ಉತ್ತರಿಸುವರು: ‘ಸತ್ಯವನ್ನು (ಹೇಳಿರುವನು). ಅವನು ಉನ್ನತನೂ ಮಹಾನನೂ ಆಗಿದ್ದಾನೆ." [ಸಬಅ್: 23]
ಸ್ವರ್ಗವಾಸಿಗಳ ಬಗ್ಗೆ ಅಲ್ಲಾಹನು ಹೇಳುತ್ತಾನೆ:
﴿...وَٱلۡمَلَٰٓئِكَةُ يَدۡخُلُونَ عَلَيۡهِم مِّن كُلِّ بَابٖ سَلَٰمٌ 23 عَلَيۡكُم بِمَا صَبَرۡتُمۡۚ فَنِعۡمَ عُقۡبَى ٱلدَّارِ24﴾
"ಪ್ರತಿಯೊಂದು ದ್ವಾರದಿಂದಲೂ ಅವರೆಡೆಗೆ ಪ್ರವೇಶಿಸುತ್ತಾ ಮಲಕ್ ಗಳು ಹೇಳುವರು: 'ನೀವು ತಾಳ್ಮೆ ವಹಿಸಿರುವ ಕಾರಣ ನಿಮಗೆ ಶಾಂತಿಯಿರಲಿ!’ ಅಂತಿಮ ಭವನ(ಸ್ವರ್ಗ)ವು ಎಷ್ಟು ಉತ್ತಮವಾದುದು!"
[ಅರ್ರಅದ್: 23-24]
ಸಹೀಹ್ ಬುಖಾರಿಯಲ್ಲಿ ಅಬೂ ಹುರೈರಾ رضي الله عنه ರವರಿಂದ ವರದಿಯಾದ ಹದೀಸಿನಲ್ಲಿ ಪ್ರವಾದಿ صلي الله عليه وسلم ರವರು ಹೇಳಿದರು: ಅಲ್ಲಾಹನು ಒಬ್ಬ ದಾಸನನ್ನು ಪ್ರೀತಿಸಿದರೆ ಜಿಬ್ರೀಲರನ್ನು ಕರೆದು ಹೇಳುವನು: ಅಲ್ಲಾಹನು ಇಂತಿಂತಹ ದಾಸನನ್ನು ಪ್ರೀತಿಸುತ್ತಾನೆ. ನೀವೂ ಅವನನ್ನು ಪ್ರೀತಿಸಿ. ಆಗ ಜಿಬ್ರೀಲ್ ಅವನನ್ನು ಪ್ರೀತಿಸುವರು. ತರುವಾಯ ಜಿಬ್ರೀಲರು ಆಕಾಶದಲ್ಲಿರುವವರೊಂದಿಗೆ ಹೇಳುವರು: ಖಂಡಿತವಾಗಿಯೂ ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ. ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ. ಆಗ ಆಕಾಶದಲ್ಲಿರುವವರು ಅವನನ್ನು ಪ್ರೀತಿಸುವರು. ಆ ಬಳಿಕ ಭೂಮಿಯಲ್ಲಿ ಅವನು ಜನಪ್ರಿಯನಾಗುತ್ತಾನೆ.
«إِذَا أَحَبَّ اللَّهُ الْعَبْدَ نَادَى جِبْرِيلَ: إِنَّ اللَّهَ يُحِبُّ فُلَانًا فَأَحْبِبْهُ، فَيُحِبُّهُ جِبْرِيلُ، فَيُنَادِي جِبْرِيلُ فِي أَهْلِ السَّمَاءِ: إِنَّ اللَّهَ يُحِبُّ فُلَانًا فَأَحِبُّوهُ، فَيُحِبُّهُ أَهْلُ السَّمَاءِ، ثُمَّ يُوضَعُ لَهُ الْقَبُولُ فِي الْأَرْضِ».
"ಅಲ್ಲಾಹನು ತನ್ನ ದಾಸರಲ್ಲಿ ಒಬ್ಬನನ್ನು ಪ್ರೀತಿಸಿದರೆ, ಅವನು ಜಿಬ್ರೀಲರನ್ನು ಕರೆದು, "ಖಂಡಿತವಾಗಿಯೂ ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವು ಕೂಡ ಅವನನ್ನು ಪ್ರೀತಿಸಿರಿ" ಎಂದು ಹೇಳುತ್ತಾನೆ. ಜಿಬ್ರೀಲ್ ಕೂಡ ಅವನನ್ನು ಪ್ರೀತಿಸುತ್ತಾರೆ. ನಂತರ ಜಿಬ್ರೀಲ್ ಆಕಾಶ ಲೋಕದ ಜನರಿಗೆ, (ಮಲಕ್ ಗಳಿಗೆ) "ಅಲ್ಲಾಹನು ಇಂತಿಂತಹ ವ್ಯಕ್ತಿಯನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ" ಎಂದು ಕರೆ ನೀಡುತ್ತಾರೆ.ಆಗ ಆಕಾಶ ಲೋಕದ ಎಲ್ಲಾ ಜನರು ಸಹ ಅವನನ್ನು ಪ್ರೀತಿಸುತ್ತಾರೆ. ನಂತರ ಅವನಿಗೆ ಭೂಮಿಯಲ್ಲೂ ಸ್ವೀಕಾರ ದೊರೆಯುವಂತೆ ಮಾಡಲಾಗುತ್ತದೆ."9
ಸಹೀಹ್ ಬುಖಾರಿಯಲ್ಲೇ ಇರುವ ಅಬೂ ಹುರೈರಾ رضي الله عنه ರವರಿಂದ ವರದಿಯಾದ ಇನ್ನೊಂದು ಹದೀಸಿನಲ್ಲಿ ಪ್ರವಾದಿ صلي الله عليه وسلم ರವರು ಹೇಳುತ್ತಾರೆ:
«إِذَا كَانَ يَوْمُ الْجُمُعَةِ كَانَ عَلَى كُلِّ بَابٍ مِنْ أَبْوَابِ الْمَسْجِدِ الْمَلَائِكَةُ يَكْتُبُونَ الْأَوَّلَ فَالْأَوَّلَ، فَإِذَا جَلَسَ الْإِمَامُ طَوَوْا الصُّحُفَ وَجَاءُوا يَسْتَمِعُونَ الذِّكْرَ».
ಜುಮಾ(ಶುಕ್ರವಾರ) ದಿನ ಬಂದರೆ ಮಲಕ್ಗಳು (ದೇವಚರರು) ಮಸೀದಿಯ ಎಲ್ಲಾ ಬಾಗಿಲುಗಳಲ್ಲೂ ನಿಂತು ನಮಾಝ್ಗೆ ಬರುವವರ ಹೆಸರುಗಳನ್ನು ಮೊದಲು ಬಂದವರ ಹೆಸರು ಮೊದಲು ಎಂಬ ಕ್ರಮದಲ್ಲಿ ದಾಖಲಿಸುತ್ತಾರೆ. ನಂತರ ಇಮಾಮರು (ಮಿಂಬರ್ನಲ್ಲಿ) ಕುಳಿತಾಗ ಅವರು ತಮ್ಮ ದಾಖಲೆ ಪುಸ್ತಕವನ್ನು ಮುಚ್ಚಿ ಪ್ರವಚನ ಆಲಿಸಲು ಬರುತ್ತಾರೆ.10
ಮಲಕ್ಗಳು ಸಶರೀರಿಗಳೇ ಹೊರತು ಈ ಪಥಭ್ರಷ್ಟರು ವಾದಿಸುವಂತೆ ಭಾವನಾತ್ಮಕ ಶಕ್ತಿಗಳಲ್ಲ ಎಂದು ಈ ಸ್ಪಷ್ಟ ವಚನಗಳು ಸ್ಪಷ್ಟವಾಗಿ ವಿವರಿಸುತ್ತದೆ. ಈ ಸ್ಪಷ್ಟವಚನಗಳು ತಿಳಿಸುವ ವಿಷಯದಲ್ಲಿ ಮುಸ್ಲಿಮರು ಒಮ್ಮತಾಭಿಪ್ರಾಯ ಹೊಂದಿದ್ದಾರೆ.
ಗ್ರಂಥಗಳಲ್ಲಿ ವಿಶ್ವಾಸವಿಡುವುದು
ಕುತುಬ್ ಎನ್ನುವುದು ಬರೆಯಲಾಗಿರುವುದು ಎಂಬ ಅರ್ಥವನ್ನು ಹೊಂದಿರುವ ಕಿತಾಬ್ ಎಂಬ ಪದದ ಬಹುವಚನ.
ಇಲ್ಲಿ ಗ್ರಂಥಗಳೆಂದರೆ: ಸೃಷ್ಟಿಗಳಿಗೆ ಕರುಣೆ ಮತ್ತು ಮಾರ್ಗದರ್ಶನವಾಗಿ, ಅವರು ಅವುಗಳ ಮಾರ್ಗದರ್ಶನ ಪಡೆದು ಇಹಲೋಕ ಮತ್ತು ಪರಲೋಕದಲ್ಲಿ ಸೌಭಾಗ್ಯವಂತರಾಗಲೆಂದು ಅಲ್ಲಾಹನು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥಗಳು.
ಗ್ರಂಥಗಳಲ್ಲಿರುವ ವಿಶ್ವಾಸವು ನಾಲ್ಕು ವಿಷಯಗಳನ್ನು ಒಳಗೊಂಡಿದೆ:
ಒಂದು: ಅವು ಸತ್ಯವಾಗಿಯೂ ಅಲ್ಲಾಹನ ಬಳಿಯಿಂದ ಅವತೀರ್ಣವಾಗಿದೆ ಎಂದು ವಿಶ್ವಾಸವಿಡುವುದು.
ಎರಡು: ಅವುಗಳಲ್ಲಿ ನಾವು ತಿಳಿದಿರುವ ಗ್ರಂಥಗಳ ಹೆಸರುಗಳಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ: ಪ್ರವಾದಿ ಮುಹಮ್ಮದ್ صلي الله عليه وسلم ರಿಗೆ ಅವತೀರ್ಣವಾದ ಪವಿತ್ರ ಕುರ್ಆನ್, ಮೂಸಾ عليه السلام ರಿಗೆ ಅವತೀರ್ಣವಾದ ತೌರಾತ್, ಈಸಾ عليه السلام ರಿಗೆ ಅವತೀರ್ಣವಾದ ಇಂಜೀಲ್, ಮತ್ತು ದಾವೂದ್ عليه السلام ರಿಗೆ ನೀಡಲಾದ ಝಬೂರ್. ನಮಗೆ ಹೆಸರು ತಿಳಿದಿಲ್ಲದ ಗ್ರಂಥಗಳಲ್ಲಿ ಮೊತ್ತವಾಗಿ ವಿಶ್ವಾಸವಿಡುವುದು.
ಮೂರು: ಅವುಗಳಲ್ಲಿ ಅಧಿಕೃತ ಮಾಹಿತಿಗಳನ್ನು ಸತ್ಯವೆಂದು ನಂಬುವುದು. ಉದಾಹರಣೆಗೆ: ಕುರ್ಆನಿನಲ್ಲಿರುವ ಸಂಪೂರ್ಣ ಮಾಹಿತಿಗಳನ್ನು ಮತ್ತು ಪೂರ್ವ ಗ್ರಂಥಗಳ ಪೈಕಿ ತಿದ್ದುಪಡಿ ಅಥವಾ ತಿರುಚುವಿಕೆಗೆ ಒಳಗಾಗದ ಮಾಹಿತಿಗಳನ್ನು ಸತ್ಯವೆಂದು ನಂಬುವುದು.
ನಾಲ್ಕು: ಈ ಗ್ರಂಥಗಳಲ್ಲಿರುವ ರದ್ದುಗೊಳಿಸದ ನಿಯಮಗಳ ಪ್ರಕಾರ, ನಾವು ಅವುಗಳ ಹಿಂದಿರುವ ಯುಕ್ತಿಯನ್ನು ತಿಳಿದಿದ್ದರೂ ತಿಳಿಯದೇ ಇದ್ದರೂ, ಕರ್ಮವೆಸಗುವುದು ಮತ್ತು ಅವುಗಳನ್ನು ತೃಪ್ತಿಯಿಂದ ಸ್ವೀಕರಿಸುವುದು. ಪವಿತ್ರ ಕುರ್ಆನ್ ಅವತೀರ್ಣವಾಗುವುದರೊಂದಿಗೆ ಹಿಂದಿನ ಎಲ್ಲಾ ಗ್ರಂಥಗಳೂ ಅನೂರ್ಜಿತಗೊಂಡಿವೆ. ಅಲ್ಲಾಹನು ಹೇಳುತ್ತಾನೆ:(ಓ ಪ್ರವಾದಿಯವರೇ!) ತಮಗೆ ನಾವು ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ.[ಅಲ್ ಮಾಯಿದಾ:48].
﴿وَأَنزَلۡنَآ إِلَيۡكَ ٱلۡكِتَٰبَ بِٱلۡحَقِّ مُصَدِّقٗا لِّمَا بَيۡنَ يَدَيۡهِ مِنَ ٱلۡكِتَٰبِ وَمُهَيۡمِنًا عَلَيۡهِۖ...﴾
"(ಓ ಪ್ರವಾದಿಯವರೇ!) ತಮಗೆ ನಾವು ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿರುವೆವು. ಅದು ತನ್ನ ಮುಂದಿರುವ ಗ್ರಂಥಗಳನ್ನು ದೃಢೀಕರಿಸುತ್ತದೆ ಮತ್ತು ಅವುಗಳನ್ನು ಸಂರಕ್ಷಿಸುತ್ತದೆ..." [ಅಲ್-ಮಾಯಿದಾ: 48] ಅಂದರೆ: ಅವುಗಳ ವಿಷಯದಲ್ಲಿ ತೀರ್ಪು ನೀಡುತ್ತದೆ.
ಆದ್ದರಿಂದ, ಅಧಿಕೃತವಾದ ಮತ್ತು ಪವಿತ್ರ ಕುರ್ಆನ್ ಅನುಮೋದಿಸಿದ ನಿಯಮಗಳ ಹೊರತು ಇತರ ಯಾವುದೇ ನಿಯಮಗಳ ಪ್ರಕಾರ ಕರ್ಮವೆಸಗಬಾರದು.
ಗ್ರಂಥಗಳಲ್ಲಿ ವಿಶ್ವಾಸವಿಡುವುದರಿಂದ ಉಂಟಾಗುವ ಮಹಾನ್ ಪ್ರಯೋಜನಗಳು:
ಒಂದು: ಅಲ್ಲಾಹನಿಗೆ ತನ್ನ ದಾಸರೊಂದಿಗಿರುವ ಕಾಳಜಿಯ ಅರಿವಾಗುತ್ತದೆ. ಏಕೆಂದರೆ ಅವನು ಪ್ರತಿಯೊಂದು ಸಮುದಾಯಕ್ಕೂ ಅವರಿಗೆ ಮಾರ್ಗದರ್ಶನವಾಗಿ ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ.
ಎರಡು: ಧಾರ್ಮಿಕ ನಿಯಮಗಳನ್ನು ನಿರ್ದೇಶಿಸುವುದರಲ್ಲಿ ಅಲ್ಲಾಹನಿಗಿರುವ ಯುಕ್ತಿಯ ಅರಿವಾಗುತ್ತದೆ. ಏಕೆಂದರೆ ಅವನು ಪ್ರತಿಯೊಂದು ಸಮುದಾಯಕ್ಕೂ ಅವರಿಗೆ ಸೂಕ್ತವಾಗಿ ಹೊಂದಿಕೆಯಾಗುವ ಕಾನೂನುಗಳನ್ನು ರಚಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದೊಂದು ನಿಯಮಸಂಹಿತೆ ಮತ್ತು ಕರ್ಮಮಾರ್ಗವನ್ನು ಮಾಡಿಕೊಟ್ಟಿರುವೆವು.” [ಅಲ್-ಮಾಇದ:48].
﴿...لِكُلّٖ جَعَلۡنَا مِنكُمۡ شِرۡعَةٗ وَمِنۡهَاجٗا...﴾
"...ನಿಮ್ಮಲ್ಲಿ ಪ್ರತಿಯೊಂದು ಸಮುದಾಯಕ್ಕೂ ನಾವು ಒಂದೊಂದು ನಿಯಮಸಂಹಿತೆ ಮತ್ತು ಕರ್ಮಮಾರ್ಗವನ್ನು ಮಾಡಿಕೊಟ್ಟಿರುವೆವು..."
[ಅಲ್-ಮಾಇದ: 48]
ಮೂರು: ಗ್ರಂಥಗಳನ್ನು ಅವತೀರ್ಣಗೊಳಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವಂತಾಗುತ್ತದೆ.
ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು
ರುಸುಲ್ ಎನ್ನುವುದು ಕಳುಹಿಸಲಾಗಿರುವವರು ಎಂಬ ಅರ್ಥವನ್ನು ಹೊಂದಿರುವ ರಸೂಲ್ ಎಂಬ ಪದದ ಬಹುವಚನ. ಅಂದರೆ ಒಂದು ವಸ್ತುವನ್ನು ತಲುಪಿಸಲು ನಿಯೋಗಿಸಲಾಗಿರುವವರು.
ಇಲ್ಲಿ ಸಂದೇಶವಾಹಕ ಎಂದರೆ: ಒಂದು ಧರ್ಮಶಾಸ್ತ್ರವನ್ನು ದಿವ್ಯವಾಣಿಯ ಮೂಲಕ ನೀಡಿ ಅದನ್ನು ಜನರಿಗೆ ತಲುಪಿಸಲು ಆದೇಶಿಸಲಾಗಿರುವ ವ್ಯಕ್ತಿ.
ಮೊತ್ತಮೊದಲ ಸಂದೇಶವಾಹಕರು ನೂಹ್ عليه السلام ಮತ್ತು ಕಟ್ಟಕಡೆಯ ಸಂದೇಶವಾಹಕರು ಮುಹಮ್ಮದ್ صلي الله عليه وسلم ರವರಾಗಿದ್ದಾರೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “(ಓ ಪ್ರವಾದಿಯವರೇ!) ನೂಹ್ ಮತ್ತು ಅವರ ನಂತರದ ಪ್ರವಾದಿಗಳಿಗೆ ನಾವು ದಿವ್ಯಸಂದೇಶ ನೀಡಿರುವಂತೆ ತಮಗೂ ನಾವು ದಿವ್ಯಸಂದೇಶ ನೀಡಿರುವೆವು.”
[ಅನ್ನಿಸಾ:163].
﴿ إِنَّآ أَوۡحَيۡنَآ إِلَيۡكَ كَمَآ أَوۡحَيۡنَآ إِلَىٰ نُوحٖ وَٱلنَّبِيِّـۧنَ مِنۢ بَعۡدِهِ...﴾
"(ಓ ಪ್ರವಾದಿಯವರೇ!) ನೂಹ್ ಮತ್ತು ಅವರ ನಂತರದ ಪ್ರವಾದಿಗಳಿಗೆ ನಾವು ದಿವ್ಯಸಂದೇಶ ನೀಡಿರುವಂತೆ ತಮಗೂ ನಾವು ದಿವ್ಯಸಂದೇಶ ನೀಡಿರುವೆವು."
[ಅನ್ನಿಸಾ: 163]
ಸಹೀಹ್ ಬುಖಾರಿಯಲ್ಲಿರುವ ಅನಸ್ ಬಿನ್ ಮಾಲಿಕ್ (رضي الله عنه)ರವರಿಂದ ವರದಿಯಾದ ಶಫಾಅತ್ನ ಹದೀಸಿನಲ್ಲಿ ಪ್ರವಾದಿ (صلي الله عليه وسلم) ರವರು ಹೇಳಿದರು:
«ذُكِرَ أَنَّ النَّاسَ يَأْتُونَ إِلَى آدَمَ؛ لِيَشْفَعَ لَهُمْ، فَيَعْتَذِرُ إِلَيْهِمْ وَيَقُولُ: ائْتُوا نُوحًا أَوَّلَ رَسُولٍ بَعَثَهُ اللَّهُ» وذكر تمام الحديث.
ಪುನರುತ್ಥಾನದ ದಿನದಂದು, ಜನರು ಆದಮ್ (عليه السلام)ರ ಬಳಿಗೆ ಬಂದು ಅವರೊಡನೆ ಶಿಫಾರಸ್ಸು ಮಾಡಲು ವಿನಂತಿಸುವರು. ಆದರೆ ಅವರು ಅದು ತನ್ನಿಂದ ಸಾಧ್ಯವಿಲ್ಲವೆನ್ನುತ್ತಾ, ನೀವು ಅಲ್ಲಾಹನು ಮೊಟ್ಟಮೊದಲು ಕಳುಹಿಸಿದ ಸಂದೇಶವಾಹಕರಾದ ನೂಹ್ ರ ಬಳಿ ಹೋಗಿರಿ ಎಂದು ಹೇಳುವರು. ನಂತರ ಅವರು ಸಂಪೂರ್ಣ ಹದೀಸನ್ನು ವಿವರಿಸಿದರು.11
ಪ್ರವಾದಿ ಮುಹಮ್ಮದ್ صلي الله عليه وسلم ರವರ ಕುರಿತು ಅಲ್ಲಾಹನು ಹೇಳುತ್ತಾನೆ:
﴿مَّا كَانَ مُحَمَّدٌ أَبَآ أَحَدٖ مِّن رِّجَالِكُمۡ وَلَٰكِن رَّسُولَ ٱللَّهِ وَخَاتَمَ ٱلنَّبِيِّـۧنَ...﴾
"ಮುಹಮ್ಮದ್ ನಿಮ್ಮ ಪುರುಷರ ಪೈಕಿ ಯಾರ ತಂದೆಯೂ ಅಲ್ಲ. ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳ ಪೈಕಿ ಕಟ್ಟಕಡೆಯವರಾಗಿರುವರು.” [ ಅಲ್-ಅಹ್ಝಾಬ್]
ತನ್ನ ಸಮುದಾಯಕ್ಕೆ ಒಂದು ಹೊಸ ಧರ್ಮಶಾಸ್ತ್ರದೊಂದಿಗೆ ಕಳುಹಿಸಲಾದ ಸಂದೇಶವಾಹಕ, ಅಥವಾ ಹಿಂದಿನ ಧರ್ಮಶಾಸ್ತ್ರವನ್ನೇ, ಅದನ್ನು ನವೀಕರಣದ ರೂಪದಲ್ಲಿ ದಿವ್ಯವಾಣಿಯಾಗಿ ನೀಡಲಾದ ಒಬ್ಬ ಪ್ರವಾದಿ ಬಂದು ಹೋಗದ ಯಾವುದೇ ಒಂದು ಸಮುದಾಯವೂ ಗತಿಸಿ ಹೋಗಿಲ್ಲ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَلَقَدۡ بَعَثۡنَا فِي كُلِّ أُمَّةٖ رَّسُولًا أَنِ ٱعۡبُدُواْ ٱللَّهَ وَٱجۡتَنِبُواْ ٱلطَّٰغُوتَ...﴾
“ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ತಾಗೂತನ್ನು ವರ್ಜಿಸಿರಿ (ಎಂದು ಬೋಧಿಸುವ ಸಲುವಾಗಿ) ಖಂಡಿತವಾಗಿಯೂ ನಾವು ಪ್ರತಿಯೊಂದು ಸಮುದಾಯಕ್ಕೂ ಸಂದೇಶವಾಹಕರನ್ನು ಕಳುಹಿಸಿರುವೆವು.”
[ಅನ್ನಹ್ಲ್: 36].
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಒಬ್ಬ ಮುನ್ನೆಚ್ಚರಿಕೆಗಾರರು ಬಂದು ಹೋಗದ ಸಮುದಾಯವೊಂದೂ ಇಲ್ಲ.” [ಫಾತಿರ್:24].
﴿...وَإِن مِّنۡ أُمَّةٍ إِلَّا خَلَا فِيهَا نَذِيرٞ﴾
"...ಒಬ್ಬ ಮುನ್ನೆಚ್ಚರಿಕೆಗಾರರು ಬಂದು ಹೋಗದ ಸಮುದಾಯವೊಂದೂ ಇಲ್ಲ." [ಫಾತಿರ್: 24]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿರುವೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. (ಅಲ್ಲಾಹನಿಗೆ) ಶರಣಾಗತರಾದ ಪ್ರವಾದಿಗಳು ಅದಕ್ಕನುಗುಣವಾಗಿ ಯಹೂದರಿಗೆ ತೀರ್ಪು ನೀಡುತ್ತಿದ್ದರು.”
[ಅಲ್-ಮಾಇದ:44].
﴿إِنَّآ أَنزَلۡنَا ٱلتَّوۡرَىٰةَ فِيهَا هُدٗى وَنُورٞۚ يَحۡكُمُ بِهَا ٱلنَّبِيُّونَ ٱلَّذِينَ أَسۡلَمُواْ لِلَّذِينَ هَادُواْ...﴾
"ಖಂಡಿತವಾಗಿಯೂ ನಾವು ತೌರಾತನ್ನು ಅವತೀರ್ಣಗೊಳಿಸಿರುವೆವು. ಅದರಲ್ಲಿ ಮಾರ್ಗದರ್ಶನ ಮತ್ತು ಪ್ರಕಾಶವಿದೆ. (ಅಲ್ಲಾಹುವಿಗೆ) ಶರಣಾಗತರಾದ ಪ್ರವಾದಿಗಳು ಅದಕ್ಕನುಗುಣವಾಗಿ ಯಹೂದರಿಗೆ ತೀರ್ಪು ನೀಡುತ್ತಿದ್ದರು." [ಅಲ್-ಮಾಯಿದ: 44]
ಸಂದೇಶವಾಹಕರೆಲ್ಲರೂ ಮನುಷ್ಯ ಸೃಷ್ಟಿಗಳು. ಅವರಲ್ಲಿ ಯಾರಿಗೂ ರುಬೂಬಿಯತ್ (ಪ್ರಭುತ್ವ) ಮತ್ತು ಉಲೂಹಿಯತ್ (ಆರಾಧ್ಯರಾಗುವ) ವೈಶಿಷ್ಟ್ಯಗಳಿಲ್ಲ. ಮುಹಮ್ಮದ್ صلي الله عليه وسلم ರವರು ಸಂದೇಶವಾಹಕರ ಮುಖಂಡರು ಮತ್ತು ಅಲ್ಲಾಹನ ಬಳಿ ಅತಿದೊಡ್ಡ ಸ್ಥಾನಮಾನವಿದ್ದವರಾಗಿದ್ದೂ ಸಹ ಅವರ ಬಗ್ಗೆ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿قُل لَّآ أَمۡلِكُ لِنَفۡسِي نَفۡعٗا وَلَا ضَرًّا إِلَّا مَا شَآءَ ٱللَّهُۚ وَلَوۡ كُنتُ أَعۡلَمُ ٱلۡغَيۡبَ لَٱسۡتَكۡثَرۡتُ مِنَ ٱلۡخَيۡرِ وَمَا مَسَّنِيَ ٱلسُّوٓءُۚ إِنۡ أَنَا۠ إِلَّا نَذِيرٞ وَبَشِيرٞ لِّقَوۡمٖ يُؤۡمِنُونَ 188﴾
“(ಓ ಪ್ರವಾದಿಯವರೇ!) ಹೇಳಿರಿ: ಅಲ್ಲಾಹು ಇಚ್ಛಿಸಿದ ಹೊರತು ಸ್ವತಃ ನನಗಾಗಿ ಯಾವುದೇ ಲಾಭವನ್ನಾಗಲಿ, ಹಾನಿಯನ್ನಾಗಲಿ ನಾನು ಅಧೀನದಲ್ಲಿಟ್ಟುಕೊಂಡಿಲ್ಲ. ನನಗೆ ಅಗೋಚರ ಜ್ಞಾನವಿರುತ್ತಿದ್ದರೆ ನಾನು ಹೇರಳ ಒಳಿತುಗಳನ್ನು ಮಾಡಿಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಿರಲಿಲ್ಲ. ನಾನೊಬ್ಬ ಮುನ್ನೆಚ್ಚರಿಕೆ ನೀಡುವವನು ಮತ್ತು ವಿಶ್ವಾಸವಿಡುವ ಜನರಿಗೆ ಶುಭವಾರ್ತೆ ತಿಳಿಸುವವನು ಮಾತ್ರವಾಗಿರುವೆನು.” [ಅಲ್-ಅಅ್ರಾಫ್:188]. (ಅಲ್-ಅಅರಾಫ್: 188] .
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಹೇಳಿರಿ, ನಿಮಗೆ ಹಾನಿಯನ್ನಾಗಲಿ, ಸನ್ಮಾರ್ಗವನ್ನಾಗಲಿ ನೀಡುವುದು ನನ್ನ ಅಧೀನದಲ್ಲಿಲ್ಲ. ಹೇಳಿರಿ: ಖಂಡಿತವಾಗಿಯೂ ಅಲ್ಲಾಹನಿಂದ (ಶಿಕ್ಷೆಯಿಂದ) ಯಾರೂ ನನಗೆ ಎಂದೂ ಅಭಯವನ್ನು ನೀಡಲಾರರು. ಅವನಲ್ಲೇ ವಿನಾ ಬೇರೊಂದು ಅಭಯ ಸ್ಥಾನವನ್ನು ನಾನು ಎಂದಿಗೂ ಕಾಣಲಾರೆನು.” [ಅಲ್-ಜಿನ್ನ್:21-22].
﴿قُلۡ إِنِّي لَآ أَمۡلِكُ لَكُمۡ ضَرّٗا وَلَا رَشَدٗا 21 قُلۡ إِنِّي لَن يُجِيرَنِي مِنَ ٱللَّهِ أَحَدٞ وَلَنۡ أَجِدَ مِن دُونِهِۦ مُلۡتَحَدًا 22﴾
“ಹೇಳಿರಿ, ನಿಮಗೆ ಹಾನಿಯನ್ನಾಗಲಿ, ಸನ್ಮಾರ್ಗವನ್ನಾಗಲಿ ನೀಡುವುದು ನನ್ನ ಅಧೀನದಲ್ಲಿಲ್ಲ. ಹೇಳಿರಿ: ಖಂಡಿತವಾಗಿಯೂ ಅಲ್ಲಾಹನಿಂದ (ಶಿಕ್ಷೆಯಿಂದ) ಯಾರೂ ನನಗೆ ಅಭಯವನ್ನು ನೀಡಲಾರರು. ಅವನಲ್ಲೇ ವಿನಾ ಬೇರೊಂದು ಅಭಯ ಸ್ಥಾನವನ್ನು ನಾನು ಎಂದಿಗೂ ಕಾಣಲಾರೆನು." [ಅಲ್-ಜಿನ್ನ್ : 21-22]
ಅವರಿಗೆ ರೋಗ, ಮರಣ, ಆಹಾರ-ಪಾನೀಯಗಳ ಅಗತ್ಯ ಮುಂತಾದ ಮನುಷ್ಯ ಸಹಜ ಗುಣಗಳಿವೆ. ಸರ್ವಶಕ್ತನಾದ ಅಲ್ಲಾಹನ ಗುಣಲಕ್ಷಣಗಳ ಬಗ್ಗೆ ಇಬ್ರಾಹೀಮ್ عليه السلام ರು ಹೇಳಿದ ಮಾತುಗಳನ್ನು ಉಲ್ಲೇಖಿಸಿ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَٱلَّذِي هُوَ يُطۡعِمُنِي وَيَسۡقِينِ 79 وَإِذَا مَرِضۡتُ فَهُوَ يَشۡفِينِ 80 وَٱلَّذِي يُمِيتُنِي ثُمَّ يُحۡيِينِ 81﴾
“ನನಗೆ ಅನ್ನವನ್ನೂ ಪಾನೀಯವನ್ನೂ ನೀಡುವವನು. ನಾನು ಕಾಯಿಲೆ ಬಿದ್ದರೆ ನನಗೆ ಸೌಖ್ಯವನ್ನು ನೀಡುವವನು. ನನ್ನನ್ನು ಮೃತಪಡಿಸುವವನು ಮತ್ತು ತರುವಾಯ ನನಗೆ ಜೀವವನ್ನು ನೀಡುವವನು.” [ಅಶ್ಶುಅರಾ:79-81]. [ಅಶ್ಶುಅರಾ: 79-81]
ಅದೇ ರೀತಿ ಪ್ರವಾದಿ(صلي الله عليه وسلم) ಹೇಳಿದರು: "ಖಂಡಿತವಾಗಿಯೂ ನಾನು ನಿಮ್ಮಂತೆಯೇ ಒಬ್ಬ ಮನುಷ್ಯ. ನೀವು ಮರೆಯುವಂತೆ ನಾನೂ ಮರೆಯುತ್ತೇನೆ ಆದ್ದರಿಂದ ನಾನು ಮರೆತಾಗ ನನಗೆ ನೆನಪಿಸಿಕೊಡಿ."
«إِنَّمَا أَنَا بَشَرٌ مِثْلُكُمْ، أَنْسَى كَمَا تَنْسَوْنَ، فَإِذَا نَسِيتُ فَذَكِّرُونِي».
"ನಾನು ನಿಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದೇನೆ. ನೀವು ಮರೆಯುವಂತೆ ನಾನೂ ಮರೆಯುತ್ತೇನೆ. ಹಾಗಾಗಿ ನಾನು ಮರೆತರೆ, ನೀವು ನನಗೆ ನೆನಪಿಸಿ."12
ಅಲ್ಲಾಹನು ಅವರಿಗೆ ಅತ್ಯುನ್ನತ ಸ್ಥಾನಗಳನ್ನು ನೀಡಿದಾಗಲೂ ಮತ್ತು ಅವರ ಗುಣಗಾನ ಮಾಡಿದಾಗಲೂ ಅಲ್ಲಾಹನು ಅವರನ್ನು ತನ್ನ ದಾಸರೆಂದೇ ಬಣ್ಣಿಸಿದ್ದಾನೆ. ಪ್ರವಾದಿ ನೂಹ್ عليه السلام ರ ಕುರಿತು ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಅವರು (ನೂಹ್) ಅತ್ಯಂತ ಕೃತಜ್ಞ ದಾಸರಾಗಿದ್ದರು.”
[ಅಲ್-ಇಸ್ರಾ:3].
﴿...إِنَّهُۥ كَانَ عَبۡدٗا شَكُورٗا﴾
"ಖಂಡಿತವಾಗಿಯೂ ಅವರು (ನೂಹ್) ಅತ್ಯಂತ ಕೃತಜ್ಞ ದಾಸರಾಗಿದ್ದರು." [ಅಲ್-ಇಸ್ರಾ: 3] ಪ್ರವಾದಿ ಮುಹಮ್ಮದ್ ರ ಕುರಿತು ಅಲ್ಲಾಹನು ಹೇಳುತ್ತಾನೆ:
﴿تَبَارَكَ ٱلَّذِي نَزَّلَ ٱلۡفُرۡقَانَ عَلَىٰ عَبۡدِهِۦ لِيَكُونَ لِلۡعَٰلَمِينَ نَذِيرًا 1﴾
"ಸತ್ಯಾಸತ್ಯ ವಿವೇಚನೆಗಾಗಿರುವ ಆಧಾರ ಪ್ರಮಾಣವನ್ನು (ಕುರ್ಆನನ್ನು) ತನ್ನ ದಾಸನ (ಪ್ರವಾದಿಯವರ) ಮೇಲೆ, ಅವರು ಸರ್ವಲೋಕದವರಿಗೆ ಓರ್ವ ಮುನ್ನೆಚ್ಚರಿಕೆಗಾರರಾಗುವ ಸಲುವಾಗಿ ಅವತೀರ್ಣಗೊಳಿಸಿದವನು ಅನುಗ್ರಹಪೂರ್ಣನಾಗಿರುವನು."
[ಅಲ್-ಫುರ್ಕಾನ್: 1]
ಅಂತೆಯೇ, ಇಬ್ರಾಹೀಮ್, ಇಸ್ಹಾಖ್ ಮತ್ತು ಯಅ್ಕೂಬ್ (عليهم السلام)ರ ಕುರಿತು ಅಲ್ಲಾಹನು ಹೇಳುತ್ತಾನೆ: “ಬಲಿಷ್ಠರೂ, ದೂರದೃಷ್ಟಿಯುಳ್ಳವರೂ ಆಗಿದ್ದ ಇಬ್ರಾಹೀಮ್, ಇಸ್ಹಾಕ್, ಯಅ್ಕೂಬ್ ಎಂಬ ನಮ್ಮ ದಾಸರನ್ನು ಸ್ಮರಿಸಿರಿ. ನಿಷ್ಕಳಂಕವಾದ ಒಂದು ವಿಚಾರದಿಂದಾಗಿ ನಾವು ಅವರನ್ನು ಉತ್ಕೃಷ್ಟಗೊಳಿಸಿದೆವು. ಅದು ಪರಲೋಕ ಸ್ಮರಣೆಯಾಗಿದೆ. ಖಂಡಿತವಾಗಿಯೂ ಅವರು ನಮ್ಮ ಬಳಿ ಆರಿಸಲಾಗಿರುವ ಅತ್ಯುತ್ತಮರಲ್ಲಿ ಸೇರಿದವರಾಗಿರುವರು.” [ಸ್ವಾದ್:45-47].
﴿وَٱذۡكُرۡ عِبَٰدَنَآ إِبۡرَٰهِيمَ وَإِسۡحَٰقَ وَيَعۡقُوبَ أُوْلِي ٱلۡأَيۡدِي وَٱلۡأَبۡصَٰرِ 45 إِنَّآ أَخۡلَصۡنَٰهُم بِخَالِصَةٖ ذِكۡرَى ٱلدَّارِ 46 وَإِنَّهُمۡ عِندَنَا لَمِنَ ٱلۡمُصۡطَفَيۡنَ ٱلۡأَخۡيَارِ 47﴾
"ಬಲಿಷ್ಠರೂ, ದೂರದೃಷ್ಟಿಯುಳ್ಳವರೂ ಆಗಿದ್ದ ಇಬ್ರಾಹೀಮ್, ಇಸ್ಹಾಕ್, ಯಅಕೂಬ್ ಎಂಬ ನಮ್ಮ ದಾಸರನ್ನು ಸ್ಮರಿಸಿರಿ. ನಿಷ್ಕಳಂಕವಾದ ಒಂದು ವಿಚಾರದಿಂದಾಗಿ ನಾವು ಅವರನ್ನು ಉತ್ಕೃಷ್ಟಗೊಳಿಸಿದೆವು. ಅದು ಪರಲೋಕ ಸ್ಮರಣೆಯಾಗಿದೆ. ಖಂಡಿತವಾಗಿಯೂ ಅವರು ನಮ್ಮ ಬಳಿ ಆರಿಸಲಾಗಿರುವ ಅತ್ಯುತ್ತಮರಲ್ಲಿ ಸೇರಿದವರಾಗಿರುವರು." [ಸ್ವಾದ್: 45-47]
ಈಸಾ ಇಬ್ನು ಮರ್ಯಮ್ عليه السلام ರ ಕುರಿತು ಅಲ್ಲಾಹನು ಹೇಳುತ್ತಾನೆ: “ಅವರು ಒಬ್ಬ ದಾಸರು ಮಾತ್ರವಾಗಿರುವರು. ನಾವು ಅವರಿಗೆ ಅನುಗ್ರಹವನ್ನು ನೀಡಿದೆವು ಮತ್ತು ಅವರನ್ನು ಇಸ್ರಾಈಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ಮಾಡಿದೆವು.”
[ಅಝ್ಝುಖ್ರುಫ್:59].
﴿إِنۡ هُوَ إِلَّا عَبۡدٌ أَنۡعَمۡنَا عَلَيۡهِ وَجَعَلۡنَٰهُ مَثَلٗا لِّبَنِيٓ إِسۡرَٰٓءِيلَ 59﴾
"ಅವರು ಒಬ್ಬ ದಾಸರು ಮಾತ್ರವಾಗಿರುವರು. ನಾವು ಅವರಿಗೆ ಅನುಗ್ರಹವನ್ನು ನೀಡಿದೆವು ಮತ್ತು ಅವರನ್ನು ಇಸ್ರಾಈಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ಮಾಡಿದೆವು." [ಅಝ್ಝುಖ್ರುಫ್: 59]
ಪ್ರವಾದಿಗಳಲ್ಲಿರುವ ವಿಶ್ವಾಸವು ನಾಲ್ಕು ವಿಷಯಗಳನ್ನು ಒಳಗೊಂಡಿದೆ:
ಮೊದಲನೆಯದು: ಅವರ ಸಂದೇಶವು ಸತ್ಯವಾಗಿದೆ ಮತ್ತು ಅಲ್ಲಾಹನ ಬಳಿಯಿಂದಾಗಿದೆ, ಹಾಗೂ ಅವರಲ್ಲಿ ಯಾರಾದರೊಬ್ಬರ ಸಂದೇಶವಾಹಕತ್ವವನ್ನು ಯಾರಾದರೂ ನಿರಾಕರಿಸಿದರೆ, ಅವನು ಅವರೆಲ್ಲರನ್ನೂ ನಿರಾಕರಿಸುವುದಕ್ಕೆ ಸಮಾನವಾಗಿದೆ ಎಂದು ವಿಶ್ವಾಸವಿರಿಸುವುದು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ನೂಹ್ರ ಜನತೆಯು ಸಂದೇಶವಾಹಕರನ್ನು ನಿಷೇಧಿಸಿದರು.” [ಅಶ್ಶುಅರಾ:105] ನೂಹ್ (عليه السلام) ರನ್ನು ಅವರ ಜನತೆಯು ಸುಳ್ಳಾಗಿಸಿದಾಗ ಅವರಲ್ಲದೆ ಬೇರೆ ಯಾವ ಸಂದೇಶವಾಹಕರೂ ಇರಲಿಲ್ಲವಾದರೂ, ಅವರ ಜನತೆಯು ಎಲ್ಲಾ ಸಂದೇಶವಾಹಕರನ್ನು ಸುಳ್ಳಾಗಿಸಿದರೆಂದು ಅಲ್ಲಾಹನು ಹೇಳಿದ್ದಾನೆ.
﴿كَذَّبَتۡ قَوۡمُ نُوحٍ ٱلۡمُرۡسَلِينَ 105﴾
"ನೂಹರ ಜನತೆಯು ಸಂದೇಶವಾಹಕರನ್ನು ನಿಷೇಧಿಸಿದರು." [ಅಶ್ಶುಅರಾ:105]. ನೂಹರ (ಅವರ ಮೇಲೆ ಶಾಂತಿ ಇರಲಿ) ಜನಾಂಗದವರು ಎಲ್ಲಾ ಸಂದೇಶವಾಹಕರನ್ನು ನಿರಾಕರಿಸಿದ ಜನಾಂಗವೆಂದು ಅಲ್ಲಾಹನು ಘೋಷಿಸಿದನು. ಆದರೆ ಅವರು ನಿರಾಕರಿಸಿದ ಸಮಯದಲ್ಲಿ ಪ್ರವಾದಿ ನೂಹ್ (ಅವರ ಮೇಲೆ ಶಾಂತಿ ಇರಲಿ) ಹೊರತುಪಡಿಸಿ ಬೇರೆ ಯಾವುದೇ ಸಂದೇಶವಾಹಕರು ಅವರ ಬಳಿಗೆ ಬಂದಿರಲಿಲ್ಲ. ಅದೇ ರೀತಿ, ಪ್ರವಾದಿ ಮುಹಮ್ಮದ್ (صلي الله عليه وسلم) ರನ್ನು ಸುಳ್ಳಾಗಿಸಿದ ಮತ್ತು ಅವರನ್ನು ಅನುಸರಿಸದ ಕ್ರಿಶ್ಚಿಯನ್ನರು ಈಸಾ عليه السلام ರನ್ನೂ ಸಹ ಸುಳ್ಳಾಗಿಸಿದರು ಮತ್ತು ಅವರನ್ನು ಕೂಡ ಅನುಸರಿಸಿಲ್ಲ. ಅದಲ್ಲದೆ, ಈಸಾ (عليه السلام)ರು ಅವರಿಗೆ ಪ್ರವಾದಿ ಮುಹಮ್ಮದ್ صلي الله عليه وسلم ರವರ ಆಗಮನದ ಶುಭವಾರ್ತೆಯನ್ನು ನೀಡದ್ದರು. ಅವರಿಗೆ ಈ ಶುಭವಾರ್ತೆ ನೀಡುವ ಅರ್ಥವೇನೆಂದರೆ ಮುಹಮ್ಮದ್ صلي الله عليه وسلم ರವರು ಅವರ ಬಳಿಗೆ ಕಳುಹಿಸಲಾದ ಸಂದೇಶವಾಕರಾಗಿದ್ದಾರೆ ಮತ್ತು ಅಲ್ಲಾಹನು ಅವರ ಮೂಲಕ ಈ ಜನರನ್ನು ಪಥಭ್ರಷ್ಟತೆಯಿಂದ ರಕ್ಷಿಸುತ್ತಾನೆ ಮತ್ತು ಅವರಿಗೆ ನೇರವಾದ ಮಾರ್ಗವನ್ನು ತೋರಿಸುತ್ತಾನೆ ಎಂದಾಗಿದೆ.
ಎರಡನೆಯದು:ಈ ಪ್ರವಾದಿಗಳಲ್ಲಿ ನಮಗೆ ಯಾರ ಹೆಸರು ತಿಳಿದಿದೆಯೋ ಅವರ ಆ ಹೆಸರಿನಲ್ಲಿ ವಿಶ್ವಾಸವಿಡುವುದು. ಉದಾಹರಣೆಗೆ: ಮುಹಮ್ಮದ್, ಇಬ್ರಾಹೀಮ್, ಮೂಸಾ, ಈಸಾ, ನೂಹ್ عليهم السلام. ಈ ಐವರು ದೃಢಚಿತ್ತವನ್ನು ಹೊಂದಿರುವ ಸಂದೇಶವಾಹಕರಾಗಿದ್ದಾರೆ. ಅಲ್ಲಾಹನು ಅವರನ್ನು ಪವಿತ್ರ ಕುರ್ಆನಿನಲ್ಲಿ ಎರಡು ಸ್ಥಳಗಳಲ್ಲಿ ಉಲ್ಲೇಖಿಸಿದ್ದಾನೆ:
﴿وَإِذۡ أَخَذۡنَا مِنَ ٱلنَّبِيِّـۧنَ مِيثَٰقَهُمۡ وَمِنكَ وَمِن نُّوحٖ وَإِبۡرَٰهِيمَ وَمُوسَىٰ وَعِيسَى ٱبۡنِ مَرۡيَمَۖ وَأَخَذۡنَا مِنۡهُم مِّيثَٰقًا غَلِيظٗا 7﴾
“ನಾವು ಪ್ರವಾದಿಗಳಿಂದ ಅವರ ಕರಾರನ್ನು ಪಡೆದ ಸಂದರ್ಭ. ತಮ್ಮಿಂದಲೂ, ನೂಹ್, ಇಬ್ರಾಹೀಮ್, ಮೂಸಾ ಮತ್ತು ಮರ್ಯಮ್ರ ಪುತ್ರ ಈಸಾರಿಂದಲೂ (ನಾವು ಕರಾರು ಪಡೆದ ಸಂದರ್ಭ). ನಾವು ಅವರಿಂದ ಮಹತ್ವಪೂರ್ಣವಾದ ಕರಾರನ್ನು ಪಡೆದಿರುವೆವು.”
[ಅಲ್-ಅಹ್ಝಾಬ್:7] ಇನ್ನೊಂದು ಕಡೆ ಹೀಗೆ ಹೇಳಲಾಗಿದೆ: “ನೂಹ್ರಿಗೆ ಆದೇಶಿಸಿರುವುದನ್ನು, ತಮಗೆ ದಿವ್ಯ ಸಂದೇಶವಾಗಿ ನೀಡಿರುವುದನ್ನು, ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ನಾವು ಆದೇಶಿಸಿರುವುದನ್ನು –ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗದಿರಿ ಎಂಬ ವಿಷಯವನ್ನು- ಅವನು ನಿಮಗೆ ಧರ್ಮನಿಯಮವಾಗಿ ನಿರ್ದೇಶಿಸಿರುವನು. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರೆಡೆಗೆ ಆಹ್ವಾನಿಸುತ್ತಿರುವಿರೋ ಅದು ಅವರಿಗೆ ಅತಿಭಾರವಾಗಿ ಕಾಣುತ್ತಿದೆ. ಅಲ್ಲಾಹು ಅವನಿಚ್ಛಿಸುವವರನ್ನು ಅವನ ಬಳಿಗೆ ಆರಿಸಿಕೊಳ್ಳುವನು. ವಿನಮ್ರತೆಯೊಂದಿಗೆ ಮರಳುವವರನ್ನು ಅವನು ತನ್ನೆಡೆಗಿರುವ ಮಾರ್ಗದಲ್ಲಿ ಮುನ್ನಡೆಸುವನು.” [ಅಶ್ಶೂರಾ:13].
﴿شَرَعَ لَكُم مِّنَ ٱلدِّينِ مَا وَصَّىٰ بِهِۦ نُوحٗا وَٱلَّذِيٓ أَوۡحَيۡنَآ إِلَيۡكَ وَمَا وَصَّيۡنَا بِهِۦٓ إِبۡرَٰهِيمَ وَمُوسَىٰ وَعِيسَىٰٓۖ أَنۡ أَقِيمُواْ ٱلدِّينَ وَلَا تَتَفَرَّقُواْ فِيهِۚ كَبُرَ عَلَى ٱلۡمُشۡرِكِينَ مَا تَدۡعُوهُمۡ إِلَيۡهِۚ ٱللَّهُ يَجۡتَبِيٓ إِلَيۡهِ مَن يَشَآءُ وَيَهۡدِيٓ إِلَيۡهِ مَن يُنِيبُ 13﴾
"ನೂಹರಿಗೆ ಆದೇಶಿಸಿರುವುದನ್ನು, ತಮಗೆ ದಿವ್ಯ ಸಂದೇಶವಾಗಿ ನೀಡಿರುವುದನ್ನು, ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ನಾವು ಆದೇಶಿಸಿರುವುದನ್ನು–ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗದಿರಿ ಎಂಬ ವಿಷಯವನ್ನು- ಅವನು ನಿಮಗೆ ಧರ್ಮನಿಯಮವಾಗಿ ನಿರ್ದೇಶಿಸಿರುವನು. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರೆಡೆಗೆ ಆಹ್ವಾನಿಸುತ್ತಿರುವಿರೋ ಅದು ಅವರಿಗೆ ಅತಿಭಾರವಾಗಿ ಕಾಣುತ್ತಿದೆ. ಅಲ್ಲಾಹು ಅವನಿಚ್ಛಿಸುವವರನ್ನು ಅವನ ಬಳಿಗೆ ಆರಿಸಿಕೊಳ್ಳುವನು. ವಿನಮ್ರತೆಯೊಂದಿಗೆ ಮರಳುವವರನ್ನು ಅವನು ತನ್ನೆಡೆಗಿರುವ ಮಾರ್ಗದಲ್ಲಿ ಮುನ್ನಡೆಸುವನು." [ಅಶ್ಶೂರಾ: 13]
ಪ್ರವಾದಿಗಳ ಪೈಕಿ ನಮಗೆ ಯಾರ ಹೆಸರು ತಿಳಿದಿಲ್ಲವೋ ಅವರಲ್ಲಿ ನಾವು ಮೊತ್ತವಾಗಿ ವಿಶ್ವಾಸವಿರಿಸಬೇಕಾಗಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَلَقَدۡ أَرۡسَلۡنَا رُسُلٗا مِّن قَبۡلِكَ مِنۡهُم مَّن قَصَصۡنَا عَلَيۡكَ وَمِنۡهُم مَّن لَّمۡ نَقۡصُصۡ عَلَيۡكَۗ...﴾
“ತಮಗಿಂತ ಮುಂಚೆ ನಾವು ಅನೇಕ ಸಂದೇಶವಾಹಕರನ್ನು ಕಳುಹಿಸಿರುವೆವು. ಅವರಲ್ಲಿ ಕೆಲವರ ಬಗ್ಗೆ ನಾವು ತಮಗೆ ವಿವರಿಸಿಕೊಟ್ಟಿರುವೆವು. ಅವರಲ್ಲಿ ಇನ್ನು ಕೆಲವರ ಬಗ್ಗೆ ನಾವು ತಮಗೆ ವಿವರಿಸಿ ಕೊಟ್ಟಿಲ್ಲ.”
[ಗಾಫಿರ್:78]
ಮೂರನೆಯದು: ಅವರ ಕುರಿತು ಅಧಿಕೃತವಾಗಿ ವರದಿಯಾದ ಸಂಗತಿಗಳಲ್ಲಿ ವಿಶ್ವಾಸವಿರಿಸುವುದು.
ನಾಲ್ಕನೆಯದು: ಅವರಲ್ಲಿ ನಮ್ಮ ಬಳಿಗೆ ಬಂದ ಸಂದೇಶವಾಹಕರ ಧರ್ಮಶಾಸ್ತ್ರದ ಪ್ರಕಾರ ಕರ್ಮವೆಸಗುವುದು, ಅಂದರೆ ಮುಹಮ್ಮದ್, صلي الله عليه وسلم ರವರ ಧರ್ಮಶಾಸ್ತ್ರದಲ್ಲಿ. ಅವರು ಸಂದೇಶವಾಹಕರಲ್ಲೇ ಕಟ್ಟಕಡೆಯವರು ಮತ್ತು ಸರ್ವ ಮಾನವಕುಲಕ್ಕೆ ಕಳುಹಿಸಲಾದ ಸಂದೇಶವಾಹಕರಾಗಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿فَلَا وَرَبِّكَ لَا يُؤۡمِنُونَ حَتَّىٰ يُحَكِّمُوكَ فِيمَا شَجَرَ بَيۡنَهُمۡ ثُمَّ لَا يَجِدُواْ فِيٓ أَنفُسِهِمۡ حَرَجٗا مِّمَّا قَضَيۡتَ وَيُسَلِّمُواْ تَسۡلِيمٗا 65﴾
“ಇಲ್ಲ, ತಮ್ಮ ಪ್ರಭುವಿನ ಮೇಲಾಣೆ! ಅವರು ತಮ್ಮ ಮಧ್ಯೆ ಭಿನ್ನಾಭಿಪ್ರಾಯ ತಲೆದೋರುವ ವಿಷಯದಲ್ಲಿ ತಮ್ಮನ್ನು ತೀರ್ಪುಗಾರರನ್ನಾಗಿ ಮಾಡಿ, ತಾವು ನೀಡಿದ ತೀರ್ಪಿನ ಬಗ್ಗೆ ತರುವಾಯ ಅವರ ಮನಸ್ಸುಗಳಲ್ಲಿ ಯಾವುದೇ ವೈಷಮ್ಯವುಂಟಾಗದೆ ಅದನ್ನು ಸಂಪೂರ್ಣವಾಗಿ ಸ್ವೀಕರಿಸಿ ಅನುಸರಿಸುವವರೆಗೂ ಅವರು ವಿಶ್ವಾಸಿಗಳಾಗಲಾರರು.” [ಅನ್ನಿಸಾ: 65].
ಪ್ರವಾದಿಗಳಲ್ಲಿ ವಿಶ್ವಾಸವಿಡುವುದರಿಂದ ಉಂಟಾಗುವ ಮಹಾನ್ ಪ್ರಯೋಜನಗಳು:
ಮೊದಲನೆಯದು: ದಾಸರ ಮೇಲೆ ಅಲ್ಲಾಹನು ತೋರಿಸುವ ಕರುಣೆ ಮತ್ತು ಕಾಳಜಿಯ ಅರಿವಾಗುತ್ತದೆ ಜನರನ್ನು ನೇರ ಮಾರ್ಗಕ್ಕೆ ತರಲು ಮತ್ತು ಅಲ್ಲಾಹನನ್ನು ಆರಾಧಿಸುವುದು ಹೇಗೆಂದು ಅವರಿಗೆ ವಿವರಿಸಿಕೊಡಲು ಅಲ್ಲಾಹನು ಅವರ ಬಳಿಗೆ ಸಂದೇಶವಾಹಕರನ್ನು ಕಳುಹಿಸಿದನು. ಏಕೆಂದರೆ ಮನುಷ್ಯರಿಗೆ ಇವುಗಳನ್ನು ಬುದ್ಧಿಶಕ್ತಿಯ ಮೂಲಕ ತಿಳಿದುಕೊಳ್ಳುವುದು ಅಸಾಧ್ಯವಾಗಿದೆ.
ಎರಡನೆಯದು:ಈ ಮಹಾ ಅನುಗ್ರಹಕ್ಕಾಗಿ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತದೆ.
ಎರಡನೆಯದು: ಎಲ್ಲಾ ಸಂದೇಶವಾಹಕರನ್ನು ಗೌರವಿಸಲು, ಪ್ರೀತಿಸಲು, ಮತ್ತು ಅವರಿಗೆ ಹೊಂದಿಕೊಳ್ಳುವಂತೆ ಅವರನ್ನು ಹೊಗಳಲು ಸಾಧ್ಯವಾಗುತ್ತದೆ. ಏಕೆಂದರೆ ಅವರೆಲ್ಲರೂ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಮತ್ತು ಅವರು ಅಲ್ಲಾಹನನ್ನು ಆರಾಧಿಸಿದರು ಮತ್ತು ಅವನ ಸಂದೇಶಗಳನ್ನು ತಲುಪಿಸಿದರು ಮತ್ತು ಅವನ ದಾಸರಿಗೆ ಸದುಪದೇಶ ನೀಡಿದರು.
ಮನುಷ್ಯರು ಅಲ್ಲಾಹನ ಸಂದೇಶವಾಹಕರಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾ ದುಷ್ಟರು ತಮ್ಮ ಬಳಿಗೆ ಕಳುಹಿಸಲಾದ ಸಂದೇಶವಾಹಕರುಗಳನ್ನು ನಿರಾಕರಿಸಿದರು. ಅಲ್ಲಾಹನು ಅವರ ಈ ವಾದವನ್ನು ಉಲ್ಲೇಖಿಸಿ ಅದನ್ನು ಹೀಗೆ ಖಂಡಿಸಿದ್ದಾನೆ:
﴿وَمَا مَنَعَ ٱلنَّاسَ أَن يُؤۡمِنُوٓاْ إِذۡ جَآءَهُمُ ٱلۡهُدَىٰٓ إِلَّآ أَن قَالُوٓاْ أَبَعَثَ ٱللَّهُ بَشَرٗا رَّسُولٗا94 قُل لَّوۡ كَانَ فِي ٱلۡأَرۡضِ مَلَٰٓئِكَةٞ يَمۡشُونَ مُطۡمَئِنِّينَ لَنَزَّلۡنَا عَلَيۡهِم مِّنَ ٱلسَّمَآءِ مَلَكٗا رَّسُولٗا 95﴾
“ಜನರೆಡೆಗೆ ಸನ್ಮಾರ್ಗವು ಬಂದಾಗ ಅದರಲ್ಲಿ ವಿಶ್ವಾಸವಿಡಲು ‘ಅಲ್ಲಾಹು ಒಬ್ಬ ಮನುಷ್ಯನನ್ನು ಸಂದೇಶ ವಾಹಕನಾಗಿ ಕಳುಹಿಸಿರುವನೇ?’ ಎಂಬ ಅವರ ಮಾತಿನ ಹೊರತು ಬೇರೇನೂ ಅವರನ್ನು ತಡೆದಿರಲಿಲ್ಲ.(ಓ ಪ್ರವಾದಿಯವರೇ!) ಹೇಳಿರಿ: ‘ಭೂಮಿಯಲ್ಲಿರುವುದು ಶಾಂತವಾಗಿ ನಡೆಯುವ ಮಲಕ್ಗಳಾಗಿರುತ್ತಿದ್ದರೆ ನಾವು ಅವರೆಡೆಗೆ ಸಂದೇಶವಾಹಕನಾಗಿ ಆಕಾಶದಿಂದ ಒಬ್ಬ ಮಲಕ್ನನ್ನೇ ಇಳಿಸುತ್ತಿದ್ದೆವು.” [ಅಲ್-ಇಸ್ರಾ:94-95]. [ಅಲ್-ಇಸ್ರಾ: 94-95]
ಸಂದೇಶವಾಹಕರು ಮನುಷ್ಯರೇ ಆಗಿರಬೇಕು ಎಂದು ಹೇಳುತ್ತಾ ಅಲ್ಲಾಹನು ಅವರ ಈ ವಾದವನ್ನು ಖಂಡಿಸುತ್ತಾರೆ. ಏಕೆಂದರೆ ಭೂಮಿಯ ನಿವಾಸಿಗಳು ಮನುಷ್ಯರೇ ಆಗಿರುವುದರಿಂದ ಅವರಿಗೆ ಮನುಷ್ಯರಾದ ಸಂದೇಶವಾಹಕರನ್ನೇ ಕಳುಹಿಸಬೇಕಾಗಿದೆ. ಒಂದು ವೇಳೆ ಭೂಮಿಯ ನಿವಾಸಿಗಳು ಮಲಕ್ಗಳಾಗಿರುತ್ತಿದ್ದರೆ (ದೇವಚರರಾಗಿರುತ್ತಿದ್ದರೆ) ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಆಕಾಶದಿಂದ ಒಬ್ಬ ಮಲಕನ್ನೇ ಸಂದೇಶವಾಹಕನನ್ನಾಗಿ ಕಳುಹಿಸುತ್ತಿದ್ದನು. ಏಕೆಂದರೆ ಅವರಿಗೆ ಕಳುಹಿಸಲಾಗುವ ಸಂದೇಶವಾಹಕರು ಅವರಂತೆಯೇ ಇರಬೇಕಾಗಿದೆ. ಅದೇ ರೀತಿ ಸಂದೇಶವಾಹಕರನ್ನು ನಿರಾಕರಿಸಿದವರ ಮಾತುಗಳನ್ನು ಉಲ್ಲೇಖಿಸುತ್ತಾ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...إِنۡ أَنتُمۡ إِلَّا بَشَرٞ مِّثۡلُنَا تُرِيدُونَ أَن تَصُدُّونَا عَمَّا كَانَ يَعۡبُدُ ءَابَآؤُنَا فَأۡتُونَا بِسُلۡطَٰنٖ مُّبِينٖ 10 قَالَتۡ لَهُمۡ رُسُلُهُمۡ إِن نَّحۡنُ إِلَّا بَشَرٞ مِّثۡلُكُمۡ وَلَٰكِنَّ ٱللَّهَ يَمُنُّ عَلَىٰ مَن يَشَآءُ مِنۡ عِبَادِهِۦۖ وَمَا كَانَ لَنَآ أَن نَّأۡتِيَكُم بِسُلۡطَٰنٍ إِلَّا بِإِذۡنِ ٱللَّهِ...﴾
“ಅವರು (ಜನರು) ಹೇಳಿದರು: ನೀವು ನಮ್ಮಂತಿರುವ ಮನುಷ್ಯರು ಮಾತ್ರವಾಗಿರುವಿರಿ. ನಮ್ಮ ಪೂರ್ವಿಕರು ಯಾವುದನ್ನು ಆರಾಧಿಸುತ್ತಿದ್ದರೋ ಅದರಿಂದ ನಮ್ಮನ್ನು ವಿಮುಖರನ್ನಾಗಿಸಲು ನೀವು ಇಚ್ಛಿಸುತ್ತಿರುವಿರಿ. ಆದ್ದರಿಂದ ಸ್ಪಷ್ಟವಾದ ಯಾವುದಾದರೂ ಆಧಾರ ಪ್ರಮಾಣವನ್ನು ನೀವು ನಮಗೆ ತಂದುಕೊಡಿರಿ.ಅವರೆಡೆಗೆ ಕಳುಹಿಸಲಾದ ಸಂದೇಶವಾಹಕರು ಅವರೊಂದಿಗೆ ಹೇಳಿದರು: ನಾವು ನಿಮ್ಮಂತಿರುವ ಮನುಷ್ಯರು ಮಾತ್ರವಾಗಿರುವೆವು. ಆದರೆ ಅಲ್ಲಾಹು ತನ್ನ ದಾಸರ ಪೈಕಿ ತಾನಿಚ್ಛಿಸುವವರ ಮೇಲೆ ಔದಾರ್ಯ ತೋರುವನು. ಅಲ್ಲಾಹನ ಅನುಮತಿಯ ವಿನಾ ನಿಮಗೆ ಯಾವುದಾದರೂ ಆಧಾರ ಪ್ರಮಾಣವನ್ನು ತಂದುಕೊಡಲು ನಮ್ಮಿಂದಾಗದು.” [ಇಬ್ರಾಹೀಮ್: 10-11]
ಅಂತ್ಯದಿನದಲ್ಲಿ ವಿಶ್ವಾಸವಿಡುವುದು
ಅಂತ್ಯದಿನವೆಂದರೆ: ಜನರನ್ನು ವಿಚಾರಣೆ ಮತ್ತು ಪ್ರತಿಫಲಕ್ಕಾಗಿ (ಸಮಾಧಿಗಳಿಂದ) ಎಬ್ಬಿಸಲಾಗುವ ಪುನರುತ್ಥಾನದ ದಿನ.
ಈ ದಿನವನ್ನು ಅಂತ್ಯದಿನವೆಂದು ಕರೆಯಲಾಗಿರುವುದು ಏಕೆಂದರೆ, ಅದರ ನಂತರ ಬೇರೆ ಯಾವ ದಿನವೂ ಇರುವುದಿಲ್ಲ. ಅಂದು ಸ್ವರ್ಗವಾಸಿಗಳು ಮತ್ತು ನರಕವಾಸಿಗಳು ತಮ್ಮ ತಮ್ಮ ನಿವಾಸಗಳಿಗೆ ತಲುಪುವರು.
ಅಂತ್ಯದಿನದಲ್ಲಿರುವ ವಿಶ್ವಾಸವು ಮೂರು ವಿಷಯಗಳನ್ನು ಒಳಗೊಂಡಿದೆ:
ಮೊದಲನೆಯದು: ಪುನರುತ್ಥಾನದಲ್ಲಿ ವಿಶ್ವಾಸವಿರಿಸುವುದು: ಅಂದರೆ ಎರಡನೆಯ ಬಾರಿ ಕಹಳೆಯಲ್ಲಿ ಊದಲಾದಾಗ ಸತ್ತವರನ್ನು ಜೀವಂತಗೊಳಿಸಲಾಗುವುದು, ಆಗ ಎಲ್ಲಾ ಜನರು ಬರಿಗಾಲಿನಲ್ಲಿ, ನಗ್ನರಾಗಿ, ಮತ್ತು ಮುಂಜಿ ಮಾಡದ ಸ್ಥಿತಿಯಲ್ಲಿ ಜಗದೊಡೆಯನಾದ ಅಲ್ಲಾಹನ ಮುಂದೆ ನಿಲ್ಲುವರು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...كَمَا بَدَأۡنَآ أَوَّلَ خَلۡقٖ نُّعِيدُهُۥۚ وَعۡدًا عَلَيۡنَآۚ إِنَّا كُنَّا فَٰعِلِينَ﴾
“ಸೃಷ್ಟಿಯನ್ನು ಮೊದಲ ಬಾರಿಗೆ ಆರಂಭಿಸಿದಂತೆ ನಾವದನ್ನು ಪುನರಾವರ್ತಿಸುವೆವು. ಅದು ನಮ್ಮ ಮೇಲಿನ ಹೊಣೆಯಾಗಿರುವ ಒಂದು ವಾಗ್ದಾನವಾಗಿದೆ. ಖಂಡಿತವಾಗಿಯೂ ನಾವು (ಅದನ್ನು) ಜಾರಿಗೆ ತಂದೇ ತರುವೆವು.” [ಅಲ್-ಅಂಬಿಯಾ:104]
ಪುನರುತ್ಥಾನವು ಸಾಬೀತಾದ ಸತ್ಯವಾಗಿದೆ. ಕುರ್ಆನ್, ಸುನ್ನತ್ ಮತ್ತು ಮುಸ್ಲಿಮರ ಒಮ್ಮತಾಭಿಪ್ರಾಯವು ಅದಕ್ಕೆ ಪುರಾವೆಯಾಗಿವೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
“ತರುವಾಯ ಅದರ ಬಳಿಕ ಖಂಡಿತವಾಗಿಯೂ ನೀವು ಮರಣಹೊಂದುವಿರಿ. ತರುವಾಯ ಅದರ ಬಳಿಕ ಖಂಡಿತವಾಗಿಯೂ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು.” [ಅಲ್-ಮುಅ್ಮಿನೂನ್:15-16].
﴿ثُمَّ إِنَّكُم بَعۡدَ ذَٰلِكَ لَمَيِّتُونَ 15 ثُمَّ إِنَّكُمۡ يَوۡمَ ٱلۡقِيَٰمَةِ تُبۡعَثُونَ 16﴾
"ತರುವಾಯ ಅದರ ಬಳಿಕ ಖಂಡಿತವಾಗಿಯೂ ನೀವು ಮರಣಹೊಂದುವಿರಿ. ತರುವಾಯ ಪುನರುತ್ಥಾನ ದಿನದಂದು ಖಂಡಿತವಾಗಿಯೂ ನಿಮ್ಮನ್ನು ಎಬ್ಬಿಸಲಾಗುವುದು." [ಅಲ್-ಮುಅಮಿನೂನ್: 15-16]
ಪ್ರವಾದಿ صلي الله عليه وسلم ರವರು ಹೇಳಿದರು: “ಪುನರುತ್ಥಾನದ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನ ಶರೀರದೊಂದಿಗೆ ಮುಂಜಿ (ಲಿಂಗಚ್ಛೇದ) ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು.” (ಮುತ್ತಫಕುನ್ ಅಲೈಹಿ).
«يُحْشَرُ النَّاسُ يَوْمَ الْقِيَامَةِ حُفَاةً عُرَاةً غُرْلًا».
"ಪುನರುತ್ಥಾನದ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನ ಶರೀರದೊಂದಿಗೆ ಮುಂಜಿ (ಲಿಂಗಚ್ಛೇದ) ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು.”13 (ಮುತ್ತಫಖುನ್ ಅಲೈಹ್)
ಅಂತ್ಯದಿನ ಖಂಡಿತವಾಗಿಯೂ ಸಂಭವಿಸುತ್ತದೆ ಎಂಬ ಕುರಿತು ಮುಸ್ಲಿಮರಲ್ಲಿ ಒಮ್ಮತಾಭಿಪ್ರಾಯವಿದೆ ಇದು ಯುಕ್ತಿಯ ಬೇಡಿಕೆಯಾಗಿದೆ. ಏಕೆಂದರೆ ತನ್ನ ಸಂದೇಶವಾಹಕರ ಮೂಲಕ ಜನರಿಗೆ ಕಡ್ಡಾಯಗೊಳಿಸಿದ ವಿಧಿಗಳಿಗೆ ಅನುಗುಣವಾಗಿ ಅವರಿಗೆ ಪ್ರತಿಫಲ ನೀಡುವ ಒಂದು ಅವಧಿ ಇರಬೇಕೆಂಬುದು ಯುಕ್ತಿಯ ಬೇಡಿಕೆಯಾಗಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿أَفَحَسِبۡتُمۡ أَنَّمَا خَلَقۡنَٰكُمۡ عَبَثٗا وَأَنَّكُمۡ إِلَيۡنَا لَا تُرۡجَعُونَ 115﴾
“ನಾವು ನಿಮ್ಮನ್ನು ಉದ್ದೇಶರಹಿತವಾಗಿ ಸೃಷ್ಟಿಸಿರುವೆವು ಮತ್ತು ನೀವು ನಮ್ಮ ಬಳಿಗೆ ಮರಳಿ ಬರಲಾರಿರಿ ಎಂದೂ ನೀವು ಭಾವಿಸಿರುವಿರಾ?” [ಅಲ್-ಮುಅ್ಮಿನೂನ್:115]. [ಅಲ್-ಮುಅಮಿನೂನ್:115] ಅಲ್ಲಾಹನು ತನ್ನ ಪ್ರವಾದಿಯೊಡನೆ(ಸ) ಹೇಳುತ್ತಾನೆ:
﴿إِنَّ ٱلَّذِي فَرَضَ عَلَيۡكَ ٱلۡقُرۡءَانَ لَرَآدُّكَ إِلَىٰ مَعَادٖ...﴾
“ಖಂಡಿತವಾಗಿಯೂ ತಮಗೆ ಈ ಕುರ್ಆನನ್ನು ಶಾಸನವನ್ನಾಗಿ ನೀಡಿರುವವನು ಮರಳಬೇಕಾದ ಸ್ಥಳಕ್ಕೇ ತಮ್ಮನ್ನು ಮರಳಿಸುವನು.” [ಅಲ್-ಕ್ವಸಸ್:85]
ಎರಡನೆಯದು: ವಿಚಾರಣೆ ಮತ್ತು ಪ್ರತಿಫಲದಲ್ಲಿ ವಿಶ್ವಾಸವಿಡುವುದು. ಅಂದರೆ ದಾಸನು ಮಾಡಿದ ಎಲ್ಲಾ ಕರ್ಮಗಳ ವಿಚಾರಣೆಯಾಗುವುದು ಮತ್ತು ಅದರ ಪ್ರಕಾರ ಅವನಿಗೆ ಪ್ರತಿಫಲ ನೀಡಲಾಗುವುದು. ಕುರ್ಆನ್, ಸುನ್ನತ್ ಮತ್ತು ಮುಸ್ಲಿಮರ ಒಮ್ಮತಾಭಿಪ್ರಾಯವು ಇದಕ್ಕೆ ಪುರಾವೆಯಾಗಿದೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಅವರ ಮರಳುವಿಕೆಯು ನಮ್ಮೆಡೆಗಾಗಿದೆ. ತರುವಾಯ ಖಂಡಿತವಾಗಿಯೂ ಅವರ ವಿಚಾರಣೆ ಮಾಡುವುದು ನಮ್ಮ ಬಾಧ್ಯತೆಯಾಗಿದೆ.” [ಅಲ್-ಗಾಶಿಯ:25-26].
﴿إِنَّ إِلَيۡنَآ إِيَابَهُمۡ 25 ثُمَّ إِنَّ عَلَيۡنَا حِسَابَهُم 26﴾
"ಖಂಡಿತವಾಗಿಯೂ ಅವರ ಮರಳುವಿಕೆಯು ನಮ್ಮೆಡೆಗಾಗಿದೆ. ತರುವಾಯ ಖಂಡಿತವಾಗಿಯೂ ಅವರ ವಿಚಾರಣೆ ಮಾಡುವುದು ನಮ್ಮ ಬಾಧ್ಯತೆಯಾಗಿದೆ."
[ಅಲ್-ಗಾಶಿಯ: 25-26] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಯಾರು ಒಂದು ಒಳಿತನ್ನು ತರುವನೋ ಅವನಿಗೆ ಅದರ ಹತ್ತು ಪಟ್ಟು ಸಿಗುವುದು. ಯಾರು ಒಂದು ಕೆಡುಕನ್ನು ತರುವನೋ ಅವನಿಗೆ ಅದಕ್ಕೆ ಸಮಾನವಾಗಿರುವ ಪ್ರತಿಫಲವನ್ನಲ್ಲದೆ ನೀಡಲಾಗದು. ಅವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು.” [ಅಲ್-ಅನ್ಆಮ್:160].
﴿مَن جَآءَ بِٱلۡحَسَنَةِ فَلَهُۥ عَشۡرُ أَمۡثَالِهَاۖ وَمَن جَآءَ بِٱلسَّيِّئَةِ فَلَا يُجۡزَىٰٓ إِلَّا مِثۡلَهَا وَهُمۡ لَا يُظۡلَمُونَ 160﴾
"ಯಾರು ಒಂದು ಒಳಿತನ್ನು ತರುವನೋ ಅವನಿಗೆ ಅದರ ಹತ್ತು ಪಟ್ಟು ಸಿಗುವುದು. ಯಾರು ಒಂದು ಕೆಡುಕನ್ನು ತರುವನೋ ಅವನಿಗೆ ಅದಕ್ಕೆ ಸಮಾನವಾಗಿರುವ ಪ್ರತಿಫಲವನ್ನಲ್ಲದೆ ನೀಡಲಾಗದು. ಅವರೊಂದಿಗೆ ಕಿಂಚಿತ್ತೂ ಅನ್ಯಾಯವೆಸಗಲಾಗದು."
[ಅಲ್-ಅನ್ಆಮ್: 160]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರೊಂದಿಗೂ ಕಿಂಚಿತ್ತೂ ಅಕ್ರಮವೆಸಗಲಾಗದು. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿರುವುದಾದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು.” [ಅಲ್-ಅಂಬಿಯಾ:47].
﴿وَنَضَعُ ٱلۡمَوَٰزِينَ ٱلۡقِسۡطَ لِيَوۡمِ ٱلۡقِيَٰمَةِ فَلَا تُظۡلَمُ نَفۡسٞ شَيۡـٔٗاۖ وَإِن كَانَ مِثۡقَالَ حَبَّةٖ مِّنۡ خَرۡدَلٍ أَتَيۡنَا بِهَاۗ وَكَفَىٰ بِنَا حَٰسِبِينَ 47﴾
"ಪುನರುತ್ಥಾನ ದಿನದಂದು ನಾವು ನ್ಯಾಯ ಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರೊಂದಿಗೂ ಕಿಂಚಿತ್ತೂ ಅಕ್ರಮವೆಸಗಲಾಗದು. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿರುವುದಾದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು." [ಅಲ್-ಅಂಬಿಯಾ: 47]
ಇಬ್ನು ಉಮರ್ رضي الله عنه ರಿಂದ ವರದಿ. ಪ್ರವಾದಿ صلي الله عليه وسلم ರವರು ಹೇಳಿದರು: “ಪುನರುತ್ಥಾನ ದಿನದಂದು ಅಲ್ಲಾಹನು ವಿಶ್ವಾಸಿಯನ್ನು ತನ್ನ ಬಳಿಗೆ ಕರೆದು ಅವನಿಗೆ ತನ್ನ ಪರದೆಯನ್ನು ಹಾಕಿ ಮರೆಮಾಚುವನು. ತರುವಾಯ ನೀನು ಇಂತಿಂತಹ ಪಾಪಗಳನ್ನು ಮಾಡಿದ್ದು ನಿನಗೆ ನೆನಪಿದೆಯೇ? ಎಂದು ಕೇಳುವನು. ಅವನು ಹೌದೆಂದು ಒಪ್ಪಿಕೊಳ್ಳುವನು. ಹೀಗೆ ಪಾಪಗಳೆಲ್ಲವನ್ನೂ ಒಪ್ಪಿಕೊಂಡ ಬಳಿಕ ತನಗೆ ನಾಶ ಖಾತ್ರಿಯೆಂದು ಅವನು ಭಾವಿಸುವಾಗ, ನಾನು ನಿನ್ನ ಆ ಪಾಪಗಳನ್ನು ಭೂಲೋಕದಲ್ಲಿ ಮರೆಮಾಚಿದ್ದೆ, ಇಂದು ನಾನು ಅವುಗಳನ್ನು ನಿನಗೆ ಕ್ಷಮಿಸುತ್ತೇನೆ ಎಂದು ಅಲ್ಲಾಹನು ಹೇಳುವನು. ತರುವಾಯ ಅವನಿಗೆ ಪುಣ್ಯಗಳ ಕಡತವನ್ನು ನೀಡಲಾಗುವುದು. ಆದರೆ ಸತ್ಯ ನಿಷೇಧಿಗಳು ಮತ್ತು ಕಪಟವಿಶ್ವಾಸಿಗಳನ್ನು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲೇ ಕರೆಯಲಾಗುವುದು. ಅವರೇ ಅಲ್ಲಾಹನ ಮೇಲೆ ಸುಳ್ಳು ಹೇಳಿದವರು. ಆದ್ದರಿಂದ ಆ ಆಕ್ರಮಿಗಳಿಗೆ ಅಲ್ಲಾಹನ ಶಾಪವಿದೆ.”
«إِنَّ اللَّهَ يُدْنِي الْمُؤْمِنَ، فَيَضَعُ عَلَيْهِ كَنَفَهُ - أَيْ سَتْرَهُ - وَيَسْتُرُهُ: فَيَقُولُ: أَتَعْرِفُ ذَنْبَ كَذَا؟ أَتَعْرِفُ ذَنْبَ كَذَا؟ فَيَقُولُ: نَعَمْ أَيْ رَبِّ، حَتَّى إِذَا قَرَّرَهُ بِذُنُوبِهِ، وَرَأَى فِي نَفْسِهِ أَنَّهُ هَلَكَ قَالَ: سَتَرْتُهَا عَلَيْكَ فِي الدُّنْيَا وَأَنَا أَغْفِرُهَا لَكَ الْيَوْمَ، فَيُعْطَى كِتَابَ حَسَنَاتِهِ، وَأَمَّا الْكُفَّارُ وَالْمُنَافِقُونَ فَيُنَادَى بِهِمْ عَلَى رُؤُوسِ الْخَلَائِقِ: هَؤُلَاءِ الَّذِينَ كَذَبُوا عَلَى رَبِّهِمْ، أَلَا لَعْنَةُ اللَّهِ عَلَى الظَّالِمِينَ».
“ಪುನರುತ್ಥಾನ ದಿನದಂದು ಅಲ್ಲಾಹನು ಸತ್ಯ ವಿಶ್ವಾಸಿಯನ್ನು ತನ್ನ ಬಳಿಗೆ ಕರೆದು ಅವನಿಗೆ ತನ್ನ ಪರದೆಯನ್ನು ಹಾಕಿ ಮರೆಮಾಚುವನು. ತರುವಾಯ ನೀನು ಇಂತಿಂತಹ ಪಾಪಗಳನ್ನು ಮಾಡಿದ್ದು ನಿನಗೆ ನೆನಪಿದೆಯೇ? ಎಂದು ಕೇಳುವನು. ಅವನು ಹೌದೆಂದು ಒಪ್ಪಿಕೊಳ್ಳುವನು. ಹೀಗೆ ಪಾಪಗಳೆಲ್ಲವನ್ನೂ ಒಪ್ಪಿಕೊಂಡ ಬಳಿಕ ತನಗೆ ನಾಶ ಖಾತ್ರಿಯೆಂದು ಅವನು ಭಾವಿಸುವಾಗ, ನಾನು ನಿನ್ನ ಆ ಪಾಪಗಳನ್ನು ಭೂಲೋಕದಲ್ಲಿ ಮರೆಮಾಚಿದ್ದೆ, ಇಂದು ನಾನು ಅವುಗಳನ್ನು ನಿನಗೆ ಕ್ಷಮಿಸುತ್ತೇನೆ ಎಂದು ಅಲ್ಲಾಹನು ಹೇಳುವನು. ತರುವಾಯ ಅವನಿಗೆ ಪುಣ್ಯಗಳ ಕಡತವನ್ನು ನೀಡಲಾಗುವುದು. ಆದರೆ ಸತ್ಯ ನಿಷೇಧಿಗಳು ಮತ್ತು ಕಪಟವಿಶ್ವಾಸಿಗಳನ್ನು ಎಲ್ಲಾ ಸೃಷ್ಟಿಗಳ ಮುಂಭಾಗದಲ್ಲೇ ಕರೆಯಲಾಗುವುದು.
ಅವರೇ ಅಲ್ಲಾಹನ ಮೇಲೆ ಸುಳ್ಳು ಹೇಳಿದವರು. ಆದ್ದರಿಂದ ಆ ಆಕ್ರಮಿಗಳಿಗೆ ಅಲ್ಲಾಹನ ಶಾಪವಿದೆ.”14 ಮುತ್ತಫಕುನ್ ಅಲೈಹಿ.
ಪ್ರವಾದಿ (صلي الله عليه وسلم) ರವರು ಹೀಗೆ ಹೇಳಿದರೆಂಬುದು ಅಧಿಕೃತವಾಗಿ ಸಾಬೀತಾಗಿದೆ: “ಯಾರಾದರೂ ಒಂದು ಸತ್ಕಾರ್ಯ ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹನು ಆ ಒಂದು ಸತ್ಕಾರ್ಯವನ್ನು ತನ್ನ ಬಳಿ ಹತ್ತರಿಂದ ಏಳುನೂರು ಪಟ್ಟು ಮತ್ತು ಅದಕ್ಕಿಂತ ಹೆಚ್ಚಾಗಿ ಬರೆದುಕೊಳ್ಳುತ್ತಾನೆ. ಯಾರಾದರೂ ಒಂದು ದುಷ್ಕೃತ್ಯವನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹನು ತನ್ನ ಬಳಿ ಅದನ್ನು ಒಂದೇ ದುಷ್ಕೃತ್ಯವಾಗಿ ಬರೆದುಕೊಳ್ಳುತ್ತಾನೆ.”
«أَنَّ مَنْ هَمَّ بِحَسَنَةٍ فَعَمِلَهَا؛ كَتَبَهَا اللَّهُ عِنْدَهُ عَشْرَ حَسَنَاتٍ إِلَى سَبْعِ مِئَةِ ضِعْفٍ إِلَى أَضْعَافٍ كَثِيرَةٍ، وَأَنَّ مَنْ هَمَّ بِسَيِّئَةٍ فَعَمِلَهَا؛ كَتَبَهَا اللَّهُ سَيِّئَةً وَاحِدَةً».
“ಯಾರಾದರೂ ಒಂದು ಸತ್ಕಾರ್ಯ ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹನು ಆ ಒಂದು ಸತ್ಕಾರ್ಯವನ್ನು ತನ್ನ ಬಳಿ ಹತ್ತರಿಂದ ಏಳುನೂರು ಪಟ್ಟು ಮತ್ತು ಅದಕ್ಕಿಂತ ಹೆಚ್ಚಾಗಿ ಬರೆದುಕೊಳ್ಳುತ್ತಾನೆ. ಯಾರಾದರೂ ಒಂದು ದುಷ್ಕೃತ್ಯವನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹನು ತನ್ನ ಬಳಿ ಅದನ್ನು ಒಂದೇ ದುಷ್ಕೃತ್ಯವಾಗಿ ಬರೆದುಕೊಳ್ಳುತ್ತಾನೆ.”15
ಅಂತಿಮ ದಿನದಂದು ಮಾನವನ ಕರ್ಮಗಳ ವಿಚಾರಣೆ ಮಾಡಲಾಗಿ ಪ್ರತಿಫಲ ನೀಡಲಾಗುತ್ತದೆ ಎಂಬ ಬಗ್ಗೆ ಎಲ್ಲಾ ಮುಸ್ಲಿಮರ ಒಮ್ಮತಾಭಿಪ್ರಾಯವಿದೆ. ಇದು ಯುಕ್ತಿಯ ಅವಶ್ಯಕತೆಯೂ ಆಗಿದೆ. ಏಕೆಂದರೆ ಸರ್ವಶಕ್ತನಾದ ಅಲ್ಲಾಹನು ಗ್ರಂಥಗಳನ್ನು ಅವತೀರ್ಣಗೊಳಿಸಿದನು ಮತ್ತು ಸಂದೇಶವಾಹಕರನ್ನು ಕಳುಹಿಸಿದನು. ಅವರು ತಂದ ಧಾರ್ಮಿಕ ಆದೇಶಗಳನ್ನು ಸ್ವೀಕರಿಸಲು ಮತ್ತು ಅವುಗಳಲ್ಲಿ ಕಡ್ಡಾಯವಾದ ಆದೇಶಗಳ ಪ್ರಕಾರ ಕಾರ್ಯನಿರ್ವಹಿಸಲು ಅವನ ದಾಸರ ಮೇಲೆ ನಿರ್ಬಂಧವನ್ನು ಹೇರಿದ್ದಾನೆ. ಅವನ ಧಾರ್ಮಿಕ ಕಾನೂನುಗಳನ್ನು ವಿರೋಧಿಸುವವರೂಂದಿಗೆ ಯುದ್ಧವನ್ನು ಕಡ್ಡಾಯಗೊಳಿಸಿದ್ದಾನೆ ಮತ್ತು ಅವರ ರಕ್ತವನ್ನು, ಅವರ ಮಕ್ಕಳನ್ನು, ಅವರ ಮಹಿಳೆಯರನ್ನು ಮತ್ತು ಅವರ ಸೊತ್ತನ್ನು ಧರ್ಮಸಮ್ಮತಗೊಳಿಸಿದ್ದಾನೆ. ಒಂದು ವೇಳೆ ವಿಚಾರಣೆ ಮತ್ತು ಪ್ರತಿಫಲ ಇಲ್ಲದಿರುತ್ತಿದ್ದರೆ ಇವುಗಳಿಗೆ ಯಾವುದೇ ಅರ್ಥವಿರುತ್ತಿರಲಿಲ್ಲ. ಯುಕ್ತಿಪೂರ್ಣನಾದ ಅಲ್ಲಾಹನು ಇಂತಹ ಅರ್ಥರಹಿತ ಕೆಲಸಗಳನ್ನು ಮಾಡುವವನಲ್ಲ. ಇದರ ಕಡೆಗೆ ಸೂಚನೆ ನೀಡುತ್ತಾ ಅಲ್ಲಾಹನು ಹೇಳುತ್ತಾನೆ:
﴿فَلَنَسۡـَٔلَنَّ ٱلَّذِينَ أُرۡسِلَ إِلَيۡهِمۡ وَلَنَسۡـَٔلَنَّ ٱلۡمُرۡسَلِينَ 6 فَلَنَقُصَّنَّ عَلَيۡهِم بِعِلۡمٖۖ وَمَا كُنَّا غَآئِبِينَ 7﴾
“ಖಂಡಿತವಾಗಿಯೂ ಯಾರ ಬಳಿಗೆ (ನಮ್ಮ ಸಂದೇಶವಾಹಕರನ್ನು) ಕಳುಹಿಸಲಾಯಿತೋ ಅವರನ್ನು ನಾವು ಪ್ರಶ್ನಿಸುವೆವು. ಖಂಡಿತವಾಗಿಯೂ ಕಳುಹಿಸಲಾದ ಸಂದೇಶವಾಹಕರನ್ನೂ ನಾವು ಪ್ರಶ್ನಿಸುವೆವು. ತರುವಾಯ ನಿಖರವಾದ ಜ್ಞಾನದೊಂದಿಗೆ ನಾವು ಅವರಿಗೆ (ವಿಷಯವನ್ನು) ವಿವರಿಸಿಕೊಡುವೆವು. ನಾವು ಒಮ್ಮೆಯೂ ಅನುಪಸ್ಥಿತರಾಗಿರಲಿಲ್ಲ.”
[ಅಲ್-ಅಅರಾಫ್ 6-7]
ಮೂರನೆಯದು: ಸ್ವರ್ಗ ಮತ್ತು ನರಕದಲ್ಲಿ ವಿಶ್ವಾಸವಿಡುವುದು ಮತ್ತು ಅವೆರಡೂ ಸೃಷ್ಟಿಗಳ ಶಾಶ್ವತ ವಾಸಸ್ಥಾನಗಳಾಗಿವೆ ಎಂದು ವಿಶ್ವಾಸವಿಡುವುದು.
ಸ್ವರ್ಗವು ಅನುಗ್ರಹಗಳ ಭವನವಾಗಿದೆ. ಅದನ್ನು ಸರ್ವಶಕ್ತನಾದ ಅಲ್ಲಾಹನು ಭಯ ಭಕ್ತಿಯುಳ್ಳ ಸತ್ಯವಿಶ್ವಾಸಿಗಳಿಗೆ ತಯಾರಿಸಿದ್ದಾನೆ. ಅವರು ಅಲ್ಲಾಹನು ಅವರ ಮೇಲೆ ಕಡ್ಡಾಯಗೊಳಿಸಿದ ವಿಷಯಗಳಲ್ಲಿ ವಿಶ್ವಾಸವಿರಿಸಿದವರು. ಅವರು ಮನಸ್ಸನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುತ್ತಾ ಮತ್ತು ಅವನ ಪ್ರವಾದಿಯನ್ನು ಅನುಸರಿಸುತ್ತಾ ಅಲ್ಲಾಹನು ಮತ್ತು ಅವನ ಪ್ರವಾದಿಗೆ ವಿಧೇಯತೆ ತೋರಿದರು. ಅವರಿಗೆ ಸ್ವರ್ಗದಲ್ಲಿ ವಿವಿಧ ರೀತಿಯ ಅನುಗ್ರಹಗಳಿವೆ. ಕಣ್ಣುಗಳು ಈ ತನಕ ಕಾಣದ, ಕಿವಿಗಳು ಈ ತನಕ ಕೇಳದ ಮತ್ತು ಮನುಷ್ಯನ ಮನಸ್ಸಿನಲ್ಲಿ ಈ ತನಕ ಹೊಳೆಯದ ಅನುಗ್ರಹಗಳು! ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
«مَا لَا عَيْنٌ رَأَتْ، وَلَا أُذُنٌ سَمِعَتْ، وَلَا خَطَرَ عَلَى قَلْبِ بَشَرٍ».
"ಯಾವ ಕಣ್ಣೂ ಕಂಡಿಲ್ಲ, ಯಾವ ಕಿವಿಯೂ ಕೇಳಿಲ್ಲ, ಮತ್ತು ಯಾವ ಮಾನವನ ಹೃದಯಕ್ಕೂ ಅದರ ಕಲ್ಪನೆ ಬಂದಿಲ್ಲ."16 ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿إِنَّ ٱلَّذِينَ ءَامَنُواْ وَعَمِلُواْ ٱلصَّٰلِحَٰتِ أُوْلَٰٓئِكَ هُمۡ خَيۡرُ ٱلۡبَرِيَّةِ 7 جَزَآؤُهُمۡ عِندَ رَبِّهِمۡ جَنَّٰتُ عَدۡنٖ تَجۡرِي مِن تَحۡتِهَا ٱلۡأَنۡهَٰرُ خَٰلِدِينَ فِيهَآ أَبَدٗاۖ رَّضِيَ ٱللَّهُ عَنۡهُمۡ وَرَضُواْ عَنۡهُۚ ذَٰلِكَ لِمَنۡ خَشِيَ رَبَّهُۥ 8﴾
“ಖಂಡಿತವಾಗಿಯೂ ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರು ಸೃಷ್ಟಿಗಳಲ್ಲೇ ಉತ್ತಮರಾಗಿರುವರು. ಅವರಿಗೆ ಅವರ ಪ್ರಭುವಿನ ಬಳಿಯಿರುವ ಪ್ರತಿಫಲವು ತಳಭಾಗದಿಂದ ನದಿಗಳು ಹರಿಯುವ, ಶಾಶ್ವತವಾಸಕ್ಕಿರುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಎಂದೆಂದಿಗೂ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂತೃಪ್ತನಾಗಿರುವನು ಮತ್ತು ಅವರು ಅವನ (ಅಲ್ಲಾಹನ) ಬಗ್ಗೆ ಸಂತೃಪ್ತರಾಗಿರುವರು. ಅದು ಯಾರು ತನ್ನ ಪ್ರಭುವನ್ನು ಭಯಪಡುವನೋ ಅವನಿಗಿರುವುದಾಗಿದೆ.”
[ಅಲ್ ಬಯ್ಯಿನ: 7-8]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವರು ಮಾಡಿರುವುದಕ್ಕಿರುವ ಪ್ರತಿಫಲವಾಗಿ ಕಣ್ಣು ತಂಪಾಗಿಸುವ ಏನನ್ನೆಲ್ಲ ಅವರಿಗಾಗಿ ಗೋಪ್ಯವಾಗಿಡಲಾಗಿದೆ ಎಂಬುದನ್ನು ಯಾವ ವ್ಯಕ್ತಿಯೂ ಅರಿತಿರಲಾರನು.”
[ಅಸ್ಸಜ್ದ:17].
﴿فَلَا تَعۡلَمُ نَفۡسٞ مَّآ أُخۡفِيَ لَهُم مِّن قُرَّةِ أَعۡيُنٖ جَزَآءَۢ بِمَا كَانُواْ يَعۡمَلُونَ 17﴾
"ಅವರು ಮಾಡಿರುವುದಕ್ಕಿರುವ ಪ್ರತಿಫಲವಾಗಿ ಕಣ್ಣು ತಂಪಾಗಿಸುವ ಏನನ್ನೆಲ್ಲ ಅವರಿಗಾಗಿ ಗೋಪ್ಯವಾಗಿಡಲಾಗಿದೆ ಎಂಬುದನ್ನು ಯಾವ ವ್ಯಕ್ತಿಯೂ ಅರಿತಿರಲಾರನು." [ಅಸ್ಸಜ್ದಹ್: 17]
ನರಕವು ಯಾತನೆಗಳ ಭವನವಾಗಿದೆ. ಅಲ್ಲಾಹನ ಮೇಲೆ ವಿಶ್ವಾಸವಿರಿಸದ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯರಾದ ಅಕ್ರಮಿ ಸತ್ಯ ನಿಷೇಧಿಗಳಿಗೆ ಅಲ್ಲಾಹನು ಅದನ್ನು ತಯಾರಿಸಿದ್ದಾನೆ. ಮನುಷ್ಯನಿಗೆ ಊಹಿಸಲೂ ಸಾಧ್ಯವಾಗದಂತಹ ಭಯಾನಕ ಶಿಕ್ಷೆಗಳು ಮತ್ತು ಯಾತನೆಗಳು ನರಕದಲ್ಲಿವೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿರುವ ನರಕಾಗ್ನಿಯನ್ನು ನೀವು ಭಯಪಡಿರಿ.” [ಆಲು-ಇಮ್ರಾನ್:131].
﴿وَٱتَّقُواْ ٱلنَّارَ ٱلَّتِيٓ أُعِدَّتۡ لِلۡكَٰفِرِينَ 131﴾
"ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿರುವ ನರಕಾಗ್ನಿಯನ್ನು ನೀವು ಭಯಪಡಿರಿ."
[ಆಲು ಇಮ್ರಾನ್: 131]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: ಹೇಳಿರಿ: “ಸತ್ಯವು ನಿಮ್ಮ ಪ್ರಭುವಿನ ವತಿಯಿಂದಾಗಿದೆ. ಆದ್ದರಿಂದ (ವಿಶ್ವಾಸವಿಡಲು) ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು (ಅವಿಶ್ವಾಸವಿಡಲು) ಇಚ್ಛೆಯುಳ್ಳವರು ಅವಿಶ್ವಾಸವಿಡಲಿ. ಅಕ್ರಮಿಗಳಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿರುವುದು. ಅವರು ನೀರನ್ನು ಬೇಡುವಾಗ ಕಾಯಿಸಿದ ಲೋಹದ್ರಾವಕದಂತಿರುವ ನೀರನ್ನು ಅವರಿಗೆ ಕುಡಿಯಲು ನೀಡಲಾಗುವುದು. ಅದು ಅವರ ಮುಖಗಳನ್ನು ಸುಟ್ಟು ಹಾಕುವುದು. ಆ ಪಾನೀಯ ಎಷ್ಟು ನಿಕೃಷ್ಟವಾದುದು! ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!” [ಅಲ್-ಕಹಫ್:29].
﴿وَقُلِ ٱلۡحَقُّ مِن رَّبِّكُمۡۖ فَمَن شَآءَ فَلۡيُؤۡمِن وَمَن شَآءَ فَلۡيَكۡفُرۡۚ إِنَّآ أَعۡتَدۡنَا لِلظَّٰلِمِينَ نَارًا أَحَاطَ بِهِمۡ سُرَادِقُهَاۚ وَإِن يَسۡتَغِيثُواْ يُغَاثُواْ بِمَآءٖ كَٱلۡمُهۡلِ يَشۡوِي ٱلۡوُجُوهَۚ بِئۡسَ ٱلشَّرَابُ وَسَآءَتۡ مُرۡتَفَقًا 29﴾
"ಹೇಳಿರಿ: ‘ಸತ್ಯವು ನಿಮ್ಮ ಪ್ರಭುವಿನ ವತಿಯಿಂದಾಗಿದೆ’. ಆದ್ದರಿಂದ (ವಿಶ್ವಾಸವಿಡಲು) ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು (ಅವಿಶ್ವಾಸವಿಡಲು) ಇಚ್ಛೆಯುಳ್ಳವರು ಅವಿಶ್ವಾಸವಿಡಲಿ. ಅಕ್ರಮಿಗಳಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿರುವುದು. ಅವರು ನೀರನ್ನು ಬೇಡುವಾಗ ಕಾಯಿಸಿದ ಲೋಹದ್ರಾವಕದಂತಿರುವ ನೀರನ್ನು ಅವರಿಗೆ ಕುಡಿಯಲು ನೀಡಲಾಗುವುದು. ಅದು ಅವರ ಮುಖಗಳನ್ನು ಸುಟ್ಟು ಹಾಕುವುದು. ಆ ಪಾನೀಯ ಎಷ್ಟು ನಿಕೃಷ್ಟವಾದುದು! ಆ ವಾಸಸ್ಥಳ ಎಷ್ಟು ನಿಕೃಷ್ಟವಾದುದು!" [ಅಲ್-ಕಹ್ಫ್: 29]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಶಪಿಸಿರುವನು ಮತ್ತು ಅವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು. ಅವರ ಮುಖಗಳನ್ನು ನರಕಾಗ್ನಿಯಲ್ಲಿ ಬುಡಮೇಲುಗೊಳಿಸಲಾಗುವ ದಿನ! ಅವರು ಹೇಳುವರು: ನಾವು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು!” [ಅಲ್-ಅಹ್ಝಾಬ್:64-66].
﴿إِنَّ ٱللَّهَ لَعَنَ ٱلۡكَٰفِرِينَ وَأَعَدَّ لَهُمۡ سَعِيرًا 64 خَٰلِدِينَ فِيهَآ أَبَدٗاۖ لَّا يَجِدُونَ وَلِيّٗا وَلَا نَصِيرٗا 65 يَوۡمَ تُقَلَّبُ وُجُوهُهُمۡ فِي ٱلنَّارِ يَقُولُونَ يَٰلَيۡتَنَآ أَطَعۡنَا ٱللَّهَ وَأَطَعۡنَا ٱلرَّسُولَا۠66﴾
"ಖಂಡಿತವಾಗಿಯೂ ಅಲ್ಲಾಹು ಸತ್ಯನಿಷೇಧಿಗಳನ್ನು ಶಪಿಸಿರುವನು ಮತ್ತು ಅವರಿಗೆ ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿರುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಯಾವುದೇ ರಕ್ಷಕನನ್ನಾಗಲಿ ಸಹಾಯಕನನ್ನಾಗಲಿ ಕಾಣಲಾರರು. ಅವರ ಮುಖಗಳನ್ನು ನರಕಾಗ್ನಿಯಲ್ಲಿ ಬುಡಮೇಲುಗೊಳಿಸಲಾಗುವ ದಿನ! ಅವರು ಹೇಳುವರು: ‘ನಾವು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸಿದ್ದರೆ ಎಷ್ಟು ಚೆನ್ನಾಗಿತ್ತು!’" [ಅಲ್-ಅಹ್ಝಾಬ್: 64-66]
ಅಂತ್ಯದಿನದಲ್ಲಿ ವಿಶ್ವಾಸವಿಡುವುದರಿಂದ ಉಂಟಾಗುವ ಮಹಾನ್ ಪ್ರಯೋಜನಗಳು:
ಮೊದಲನೆಯದು: ಆ ದಿನದ ಪ್ರತಿಫಲದ ನಿರೀಕ್ಷೆ ಮತ್ತು ಆಸೆಯಿಂದ ಸತ್ಕರ್ಮಗಳನ್ನು ಮಾಡುವ ಹುರುಪು ದೊರೆಯುತ್ತದೆ.
ಎರಡನೆಯದು: ಆ ದಿನದ ಶಿಕ್ಷೆಯ ಭಯದಿಂದ ದುಷ್ಕರ್ಮಗಳನ್ನು ಮಾಡಲು ಮತ್ತು ಅವುಗಳನ್ನು ಇಷ್ಟಪಡಲು ಭಯವಾಗುತ್ತದೆ.
ಮೂರನೆಯದು: ಪರಲೋಕದ ಅನುಗ್ರಹ ಮತ್ತು ಪ್ರತಿಫಲಗಳಲ್ಲಿ ನಿರೀಕ್ಷೆಯಿಟ್ಟ ಕಾರಣ ಸತ್ಯವಿಶ್ವಾಸಿಗೆ ಕೈತಪ್ಪಿ ಹೋಗುವ ಐಹಿಕ ಸುಖಗಳ ಬಗ್ಗೆ ಸಾಂತ್ವನ ಸಿಗುತ್ತದೆ.
ಮರಣಾನಂತರ ಪುನರ್ಜೀವವಾಗುವುದು ಅಸಾಧ್ಯವೆಂದು ವಾದಿಸುತ್ತಾ ಸತ್ಯ ನಿಷೇಧಿಗಳು ಮರಣಾನಂತರ ಜೀವಂತಗೊಳಿಸಲಾಗುವುದನ್ನು ನಿರಾಕರಿಸಿದರು,
ಆದರೆ ಈ ವಾದವು ಸಂಪೂರ್ಣವಾಗಿ ಸುಳ್ಳಾಗಿದ್ದು ಇದಕ್ಕೆ ಧರ್ಮಶಾಸ್ತ್ರ, ಇಂದ್ರಿಯ ಮತ್ತು ಬುದ್ಧಿ ಪುರಾವೆಯಾಗಿವೆ.
ಧರ್ಮಶಾಸ್ತ್ರವು ಪುರಾವೆಯಾಗಿರುವುದು ಹೇಗೆಂದರೆ, ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ತಮ್ಮನ್ನು ಪುನರುತ್ಥಾನಗೊಳಿಸಲಾಗುವುದಿಲ್ಲ ಎಂದು ಸತ್ಯನಿಷೇಧಿಗಳು ವಾದಿಸಿದರು. (ಓ ಪ್ರವಾದಿಯವರೇ!) ಹೇಳಿರಿ: ಹೌದು! ನನ್ನ ಪ್ರಭುವಿನ ಮೇಲಾಣೆ! ಖಂಡಿತವಾಗಿಯೂ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು. ತರುವಾಯ ನೀವು ಮಾಡಿರುವುದರ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಅದು ಅಲ್ಲಾಹನ ಮಟ್ಟಿಗೆ ಅತಿ ಸುಲಭವಾಗಿದೆ.”[ಅತ್ತಗಾಬುನ್:7].
﴿زَعَمَ ٱلَّذِينَ كَفَرُوٓاْ أَن لَّن يُبۡعَثُواْۚ قُلۡ بَلَىٰ وَرَبِّي لَتُبۡعَثُنَّ ثُمَّ لَتُنَبَّؤُنَّ بِمَا عَمِلۡتُمۡۚ وَذَٰلِكَ عَلَى ٱللَّهِ يَسِيرٞ 7﴾
"ತಮ್ಮನ್ನು ಪುನರುತ್ಥಾನಗೊಳಿಸಲಾಗುವುದಿಲ್ಲ ಎಂದು ಸತ್ಯನಿಷೇಧಿಗಳು ವಾದಿಸಿದರು. (ಓ ಪ್ರವಾದಿಯವರೇ!) ಹೇಳಿರಿ: ‘ಹೌದು! ನನ್ನ ಪ್ರಭುವಿನ ಮೇಲಾಣೆ! ಖಂಡಿತವಾಗಿಯೂ ನಿಮ್ಮನ್ನು ಪುನರುತ್ಥಾನಗೊಳಿಸಲಾಗುವುದು. ತರುವಾಯ ನೀವು ಮಾಡಿರುವುದರ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಅದು ಅಲ್ಲಾಹುವಿನ ಮಟ್ಟಿಗೆ ಅತಿ ಸುಲಭವಾಗಿದೆ’." [ಅತ್ತಗಾಬುನ್: 7]. ಈ ವಿಷಯದ ಕುರಿತು ಎಲ್ಲಾ ದೈವಿಕ ಗ್ರಂಥಗಳ ಒಮ್ಮತಾಭಿಪ್ರಾಯವಿದೆ.
ಇಂದ್ರಿಯವು ಪುರಾವೆಯಾಗಿರುವುದು ಹೇಗೆಂದರೆ, ಇಹಲೋಕದಲ್ಲೇ ಅಲ್ಲಾಹು ತನ್ನ ದಾಸರಿಗೆ ಸತ್ತವರನ್ನು ಜೀವಂತಗೊಳಿಸಿ ತೋರಿಸಿದ್ದಾನೆ. ಇದಕ್ಕೆ ಸೂರ ಅಲ್-ಬಖರದಲ್ಲಿ ಐದು ಉದಾಹರಣೆಗಳಿವೆ:
ಮೊದಲ ಉದಾಹರಣೆ: ಮೂಸಾರ ಜನರು ಅವರೊಡನೆ ಹೇಳಿದರು: “ಓ ಮೂಸಾ! ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣುವ ತನಕ ನಾವು ತಮ್ಮಲ್ಲಿ ಎಂದೂ ವಿಶ್ವಾಸವಿಡಲಾರೆವು.” [ಅಲ್-ಬಖರ:55] ಆಗ ಸರ್ವಶಕ್ತನಾದ ಅಲ್ಲಾಹನು ಅವರನ್ನು ಮೃತಗೊಳಿಸಿ ನಂತರ ಮತ್ತೆ ಅವರನ್ನು ಜೀವಂತಗೊಳಿಸಿದನು.
﴿...لَن نُّؤۡمِنَ لَكَ حَتَّىٰ نَرَى ٱللَّهَ جَهۡرَةٗ ...﴾
‘ಓ ಮೂಸಾ! ಅಲ್ಲಾಹುವನ್ನು ಪ್ರತ್ಯಕ್ಷವಾಗಿ ಕಾಣುವ ತನಕ ನಾವು ತಮ್ಮಲ್ಲಿ ಎಂದೂ ವಿಶ್ವಾಸವಿಡಲಾರೆವು’ ಎಂದು ನೀವು ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ)." [ಅಲ್ ಬಖರ:55]. ಆಗ ಅಲ್ಲಾಹು ಅವರನ್ನು ಮೃತಪಡಿಸಿ, ನಂತರ ಮತ್ತೆ ಜೀವಂತಗೊಳಿಸಿದನು. ಈ ಘಟನೆಯ ಕುರಿತು ಬನೀ ಇಸ್ರಾಯೀಲರನ್ನು ಸಂಬೋಧಿಸಿ ಅಲ್ಲಾಹನು ಹೇಳುತ್ತಾನೆ:
﴿وَإِذۡ قُلۡتُمۡ يَٰمُوسَىٰ لَن نُّؤۡمِنَ لَكَ حَتَّىٰ نَرَى ٱللَّهَ جَهۡرَةٗ فَأَخَذَتۡكُمُ ٱلصَّٰعِقَةُ وَأَنتُمۡ تَنظُرُونَ 55 ثُمَّ بَعَثۡنَٰكُم مِّنۢ بَعۡدِ مَوۡتِكُمۡ لَعَلَّكُمۡ تَشۡكُرُونَ 56﴾
“ಓ ಮೂಸಾ! ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣುವ ತನಕ ನಾವು ತಮ್ಮಲ್ಲಿ ಎಂದೂ ವಿಶ್ವಾಸವಿಡಲಾರೆವು’ ಎಂದು ನೀವು ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಆಗ ನೀವು ನೋಡುತ್ತಿದ್ದಂತೆಯೇ ಸಿಡಿಲ ಬೆಂಕಿಯು ನಿಮ್ಮನ್ನು ಹಿಡಿದುಕೊಂಡಿತು. ತರುವಾಯ ನಿಮ್ಮ ಮರಣದ ಬಳಿಕ ನಾವು ನಿಮ್ಮನ್ನು ಎಬ್ಬಿಸಿದೆವು. ನೀವು ಕೃತಜ್ಞರಾಗುವ ಸಲುವಾಗಿ.” [ಅಲ್-ಬಕರ:55]
ಎರಡನೆಯ ಉದಾಹರಣೆ: ಒಬ್ಬ ವ್ಯಕ್ತಿಯನ್ನು ಕೊಂದು ಕೊಲೆಗಾರ ಯಾರೆಂಬ ವಿಷಯದಲ್ಲಿ ಬನೂ ಇಸ್ರಾಯೀಲರು ಪರಸ್ಪರ ಜಗಳವಾಡಿದ ಘಟನೆ. ಆಗ ಅಲ್ಲಾಹನು ಅವರಿಗೆ ಒಂದು ಹಸುವನ್ನು ಕೊಂದು ಅದರ ಒಂದು ಭಾಗದಿಂದ ಮೃತವ್ಯಕ್ತಿಗೆ ಬಡಿಯಿರಿ, ಆಗ ಅವನು ಜೀವಂತ ಎದ್ದು ತನ್ನನ್ನು ಕೊಂದದ್ದು ಯಾರೆಂದು ತಿಳಿಸುವನು ಎಂದು ಹೇಳಿದನು. ಈ ಕುರಿತು ಅಲ್ಲಾಹನು ಹೀಗೆ ಹೇಳುತ್ತಾನೆ:
﴿وَإِذۡ قَتَلۡتُمۡ نَفۡسٗا فَٱدَّٰرَٰءۡتُمۡ فِيهَاۖ وَٱللَّهُ مُخۡرِجٞ مَّا كُنتُمۡ تَكۡتُمُونَ 72 فَقُلۡنَا ٱضۡرِبُوهُ بِبَعۡضِهَاۚ كَذَٰلِكَ يُحۡيِ ٱللَّهُ ٱلۡمَوۡتَىٰ وَيُرِيكُمۡ ءَايَٰتِهِۦ لَعَلَّكُمۡ تَعۡقِلُونَ 73﴾
“(ಓ ಇಸ್ರಾಈಲ್ ಸಂತತಿಗಳೇ!), ನೀವು ಒಬ್ಬ ವ್ಯಕ್ತಿಯನ್ನು ಕೊಲೆಗೈದು ತರುವಾಯ ಪರಸ್ಪರ ಆರೋಪ ಹೊರಿಸುತ್ತಾ ನುಣುಚಿಕೊಂಡ ಸಂದರ್ಭ(ವನ್ನು ಸ್ಮರಿಸಿರಿ). ಆದರೆ ನೀವು ಮರೆಮಾಚುವುದನ್ನು ಖಂಡಿತವಾಗಿಯೂ ಅಲ್ಲಾಹು ಬಹಿರಂಗಪಡಿಸುವವನಾಗಿರುವನು.ಆಗ ನಾವು ಹೇಳಿದೆವು: ನೀವು ಅದರ (ಹಸುವಿನ) ಒಂದು ಭಾಗದಿಂದ ಆ ಮೃತದೇಹಕ್ಕೆ ಹೊಡೆಯಿರಿ. ಹೀಗೆ ಅಲ್ಲಾಹು ಮರಣಹೊಂದಿದವರಿಗೆ ಜೀವವನ್ನು ನೀಡುವನು. ನೀವು ಚಿಂತಿಸುವ ಸಲುವಾಗಿ ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಿರುವನು.” [ಅಲ್-ಬಕರ: 72-73]
ಮೂರನೆಯ ಉದಾಹರಣೆ: ಸಾವಿನ ಭಯದಿಂದ ಸಾವಿರಾರು ಜನರು ತಮ್ಮ ಮನೆಗಳಿಂದ ಓಡಿಹೋದ ಘಟನೆ. ಅಲ್ಲಾಹನು ಅವರೆಲ್ಲರನ್ನೂ ಮೃತಪಡಿಸಿ ನಂತರ ಬದುಕಿಸಿದನು. ಈ ಕುರಿತು ಅಲ್ಲಾಹನು ಹೀಗೆ ಹೇಳುತ್ತಾನೆ:
﴿أَلَمۡ تَرَ إِلَى ٱلَّذِينَ خَرَجُواْ مِن دِيَٰرِهِمۡ وَهُمۡ أُلُوفٌ حَذَرَ ٱلۡمَوۡتِ فَقَالَ لَهُمُ ٱللَّهُ مُوتُواْ ثُمَّ أَحۡيَٰهُمۡۚ إِنَّ ٱللَّهَ لَذُو فَضۡلٍ عَلَى ٱلنَّاسِ وَلَٰكِنَّ أَكۡثَرَ ٱلنَّاسِ لَا يَشۡكُرُونَ243﴾
“ಸಾವಿರಾರು ಜನರಿದ್ದೂ ಸಹ ಮೃತ್ಯುಭಯದಿಂದ ತಮ್ಮ ಮನೆಗಳನ್ನು ತ್ಯಜಿಸಿ ಹೊರಹೋದ ಒಂದು ಜನತೆಯ ಬಗ್ಗೆ ತಾವು ಅರಿತಿಲ್ಲವೇ? ಆಗ ಅಲ್ಲಾಹು ಅವರೊಂದಿಗೆ ಹೇಳಿದನು: ‘ನೀವು ಮರಣ ಹೊಂದಿರಿ’. ತರುವಾಯ ಅವನು ಅವರಿಗೆ ಜೀವವನ್ನು ನೀಡಿದನು. ಖಂಡಿತವಾಗಿಯೂ ಅಲ್ಲಾಹು ಜನರ ಮೇಲೆ ಔದಾರ್ಯ ವುಳ್ಳವನಾಗಿರುವನು. ಆದರೆ ಜನರಲ್ಲಿ ಹೆಚ್ಚಿನವರೂ ಕೃತಜ್ಞತೆ ಸಲ್ಲಿಸುವುದಿಲ್ಲ.” [ಅಲ್-ಬಕರ: 243]
ನಾಲ್ಕನೆಯ ಉದಾಹರಣೆ: ಸಂಪೂರ್ಣ ಧ್ವಂಸವಾದ ಒಂದು ನಗರದ ಮೂಲಕ ಹಾದು ಹೋದ ವ್ಯಕ್ತಿಯ ಘಟನೆ. ಅಲ್ಲಾಹನು ಆ ನಗರವನ್ನು ಪುನಃ ಜೀವಂತಗೊಳಿಸಬಹುದು ಎಂಬುದನ್ನು ಆ ವ್ಯಕ್ತಿ ಅಲ್ಲಗಳೆದಾಗ, ಅಲ್ಲಾಹನು ಅವನನ್ನು ನೂರು ವರ್ಷಗಳ ಕಾಲ ಮೃತಗೊಳಿಸಿ, ನಂತರ ಮತ್ತೆ ಜಿವಂತಗೊಳಿಸಿದನು. ಈ ಕುರಿತು ಸರ್ವಶಕ್ತನಾದ ಅಲ್ಲಾಹನ ವಚನ ಹೀಗಿದೆ:
﴿أَوۡ كَٱلَّذِي مَرَّ عَلَىٰ قَرۡيَةٖ وَهِيَ خَاوِيَةٌ عَلَىٰ عُرُوشِهَا قَالَ أَنَّىٰ يُحۡيِۦ هَٰذِهِ ٱللَّهُ بَعۡدَ مَوۡتِهَاۖ فَأَمَاتَهُ ٱللَّهُ مِاْئَةَ عَامٖ ثُمَّ بَعَثَهُۥۖ قَالَ كَمۡ لَبِثۡتَۖ قَالَ لَبِثۡتُ يَوۡمًا أَوۡ بَعۡضَ يَوۡمٖۖ قَالَ بَل لَّبِثۡتَ مِاْئَةَ عَامٖ فَٱنظُرۡ إِلَىٰ طَعَامِكَ وَشَرَابِكَ لَمۡ يَتَسَنَّهۡۖ وَٱنظُرۡ إِلَىٰ حِمَارِكَ وَلِنَجۡعَلَكَ ءَايَةٗ لِّلنَّاسِۖ وَٱنظُرۡ إِلَى ٱلۡعِظَامِ كَيۡفَ نُنشِزُهَا ثُمَّ نَكۡسُوهَا لَحۡمٗاۚ فَلَمَّا تَبَيَّنَ لَهُۥ قَالَ أَعۡلَمُ أَنَّ ٱللَّهَ عَلَىٰ كُلِّ شَيۡءٖ قَدِيرٞ 259﴾
“ಅಥವಾ ಮೇಲ್ಛಾವಣಿಗಳೊಂದಿಗೆ ಕುಸಿದುಬಿದ್ದಿರುವ ಒಂದು ಪಟ್ಟಣದ ಮೂಲಕ ಸಂಚರಿಸುತ್ತಿದ್ದ ಒಬ್ಬನಂತೆ. ಆ ವ್ಯಕ್ತಿ ಹೇಳಿದರು: ‘ನಿರ್ಜೀವವಾದ ಬಳಿಕ ಅಲ್ಲಾಹು ಇದಕ್ಕೆ ಜೀವ ನೀಡುವುದಾದರೂ ಹೇಗೆ?’ ಆಗ ಅಲ್ಲಾಹು ಅವರನ್ನು ನೂರು ವರ್ಷಗಳ ಕಾಲ ನಿರ್ಜೀವ ಸ್ಥಿತಿಯಲ್ಲಿಟ್ಟನು. ಆಮೇಲೆ ಅವರನ್ನು ಪುನರ್ಜೀವಗೊಳಿಸಿ ಕೇಳಿದನು: ‘ತಾವು ಎಷ್ಟು ವರ್ಷ (ನಿರ್ಜೀವ ಸ್ಥಿತಿಯಲ್ಲಿ) ಕಳೆದಿರುವಿರಿ?’ ‘ಒಂದು ದಿನ ಅಥವಾ ಒಂದು ದಿನದ ಸ್ವಲ್ಪ ಭಾಗ (ಕಳೆದಿರುವೆನು)’ ಎಂದು ಅವರು ಉತ್ತರಿಸಿದರು. ಅವನು (ಅಲ್ಲಾಹು) ಹೇಳಿದನು: ‘ಅಲ್ಲ, ತಾವು ನೂರು ವರ್ಷ ಕಳೆದಿರುವಿರಿ, ತಮ್ಮ ಆಹಾರ-ಪಾನೀಯಗಳತ್ತ ನೋಡಿರಿ, ಅವು ಬದಲಾಗಿಲ್ಲ. ತಮ್ಮ ಕತ್ತೆಯೆಡೆಗೆ ನೋಡಿರಿ (ಅದು ಹೇಗಿದೆಯೆಂದು?) ತಮ್ಮನ್ನು ಜನರಿಗೊಂದು ದೃಷ್ಟಾಂತವನ್ನಾಗಿ ಮಾಡುವ ಸಲುವಾಗಿ ನಾವಿದನ್ನು ಮಾಡಿದೆವು ನಾವು ಆ ಮೂಳೆಗಳನ್ನು ಹೇಗೆ ಜೋಡಿಸುವೆವು ಮತ್ತು ಅವುಗಳಿಗೆ ಹೇಗೆ ಮಾಂಸವನ್ನು ಹೊದಿಯುವೆವು ಎಂಬುದನ್ನು ನೋಡಿರಿ’. ಹೀಗೆ ಅವರಿಗೆ ವಿಷಯವು ಸ್ಪಷ್ಟವಾದಾಗ ಅವರು ಹೇಳಿದರು: ‘ಖಂಡಿತವಾಗಿಯೂ ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನೆಂದು ನಾನು ಅರಿತುಕೊಂಡಿರುವೆನು.” [ಅಲ್-ಬಖರ:259]. [ಅಲ್-ಬಕರ: 259]
ಐದನೇ ಉದಾಹರಣೆ: ಇಬ್ರಾಹೀಮ್ ಖಲೀಲ್ (عليه السلام)ರರವರ ಘಟನೆ. ಸತ್ತವರನ್ನು ಅಲ್ಲಾಹನು ಮತ್ತೆ ಹೇಗೆ ಬದುಕಿಸುತ್ತಾನೆಂದು ತೋರಿಸಲು ಅವರು ಅಲ್ಲಾಹನಲ್ಲಿ ವಿನಂತಿಸಿದಾಗ, ಅಲ್ಲಾಹನು ಅವರಿಗೆ ನಾಲ್ಕು ಪಕ್ಷಿಗಳನ್ನು ಕೊಯ್ದು, ಅವುಗಳ ದೇಹಗಳ ತುಂಡುಗಳನ್ನು ಸುತ್ತಮುತ್ತಲಿನ ಪರ್ವತಗಳ ಮೇಲೆ ಎಸೆದು, ನಂತರ ಅವುಗಳನ್ನು ಕೂಗಿ ಕರೆಯಲು ಆದೇಶ ನೀಡಿದನು. ಆಗ ಆ ಎಲ್ಲಾ ತುಂಡುಗಳು ಪರಸ್ಪರ ಒಂದಕ್ಕೊಂದು ಜೋಡಣೆಯಾಗಿ ಇಬ್ರಾಹೀಮ್ عليه السلام ರ ಬಳಿ ಓಡಿ ಬಂದವು. ಈ ಕುರಿತು ಸರ್ವಶಕ್ತನಾದ ಅಲ್ಲಾಹನು ಹೀಗೆ ಹೇಳುತ್ತಾನೆ:
﴿وَإِذۡ قَالَ إِبۡرَٰهِـۧمُ رَبِّ أَرِنِي كَيۡفَ تُحۡيِ ٱلۡمَوۡتَىٰۖ قَالَ أَوَلَمۡ تُؤۡمِنۖ قَالَ بَلَىٰ وَلَٰكِن لِّيَطۡمَئِنَّ قَلۡبِيۖ قَالَ فَخُذۡ أَرۡبَعَةٗ مِّنَ ٱلطَّيۡرِ فَصُرۡهُنَّ إِلَيۡكَ ثُمَّ ٱجۡعَلۡ عَلَىٰ كُلِّ جَبَلٖ مِّنۡهُنَّ جُزۡءٗا ثُمَّ ٱدۡعُهُنَّ يَأۡتِينَكَ سَعۡيٗاۚ وَٱعۡلَمۡ أَنَّ ٱللَّهَ عَزِيزٌ حَكِيمٞ 260﴾
“ನನ್ನ ಪ್ರಭೂ! ನೀನು ಮರಣ ಹೊಂದಿದವರಿಗೆ ಜೀವವನ್ನು ನೀಡುವುದು ಹೇಗೆ ಎಂಬುದನ್ನು ನನಗೆ ತೋರಿಸಿಕೊಡು ಎಂದು ಇಬ್ರಾಹೀಮ್ ಹೇಳಿದ ಸಂದರ್ಭ(ವನ್ನು ಸ್ಮರಿಸಿರಿ). ಅಲ್ಲಾಹು ಕೇಳಿದನು: ‘ತಾವು ವಿಶ್ವಾಸವಿಟ್ಟಿಲ್ಲವೇ?’ ಅವರು ಹೇಳಿದರು: ‘ವಿಶ್ವಾಸವಿಟ್ಟಿರುವೆನು, ಆದರೂ ನನ್ನ ಮನಸ್ಸಿಗೆ ಶಾಂತಿ ಸಿಗುವ ಸಲುವಾಗಿ’. ಅಲ್ಲಾಹು ಹೇಳಿದನು: ‘ಹಾಗಾದರೆ ತಾವು ನಾಲ್ಕು ಹಕ್ಕಿಗಳನ್ನು ಹಿಡಿದು ಅವುಗಳನ್ನು ತಮಗೆ ಹತ್ತಿರವಾಗಿಸಿರಿ. ತರುವಾಯ (ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ) ಅವುಗಳ ಪ್ರತಿಯೊಂದು ಭಾಗವನ್ನು ಒಂದೊಂದು ಬೆಟ್ಟದ ಮೇಲಿಡಿರಿ. ಬಳಿಕ ಅವುಗಳನ್ನು ಕೂಗಿ ಕರೆಯಿರಿ. ಅವು ತಕ್ಷಣ ತಮ್ಮ ಬಳಿಗೆ ಓಡಿ ಬರುವುವು. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನೆಂಬುದನ್ನು ತಾವು ಅರಿತುಕೊಳ್ಳಿರಿ.” [ಅಲ್-ಬಕರ: 260]
ಇವು ಸತ್ತವರನ್ನು ಪುನಃ ಜೀವಂತಗೊಳಿಸಲಾಗುತ್ತದೆ ಎಂಬುದನ್ನು ಸೂಚಿಸುವ ಇಂದ್ರಿಯಾಧಾರಿತ ಸತ್ಯ ಘಟನೆಗಳಾಗಿವೆ. ಈಸಾ عليه السلام ರವರು ಅಲ್ಲಾಹನ ಆಜ್ಞೆಯಿಂದ ಸತ್ತವರನ್ನು ಪುನಃ ಜೀವಂತಗೊಳಿಸುತ್ತಿದ್ದರು ಮತ್ತು ಅವರನ್ನು ಅವರ ಸಮಾಧಿಗಳಿಂದ ಹೊರತೆಗೆಯುತ್ತಿದ್ದರು ಎಂದು ಅವರಿಗೆ ಅಲ್ಲಾಹನ ವತಿಯಿಂದ ನೀಡಲಾದ ಪ್ರವಾದಿತ್ವದ ಚಿಹ್ನೆಗಳಲ್ಲಿ ಒಂದು ಚಿಹ್ನೆಯ ಕಡೆ ಈಗಾಗಲೇ ನಾವು ಸೂಚನೆ ನೀಡಿದ್ದೇವೆ.
ಪುರಾವೆಯಾಗಿರುವುದು ಹೇಗೆಂದರೆ, ಇದರಲ್ಲಿ ಎರಡು ವಿಧಗಳಿವೆ:
ಮೊದಲನೆಯದು: ಖಂಡಿತವಾಗಿಯೂ ಅಲ್ಲಾಹನು ಆಕಾಶ ಮತ್ತು ಭೂಮಿಯನ್ನು ಮತ್ತು ಅವುಗಳಲ್ಲಿರುವ ಎಲ್ಲವನ್ನೂ ಶೂನ್ಯದಿಂದ ಸೃಷ್ಟಿಸಿದನು. ಸೃಷ್ಟಿಯನ್ನು ಆರಂಭಿಸಲು ಶಕ್ತನಾದವನು ಅದನ್ನು ಮತ್ತೆ ಪುನರಾವರ್ತಿಸಲು ಅಶಕ್ತನಾಗಲಾರ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَهُوَ ٱلَّذِي يَبۡدَؤُاْ ٱلۡخَلۡقَ ثُمَّ يُعِيدُهُۥ وَهُوَ أَهۡوَنُ عَلَيۡهِۚ...﴾
“ಸೃಷ್ಟಿಯನ್ನು ಆರಂಭಿಸುವವನು ಅವನಾಗಿರುವನು. ತರುವಾಯ ಅವನು ಅದನ್ನು ಪುನರಾವರ್ತಿಸುವನು. ಅದು ಅವನ ಮಟ್ಟಿಗೆ ಅತ್ಯಂತ ಸುಲಭವಾಗಿದೆ.”
[ಅರ್ರೂಮ್: 27]. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಸೃಷ್ಟಿಯನ್ನು ಮೊದಲ ಬಾರಿಗೆ ಆರಂಭಿಸಿದಂತೆ ನಾವದನ್ನು ಪುನರಾವರ್ತಿಸುವೆವು. ಅದು ನಮ್ಮ ಮೇಲಿನ ಹೊಣೆಯಾಗಿರುವ ಒಂದು ವಾಗ್ದಾನವಾಗಿದೆ. ಖಂಡಿತವಾಗಿಯೂ ನಾವು (ಅದನ್ನು) ಜಾರಿಗೆ ತಂದೇ ತರುವೆವು.” [ಅಲ್-ಅಂಬಿಯಾ:104].
﴿...كَمَا بَدَأۡنَآ أَوَّلَ خَلۡقٖ نُّعِيدُهُۥۚ وَعۡدًا عَلَيۡنَآۚ إِنَّا كُنَّا فَٰعِلِينَ﴾
"ಸೃಷ್ಟಿಯನ್ನು ಮೊದಲ ಬಾರಿಗೆ ಆರಂಭಿಸಿದಂತೆ ನಾವದನ್ನು ಪುನರಾವರ್ತಿಸುವೆವು. ಅದು ನಮ್ಮ ಮೇಲಿನ ಹೊಣೆಯಾಗಿರುವ ಒಂದು ವಾಗ್ದಾನವಾಗಿದೆ. ಖಂಡಿತವಾಗಿಯೂ ನಾವು (ಅದನ್ನು) ಜಾರಿಗೆ ತಂದೇ ತರುವೆವು." [ಅಲ್-ಅಂಬಿಯಾ:104] ಅಲ್ಲಾಹನು ಕೊಳೆತ ಮೂಳೆಗಳನ್ನು ಪುನಃ ಜೀವಂತಗೊಳಿಸುತ್ತಾನೆ ಎಂಬುದನ್ನು ನಿರಾಕರಿಸಿದವರಿಗೆ ಅಲ್ಲಾಹನು ಹೀಗೆ ಉತ್ತರಿಸಿದ್ದಾನೆ:
﴿قُلۡ يُحۡيِيهَا ٱلَّذِيٓ أَنشَأَهَآ أَوَّلَ مَرَّةٖۖ وَهُوَ بِكُلِّ خَلۡقٍ عَلِيمٌ 79﴾
“ಹೇಳಿರಿ: ಅದನ್ನು ಮೊದಲ ಬಾರಿ ಸೃಷ್ಟಿಸಿದವನೇ ಅದಕ್ಕೆ ಜೀವವನ್ನು ನೀಡುವನು. ಅವನು ಸಕಲ ಸೃಷ್ಟಿಗಳ ಬಗ್ಗೆ ಅರಿವುಳ್ಳವನಾಗಿರುವನು.”
[ಯಾಸೀನ್: 79]
ಎರಡನೆಯದು: ಭೂಮಿ ಯಾವುದೇ ಹಸಿರು ಮರಗಳಿಲ್ಲದೆ ಬಂಜರು ಮತ್ತು ನಿರ್ಜೀವವಾಗಿರುತ್ತದೆ. ಆದರೆ ಮಳೆ ಸುರಿದು ಅದು ಹಚ್ಚ ಹಸಿರು ಎಲೆಗಳೊಂದಿಗೆ ಪುನರ್ಜೀವ ಪಡೆದು ಅದರಲ್ಲಿ ಆಕರ್ಷಕವಾದ ಸರ್ವವಿಧ ಸಸ್ಯವರ್ಗಗಳು ಬೆಳೆಯುತ್ತವೆ. ನಿರ್ಜೀವವಾಗಿದ್ದ ಭೂಮಿಗೆ ಜೀವ ನೀಡಲು ಶಕ್ತನಾದವನು ಮರಣ ಹೊಂದಿದವರನ್ನು ಪುನಃ ಜೀವಂತಗೊಳಿಸಲು ಅಶಕ್ತನೇ? ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿وَمِنۡ ءَايَٰتِهِۦٓ أَنَّكَ تَرَى ٱلۡأَرۡضَ خَٰشِعَةٗ فَإِذَآ أَنزَلۡنَا عَلَيۡهَا ٱلۡمَآءَ ٱهۡتَزَّتۡ وَرَبَتۡۚ إِنَّ ٱلَّذِيٓ أَحۡيَاهَا لَمُحۡيِ ٱلۡمَوۡتَىٰٓۚ إِنَّهُۥ عَلَىٰ كُلِّ شَيۡءٖ قَدِيرٌ 39﴾
“ಭೂಮಿಯು ಒಣಗಿ ಬರಡಾಗಿರುವುದಾಗಿ ತಾವು ಕಾಣುವಿರಿ. ತರುವಾಯ ನಾವು ಅದರ ಮೇಲೆ ನೀರನ್ನು ಸುರಿಸಿದರೆ ಅದಕ್ಕೆ ಸಂಚಲನವುಂಟಾಗುವುದು ಮತ್ತು ಅದು ಬೆಳೆಯತೊಡಗುವುದು. ಇದು ಅವನ ದೃಷ್ಟಾಂತಗಳಲ್ಲಿ ಸೇರಿದ್ದಾಗಿದೆ. ಅದಕ್ಕೆ ಜೀವವನ್ನು ನೀಡಿದವನು ಖಂಡಿತವಾಗಿಯೂ ಮೃತಪಟ್ಟವರಿಗೂ ಜೀವವನ್ನು ನೀಡುವನು. ಖಂಡಿತವಾಗಿಯೂ ಅವನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವನು.” [ಫುಸ್ಸಿಲತ್:39] ಸರ್ವ ಶಕ್ತನಾದ ಅಲ್ಲಾಹನು ಹೇಳುತ್ತಾನೆ: “ನಾವು ಆಕಾಶದಿಂದ ಅನುಗ್ರಹೀತವಾದ (ಮಳೆ) ನೀರನ್ನು ಸುರಿಸಿದೆವು. ತರುವಾಯ ಅದರಿಂದ ಹಲವಾರು ವಿಧದ ತೋಟಗಳನ್ನೂ ಕಟಾವು ಮಾಡುವ ಧಾನ್ಯಗಳನ್ನೂ ಬೆಳೆಸಿದೆವು. ಪದರ ಪದರವಾಗಿ ಗೊನೆಗಳನ್ನು ಹೊಂದಿರುವ ಎತ್ತರವಾದ ಖರ್ಜೂರ ಮರಗಳನ್ನು. ಅದು (ನಮ್ಮ) ದಾಸರಿಗಿರುವ ಅನ್ನಾಧಾರವಾಗಿದೆ. ನಿರ್ಜೀವವಾಗಿದ್ದ ಭೂಮಿಗೆ ತನ್ಮೂಲಕ ನಾವು ಜೀವವನ್ನು ನೀಡಿದೆವು. (ಗೋರಿಗಳಿಂದ) ಹೊರತರಲಾಗುವುದೂ ಹೀಗೆಯೇ ಆಗಿದೆ.” [ಕ್ವಾಫ್:9-11].
﴿وَنَزَّلۡنَا مِنَ ٱلسَّمَآءِ مَآءٗ مُّبَٰرَكٗا فَأَنۢبَتۡنَا بِهِۦ جَنَّٰتٖ وَحَبَّ ٱلۡحَصِيدِ 9 وَٱلنَّخۡلَ بَاسِقَٰتٖ لَّهَا طَلۡعٞ نَّضِيدٞ 10 رِّزۡقٗا لِّلۡعِبَادِۖ وَأَحۡيَيۡنَا بِهِۦ بَلۡدَةٗ مَّيۡتٗاۚ كَذَٰلِكَ ٱلۡخُرُوجُ 11﴾
"ನಾವು ಆಕಾಶದಿಂದ ಅನುಗ್ರಹೀತವಾದ ನೀರನ್ನು ಸುರಿಸಿದೆವು. ತರುವಾಯ ಅದರಿಂದ ಹಲವಾರು ವಿಧದ ತೋಟಗಳನ್ನೂ ಕಟಾವು ಮಾಡುವ ಧಾನ್ಯಗಳನ್ನೂ ಬೆಳೆಸಿದೆವು. ಪದರ ಪದರವಾಗಿ ಗೊನೆಗಳನ್ನು ಹೊಂದಿರುವ ಎತ್ತರವಾದ ಖರ್ಜೂರ ಮರಗಳನ್ನು. ಅದು ದಾಸರಿಗಿರುವ ಅನ್ನಾಧಾರವಾಗಿದೆ. ನಿರ್ಜೀವವಾಗಿದ್ದ ಭೂಮಿಗೆ ತನ್ಮೂಲಕ ನಾವು ಜೀವವನ್ನು ನೀಡಿದೆವು. (ಗೋರಿಗಳಿಂದ) ಹೊರತರಲಾಗುವುದೂ ಹೀಗೆಯೇ ಆಗಿದೆ." [ಕ್ವಾಫ್: 9-11]
ಮರಣಾನಂತರ ಸಂಭವಿಸುವ ಎಲ್ಲಾ ವಿಷಯಗಳಲ್ಲಿ ವಿಶ್ವಾಸವಿರಿಸುವುದು ಅಂತ್ಯದಿನದಲ್ಲಿ ವಿಶ್ವಾಸವಿಡುವುದರಲ್ಲಿ ಒಳಗೊಳ್ಳುತ್ತದೆ. ಉದಾಹರಣೆಗೆ:
1- ಸಮಾಧಿಯ ಪರೀಕ್ಷೆ: ಮೃತ ವ್ಯಕ್ತಿಯನ್ನು ಸಮಾಧಿ ಮಾಡಿದ ನಂತರ ಅವನ ರಬ್ (ಪ್ರಭು), ಅವನ ಧರ್ಮ ಮತ್ತು ಅವನ ಪ್ರವಾದಿಯ ಬಗ್ಗೆ ಪ್ರಶ್ನಿಸಲಾಗುವುದು. ಆಗ ಅಲ್ಲಾಹನು ಸತ್ಯ ವಿಶ್ವಾಸಿಗಳನ್ನು ಸುದೃಢ ವಚನದ ಮೂಲಕ ಸ್ಥಿರವಾಗಿ ನೆಲೆಗೊಳಿಸುವನು. ಆಗ ಸತ್ಯವಿಶ್ವಾಸಿ ಹೌದು ನನ್ನ ರಬ್ಬ್ ಅಲ್ಲಾಹ್, ನನ್ನ ಧರ್ಮ ಇಸ್ಲಾಮ್ ಮತ್ತು ನನ್ನ ಪ್ರವಾದಿ ಮುಹಮ್ಮದ್ (صلي الله عليه وسلم) ರವರಾಗಿದ್ದಾರೆಂದು ಉತ್ತರಿಸುವನು. ಇದಕ್ಕೆ ವಿರುದ್ಧವಾಗಿ ಅಲ್ಲಾಹನು ಅಕ್ರಮಿಗಳನ್ನು ಪಥಭ್ರಷ್ಟಗೊಳಿಸುವನು. ಸತ್ಯನಿಷೇಧಿ: ಅಯ್ಯೋ, ಅಯ್ಯೋ "ನನಗೆ ಏನೂ ತಿಳಿದಿಲ್ಲ" ಎಂದು ಹೇಳುವನು, ಮತ್ತು ಕಪಟ ವಿಶ್ವಾಸಿ ಅಥವಾ ಧರ್ಮದಲ್ಲಿ ಸಂದೇಹ ಪಡುವವನು: ನನಗೆ ಗೊತ್ತಿಲ್ಲ, ಜನರು ಎನೋ ಹೇಳುವುದನ್ನು ನಾನು ಕೇಳಿದೆ ಮತ್ತು ನಾನೂ ಹಾಗೆ ಹೇಳಿದೆ ಎಂದು ಹೇಳುವನು.
2- ಸಮಾಧಿಯ ಶಿಕ್ಷೆ ಮತ್ತು ರಕ್ಷೆ: ಕಪಟಿಗಳು ಮತ್ತು ಸತ್ಯ ನಿಷೇಧಿಗಳಾದ ಅಕ್ರಮಿಗಳಿಗೆ ಅಲ್ಲಿ ಶಿಕ್ಷೆಯಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...وَلَوۡ تَرَىٰٓ إِذِ ٱلظَّٰلِمُونَ فِي غَمَرَٰتِ ٱلۡمَوۡتِ وَٱلۡمَلَٰٓئِكَةُ بَاسِطُوٓاْ أَيۡدِيهِمۡ أَخۡرِجُوٓاْ أَنفُسَكُمُۖ ٱلۡيَوۡمَ تُجۡزَوۡنَ عَذَابَ ٱلۡهُونِ بِمَا كُنتُمۡ تَقُولُونَ عَلَى ٱللَّهِ غَيۡرَ ٱلۡحَقِّ وَكُنتُمۡ عَنۡ ءَايَٰتِهِۦ تَسۡتَكۡبِرُونَ﴾
“ಆ ಅಕ್ರಮಿಗಳು ಮರಣ ಸಂಕಟದಲ್ಲಿರುವ ದೃಶ್ಯವನ್ನು ತಾವು ಕಂಡಿರುತ್ತಿದ್ದರೆ! ನೀವು ನಿಮ್ಮ ಆತ್ಮಗಳನ್ನು ಹೊರತಳ್ಳಿರಿ ಎಂದು ಹೇಳುತ್ತಾ ಮಲಕ್ಗಳು ಅವರೆಡೆಗೆ ತಮ್ಮ ಕೈಗಳನ್ನು ಚಾಚಿ ಕೊಂಡಿರುವರು. ನೀವು ಅಲ್ಲಾಹನ ಮೇಲೆ ಸತ್ಯಕ್ಕೆ ವಿರುದ್ಧವಾಗಿರುವುದನ್ನು ಹೇಳಿರುವ ಕಾರಣದಿಂದಾಗಿ ಮತ್ತು ಅವನ ದೃಷ್ಟಾಂತಗಳನ್ನು ಅಹಂಕಾರದೊಂದಿಗೆ ನಿಷೇಧಿಸಿರುವ ಕಾರಣದಿಂದಾಗಿ ಇಂದು ನಿಮಗೆ ಹೀನಾಯ ಶಿಕ್ಷೆಯನ್ನು ನೀಡಲಾಗುವುದು (ಎಂದು ಮಲಕ್ಗಳು ಹೇಳುವರು).” [ಅಲ್-ಅನ್ಆಮ್:93]
“ಫಿರ್ಔನನ ಕುಟುಂಬದ ಬಗ್ಗೆ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: ನರಕಾಗ್ನಿ! ಬೆಳಿಗ್ಗೆ ಮತ್ತು ಸಂಜೆ ಅವರನ್ನು ಅದರ ಮುಂದೆ ಪ್ರದರ್ಶಿಸಲಾಗುವುದು. ಅಂತ್ಯಘಳಿಗೆಯು ಸಂಭವಿಸುವ ದಿನ, ಫಿರ್ಔನನ ಜನರನ್ನು ಅತಿಕಠಿಣವಾದ ಶಿಕ್ಷೆಗೆ ಪ್ರವೇಶ ಮಾಡಿಸಿರಿ (ಎಂದು ಆದೇಶಿಸಲಾಗುವುದು).” (ಗಾಫಿರ್:46].
﴿ٱلنَّارُ يُعۡرَضُونَ عَلَيۡهَا غُدُوّٗا وَعَشِيّٗاۚ وَيَوۡمَ تَقُومُ ٱلسَّاعَةُ أَدۡخِلُوٓاْ ءَالَ فِرۡعَوۡنَ أَشَدَّ ٱلۡعَذَابِ 46﴾
"ನರಕಾಗ್ನಿ! ಬೆಳಿಗ್ಗೆ ಮತ್ತು ಸಂಜೆ ಅವರನ್ನು ಅದರ ಮುಂದೆ ಪ್ರದರ್ಶಿಸಲಾಗುವುದು. ಅಂತ್ಯಘಳಿಗೆಯು ಸಂಭವಿಸುವ ದಿನ ‘ಫಿರ್ಔನನ ಜನರನ್ನು ಅತಿಕಠಿಣವಾದ ಶಿಕ್ಷೆಗೆ ಪ್ರವೇಶಮಾಡಿಸಿರಿ’ (ಎಂದು ಆದೇಶಿಸಲಾಗುವುದು)." [ಗಾಫಿರ್: 46]
ಸಹೀಹ್ ಮುಸ್ಲಿಮ್ನಲ್ಲಿ, ಝೈದ್ ಬಿನ್ ಸಾಬಿತ್ (رضي الله عنه)ರವರಿಂದ ವರದಿಯಾದ ಹದೀಸಿನಲ್ಲಿ ಹೀಗಿದೆ: ಪ್ರವಾದಿ (صلي الله عليه وسلم) ರವರು ಹೇಳಿದರು:
“ನೀವು ನಿಮ್ಮಲ್ಲಿ ಮೃತರಾದವರನ್ನು ಸಮಾಧಿ ಮಾಡಲಾರಿರಿ ಎಂಬ ಭಯ ನನಗಿಲ್ಲದಿರುತ್ತಿದ್ದರೆ, ನನಗೆ ಕೇಳಿಸುತ್ತಿರುವ ಸಮಾಧಿಯ ಶಿಕ್ಷೆಯನ್ನು ನಿಮಗೂ ಕೇಳಿಸುವಂತೆ ಮಾಡಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದೆ.” ನಂತರ ಪ್ರವಾದಿ صلي الله عليه وسلم ರವರು ನಮ್ಮ ಕಡೆಗೆ ಮುಖ ತಿರುಗಿಸಿ ಹೇಳಿದರು: “ನರಕದ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.” ಸಹಾಬಾಗಳು ಹೇಳಿದರು: “ನಾವು ನರಕದ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇವೆ.”
ಪ್ರವಾದಿ صلي الله عليه وسلم ರವರು ಹೇಳಿದರು: “ಸಮಾಧಿಯ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.” ಸಹಾಬಾಗಳು ಹೇಳಿದರು: “ನಾವು ಸಮಾಧಿಯ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇವೆ.” ಪ್ರವಾದಿ صلي الله عليه وسلم ರವರು ಹೇಳಿದರು: “ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ಎಲ್ಲಾ ಪರೀಕ್ಷೆಗಳಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.” ಸಹಾಬಾಗಳು ಹೇಳಿದರು: “ನಾವು ಪ್ರತ್ಯಕ್ಷವಾಗಿರುವ ಮತ್ತು ಪರೋಕ್ಷವಾಗಿರುವ ಎಲ್ಲಾ ಪರೀಕ್ಷೆಗಳಿಂದ ಅಲ್ಲಾಹನಲ್ಲಿ ಅಭಯ ಯಾಚಿಸುತ್ತೇವೆ.” ಪ್ರವಾದಿ صلي الله عليه وسلم ರವರು ಹೇಳಿದರು: “ದಜ್ಜಾಲ್ನ ಪರೀಕ್ಷೆಯಿಂದ ಅಲ್ಲಾಹನಲ್ಲಿ ಅಭಯ ಯಾಚಿಸಿರಿ.” ಸಹಾಬಾಗಳು ಹೇಳಿದರು: “ನಾವು ಅಲ್ಲಾಹನಲ್ಲಿ ದಜ್ಜಾಲ್ನ ಪರೀಕ್ಷೆಯಿಂದ ಅಭಯ ಯಾಚಿಸುತ್ತೇವೆ.”
«فَلَوْلَا أَنْ لَا تَدَافَنُوا لَدَعَوْتُ اللَّهَ أَنْ يُسْمِعَكُمْ مِنْ عَذَابِ الْقَبْرِ الَّذِي أَسْمَعُ مِنْهُ».
"ನೀವು ಒಬ್ಬರನ್ನೊಬ್ಬರು ಸಮಾಧಿ ಮಾಡುವುದನ್ನು ಬಿಟ್ಟುಬಿಡುತ್ತೀರಿ ಎಂದು ನಾನು ಭಯಪಡದಿರುತ್ತಿದ್ದರೆ ನನಗೆ ಕೇಳಿಸುತ್ತಿರುವ ಸಮಾಧಿಯ ಶಿಕ್ಷೆಯ ಭಯಾನಕತೆಯನ್ನು ನಿಮಗೂ ಕೇಳಿಸುವಂತೆ ಮಾಡಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದೆ." ನಂತರ ಅವನು ನಮ್ಮ ಕಡೆಗೆ ತಿರುಗಿ ಹೇಳಿದರು:
«تَعَوَّذُوا بِاللَّهِ مِنْ عَذَابِ النَّارِ».
"ನರಕದ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯವನ್ನು ಯಾಚಿಸಿರಿ." ಸಹಾಬಿಗಳು ಹೇಳಿದರು: "ನಾವು ನರಕದ ಶಿಕ್ಷೆಯಿಂದ ಅಲ್ಲಾಹನ ಅಭಯವನ್ನು ಬೇಡುತ್ತೇವೆ." ನಂತರ ಅವರು ಹೇಳಿದರು:
«تَعَوَّذُوا بِاللَّهِ مِنْ عَذَابِ الْقَبْرِ».
"ಸಮಾಧಿಯ ಶಿಕ್ಷೆಯಿಂದ ಅಲ್ಲಾಹನ ಅಭಯವನ್ನು ಯಾಚಿಸಿರಿ." ಸಹಾಬಿಗಳು ಹೇಳಿದರು: "ನಾವು ಸಮಾಧಿಯ ಶಿಕ್ಷೆಯಿಂದ ಅಲ್ಲಾಹನಲ್ಲಿ ಅಭಯವನ್ನು ಯಾಚಿಸುತ್ತೇವೆ." ನಂತರ ಅವರು ಹೇಳಿದರು:
«تَعَوَّذُوا بِاللَّهِ مِنَ الْفِتَنِ، مَا ظَهَرَ مِنْهَا وَمَا بَطَنَ».
"ಪ್ರತ್ಯಕ್ಷ ಮತ್ತು ಪರೋಕ್ಷವಾದ ಎಲ್ಲಾ ಪರೀಕ್ಷೆಗಳಿಂದ ಅಲ್ಲಾಹನ ಅಭಯವನ್ನು ಯಾಚಿಸಿರಿ." ಸಹಾಬಿಗಳು ಹೇಳಿದರು: "ನಾವು ಪ್ರತ್ಯಕ್ಷ ಮತ್ತು ಪರೋಕ್ಷವಾದ ಎಲ್ಲಾ ಪರೀಕ್ಷೆಗಳಿಂದ ಅಲ್ಲಾಹನಲ್ಲಿ ಅಭಯವನ್ನು ಯಾಚಿಸುತ್ತೇವೆ." ನಂತರ ಅವರು ಹೇಳಿದರು:
«تَعَوَّذُوا بِاللَّهِ مِنْ فِتْنَةِ الدَّجَّالِ».
"ದಜ್ಜಾಲನ ಪರೀಕ್ಷೆಯಿಂದ ಅಲ್ಲಾಹನ ಅಭಯವನ್ನು ಯಾಚಿಸಿರಿ." ಸಹಾಬಿಗಳು ಹೇಳಿದರು: "ನಾವು ದಜ್ಜಾಲನ ಪರೀಕ್ಷೆಯಿಂದ ಅಲ್ಲಾಹನ ಅಭಯವನ್ನು ಯಾಚಿಸುತ್ತೇವೆ."17
ಸಮಾಧಿಯ ರಕ್ಷೆ: ಸತ್ಯಸಂಧ ಸತ್ಯವಿಶ್ವಾಸಿಗಳಿಗೆ ಸಮಾಧಿಯಲ್ಲಿ ರಕ್ಷೆಯಿದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ನಮ್ಮ ಪ್ರಭು ಅಲ್ಲಾಹು ಎಂದು ಹೇಳಿ, ತರುವಾಯ ಅದರಲ್ಲಿ ಅಚಲರಾಗಿ ನಿಂತವರಾರೋ ಅವರ ಬಳಿಗೆ ಮಲಕ್ಗಳು ಇಳಿದು ಬಂದು ಹೇಳುವರು: ನೀವು ಭಯಪಡದಿರಿ ಮತ್ತು ದುಃಖಿಸದಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಬಗ್ಗೆ ನೀವು ಸಂತುಷ್ಟರಾಗಿರಿ.” [ಫುಸ್ಸಿಲತ್:30]
﴿إِنَّ ٱلَّذِينَ قَالُواْ رَبُّنَا ٱللَّهُ ثُمَّ ٱسۡتَقَٰمُواْ تَتَنَزَّلُ عَلَيۡهِمُ ٱلۡمَلَٰٓئِكَةُ أَلَّا تَخَافُواْ وَلَا تَحۡزَنُواْ وَأَبۡشِرُواْ بِٱلۡجَنَّةِ ٱلَّتِي كُنتُمۡ تُوعَدُونَ 30﴾
"ನಮ್ಮ ಪಾಲಕ ಪ್ರಭು 'ಅಲ್ಲಾಹು’ ಎಂದು ಹೇಳಿ, ತರುವಾಯ ಅದರಲ್ಲಿ ಅಚಲರಾಗಿ ನಿಂತವರಾರೋ ಅವರ ಬಳಿಗೆ ಮಲಕ್ಗಳು ಇಳಿದು ಬಂದು ಹೇಳುವರು: ‘ನೀವು ಭಯಪಡದಿರಿ ಮತ್ತು ದುಃಖಿಸದಿರಿ. ನಿಮಗೆ ವಾಗ್ದಾನ ಮಾಡಲಾಗಿರುವ ಸ್ವರ್ಗದ ಬಗ್ಗೆ ನೀವು ಸಂತುಷ್ಟರಾಗಿರಿ." [ಫುಸ್ಸಿಲತ್: 30]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಆದರೆ ಅದು (ಪ್ರಾಣ) ಗಂಟಲಿಗೆ ತಲುಪುವಾಗ (ಅದನ್ನು ತಡೆದು ನಿಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ) ಏಕೆ? ಆ ಸಮಯದಲ್ಲಿ ನೀವು ನೋಡುತ್ತಲೇ ಇರುವಿರಿ! ಆ ವ್ಯಕ್ತಿಯ ಪಾಲಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿರುವವರು ನಾವಾಗಿರುವೆವು. ಆದರೆ ನೀವು ಕಂಡು ತಿಳಿಯುವುದಿಲ್ಲ. ನೀವು (ಅಲ್ಲಾಹನ ನಿಯಮಕ್ಕೆ) ವಿಧೇಯರಲ್ಲದವರಾದರೆ ಅದನ್ನು (ಪ್ರಾಣವನ್ನು) ಮರಳಿ ಪಡೆಯಲು ನಿಮಗೇಕೆ ಸಾಧ್ಯವಾಗುತ್ತಿಲ್ಲ; ನೀವು ಸತ್ಯಸಂಧರಾಗಿದ್ದರೆ. ಅವನು (ಮೃತಪಟ್ಟವನು) ಸಾಮೀಪ್ಯ ಗಳಿಸಿದವರಲ್ಲಿ ಸೇರಿದವನಾಗಿದ್ದರೆ.(ಅವನಿಗೆ) ಸಾಂತ್ವನವೂ, ವಿಶಿಷ್ಟವಾದ ಅನ್ನಾಧಾರವೂ ಸುಖಾನುಭೂತಿಯ ಸ್ವರ್ಗೋದ್ಯಾನವೂ ಇರುವುದು.” [ಅಲ್-ವಾಕಿಅ:83-89].
﴿فَلَوۡلَآ إِذَا بَلَغَتِ ٱلۡحُلۡقُومَ 83 وَأَنتُمۡ حِينَئِذٖ تَنظُرُونَ 84 وَنَحۡنُ أَقۡرَبُ إِلَيۡهِ مِنكُمۡ وَلَٰكِن لَّا تُبۡصِرُونَ 85 فَلَوۡلَآ إِن كُنتُمۡ غَيۡرَ مَدِينِينَ 86 تَرۡجِعُونَهَآ إِن كُنتُمۡ صَٰدِقِينَ87 فَأَمَّآ إِن كَانَ مِنَ ٱلۡمُقَرَّبِينَ 88 فَرَوۡحٞ وَرَيۡحَانٞ وَجَنَّتُ نَعِيمٖ 89﴾
"ಆದರೆ ಅದು (ಪ್ರಾಣ) ಗಂಟಲಿಗೆ ತಲುಪುವಾಗ, ಆ ಸಮಯದಲ್ಲಿ ನೀವು ನೋಡುತ್ತಲೇ ಇರುವಿರಿ! ಆ ವ್ಯಕ್ತಿಯ ಪಾಲಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿರುವವರು ನಾವಾಗಿರುವೆವು. ಆದರೆ ನೀವು ಕಂಡು ತಿಳಿಯುವುದಿಲ್ಲ. ನೀವು ವಿಧೇಯರಲ್ಲ ದವರಾದರೆ ಅದನ್ನು (ಪ್ರಾಣವನ್ನು) ಮರಳಿ ಪಡೆಯಲು ನಿಮಗೇಕೆ ಸಾಧ್ಯವಾಗುತ್ತಿಲ್ಲ; ನೀವು ಸತ್ಯಸಂಧರಾಗಿದ್ದರೆ. ಅವನು (ಮೃತಪಟ್ಟವನು) ಸಾಮೀಪ್ಯಗಳಿಸಿದವರಲ್ಲಿ ಸೇರಿದವನಾಗಿದ್ದರೆ. ಸಾಂತ್ವನವೂ, ವಿಶಿಷ್ಟವಾದ ಅನ್ನಾಧಾರವೂ ಸುಖಾನುಭೂತಿಯ ಸ್ವರ್ಗೋದ್ಯಾನವೂ ಇರುವುದು." [ಅಲ್-ವಾಖಿಅ: 83-89]
ಬರಾ ಬಿನ್ ಆಝಿಬ್ رضي الله عنه ರಿಂದ ವರದಿ. ಸತ್ಯವಿಶ್ವಾಸಿಯ ಕುರಿತು ಪ್ರವಾದಿ (صلي الله عليه وسلم) ರವರು ಹೇಳಿದರು: ಅವನು ತನ್ನ ಸಮಾಧಿಯಲ್ಲಿ ಮಲಕ್ಗಳ ಪ್ರಶ್ನೆಗಳಿಗೆ ಉತ್ತರಿಸಿದಾಗ, ಆಕಾಶದಿಂದ ಒಬ್ಬ ಕೂಗುವವನು ಕೂಗಿ ಹೇಳುವನು: ನನ್ನ ದಾಸ ಸತ್ಯ ನುಡಿದಿದ್ದಾನೆ. ಅವನಿಗೆ ಸ್ವರ್ಗದ ಹಾಸಿಗೆಯನ್ನು ಹಾಸಿರಿ, ಸ್ವರ್ಗದ ಬಟ್ಟೆಗಳನ್ನು ತೊಡಿಸಿರಿ ಮತ್ತು ಅವನಿಗೆ ಸ್ವರ್ಗದ ಬಾಗಿಲನ್ನು ತೆರೆಯಿರಿ. ಅದರಿಂದ ಸ್ವರ್ಗದ ಗಾಳಿ ಮತ್ತು ಸುಗಂಧವು ಅವನ ಬಳಿಗೆ ಬರುತ್ತದೆ. ಅವನ ದೃಷ್ಟಿಯು ಮುಟ್ಟುವಷ್ಟು ದೂರ ಅವನಿಗೆ ಸಮಾಧಿಯನ್ನು ವಿಶಾಲಗೊಳಿಸಲಾಗುವುದು. ಅಹ್ಮದ್ ಮತ್ತು ಅಬೂ ದಾವೂದ್ ಒಂದು ದೀರ್ಘ ಹದೀಸ್ನಲ್ಲಿ ಇದನ್ನು ವರದಿ ಮಾಡಿದ್ದಾರೆ.
«يُنَادِي مُنَادٍ مِنَ السَّمَاءِ: أَنْ صَدَقَ عَبْدِي، فَافْرِشُوهُ مِنَ الْجَنَّةِ، وَأَلْبِسُوهُ مِنَ الْجَنَّةِ، وَافْتَحُوا لَهُ بَابًا إِلَى الْجَنَّةِ، قَالَ: فَيَأْتِيهِ مِنْ رَوْحِهَا وَطِيبِهَا، وَيُفْسَحُ لَهُ فِي قَبْرِهِ مَدَّ بَصَرِهِ».
"ಆಕಾಶದಿಂದ ಒಬ್ಬ ಕೂಗುವವನು ಕೂಗಿ ಹೇಳುವನು: ನನ್ನ ದಾಸ ಸತ್ಯ ನುಡಿದಿದ್ದಾನೆ. ಅವನಿಗೆ ಸ್ವರ್ಗದ ಹಾಸಿಗೆಯನ್ನು ಹಾಸಿರಿ, ಸ್ವರ್ಗದ ಬಟ್ಟೆಗಳನ್ನು ತೊಡಿಸಿರಿ ಮತ್ತು ಅವನಿಗೆ ಸ್ವರ್ಗದ ಬಾಗಿಲನ್ನು ತೆರೆಯಿರಿ. ಅವರು ಹೇಳಿದರು: ಅದರಿಂದ ಸ್ವರ್ಗದ ಗಾಳಿ ಮತ್ತು ಸುಗಂಧವು ಅವನ ಬಳಿಗೆ ಬರುತ್ತದೆ. ಅವನ ದೃಷ್ಟಿಯು ತಲುಪುವಷ್ಟು ದೂರ ಅವನಿಗೆ ಸಮಾಧಿಯನ್ನು ವಿಶಾಲಗೊಳಿಸಲಾಗುವುದು." ಈ ಹದೀಸನ್ನು ಅಬೂ ದಾವೂದ್ ಒಂದು ದೀರ್ಘವಾದ ಹದೀಸಿನಲ್ಲಿ ವರದಿ ಮಾಡಿದ್ದಾರೆ.18
ದುರ್ಮಾರ್ಗಿಗಳ ಒಂದು ಗುಂಪು ಪ್ರಥಭ್ರಷ್ಟಗೊಂಡು, ಸಮಾಧಿಯ ಶಿಕ್ಷೆ ಮತ್ತು ರಕ್ಷೆಯನ್ನು ನಿಷೇಧಿಸಿದರು. ಇದು ವಾಸ್ತವಿಕತೆಗೆ ವಿರುದ್ಧವಾದ ಕಾರಣ ಇದು ಸಂಭವಿಸುವುದು ಅಸಾಧ್ಯವಾಗಿದೆ ಎಂದು ಅವರು ವಾದಿಸಿದರು. ಅವರು ಹೇಳುತ್ತಾರೆ: ಸಮಾಧಿಯನ್ನು ತೆರೆದು ನೋಡಿದರೆ, ಮೃತದೇಹವು ಸಮಾಧಿ ಮಾಡಿದ ಅದೇ ಸ್ಥಿತಿಯಲ್ಲಿ ಕಂಡುಬರುತ್ತದೆ. ಸಮಾಧಿ ವಿಶಾಲವಾಗಲೂ ಇಲ್ಲ, ಇಕ್ಕಟ್ಟಾಗಲೂ ಇಲ್ಲ.
ಆದರೆ ಈ ವಾದವು ಧರ್ಮಶಾಸ್ತ್ರ, ಇಂದ್ರಿಯ ಮತ್ತು ಬುದ್ಧಿಯ ಪ್ರಕಾರ ನಿರಾಧಾರವಾಗಿದೆ:
ಧರ್ಮಶಾಸ್ತ್ರದ ಪ್ರಕಾರ ನಿರಾಧಾರ ಹೇಗೆಂದರೆ, ಸಮಾಧಿಯ ಶಿಕ್ಷೆ ಮತ್ತು ರಕ್ಷೆಯನ್ನು ಸಾಬೀತುಪಡಿಸುವ ಪುರಾವೆಗಳನ್ನು ಈಗಾಗಲೇ ಉಲ್ಲೇಖಿಸಲಾಗಿದೆ.
ಸಹೀಹ್ ಬುಖಾರಿಯಲ್ಲಿ ಅಬ್ದುಲ್ಲಾ ಇಬ್ನು ಅಬ್ಬಾಸ್ رضي الله عنهما ರವರಿಂದ ವರದಿಯಾದ ಹದೀಸಿನಲ್ಲಿ ಹೀಗಿದೆ: ಒಮ್ಮೆ ಪ್ರವಾದಿ صلي الله عليه وسلم ರವರು ಮದೀನಾದ ತೋಟವೊಂದರಿಂದ ಹೊರಬಂದರು ಅಲ್ಲಿ ಇಬ್ಬರು ವ್ಯಕ್ತಿಗಳ ಕೂಗು ಕೇಳಿಸಿತು. ಅವರಿಗೆ ಗೋರಿಯಲ್ಲಿ ಶಿಕ್ಷೆ ನೀಡಲಾಗುತ್ತಿತ್ತು. ನಂತರ ಅವರು ಸಂಪೂರ್ಣ ಹದೀಸನ್ನು ಉಲ್ಲೇಖಿಸಿದರು. ಅದರಲ್ಲಿ ಹೀಗಿತ್ತು: ಅವರಲ್ಲಿ ಒಬ್ಬನು ಮೂತ್ರ ವಿಸರ್ಜನೆಯ ಬಳಿಕ ಸರಿಯಾಗಿ ಶುಚಿಗೊಳಿಸುತ್ತಿರಲಿಲ್ಲ. ಇನ್ನೊಬ್ಬನು ಚಾಡಿ ಹೇಳುತ್ತಾ ನಡೆಯುವವನಾಗಿದ್ದನು. ಮುಸ್ಲಿಂರ ವರದಿಯಲ್ಲಿ "ಮೂತ್ರ ವಿಸರ್ಜನೆ ಮಾಡಿ ಶುದ್ಧಿ ಮಾಡುತ್ತಿರಲಿಲ್ಲ” ಎಂದಿದೆ.
«أَنَّ أَحَدَهُمَا كَانَ لَا يَسْتَتِرُ مِنَ الْبَوْلِ».
"ಇವರಲ್ಲೊಬ್ಬನು ಮೂತ್ರದ ಮಾಲಿನ್ಯದಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿರಲಿಲ್ಲ." ಇನ್ನೊಂದು ವರದಿಯಲ್ಲಿ ಹೀಗಿದೆ:
«مِنْ بَوْلِهِ»
"ತನ್ನ ಮೂತ್ರದಿಂದ."
«وَأَنَّ الْآخَرَ كَانَ يَمْشِي بِالنَّمِيمَةِ».
"ಇನ್ನೊಬ್ಬನು ಚಾಡಿ ಮಾತುಗಳೊಂದಿಗೆ ನಡೆದಾಡುತ್ತಿದ್ದ." ಮುಸ್ಲಿಮ್ ರ ವರದಿಯಲ್ಲಿ ಹೀಗಿದೆ:
«لَا يَسْتَنْزِهُ مِنَ الْبَوْلِ».
"ಮೂತ್ರದಿಂದ ರಕ್ಷಿಸಿಕೊಳ್ಳಲು ಕಾಳಜಿ ವಹಿಸುತ್ತಿರಲಿಲ್ಲ."19
ಇಂದ್ರಿಯ ಜ್ಞಾನದ ಪ್ರಕಾರ ನಿರಾಧಾರ ಹೇಗೆಂದರೆ ನಿದ್ದೆಯಲ್ಲಿರುವ ಒಬ್ಬ ವ್ಯಕ್ತಿ ತಾನು ವಿಶಾಲವಾದ, ಆಹ್ಲಾದಕರವಾದ, ಸುಖ ಅನುಭವಿಸುವ ಸ್ಥಳದಲ್ಲಿರುವುದಾಗಿ ಅಥವಾ ತಾನು ಇಕ್ಕಟ್ಟಾದ, ಏಕಾಂತ, ನೋವು ಅನುಭವಿಸುವ ಸ್ಥಳದಲ್ಲಿರುವುದಾಗಿ ಕನಸು ಕಾಣುತ್ತಾನೆ. ಕೆಲವೊಮ್ಮೆ ತನ್ನ ಕನಸಿನಿಂದ ಎಚ್ಚರಗೊಂಡು ಎದ್ದೇಳುತ್ತಾನೆ. ಆದರೂ ಅವನು ತನ್ನ ಕೋಣೆಯಲ್ಲಿ, ತನ್ನ ಹಾಸಿಗೆಯಲ್ಲಿ, ತಾನು ಮಲಗಿದ ಸ್ಥಿತಿಯಲ್ಲೇ ಇರುತ್ತಾನೆ. ನಿದ್ರೆಯು ಸಾವಿನ ಸಹೋದರ. ಆದುದರಿಂದಲೇ ಅಲ್ಲಾಹನು ನಿದ್ದೆಯನ್ನು ಮರಣ ಎಂದು ಕರೆದಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿ٱللَّهُ يَتَوَفَّى ٱلۡأَنفُسَ حِينَ مَوۡتِهَا وَٱلَّتِي لَمۡ تَمُتۡ فِي مَنَامِهَاۖ فَيُمۡسِكُ ٱلَّتِي قَضَىٰ عَلَيۡهَا ٱلۡمَوۡتَ وَيُرۡسِلُ ٱلۡأُخۡرَىٰٓ إِلَىٰٓ أَجَلٖ مُّسَمًّى...﴾
“ಅಲ್ಲಾಹು ಆತ್ಮಗಳನ್ನು ಅವುಗಳ ಮರಣ ವೇಳೆಯಲ್ಲಿ ಪೂರ್ಣವಾಗಿ ವಹಿಸಿಕೊಳ್ಳುವನು. ಮೃತಪಡದವುಗಳನ್ನು (ಮರಣವನ್ನು ವಿಧಿಸಲ್ಪಡದವುಗಳನ್ನು) ಅವುಗಳ ನಿದ್ರಾವೇಳೆಯಲ್ಲಿ (ವಹಿಸಿಕೊಳ್ಳುವನು). ತರುವಾಯ ಯಾವೆಲ್ಲ ಆತ್ಮಗಳ ಮೇಲೆ ಅವನು ಮರಣವನ್ನು ವಿಧಿಸಿರುವನೋ ಅವುಗಳನ್ನು ಅವನು ಹಿಡಿದಿಟ್ಟುಕೊಳ್ಳುವನು. ಉಳಿದವುಗಳನ್ನು ಒಂದು ನಿಶ್ಚಿತ ಅವಧಿಯವರೆಗೆ ಅವನು ಬಿಟ್ಟುಬಿಡುವನು.”
[ಅಝ್ಝುಮರ್: 42]
ಬುದ್ಧಿಯ ಪ್ರಕಾರ ನಿರಾಧಾರವಾಗಿರುವುದು ಹೇಗೆಂದರೆ: ನಿದ್ದೆ ಮಾಡುವವನು ಕೆಲವೊಮ್ಮೆ ತನ್ನ ಕನಸಿನಲ್ಲಿ ವಾಸ್ತವಿಕತೆಗೆ ಅನುಗುಣವಾಗಿರುವ ಕನಸನ್ನು ಕಾಣುತ್ತಾನೆ. ಕೆಲವೊಮ್ಮೆ ಅವನು ಪ್ರವಾದಿ صلي الله عليه وسلم ರನ್ನು ಅವರ ನಿಜರೂಪದಲ್ಲಿ ನೋಡುತ್ತಾನೆ. ಯಾರು ಪ್ರವಾದಿಯವರನ್ನು ಅವರ ನಿಜರೂಪದಲ್ಲಿ ನೋಡುತ್ತಾನೋ ಅವನು ನಿಜವಾಗಿಯೂ ಪ್ರವಾದಿಯವರನ್ನೇ ನೋಡಿದನು. ಆದರೆ ವಾಸ್ತವಿಕವಾಗಿ, ಅವನು ತನ್ನ ಕೋಣೆಯಲ್ಲಿ ತನ್ನ ಹಾಸಿಗೆಯಲ್ಲಿ, ತಾನು ನೋಡುವದರಿಂದ ಬಹುದೂರ ಮಲಗಿರುತ್ತಾನೆ. ಲೌಕಿಕ ಜೀವನದಲ್ಲಿ ಇವೆಲ್ಲವೂ ಸಾಧ್ಯವಾದರೆ, ಪರಲೋಕ ಜೀವನದಲ್ಲಿ ಇದು ಸಾಧ್ಯವಾಗಲಾರದೇ?
ಸಮಾಧಿಯನ್ನು ತೆರೆದು ನೋಡಿದರೆ, ಮೃತದೇಹವು ಸಮಾಧಿ ಮಾಡಿದ ಅದೇ ಸ್ಥಿತಿಯಲ್ಲಿ ಕಂಡುಬರುತ್ತದೆ. ಸಮಾಧಿ ವಿಶಾಲವಾಗಲೂ ಇಲ್ಲ, ಇಕ್ಕಟ್ಟಾಗಲೂ ಇಲ್ಲ ಎಂದು ಅವರು ಅವಲಂಬಿಸುತ್ತಿರುವ ಅವರ ವಾದಕ್ಕೆ ಹಲವಾರು ವಿಧಗಳಲ್ಲಿ ಉತ್ತರಿಸಬಹುದು:
ಮೊದಲನೆಯದು: ವಿರೋಧಿಸುವವನು ಸರಿಯಾಗಿ ಚಿಂತಿಸಿದರೆ, ತನ್ನ ಸಂಶಯಕ್ಕೆ ಯಾವುದೇ ಆಧಾರವಿಲ್ಲವೆಂದು ಮನಗಾಣುವ ಇಂತಹ ಅಸಂಬದ್ಧ ಸಂಶಯಗಳ ಮೂಲಕ ಶರಿಯತ್ತಿನಲ್ಲಿರುವ ವಿಷಯಗಳನ್ನು ವಿರೋಧಿಸಬಾರದು. ಒಬ್ಬ ಕವಿ ಹೇಳುತ್ತಾರೆ:
ಎಷ್ಟೋ ಜನರು ಅಧಿಕೃತ ಅಭಿಪ್ರಾಯಗಳಲ್ಲಿ ದೋಷಗಳಿವೆ ಎನ್ನುತ್ತಾರೆ
ಆದರೆ ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಅವರ ದುರಂತಕ್ಕೆ ಕಾರಣವಾಗಿದೆ
ಎರಡನೆಯದು: ಬರ್ಜಕ್ (ಮರಣಾ ನಂತರದಿಂದ ಪ್ರಳಯ ಕಾಲದವರೆಗಿನ ಕಾಲಾವಧಿ) ನ ಜೀವನವು ಅಗೋಚರ ವಿಷಯಗಳಿಗೆ ಸಂಬಂಧಿಸಿದ್ದಾಗಿದ್ದು, ಅವುಗಳನ್ನು ಇಂದ್ರಿಯಗಳ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಂದ್ರಿಯಗಳ ಮೂಲಕ ಅವುಗಳನ್ನು ತಿಳಿಯಲು ಸಾಧ್ಯವಾಗಿರುತ್ತಿದ್ದರೆ, ಪರೋಕ್ಷದ ಮೇಲೆ ವಿಶ್ವಾಸವಿರಿಸುವುದಕ್ಕೆ ಯಾವುದೇ ಅರ್ಥವಿರುತ್ತಿರಲಿಲ್ಲ. ಅಗೋಚರ ವಿಷಯಗಳಲ್ಲಿ ವಿಶ್ವಾಸವಿರಿಸುವವರು ಮತ್ತು ಅವುಗಳ ಮೇಲೆ ವಿಶ್ವಾಸವಿರಿಸಲು ನಿರಾಕರಿಸುವವರ ನಡುವೆ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ.
ಮೂರನೆಯದು: ಸಮಾಧಿಯ ಶಿಕ್ಷೆ, ರಕ್ಷೆ, ಸಮಾಧಿ ವಿಶಾಲವಾಗುವುದು, ಇಕ್ಕಟ್ಟಾಗುವುದು ಮುಂತಾದವುಗಳನ್ನು ಸಮಾಧಿಯಲ್ಲಿರುವ ವ್ಯಕ್ತಿ ಮಾತ್ರ ಅನುಭವಿಸುತ್ತಾನೆ. ನಿದ್ದೆಯಲ್ಲಿರುವ ವ್ಯಕ್ತಿ ತಾನು ಇಕ್ಕಟ್ಟಾದ, ಏಕಾಂತ, ಸ್ಥಳದಲ್ಲಿರುವುದಾಗಿ ಅಥವಾ ವಿಶಾಲವಾದ, ಆಹ್ಲಾದಕರವಾದ ಸ್ಥಳದಲ್ಲಿರುವುದಾಗಿ ಕನಸು ಕಾಣುವಂತೆ. ಅವನ ಸುತ್ತಮುತ್ತಲಿರುವವರು ಅದನ್ನು ಕಾಣುವುದೂ ಇಲ್ಲ, ಅನುಭವಿಸುವುದೂ ಇಲ್ಲ. ಪ್ರವಾದಿ (صلي الله عليه وسلم)ರು ತಮ್ಮ ಸಹಚರರ ನಡುವೆ ಇರುವಾಗ ಅವರಿಗೆ ದಿವ್ಯವಾಣಿ ಅವತೀರ್ಣವಾಗುತ್ತಿತ್ತು. ಅವರು ದಿವ್ಯವಾಣಿಯನ್ನು ಕೇಳುತ್ತಿದ್ದರು. ಆದರೆ ಅವರ ಸಹಚರರು (رضي الله عنهم) ಆ ದಿವ್ಯವಾಣಿಯನ್ನು ಕೇಳುತ್ತಿರಲಿಲ್ಲ. ಕೆಲವೊಮ್ಮೆ ಒಬ್ಬ ಮಲಕ್ (ದೇವದೂತನು) ಮಾನವ ರೂಪದಲ್ಲಿ ಬಂದು ಅವರೊಂದಿಗೆ ಮಾತನಾಡುತ್ತಿದ್ದನು. ಆದರೆ ಅವರ ಸಹಚರರು ಈ ಮಲಕ್ನನ್ನು ನೋಡುತ್ತಿರಲಿಲ್ಲ ಮತ್ತು ಅವನ ಮಾತುಗಳನ್ನೂ ಕೇಳುತ್ತಿರಲಿಲ್ಲ.
ನಾಲ್ಕನೆಯದು: ಸೃಷ್ಟಿಗಳ ಗ್ರಹಣಶಕ್ತಿಯು ಅಲ್ಲಾಹನು ಅವರಿಗೆ ಕೊಟ್ಟಿರುವುದಕ್ಕೆ ಮಾತ್ರ ಸೀಮಿತವಾಗಿದೆ, ಅವರಿಗೆ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಏಳು ಆಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವ ಎಲ್ಲವೂ ನಿಜವಾದ ರೀತಿಯಲ್ಲಿ ಅಲ್ಲಾಹನನ್ನು ಸ್ತುತಿಸುತ್ತಿವೆ. ಅಲ್ಲಾಹನು ಕೆಲವೊಮ್ಮೆ ತನ್ನ ಸೃಷ್ಟಿಗಳಲ್ಲಿ ಅವನು ಬಯಸಿದವರಿಗೆ ಅದನ್ನು ಕೇಳಿಸುತ್ತಾನೆ. ಆದರೂ ಇವೆಲ್ಲವೂ ನಮ್ಮ ಕಣ್ಣುಗಳಿಂದ ಮರೆಯಾಗಿವೆ. ಇದೇ ಮಾತನ್ನು ಸರ್ವಶಕ್ತನಾದ ಅಲ್ಲಾಹನು ಹೀಗೆ ಹೇಳುತ್ತಾನೆ:
﴿تُسَبِّحُ لَهُ ٱلسَّمَٰوَٰتُ ٱلسَّبۡعُ وَٱلۡأَرۡضُ وَمَن فِيهِنَّۚ وَإِن مِّن شَيۡءٍ إِلَّا يُسَبِّحُ بِحَمۡدِهِۦ وَلَٰكِن لَّا تَفۡقَهُونَ تَسۡبِيحَهُمۡ...﴾
“ಏಳು ಆಕಾಶಗಳು, ಭೂಮಿ ಮತ್ತು ಅವುಗಳಲ್ಲಿರುವವರೆಲ್ಲರೂ ಅವನ ಪರಿಪಾವನತೆಯನ್ನು ಕೊಂಡಾಡುತ್ತಿರುವರು. ಅವನ ಸ್ತುತಿಯೊಂದಿಗೆ (ಅವನ) ಪರಿಪಾವನತೆಯನ್ನು ಕೊಂಡಾಡದಿರುವ ಯಾವುದೇ ವಸ್ತುವೂ ಇಲ್ಲ. ಆದರೆ ಅವರ ಸ್ತುತಿಕೀರ್ತನೆಗಳನ್ನು ನೀವು ಗ್ರಹಿಸಲಾರಿರಿ. ಖಂಡಿತವಾಗಿಯೂ ಅವನು ಸಹನಾಶೀಲನೂ, ಅತ್ಯಧಿಕ ಕ್ಷಮಿಸುವವನೂ ಆಗಿರುವನು.” [ಅಲ್ ಇಸ್ರಾ: 44] ಅದೇ ರೀತಿ ಶೈತಾನರು ಮತ್ತು ಜಿನ್ನ್ಗಳು ಭೂಮಿಯಲ್ಲಿ ಓಡಾಡುತ್ತಿದ್ದಾರೆ. ಜಿನ್ನ್ಗಳ ಒಂದು ಗುಂಪು ಅಲ್ಲಾಹನ ಸಂದೇಶವಾಹಕರ (صلي الله عليه وسلم) ಸಭೆಗೆ ಬಂದು ಅವರ ಕುರ್ಆನ್ ಪಠಣವನ್ನು ಕಿವಿಗೊಟ್ಟು ಆಲಿಸಿತು. ನಂತರ ಎಚ್ಚರಿಕೆ ನೀಡುವವರಾಗಿ ತಮ್ಮ ಸಮುದಾಯದ ಬಳಿಗೆ ಮರಳಿತು. ಇವೆಲ್ಲದರ ಹೊರತಾಗಿಯೂ ಅವರು ನಮ್ಮಿಂದ ಮರೆಯಾಗಿದ್ದಾರೆ. ಈ ವಿಷಯದ ಕುರಿತು ಸರ್ವಶಕ್ತನಾದ ಅಲ್ಲಾಹನು ಹೀಗೆ ಹೇಳುತ್ತಾನೆ:
﴿يَٰبَنِيٓ ءَادَمَ لَا يَفۡتِنَنَّكُمُ ٱلشَّيۡطَٰنُ كَمَآ أَخۡرَجَ أَبَوَيۡكُم مِّنَ ٱلۡجَنَّةِ يَنزِعُ عَنۡهُمَا لِبَاسَهُمَا لِيُرِيَهُمَا سَوۡءَٰتِهِمَآۚ إِنَّهُۥ يَرَىٰكُمۡ هُوَ وَقَبِيلُهُۥ مِنۡ حَيۡثُ لَا تَرَوۡنَهُمۡۗ إِنَّا جَعَلۡنَا ٱلشَّيَٰطِينَ أَوۡلِيَآءَ لِلَّذِينَ لَا يُؤۡمِنُونَ 27﴾
“ಓ ಆದಮ್ ಸಂತತಿಗಳೇ! ನಿಮ್ಮ ಮಾತಾಪಿತರನ್ನು, ಅವರಿಬ್ಬರ ಗುಹ್ಯಭಾಗಗಳನ್ನು ಅವರಿಗೆ ತೋರಿಸಿ ಕೊಡುವ ಸಲುವಾಗಿ ಅವನು ಅವರ ವಸ್ತ್ರವನ್ನು ಅವರಿಂದ ಕಳಚಿಹಾಕಿ ಆ ತೋಟದಿಂದ ಹೊರಗಟ್ಟಿದಂತೆ ಸೈತಾನನು ನಿಮ್ಮನ್ನೂ ಕ್ಷೋಭೆಗೊಳಪಡಿಸದಿರಲಿ. ಖಂಡಿತವಾಗಿಯೂ ನೀವು ಅವರನ್ನು ಕಾಣಲಾಗದಂತಹ ವಿಧದಲ್ಲಿ ಅವನು ಮತ್ತು ಅವನ ಪಂಗಡದವರು ನಿಮ್ಮನ್ನು ಕಾಣುತ್ತಿರುವರು. ಖಂಡಿತವಾಗಿಯೂ ವಿಶ್ವಾಸವಿಡದವರಿಗೆ ನಾವು ಸೈತಾನರನ್ನು ಮಿತ್ರರನ್ನಾಗಿ ಮಾಡಿರುವೆವು.” [ಅಲ್-ಅಅರಾಫ್: 27] ಆದ್ದರಿಂದ ಸೃಷ್ಟಿಗಳಿಗೆ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲದಿರುವಾಗ, ಅಗೋಚರ ಸಂಗತಿಗಳಲ್ಲಿ ಸಾಬೀತಾಗಿರುವ ಮತ್ತು ಅವರಿಗೆ ಗ್ರಹಿಸಲಿಕ್ಕೆ ಸಾಧ್ಯವಾಗದ ವಿಷಯಗಳನ್ನು ಅವರು ನಿರಾಕರಿಸುವುದು ಸರಿಯಲ್ಲ.
ವಿಧಿಯಲ್ಲಿ ವಿಶ್ವಾಸವಿಡುವುದು
ಕದರ್ ಅಂದರೆ ಅಲ್ಲಾಹನ ಶಾಶ್ವತ ಜ್ಞಾನ ಮತ್ತು ಅವನ ವಿವೇಕವು ಆವಶ್ಯಪಡುವುದಕ್ಕೆ ಅನುಗುಣವಾಗಿ ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳ ಬಗ್ಗೆ ಅವನ ಅಂದಾಜು ಮತ್ತು ನಿರ್ಣಯ.
ಕದ್ರ್ (ವಿಧಿ) ನಲ್ಲಿ ವಿಶ್ವಾಸವಿಡುವುದು ನಾಲ್ಕು ವಿಷಯಗಳನ್ನು ಒಳಗೊಂಡಿದೆ:
ಮೊದಲನೆಯದು: ಅಲ್ಲಾಹನಿಗೆ ಎಲ್ಲಾ ವಿಷಯಗಳ ಬಗ್ಗೆ ಸಂಕ್ಷಿಪ್ತವಾದ, ಸಮಗ್ರವಾದ ಮತ್ತು ಶಾಶ್ವತವಾದ ಜ್ಞಾನವಿದೆ. ಅದು ಅವನಿಗೆ ಅಥವಾ ಅವನ ದಾಸರಿಗೆ ಸಂಬಂಧಿಸಿದ ವಿಷಯಗಳಾಗಿದ್ದರೂ ಸಹ.
ಎರಡು: ಸರ್ವಶಕ್ತನಾದ ಅಲ್ಲಾಹು ಅದನ್ನು ಸುರಕ್ಷಿತ ಫಲಕ(ಲೌಹುಲ್ ಮಹ್ಫೂಝ್) ನಲ್ಲಿ ದಾಖಲಿಸಿದ್ದಾನೆ. ಈ ಎರಡು ವಿಷಯಗಳ ಬಗ್ಗೆ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
﴿أَلَمۡ تَعۡلَمۡ أَنَّ ٱللَّهَ يَعۡلَمُ مَا فِي ٱلسَّمَآءِ وَٱلۡأَرۡضِۚ إِنَّ ذَٰلِكَ فِي كِتَٰبٍۚ إِنَّ ذَٰلِكَ عَلَى ٱللَّهِ يَسِيرٞ 70﴾
“ಆಕಾಶದಲ್ಲಿ ಮತ್ತು ಭೂಮಿಯಲ್ಲಿರುವುದನ್ನು ಅಲ್ಲಾಹು ಅರಿಯುತ್ತಾನೆಂದು ತಮಗೆ ತಿಳಿದಿಲ್ಲವೇ? ಖಂಡಿತವಾಗಿಯೂ ಅದೊಂದು ದಾಖಲೆಯಲ್ಲಿದೆ. ಖಂಡಿತವಾಗಿಯೂ ಅದು ಅಲ್ಲಾಹನಿಗೆ ಸರಳವಾದ ವಿಷಯವಾಗಿದೆ.” [ಅಲ್-ಹಜ್:70]
ಸಹೀಹ್ ಮುಸ್ಲಿಮ್ನಲ್ಲಿರುವ ಹದೀಸ್ನಲ್ಲಿ ಅಬ್ದುಲ್ಲಾ ಇಬ್ನ್ ಅಮ್ರ್ ಇಬ್ನುಲ್ ಆಸ್ (رضي الله عنهما) ಹೇಳುತ್ತಾರೆ: “ಅಲ್ಲಾಹನ ಪ್ರವಾದಿ ﷺ ರವರು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: ಅಲ್ಲಾಹನು ಭೂಮಿ ಮತ್ತು ಆಕಾಶಗಳನ್ನು ಸೃಷ್ಟಿಸುವ ಐವತ್ತು ಸಾವಿರ ವರ್ಷಗಳ ಮುಂಚೆ ಸೃಷ್ಟಿಗಳ ವಿಧಿಯನ್ನು ಬರೆದಿದ್ದಾನೆ.”
«كَتَبَ اللَّهُ مَقَادِيرَ الْخَلَائِقِ قَبْلَ أَنْ يَخْلُقَ السَّمَوَاتِ وَالْأَرْضَ بِخَمْسِينَ أَلْفَ سَنَةٍ».
"ಅಲ್ಲಾಹು ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸುವುದಕ್ಕೆ ಐವತ್ತು ಸಾವಿರ ವರ್ಷಗಳ ಮುಂಚೆ ಎಲ್ಲಾ ಸೃಷ್ಟಿಗಳ ವಿಧಿ ನಿರ್ಣಯಗಳನ್ನು ದಾಖಲಿಸಿದ್ದಾನೆ."20
ಮೂರನೆಯದು: ಅಸ್ತಿತ್ವದಲ್ಲಿರುವ ಎಲ್ಲವೂ ಸರ್ವಶಕ್ತನಾದ ಅಲ್ಲಾಹನ ಇಚ್ಛೆಯಿಂದಲೇ ಅಸ್ತಿತ್ವದಲ್ಲಿವೆ ಎಂದು ವಿಶ್ವಾಸವಿರಿಸುವುದು. ಅದು ಅವನ ಕ್ರಿಯೆಗೆ ಸಂಬಂಧಿಸಿದ್ದಾಗಿದ್ದರೂ ಅಥವಾ ಸೃಷ್ಟಿಗಳ ಕ್ರಿಯೆಗಳಿಗೆ ಸಂಬಂಧಿಸಿದ್ದಾಗಿದ್ದರೂ ಸಹ. ತನ್ನ ಕ್ರಿಯೆಗಳಿಗೆ ಸಂಬಂಧಿಸಿದವುಗಳ ಕುರಿತು ಅಲ್ಲಾಹನು ಹೇಳುತ್ತಾನೆ:
﴿وَرَبُّكَ يَخۡلُقُ مَا يَشَآءُ وَيَخۡتَارُۗ...﴾
“ತಮ್ಮ ಪರಿಪಾಲಕನು (ಅಲ್ಲಾಹು) ಅವನಿಚ್ಛಿಸುವುದನ್ನು ಸೃಷ್ಟಿಸುವನು ಮತ್ತು (ಅವನಿಚ್ಚಿಸುವುದನ್ನು) ಆರಿಸುವನು.” [ಅಲ್-ಕ್ವಸಸ್:68] ಅಲ್ಲಾಹು ಹೇಳುತ್ತಾನೆ: “ಅಲ್ಲಾಹು ಅವನಿಚ್ಛಿಸಿದ್ದನ್ನು ಮಾಡುತ್ತಾನೆ.” [ಇಬ್ರಾಹೀಮ್:27]
﴿...وَيَفۡعَلُ ٱللَّهُ مَا يَشَآءُ﴾
"...ಅಲ್ಲಾಹು ಅವನಿಚ್ಛಿಸಿದ್ದನ್ನು ಮಾಡುವನು." [ಇಬ್ರಾಹೀಮ್: 27] ಅಲ್ಲಾಹು ಹೇಳುತ್ತಾನೆ: “ಗರ್ಭಾಶಯಗಳೊಳಗೆ ಅವನಿಚ್ಛಿಸುವ ವಿಧದಲ್ಲಿ ನಿಮಗೆ ರೂಪವನ್ನು ನೀಡುವವನು ಅವನೇ ಆಗಿರುವನು. ಅವನ ಹೊರತು ಅನ್ಯ ಆರಾಧ್ಯರಿಲ್ಲ.” [ಆಲು ಇಮ್ರಾನ್:6] ಸೃಷ್ಟಿಗಳ ಕ್ರಿಯೆಗಳಿಗೆ ಸಂಬಂಧಿಸಿದವುಗಳ ಕುರಿತು ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿هُوَ ٱلَّذِي يُصَوِّرُكُمۡ فِي ٱلۡأَرۡحَامِ كَيۡفَ يَشَآءُ...﴾
"ಗರ್ಭಾಶಯಗಳೊಳಗೆ ಅವನಿಚ್ಛಿಸುವ ವಿಧದಲ್ಲಿ ನಿಮಗೆ ರೂಪವನ್ನು ನೀಡುವವನು ಅವನೇ ಆಗಿರುವನು." [ಆಲಿ ಇಮ್ರಾನ್:6] ಸರ್ವಶಕ್ತನಾದ ಅಲ್ಲಾಹನು ಸೃಷ್ಟಿಗಳ ಕಾರ್ಯದ ಕುರಿತು ಹೇಳಿದನು:
﴿...وَلَوۡ شَآءَ ٱللَّهُ لَسَلَّطَهُمۡ عَلَيۡكُمۡ فَلَقَٰتَلُوكُمۡۚ...﴾
“ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ನಿಮ್ಮ ಮೇಲೆ ಅವರಿಗೆ ಅಧಿಕಾರವನ್ನು ನೀಡುತ್ತಿದ್ದನು ಮತ್ತು ಅವರು ನಿಮ್ಮ ವಿರುದ್ಧ ಯುದ್ಧವನ್ನೂ ಮಾಡುತ್ತಿದ್ದರು.” [ಅನ್ನಿಸಾ:90] [ಅನ್ನಿಸಾ: 90] ಅಲ್ಲಾಹು ಹೇಳುತ್ತಾನೆ: “ತಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸುತ್ತಿದ್ದರೆ ಅವರದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಹೆಣೆಯುತ್ತಿರುವ ವಿಷಯಗಳೊಂದಿಗೆ ಅವರನ್ನು ಬಿಟ್ಟು ಬಿಡಿರಿ.” [ಅಲ್-ಅನ್ಆಮ್:112]
﴿...وَلَوۡ شَآءَ رَبُّكَ مَا فَعَلُوهُۖ فَذَرۡهُمۡ وَمَا يَفۡتَرُون﴾
“ತಮ್ಮ ಪರಿಪಾಲಕನು ಇಚ್ಛಿಸುತ್ತಿದ್ದರೆ ಅವರದನ್ನು ಮಾಡುತ್ತಿರಲಿಲ್ಲ. ಆದ್ದರಿಂದ ಅವರು ಹೆಣೆಯುತ್ತಿರುವ ವಿಷಯಗಳೊಂದಿಗೆ ಅವರನ್ನು ಬಿಟ್ಟು ಬಿಡಿರಿ.” [ಅಲ್-ಅನ್ಆಮ್: 112]
ನಾಲ್ಕನೆಯದು: ಅಸ್ತಿತ್ವದಲ್ಲಿರುವ ಎಲ್ಲವೂ ಅವುಗಳ ಸಾರ, ಗುಣಲಕ್ಷಣಗಳು ಮತ್ತು ಅವುಗಳ ಚಲನವಲನಗಳು ಸೇರಿದಂತೆ ಸರ್ವಶಕ್ತನಾದ ಅಲ್ಲಾಹನ ಸೃಷ್ಟಿಗಳಾಗಿವೆ ಎಂದು ವಿಶ್ವಾಸವಿರಿಸುವುದು. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿ٱللَّهُ خَٰلِقُ كُلِّ شَيۡءٖۖ وَهُوَ عَلَىٰ كُلِّ شَيۡءٖ وَكِيلٞ 62﴾
“ಅಲ್ಲಾಹು ಎಲ್ಲ ವಸ್ತುಗಳ ಸೃಷ್ಟಿಕರ್ತನಾಗಿರುವನು. ಅವನು ಎಲ್ಲ ವಸ್ತುಗಳ ಮೇಲೂ ಕಾರ್ಯನಿರ್ವಾಹಕನಾಗಿರುವನು.” [ಅಝ್ಝುಮರ್: 62] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿ ಅದನ್ನು ಒಂದು ಸರಿಯಾದ ಕ್ರಮದಲ್ಲಿರಿಸಿದನು.” [ಅಲ್-ಫುರ್ಖಾನ್:2]
﴿...وَخَلَقَ كُلَّ شَيۡءٖ فَقَدَّرَهُۥ تَقۡدِيرٗا﴾
“ಮತ್ತು ಅವನು ಎಲ್ಲವನ್ನು ಸೃಷ್ಟಿಸಿ (ಅವುಗಳನ್ನು) ಅತ್ಯಂತ ನಿಖರವಾಗಿ ನಿರ್ಣಯಿಸಿದನು.” [ಅಲ್-ಫುರ್ಖಾನ್:2] ಪ್ರವಾದಿ ಇಬ್ರಾಹೀಮ್ (عليه الصلاة والسلام) ರವರು ತಮ್ಮ ಸಮುದಾಯದವರೊಡನೆ ಹೀಗೆ ಹೇಳಿದರೆಂದು ಅಲ್ಲಾಹು ಉಲ್ಲೇಖಿಸುತ್ತಾನೆ:
﴿وَٱللَّهُ خَلَقَكُمۡ وَمَا تَعۡمَلُونَ 96﴾
“ನಿಮ್ಮನ್ನು ಮತ್ತು ನೀವು ನಿರ್ಮಿಸುತ್ತಿರುವ ವಸ್ತುಗಳನ್ನು ಅಲ್ಲಾಹನು ಸೃಷ್ಟಿಸಿದ್ದಾನೆ.”
[ಅಸ್ಸಾಫ್ಫಾತ್: 96]
ನಾವು ಈಗಾಗಲೇ ಹೇಳಿದಂತೆ ವಿಧಿಯ ಮೇಲೆ ವಿಶ್ವಾಸವಿರಿಸುವುದು ದಾಸರಿಗೆ ತಮ್ಮ ಕೆಲಸ-ಕಾರ್ಯಗಳಲ್ಲಿ ಸ್ವಾತಂತ್ರ್ಯವಿರುವುದನ್ನು ಮತ್ತು ಅದನ್ನು ಮಾಡುವ ಸಾಮರ್ಥ್ಯವಿರುವುದನ್ನು ವಿರೋಧಿಸುವುದಿಲ್ಲ. ಏಕೆಂದರೆ ಮನುಷ್ಯನಿಗೆ ಅದು ಇದೆಯೆಂದು ಧರ್ಮಶಾಸ್ತ್ರ (ಶರಿಯತ್) ಮತ್ತು ನಿಜಜೀವನವು ಸೂಚಿಸುತ್ತವೆ.
ಧರ್ಮಶಾಸ್ತ್ರದ ಪುರಾವೆ: ಮನುಷ್ಯನ ಸ್ವತಂತ್ರ ಇಚ್ಛೆಯ ಬಗ್ಗೆ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...فَمَن شَآءَ ٱتَّخَذَ إِلَىٰ رَبِّهِۦ مَـَٔابًا﴾
“ಆದ್ದರಿಂದ ಯಾರಾದರೂ ಇಚ್ಛಿಸುವುದಾದರೆ ಅವನು ತನ್ನ ಪ್ರಭುವಿನೆಡೆಗಿರುವ ಮರಳುವಿಕೆಯ ಮಾರ್ಗವನ್ನು ಪಡೆದುಕೊಳ್ಳಲಿ.” [ಅನ್ನಬಅ್:39] [ಅನ್ನಬಅ್: 39] ಅಲ್ಲಾಹು ಹೇಳುತ್ತಾನೆ: “ಆದ್ದರಿಂದ ನೀವು ಇಚ್ಛಿಸುವ ರೀತಿಯಲ್ಲಿ ನೀವು ನಿಮ್ಮ ಹೊಲದೆಡೆಗೆ ತೆರಳಿರಿ.” [ಅಲ್-ಬಖರ:223]
﴿...فَأۡتُواْ حَرۡثَكُمۡ أَنَّىٰ شِئۡتُمۡۖ...﴾
"ಆದ್ದರಿಂದ ನೀವು ಇಚ್ಛಿಸುವ ರೀತಿಯಲ್ಲಿ ನೀವು ನಿಮ್ಮ ಹೊಲದೆಡೆಗೆ ತೆರಳಿರಿ." [ಅಲ್-ಬಖರ:223] ಮನುಷ್ಯ ಸಾಮರ್ಥ್ಯದ ಬಗ್ಗೆ ಅಲ್ಲಾಹು ಹೇಳುತ್ತಾನೆ: “ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹುವನ್ನು ಭಯಪಡಿರಿ. ಆಲಿಸಿರಿ, ಅನುಸರಿಸಿರಿ.” [ಅತ್ತಗಾಬುನ್:16]
﴿فَٱتَّقُواْ ٱللَّهَ مَا ٱسۡتَطَعۡتُمۡ وَٱسۡمَعُواْ وَأَطِيعُواْ...﴾
"ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹುವನ್ನು ಭಯಪಡಿರಿ. ಆಲಿಸಿರಿ, ಅನುಸರಿಸಿರಿ." [ಅತ್ತಗಾಬುನ್: 16] ಅಲ್ಲಾಹನು ಹೇಳುತ್ತಾನೆ: “ಅಲ್ಲಾಹು ಯಾರನ್ನೂ ಅವನ ಸಾಮರ್ಥ್ಯಕ್ಕೆ ಮೀರಿರುವುದನ್ನು ಮಾಡಲು ಬಲವಂತಪಡಿಸುವುದಿಲ್ಲ. ಅವನು ಸಂಪಾದಿಸಿರುವುದರ ಪ್ರತಿಫಲವು ಸ್ವತಃ ಅವನಿಗೇ ಆಗಿದೆ. ಅವನು ಸಂಪಾದಿಸಿರುವುದರ ದುಷ್ಫಲವು ಸ್ವತಃ ಅವನ ಮೇಲೆಯೇ ಆಗಿದೆ.” [ಅಲ್-ಬಖರ:286].
﴿لَا يُكَلِّفُ ٱللَّهُ نَفۡسًا إِلَّا وُسۡعَهَاۚ لَهَا مَا كَسَبَتۡ وَعَلَيۡهَا مَا ٱكۡتَسَبَتۡ...﴾
"ಅಲ್ಲಾಹು ಯಾರನ್ನೂ ಅವನ ಸಾಮರ್ಥ್ಯಕ್ಕೆ ಮೀರಿರುವುದನ್ನು ಮಾಡಲು ಬಲವಂತಪಡಿಸಲಾರನು. ಅವನು ಸಂಪಾದಿಸಿರುವುದರ ಪ್ರತಿಫಲವು ಸ್ವತಃ ಅವನಿಗೇ ಆಗಿದೆ. ಅವನು ಸಂಪಾದಿಸಿರುವುದರ ದುಷ್ಫಲವು ಸ್ವತಃ ಅವನ ಮೇಲೆಯೇ ಆಗಿದೆ."
[ಅಲ್-ಬಖರ:286]
ನಿಜಜೀವನದ ಬಗ್ಗೆ ಹೇಳುವುದಾದರೆ: ತನಗೆ ಇಚ್ಛೆ ಮತ್ತು ಸಾಮರ್ಥ್ಯವಿದೆಯೆಂದು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿದೆ. ಅವುಗಳನ್ನು ಬಳಸಿಯೇ ಅವನು ಕಾರ್ಯವೆಸಗುತ್ತಾನೆ ಮತ್ತು ಅವುಗಳನ್ನು ಬಳಸಿಯೇ ಅವನು ಕಾರ್ಯಗಳನ್ನು ತೊರೆಯುತ್ತಾನೆ. ನಡೆಯುವುದು ಮುಂತಾದ ತನ್ನ ಇಚ್ಛೆಯಿಂದ ಸಂಭವಿಸುವ ಕಾರ್ಯಗಳನ್ನು ಮತ್ತು ಎದೆಬಡಿತ ಮುಂತಾದ ತನ್ನ ಇಚ್ಛೆಯಿಂದಲ್ಲದೆ ಸಂಭವಿಸುವ ಕಾರ್ಯಗಳನ್ನು ಮನುಷ್ಯನು ಬೇರ್ಪಡಿಸಿ ತಿಳಿಯುತ್ತಾನೆ. ಆದರೆ ಮನುಷ್ಯನ ಇಚ್ಛೆ ಮತ್ತು ಸಾಮರ್ಥ್ಯವು ಅಲ್ಲಾಹನ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ಅನುಬಂಧಿತವಾಗಿಯೇ ಸಂಭವಿಸುತ್ತದೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿لِمَن شَآءَ مِنكُمۡ أَن يَسۡتَقِيمَ 28 وَمَا تَشَآءُونَ إِلَّآ أَن يَشَآءَ ٱللَّهُ رَبُّ ٱلۡعَٰلَمِينَ29﴾
“ನಿಮ್ಮ ಪೈಕಿ ನೇರವಾಗಿ ನೆಲೆಗೊಳ್ಳಲು ಇಚ್ಛಿಸುವವರಿಗೆ. ಸರ್ವಲೋಕಗಳ ಪ್ರಭುವಾದ ಅಲ್ಲಾಹು ಇಚ್ಛಿಸಿದ ಹೊರತು ನೀವು ಇಚ್ಛಿಸುವುದಿಲ್ಲ.”
[ಅತ್ತಕ್ವೀರ್: 28-29]
ಏಕೆಂದರೆ ಇಡೀ ಜಗತ್ತು ಸರ್ವಶಕ್ತನಾದ ಅಲ್ಲಾಹನ ಒಡೆತನಕ್ಕೆ ಸೇರಿದೆ. ಅವನ ಜ್ಞಾನ ಮತ್ತು ಇಚ್ಛೆಯಿಲ್ಲದೆ ಅವನ ಸಾಮ್ರಾಜ್ಯದಲ್ಲಿ ಏನೂ ಸಂಭವಿಸುವುದಿಲ್ಲ .
ನಾವು ಈಗಾಗಲೇ ಹೇಳಿದಂತೆ, ವಿಧಿಯ ಮೇಲೆ ವಿಶ್ವಾಸವಿರಿಸುವುದು ದಾಸನು ಕಡ್ಡಾಯ ಕಾರ್ಯಗಳನ್ನು ನಿರ್ವಹಿಸದಿರುವುದಕ್ಕೆ ಅಥವಾ ದುಷ್ಕರ್ಮವೆಸಗುವುದಕ್ಕೆ ಪುರಾವೆಯಲ್ಲ. ಇದನ್ನು ಪುರಾವೆಯಾಗಿ ತೋರಿಸುವುದು ಅಸಂಬದ್ಧವಾಗಿದೆ. ಏಕೆಂದರೆ:
ಮೊದಲನೆಯದು: ಅಲ್ಲಾಹನು ಹೇಳುತ್ತಾನೆ: “ಬಹುದೇವಾರಾಧಕರು ಹೇಳುತ್ತಾರೆ: ‘ಅಲ್ಲಾಹು ಇಚ್ಛಿಸುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಿಕರಾಗಲಿ ಅಲ್ಲಾಹುವಿನೊಂದಿಗೆ ಸಹಭಾಗಿತ್ವವನ್ನು ಮಾಡುತ್ತಿರಲಿಲ್ಲ ಮತ್ತು ನಾವು ಏನನ್ನೂ ನಿಷಿದ್ಧಗೊಳಿಸುತ್ತಿರಲಿಲ್ಲ. ಇದೇ ರೀತಿ ನಮ್ಮ ಶಿಕ್ಷೆಯನ್ನು ಆಸ್ವಾದಿಸುವ ತನಕ ಅವರ ಪೂರ್ವಿಕರೂ ನಿಷೇಧಿಸಿದ್ದರು. ಹೇಳಿರಿ: ನಿಮ್ಮ ಬಳಿ ಏನಾದರೂ ಅರಿವಿದೆಯೇ? ಇದ್ದರೆ ಅದನ್ನು ನಮಗೆ ಬಹಿರಂಗಪಡಿಸಿರಿ. ನೀವು ಊಹೆಯನ್ನಲ್ಲದೆ ಹಿಂಬಾಲಿಸುವುದಿಲ್ಲ. ನೀವು ಸುಳ್ಳನ್ನಲ್ಲದೆ ನುಡಿಯುವುದೂ ಇಲ್ಲ.” [ಅಲ್-ಅನ್ಆಮ್:148]
﴿سَيَقُولُ ٱلَّذِينَ أَشۡرَكُواْ لَوۡ شَآءَ ٱللَّهُ مَآ أَشۡرَكۡنَا وَلَآ ءَابَآؤُنَا وَلَا حَرَّمۡنَا مِن شَيۡءٖۚ كَذَٰلِكَ كَذَّبَ ٱلَّذِينَ مِن قَبۡلِهِمۡ حَتَّىٰ ذَاقُواْ بَأۡسَنَاۗ قُلۡ هَلۡ عِندَكُم مِّنۡ عِلۡمٖ فَتُخۡرِجُوهُ لَنَآۖ إِن تَتَّبِعُونَ إِلَّا ٱلظَّنَّ وَإِنۡ أَنتُمۡ إِلَّا تَخۡرُصُونَ 148﴾
"ಬಹುದೇವಾರಾಧಕರು ಹೇಳುವರು: ‘ಅಲ್ಲಾಹು ಇಚ್ಛಿಸುತ್ತಿದ್ದರೆ ನಾವಾಗಲಿ, ನಮ್ಮ ಪೂರ್ವಿಕರಾಗಲಿ ಅಲ್ಲಾಹುವಿನೊಂದಿಗೆ ಸಹಭಾಗಿತ್ವವನ್ನು ಮಾಡುತ್ತಿರಲಿಲ್ಲ ಮತ್ತು ನಾವು ಏನನ್ನೂ ನಿಷಿದ್ಧಗೊಳಿಸುತ್ತಿರಲಿಲ್ಲ.’ ಇದೇ ರೀತಿ ನಮ್ಮ ಶಿಕ್ಷೆಯನ್ನು ಆಸ್ವಾದಿಸುವ ತನಕ ಅವರ ಪೂರ್ವಿಕರೂ ನಿಷೇಧಿಸಿದ್ದರು. ಹೇಳಿರಿ: ‘ನಿಮ್ಮ ಬಳಿ ಏನಾದರೂ ಅರಿವಿದೆಯೇ? ಇದ್ದರೆ ಅದನ್ನು ನಮಗೆ ಬಹಿರಂಗಪಡಿಸಿರಿ. ನೀವು ಊಹೆಯನ್ನಲ್ಲದೆ ಹಿಂಬಾಲಿಸುವುದಿಲ್ಲ. ನೀವು ಸುಳ್ಳನ್ನಲ್ಲದೆ ನುಡಿಯುವುದೂ ಇಲ್ಲ." [ಅಲ್-ಅನ್ಆಮ್:148] ಒಂದು ವೇಳೆ ವಿಧಿ-ಬರಹದಿಂದಾಗಿ ಅವರಿಗೆ ಹೀಗೆ ಸಂಭವಿಸಿತು ಎಂಬ ಅವರ ವಾದವು ಸರಿಯಾಗಿರುತ್ತಿದ್ದರೆ ಅಲ್ಲಾಹು ಅವರನ್ನು ಶಿಕ್ಷಿಸುತ್ತಿರಲಿಲ್ಲ.
ಎರಡನೆಯದು: ಅಲ್ಲಾಹನು ಹೇಳುತ್ತಾನೆ: “ಶುಭವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರು. ಸಂದೇಶವಾಹಕರ ನಿಯೋಗಾನಂತರ ಅಲ್ಲಾಹುವಿಗೆ ವಿರುದ್ಧವಾಗಿ ಜನರಿಗೆ ಯಾವುದೇ ಪುರಾವೆಯೂ ಇಲ್ಲದಿರುವ ಸಲುವಾಗಿ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.”
[ಅನ್ನಿಸಾ:165]
﴿رُّسُلٗا مُّبَشِّرِينَ وَمُنذِرِينَ لِئَلَّا يَكُونَ لِلنَّاسِ عَلَى ٱللَّهِ حُجَّةُۢ بَعۡدَ ٱلرُّسُلِۚ وَكَانَ ٱللَّهُ عَزِيزًا حَكِيمٗا 165﴾
“ಶುಭವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರು. ಸಂದೇಶವಾಹಕರ ನಿಯೋಗದನಂತರ ಅಲ್ಲಾಹನಿಗೆ ವಿರುದ್ಧವಾಗಿ ಜನರಿಗೆ ಯಾವುದೇ ಪುರಾವೆಯೂ ಇಲ್ಲದಿರುವ ಸಲುವಾಗಿ. ಅಲ್ಲಾಹು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವನು.” [ಅನ್ನಿಸಾ:165]. ಪ್ರವಾದಿಗಳಿಗೆ ವಿರುದ್ಧವಾಗಿ ಚಲಿಸುವವರು ವಿಧಿ-ಬರಹವನ್ನು ಪುರಾವೆಯಾಗಿ ತೋರಿಸುವುದು ಒಪ್ಪಿಕೊಳ್ಳತಕ್ಕದ್ದಾಗಿದ್ದರೆ ಪ್ರವಾದಿಗಳನ್ನು ಕಳುಹಿಸುವ ಅಗತ್ಯವಿರಲಿಲ್ಲ. ಏಕೆಂದರೆ ಪ್ರವಾದಿಗಳನ್ನು ಕಳುಹಿಸಿದ ಬಳಿಕವೂ ಅಲ್ಲಾಹನ ವಿಧಿಯಂತೆ ಆ ವಿರೋಧವು ಸಂಭವಿಸುವ ಸಾಧ್ಯತೆಯಿದೆ.
ಮೂರನೆಯದು: ಇಮಾಮ್ ಬುಖಾರಿ ಮತ್ತು ಮುಸ್ಲಿಮ್ ಅಲಿ ಬಿನ್ ಅಬೀ ತಾಲಿಬ್(ರ) ರಿಂದ ವರದಿ ಮಾಡಿದ ಹದೀಸಿನಲ್ಲಿ ಪ್ರವಾದಿ(ಸ) ರವರು ಹೇಳುತ್ತಾರೆ: "ನಿಮ್ಮಲ್ಲಿ ಪ್ರತಿಯೊಬ್ಬರ ಸ್ಥಾನವು ಒಂದೋ ನರಕದಲ್ಲಿ ಅಥವಾ ಸ್ವರ್ಗದಲ್ಲಿ ಎಂದು ಈಗಾಗಲೇ ಲಿಖಿತಗೊಳಿಸಲಾಗಿದೆ." ಆಗ ಜನರಲ್ಲಿ ಒಬ್ಬರು ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ನಾವು ಅದರ ಮೇಲೆ ಅವಲಂಬಿತರಾಗಬಹುದೇ?” ಪ್ರವಾದಿ(ಸ) ರವರು ಉತ್ತರಿಸಿದರು: “ಬೇಡ. ಬದಲಿಗೆ ನೀವು ಕರ್ಮವೆಸಗಿರಿ. ಪ್ರತಿಯೊಬ್ಬರನ್ನೂ ಅವರ ವಿಧಿಗಾಗಿ ಸುಲಭಗೊಳಿಸಲಾಗುತ್ತದೆ.” ನಂತರ ಅವರು ಈ ಸೂಕ್ತಿಯನ್ನು ಪಠಿಸಿದರು: “ಯಾರು (ಅಲ್ಲಾಹನ ಮಾರ್ಗದಲ್ಲಿ) ದಾನ ಮಾಡಿ ಭಯಭಕ್ತಿಯಿಂದ ಜೀವಿಸುತ್ತಾನೋ...” [ಅಲ್ಲೈಲ್:5] ಇದು ಬುಖಾರಿಯ ಪದಗಳಾಗಿವೆ.
«مَا مِنْكُمْ مِنْ أَحَدٍ إِلَّا قَدْ كُتِبَ مَقْعَدُهُ مِنَ النَّارِ أَوْ مِنَ الْجَنَّةِ».
"ನಿಮ್ಮಲ್ಲಿ ಪ್ರತಿಯೊಬ್ಬರ ಸ್ಥಾನವು ಒಂದೋ ನರಕದಲ್ಲಿ ಅಥವಾ ಸ್ವರ್ಗದಲ್ಲಿ ಎಂದು ಈಗಾಗಲೇ ಲಿಖಿತಗೊಳಿಸಲಾಗಿದೆ." ಜನರಲ್ಲಿ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಅದರ ಮೇಲೆ ಅವಲಂಬಿತರಾಗಬಹುದೇ?” ಪ್ರವಾದಿ ರವರು ಉತ್ತರಿಸಿದರು:
«لَا، اعْمَلُوا فَكُلٌّ مُيَسَّرٌ».
“ಬೇಡ. ಬದಲಿಗೆ ನೀವು ಕರ್ಮವೆಸಗಿರಿ. ಪ್ರತಿಯೊಬ್ಬರನ್ನೂ ಅವರ ವಿಧಿಗಾಗಿ ಸುಲಭಗೊಳಿಸಲಾಗುತ್ತದೆ.” ನಂತರ ಅವರು ಓದಿದರು:
﴿فَأَمَّا مَنۡ أَعۡطَىٰ وَٱتَّقَىٰ 5﴾
"ಆದರೆ ಯಾರು ದಾನಧರ್ಮ ಮಾಡಿ, ಭಯಭಕ್ತಿ ಪಾಲಿಸಿದರೋ." [ಅಲ್ಲೈಲ್:5] ಮುಸ್ಲಿಮ್ನಲ್ಲಿ ಹೀಗಿದೆ: "ಪ್ರತಿಯೊಬ್ಬನನ್ನೂ ಅವನನ್ನು ಯಾವುದಕ್ಕಾಗಿ (ಸ್ವರ್ಗ ಅಥವಾ ನರಕ) ಸೃಷ್ಟಿಸಲಾಗಿದೆಯೋ ಅದಕ್ಕೆ ಸುಲಭಗೊಳಿಸಲಾಗುತ್ತದೆ." ಆದ್ದರಿಂದ ಪ್ರವಾದಿಯವರು(ಸ) ಕರ್ಮವೆಸಗಲು ಆದೇಶಿಸಿದರು ಮತ್ತು ವಿಧಿಯ ಮೇಲೆ ಅವಲಂಬಿತರಾಗುವುದನ್ನು ವಿರೋಧಿಸಿದರು.
«فَكُلٌّ مُيَسَّرٌ لِمَا خُلِقَ لَهُ».
"ಪ್ರತಿಯೊಬ್ಬನನ್ನೂ ಅವನನ್ನು ಯಾವುದಕ್ಕಾಗಿ ಸೃಷ್ಟಿಸಲಾಗಿದೆಯೋ ಅದಕ್ಕೆ ಸುಲಭಗೊಳಿಸಲಾಗುತ್ತದೆ."21 ಆದ್ದರಿಂದ ಪ್ರವಾದಿ ﷺ ರವರು ಕರ್ಮವೆಸಗಲು ಆದೇಶಿಸಿದರು ಮತ್ತು ವಿಧಿಯ ಮೇಲೆ ಅವಲಂಬಿತರಾಗುವುದನ್ನು ವಿರೋಧಿಸಿದರು.
ನಾಲ್ಕನೆಯದು: ಸರ್ವಶಕ್ತನಾದ ಅಲ್ಲಾಹನು ದಾಸರಿಗೆ ಕೆಲವು ವಿಷಯಗಳನ್ನು ಆದೇಶಿಸಿದ್ದಾನೆ ಮತ್ತು ಕೆಲವು ವಿಷಯಗಳನ್ನು ವಿರೋಧಿಸಿದ್ದಾನೆ. ಆದರೆ ಮನುಷ್ಯನ ಸಾಮರ್ಥ್ಯಕ್ಕೆ ಹೊರತಾಗಿರುವುದನ್ನು ಅವನು ಆದೇಶಿಸಿಲ್ಲ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿فَٱتَّقُواْ ٱللَّهَ مَا ٱسۡتَطَعۡتُمۡ وَٱسۡمَعُواْ وَأَطِيعُواْ...﴾
“ಆದ್ದರಿಂದ ನಿಮಗೆ ಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಅಲ್ಲಾಹುವನ್ನು ಭಯಪಡಿರಿ. ಆಲಿಸಿರಿ, ಅನುಸರಿಸಿರಿ.” [ಅತ್ತಗಾಬುನ್: 16] ಅಲ್ಲಾಹನು ಹೇಳುತ್ತಾನೆ: “ಅಲ್ಲಾಹು ಯಾರನ್ನೂ ಅವನ ಸಾಮರ್ಥ್ಯಕ್ಕೆ ಮೀರಿರುವುದನ್ನು ಮಾಡಲು ಬಲವಂತಪಡಿಸುವುದಿಲ್ಲ.”
[ಅಲ್-ಬಖರ:286]
﴿لَا يُكَلِّفُ ٱللَّهُ نَفۡسًا إِلَّا وُسۡعَهَا...﴾
"ಅಲ್ಲಾಹು ಯಾರನ್ನೂ ಅವನ ಸಾಮರ್ಥ್ಯಕ್ಕೆ ಮೀರಿರುವುದನ್ನು ಮಾಡಲು ಬಲವಂತಪಡಿಸಲಾರನು." [ಅಲ್ ಬಖರ: 286] ಮನುಷ್ಯನು ಅವನ ಇಚ್ಛೆಯಿಂದಲ್ಲದೆ ಬಲವಂತದಿಂದ ಕಾರ್ಯವೆಸಗುವುದಾದರೆ ಅವನಿಗೆ ಸಾಮರ್ಥ್ಯವಿಲ್ಲದ ಕಾರ್ಯಗಳನ್ನು ಮಾಡಲು ಅವನನ್ನು ಬಲವಂತಪಡಿಸಲಾಗುತ್ತಿತ್ತು. ಆದರೆ ಹಾಗೆ ನಡೆಯುವುದಿಲ್ಲ. ಈ ಕಾರಣದಿಂದಲೇ ಅಜ್ಞಾನದಿಂದ, ಅಥವಾ ಮರೆವಿನಿಂದ, ಅಥವಾ ಇನ್ನೊಬ್ಬರ ಬಲವಂತದಿಂದ ಯಾರಾದರೂ ತಪ್ಪು ಮಾಡಿದರೆ ಅವನಿಗೆ ದೋಷವಿಲ್ಲ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಅವನಿಗೆ ವಿನಾಯಿತಿಯಿದೆ.
ಐದನೆಯದು: ಸರ್ವಶಕ್ತನಾದ ಅಲ್ಲಾಹನ ವಿಧಿಯು ರಹಸ್ಯವಾಗಿರುತ್ತದೆ. ಅಂದರೆ ಆ ವಿಧಿಯು ಸಂಭವಿಸುವವರೆಗೆ ಅದರ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಮನುಷ್ಯನು ಒಂದು ಕಾರ್ಯವನ್ನು ಮಾಡುವುದಕ್ಕೆ ಮೊದಲು ಅದನ್ನು ಮಾಡಲು ಉದ್ದೇಶಿಸುತ್ತಾನೆ. ಆ ಕಾರ್ಯವನ್ನು ಮಾಡುವ ಅವನ ಉದ್ದೇಶವು ಅದರ ಬಗ್ಗೆ ಅಲ್ಲಾಹನ ವಿಧಿಯೇನು ಎಂಬುದರ ಮೇಲೆ ಆಧಾರಿತವಾಗಿರುವುದಿಲ್ಲ. ಆದ್ದರಿಂದ ಅವನು ಮಾಡುವ ಕೆಲಸಕ್ಕೆ ವಿಧಿಯನ್ನು ಕಾರಣವೆನ್ನಲಾಗುವುದಿಲ್ಲ. ಏಕೆಂದರೆ ಆ ಕೆಲಸವನ್ನು ಮಾಡುವ ತನಕ ಅವನಿಗೆ ವಿಧಿಯೇನೆಂದು ತಿಳಿದಿರುವುದಿಲ್ಲ.
ಆರನೆಯದು: ಮನುಷ್ಯನು ಲೌಕಿಕ ವಿಷಯಗಳಲ್ಲಿ ಲಾಭದಾಯಕ ಮತ್ತು ಇಷ್ಟಕರವಾದುದನ್ನು ಪಡೆಯಲು ಉತ್ಸಾಹ ತೋರುತ್ತಾನೆ. ಅವುಗಳನ್ನು ಬಿಟ್ಟು ಅವನಿಗೆ ಲಾಭದಾಯಕವಲ್ಲದ ಮತ್ತು ಇಷ್ಟವಿಲ್ಲದ ವಿಷಯಗಳ ಕಡೆಗೆ ಹೊರಳಿ, ನನ್ನ ವಿಧಿಯಲ್ಲಿ ಹೀಗೆ ಬರೆದಿರುವುದರಿಂದ ನಾನು ಇಂತಹ ವಿಷಯಗಳ ಕಡೆಗೆ ಹೊರಳಿದ್ದೇನೆಂದು ಹೇಳುವುದಿಲ್ಲ. ಹೀಗಿರುವಾಗ, ಅವನು ಧಾರ್ಮಿಕ ವಿಷಯಗಳಲ್ಲಿ ಅವನಿಗೆ ಲಾಭದಾಯಕವಲ್ಲದ ಮತ್ತು ಹಾನಿಕರವಾದುದನ್ನು ಆರಿಸಿ ನನ್ನ ವಿಧಿಯಲ್ಲಿ ಹೀಗೆ ಬರೆದಿರುವುದರಿಂದ ನಾನು ಹೀಗಾದೆ ಎಂದು ಹೇಳುವುದು ಏಕೆ? ಇವೆರಡನ್ನೂ ಅವನು ಒಂದೇ ರೀತಿ ನೋಡಬೇಕಲ್ಲವೇ?
ಇದನ್ನು ವಿವರಿಸುವ ಒಂದು ಉದಾಹರಣೆ ನೋಡಿ:
ಒಂದು ಪಟ್ಟಣಕ್ಕೆ ಹೋಗಲು ಒಬ್ಬ ವ್ಯಕ್ತಿಯ ಮುಂದೆ ಎರಡು ದಾರಿಗಳಿವೆ. ಒಂದು ದಾರಿಯು ಕೊಲೆ, ಲೂಟಿ, ಅವಹೇಳನ, ಭಯ ಮತ್ತು ಹಸಿವೆಗಳಿಂದ ಕೂಡಿದ ಅವ್ಯವಸ್ಥಿತ ದಾರಿ. ಇನ್ನೊಂದು ಶಾಂತ, ಸುರಕ್ಷಿತ, ಮಾನ-ಮರ್ಯಾದೆಗೆ ಧಕ್ಕೆಯಾಗದ, ಕಳ್ಳತನ-ಲೂಟಿಗಳಿಲ್ಲದ ವ್ಯವಸ್ಥಿತ ದಾರಿ. ಆ ವ್ಯಕ್ತಿ ಇವೆರಡರಲ್ಲಿ ಯಾವುದನ್ನು ಆರಿಸುತ್ತಾನೆ?
ಖಂಡಿತವಾಗಿಯೂ ಅವನು ವ್ಯವಸ್ಥಿತವಾದ ಮತ್ತು ಸುರಕ್ಷಿತವಾದ ದಾರಿಯನ್ನೇ ಆರಿಸುತ್ತಾನೆ. ನಾನು ಈ ದಾರಿಯಲ್ಲೇ ಹೋಗಬೇಕೆಂದು ನನ್ನ ವಿಧಿಯಲ್ಲಿ ಬರೆಯಲಾಗಿದೆಯೆಂದು ಹೇಳಿ ಯಾವುದೇ ಬುದ್ಧಿವಂತನೂ ಅವ್ಯವಸ್ಥಿತ ದಾರಿಯಲ್ಲಿ ಹೋಗಲಾರ. ಹಾಗಾದರೆ ಅವನು ಪರಲೋಕದ ವಿಷಯದಲ್ಲಿ ಸ್ವರ್ಗದ ದಾರಿಯನ್ನು ಬಿಟ್ಟು ನರಕದ ಮಾರ್ಗವನ್ನು ಆರಿಸಿ ನನ್ನ ವಿಧಿಯಲ್ಲಿ ಹೀಗೆ ಬರೆದಿರುವುದರಿಂದ ನಾನು ಈ ದಾರಿಯನ್ನು ಆರಿಸಿದೆ ಎಂದು ಏಕೆ ಹೇಳುತ್ತಾನೆ?
ಇನ್ನೊಂದು ಉದಾಹರಣೆ: ವೈದ್ಯರು ರೋಗಿಗೆ ಔಷಧಿ ಸೇವಿಸಲು ಆದೇಶಿಸುತ್ತಾರೆ. ಔಷಧಿಯು ಕಹಿಯಾಗಿದ್ದರೂ ಸಹ ಅವನು ಅದನ್ನು ಸೇವಿಸುತ್ತಾನೆ. ವೈದ್ಯರು ಕೆಲವು ಹಾನಿಕಾರಕ ಆಹಾರಗಳನ್ನು ಸೇವಿಸಬಾರದೆಂದು ಹೇಳುತ್ತಾರೆ. ಆ ಆಹಾರಗಳು ಇಷ್ಟವಾಗಿದ್ದರೂ ಸಹ ಅವನು ಅವುಗಳನ್ನು ತೊರೆಯುತ್ತಾನೆ. ಇವೆಲ್ಲವನ್ನೂ ಅವನು ಮಾಡುವುದು ರೋಗ ಗುಣವಾಗುವುದಕ್ಕಾಗಿ ಮತ್ತು ಆರೋಗ್ಯವಂತನಾಗುವುದಕ್ಕಾಗಿ. ರೋಗ ಗುಣವಾಗಬೇಕೆಂದು ನನ್ನ ವಿಧಿಯಲ್ಲಿ ಬರೆದಿದ್ದರೆ ಗುಣವಾಗುತ್ತದೆ ಎಂದು ಹೇಳಿ ಅವನು ಔಷಧಿ ಸೇವಿಸುವುದನ್ನು ಬಿಟ್ಟುಬಿಡುವುದಿಲ್ಲ ಮತ್ತು ಹಾನಿಕಾರಕ ಆಹಾರಗಳನ್ನು ಸೇವಿಸುವುದಿಲ್ಲ. ಹೀಗಿರುವಾಗ ಅಲ್ಲಾಹು ಮತ್ತು ಅವನ ಪ್ರವಾದಿಯು ಆದೇಶಿಸಿದ್ದನ್ನು ನಿರ್ವಹಿಸದೆ ಮತ್ತು ಅವರು ವಿರೋಧಿಸಿದ್ದನ್ನು ಬಿಟ್ಟುಬಿಡದೆ ತನ್ನ ವಿಧಿಯಲ್ಲಿ ಹೀಗೆ ಬರೆದಿರುವುದರಿಂದಲೇ ಹೀಗಾಯಿತು ಎಂದು ಹೇಳುವುದು ಏಕೆ?
ಏಳನೆಯದು: ಕಡ್ಡಾಯ ಕರ್ಮಗಳನ್ನು ತ್ಯಜಿಸುವವನು ಮತ್ತು ನಿಷಿದ್ಧ ಕರ್ಮಗಳನ್ನು ಮಾಡುವವನು ಇದಕ್ಕೆ ತನ್ನ ವಿಧಿ-ಬರಹವೇ ಕಾರಣವೆಂದು ಹೇಳುವ ವ್ಯಕ್ತಿಯ ಆಸ್ತಿಯನ್ನು ಯಾರಾದರೂ ಲಪಟಾಯಿಸಿ, ಅಥವಾ ಅವನ ಗೌರವಕ್ಕೆ ಧಕ್ಕೆ ಮಾಡಿ, ನಿನ್ನ ಆಸ್ತಿಯನ್ನು ನಾನು ಲಪಟಾಯಿಸಬೇಕೆಂದು ಅಥವಾ ನಿನ್ನ ಗೌರವಕ್ಕೆ ಧಕ್ಕೆ ತರಬೇಕೆಂದು ನಿನ್ನ ವಿಧಿಯಲ್ಲಿ ಬರೆದಿರುವುದರಿಂದಲೇ ನಾನು ಹೀಗೆ ಮಾಡಿದೆ; ಆದ್ದರಿಂದ ಇದರಲ್ಲಿ ನನ್ನ ತಪ್ಪೇನೂ ಇಲ್ಲವೆಂದು ಹೇಳಿದರೆ ಇವನು ಅದನ್ನು ಒಪ್ಪಿಕೊಳ್ಳುವನೇ? ಇತರರು ತನ್ನ ಮೇಲೆ ಮಾಡುವ ಅತಿಕ್ರಮಕ್ಕೆ ಅವನು ವಿಧಿ-ಬರಹವನ್ನು ಸಾಕ್ಷಿಯೆಂದು ಒಪ್ಪುವುದಿಲ್ಲ. ಆದರೆ ಅವನು ಅಲ್ಲಾಹನ ಮೇಲೆ ಮಾಡುವ ಅತಿಕ್ರಮಕ್ಕೆ ವಿಧಿ-ಬರಹವನ್ನು ಸಾಕ್ಷಿಯಾಗಿ ತೋರಿಸುವುದು ಸರಿಯೇ?
ಒಮ್ಮೆ ಉಮರ್ ಬಿನ್ ಖತ್ತಾಬ್(ರ) ರವರ ಬಳಿಗೆ ಕಳ್ಳತನ ಮಾಡಿದ್ದಕ್ಕಾಗಿ ಕೈ ಕತ್ತರಿಸುವ ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ತರಲಾಯಿತು. ಉಮರ್ ಬಿನ್ ಖತ್ತಾಬ್(ರ) ಅವನ ಕೈ ಕತ್ತರಿಸಲು ಆಜ್ಞಾಪಿಸಿದರು. ಆಗ ಅವನು ಹೇಳಿದ: “ಓ ಅಮೀರುಲ್ ಮೂಮಿನೀನ್! ಸ್ವಲ್ಪ ತಡೆಯಿರಿ. ಅಲ್ಲಾಹನ ವಿಧಿಯಿಂದಲೇ ನಾನು ಕಳ್ಳತನ ಮಾಡಿದ್ದು.” ಆಗ ಉಮರ್ ಬಿನ್ ಖತ್ತಾಬ್(ರ) ಹೇಳಿದರು: “ಅಲ್ಲಾಹನ ವಿಧಿಯಿಂದಲೇ ನಾವು ಕೈ ಕತ್ತರಿಸುತ್ತಿರುವುದು.”
ವಿಧಿಯ ಮೇಲೆ ವಿಶ್ವಾಸವಿಡುವುದಕ್ಕೆ ಶ್ರೇಷ್ಠ ಪ್ರತಿಫಲಗಳಿವೆ:
ಮೊದಲನೆಯದು: ಯಾವುದೇ ಕೆಲಸವನ್ನು ಮಾಡುವಾಗ ಆ ಕೆಲಸದ ಮೇಲೆ ಅವಲಂಬಿತವಾಗದೆ ಆ ಕೆಲಸಕ್ಕೆ ಕಾರಣನಾದ ಅಲ್ಲಾಹನ ಮೇಲೆ ಅವಲಂಬಿತವಾಗುವುದು. ಏಕೆಂದರೆ ಎಲ್ಲವೂ ನಡೆಯುವುದು ಅಲ್ಲಾಹನ ವಿಧಿಯಿಂದಲೇ.
ಎರಡನೆಯದು: ಉದ್ದೇಶವು ಪೂರ್ತಿಯಾದರೆ ಮನುಷ್ಯನು ಸ್ವಯಂ ಹೆಮ್ಮೆಪಡುವುದಿಲ್ಲ. ಏಕೆಂದರೆ ಉದ್ದೇಶವು ಪೂರ್ತಿಯಾಗುವುದು ಅಲ್ಲಾಹನ ಅನುಗ್ರಹದಿಂದಾಗಿದೆ. ಅಲ್ಲಾಹು ನಿರ್ಣಯಿಸಿದ ಒಳಿತು ಮತ್ತು ಯಶಸ್ಸಿನ ದಾರಿಯಲ್ಲಿ ಚಲಿಸಿದ ಕಾರಣದಿಂದಾಗಿದೆ. ಸ್ವಯಂ ಹೆಮ್ಮೆಪಡುವುದರಿಂದ ಮನುಷ್ಯನು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆತುಬಿಡುತ್ತಾನೆ.
ಮೂರನೆಯದು: ಎಲ್ಲವೂ ಸಂಭವಿಸುವುದು ಅಲ್ಲಾಹನ ವಿಧಿ-ಬರಹಕ್ಕೆ ಅನುಗುಣವಾಗಿ ಎಂದು ತಿಳಿಯುವಾಗ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಇಷ್ಟವಾದ ವಸ್ತುವನ್ನು ಕಳೆದುಕೊಳ್ಳುವಾಗ ಅಥವಾ ಇಷ್ಟವಿಲ್ಲದ್ದು ಕೈ ಸೇರುವಾಗ ಮನಸ್ಸು ಜರ್ಜರಿತವಾಗುವುದಿಲ್ಲ. ಏಕೆಂದರೆ ಅವೆಲ್ಲವೂ ಭೂಮ್ಯಾಕಾಶಗಳ ಒಡೆಯನಾದ ಅಲ್ಲಾಹನ ನಿರ್ಣಯದಂತೆ ನಡೆಯುತ್ತಿವೆ. ಅಲ್ಲಾಹು ನಿರ್ಣಯಿಸಿದ್ದು ಸಂಭವಿಸಿಯೇ ತೀರುತ್ತದೆ. ಇದರ ಬಗ್ಗೆ ಸರ್ವಶಕ್ತನಾದ ಅಲ್ಲಾಹು ಹೇಳುವುದು ನೋಡಿ:
﴿مَآ أَصَابَ مِن مُّصِيبَةٖ فِي ٱلۡأَرۡضِ وَلَا فِيٓ أَنفُسِكُمۡ إِلَّا فِي كِتَٰبٖ مِّن قَبۡلِ أَن نَّبۡرَأَهَآۚ إِنَّ ذَٰلِكَ عَلَى ٱللَّهِ يَسِيرٞ 22 لِّكَيۡلَا تَأۡسَوۡاْ عَلَىٰ مَا فَاتَكُمۡ وَلَا تَفۡرَحُواْ بِمَآ ءَاتَىٰكُمۡۗ وَٱللَّهُ لَا يُحِبُّ كُلَّ مُخۡتَالٖ فَخُورٍ 23﴾
“ಭೂಮಿಯಲ್ಲಾಗಲಿ ನಿಮ್ಮ ಶರೀರಗಳಲ್ಲಾಗಲಿ ಯಾವುದೇ ವಿಪತ್ತು ಕೂಡ ಬಾಧಿಸಲಾರದು; ಅದನ್ನು ನಾವು ಸೃಷ್ಟಿಸುವುದಕ್ಕೆ ಮುಂಚೆಯೇ ಒಂದು ದಾಖಲೆಯಲ್ಲಿ ಸೇರಿಸಿಕೊಂಡಿರುವ ಹೊರತು. ಖಂಡಿತವಾಗಿಯೂ ಅದು ಅಲ್ಲಾಹುವಿನ ಮಟ್ಟಿಗೆ ಸುಲಭವಾದುದಾಗಿದೆ (ನಾವು ಹೀಗೆ ಮಾಡಿರುವುದೇಕೆಂದರೆ) ನೀವು ಏನನ್ನು ಕಳಕೊಂಡಿರುವಿರೋ ಅದಕ್ಕಾಗಿ ನೀವು ದುಃಖಿಸದಿರುವ ಸಲುವಾಗಿ ಮತ್ತು ಅವನು ನಿಮಗೆ ದಯಪಾಲಿಸಿರುವುದರಲ್ಲಿ ನೀವು ಅತಿಯಾಗಿ ಹಿಗ್ಗದಿರುವ ಸಲುವಾಗಿ. ಅಹಂಕಾರಿಯೂ, ದುರಾಭಿಮಾನಿಯೂ ಆಗಿರುವ ಯಾರನ್ನೂ ಅಲ್ಲಾಹು ಇಷ್ಟಪಡಲಾರನು.” [ಅಲ್-ಹದೀದ್: 22-23] ಪ್ರವಾದಿ(ಸ) ರವರು ಹೇಳಿದರು: “ಸತ್ಯವಿಶ್ವಾಸಿಯ ಸಂಗತಿಯು ಅದ್ಭುತವಾಗಿದೆ! ಅವನ ಸಂಗತಿಗಳೆಲ್ಲವೂ ಅವನಿಗೆ ಒಳಿತೇ ಆಗಿವೆ. ಅದು ವಿಶ್ವಾಸಿಗಳಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೆ ಸಂತೋಷವಾದರೆ ಅವನು ಕೃತಜ್ಞತೆ ಸಲ್ಲಿಸುತ್ತಾನೆ. ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೆ ಕಷ್ಟ ಬಂದರೆ ಅವನು ತಾಳ್ಮೆ ವಹಿಸುತ್ತಾನೆ. ಅದೂ ಕೂಡ ಅವನಿಗೆ ಒಳಿತಾಗಿದೆ.”
«عَجَبًا لِأَمْرِ الْمُؤْمِنِ إِنَّ أَمْرَهُ كُلَّهُ خَيْرٌ، وَلَيْسَ ذَاكَ لِأَحَدٍ إِلَّا لِلْمُؤْمِنِ، إِنْ أَصَابَتْهُ سَرَّاءُ شَكَرَ فَكَانَ خَيْرًا لَهُ، وَإِنْ أَصَابَتْهُ ضَرَّاءُ صَبَرَ فَكَانَ خَيْرًا لَهُ».
"ಸತ್ಯವಿಶ್ವಾಸಿಯ ವಿಷಯವು ಅತ್ಯಂತ ವಿಸ್ಮಯಕಾರಿಯಾಗಿದೆ! ಅವನ ಎಲ್ಲಾ ವಿಷಯಗಳೂ ಅವನಿಗೆ ಒಳಿತಾಗಿವೆ. ಇದು ಒಬ್ಬ ಸತ್ಯವಿಶ್ವಾಸಿಗಲ್ಲದೆ ಇನ್ನಾರಿಗೂ ಇಲ್ಲ. ಅವನಿಗೇನಾದರೂ ಒಳ್ಳೆಯದು ಸಂಭವಿಸಿದರೆ ಅವನು ಕೃತಜ್ಞನಾಗುತ್ತಾನೆ, ಅದು ಅವನಿಗೆ ಒಳಿತಾಗಿದೆ. ಇನ್ನು ಅವನಿಗೇನಾದರೂ ತೊಂದರೆ ಬಾಧಿಸಿದರೆ ಅವನು ತಾಳ್ಮೆ ತೋರುತ್ತಾನೆ. ಅದು ಕೂಡ ಅವನಿಗೆ ಒಳಿತಾಗಿದೆ."22
ವಿಧಿಯ ವಿಷಯದಲ್ಲಿ ಎರಡು ಪಂಗಡಗಳು ದಾರಿತಪ್ಪಿವೆ:
1. ಜಬರಿಯ್ಯ. ಅವರ ವಾದ ಹೀಗಿದೆ: ದಾಸನು ಕರ್ಮವೆಸಗುವುದು ಬಲವಂತದಿಂದ. ಅವನಿಗೆ ಅದರಲ್ಲಿ ಇಚ್ಛೆ ಅಥವಾ ಸಾಮರ್ಥ್ಯವಿಲ್ಲ.
2. ಖದರಿಯ್ಯ. ಅವರ ವಾದ ಹೀಗಿದೆ: ದಾಸನು ತನ್ನ ಇಚ್ಛೆ ಮತ್ತು ಸಾಮರ್ಥ್ಯದಿಂದ ಸ್ವತಂತ್ರವಾಗಿ ಕರ್ಮವೆಸಗುತ್ತಾನೆ. ಅಲ್ಲಾಹನ ಇಚ್ಛೆ ಮತ್ತು ಸಾಮರ್ಥ್ಯವು ಅದರಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.
ಮೊದಲನೇ ಪಂಗಡವಾದ ಜಬರಿಯ್ಯಗಳಿಗೆ ನೀಡಲಾಗುವ ಧಾರ್ಮಿಕ ಮತ್ತು ವಾಸ್ತವಿಕ ಉತ್ತರವು ಹೀಗಿದೆ:
ಧಾರ್ಮಿಕ ಉತ್ತರ: ದಾಸನಿಗೆ ಉದ್ದೇಶ ಮತ್ತು ಇಚ್ಛೆ ಇದೆಯೆಂದು ಅಲ್ಲಾಹು ದೃಢೀಕರಿಸಿದ್ದಾನೆ. ಮನುಷ್ಯನ ಕರ್ಮವನ್ನು ಅದಕ್ಕೆ ಸೇರಿಸಿದ್ದಾನೆ. ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿...مِنكُم مَّن يُرِيدُ ٱلدُّنۡيَا وَمِنكُم مَّن يُرِيدُ ٱلۡأٓخِرَةَ...﴾
“ನಿಮ್ಮಲ್ಲಿ ಇಹಲೋಕವನ್ನು ಉದ್ದೇಶಿಸುವವರು ಇದ್ದಾರೆ ಮತ್ತು ಪರಲೋಕವನ್ನು ಉದ್ದೇಶಿಸುವವರು ಇದ್ದಾರೆ.” [ಆಲು ಇಮ್ರಾನ್: 152] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಹೇಳಿರಿ: ಸತ್ಯವು ನಿಮ್ಮ ಪ್ರಭುವಿನ ವತಿಯಿಂದಾಗಿದೆ’. ಆದ್ದರಿಂದ ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು ಇಚ್ಛೆಯುಳ್ಳವರು ನಿಷೇಧಿಸಲಿ. ಅಕ್ರಮಿಗಳಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿರುವುದು.” [ಅಲ್-ಕಹ್ಫ್:29]
﴿وَقُلِ ٱلۡحَقُّ مِن رَّبِّكُمۡۖ فَمَن شَآءَ فَلۡيُؤۡمِن وَمَن شَآءَ فَلۡيَكۡفُرۡۚ إِنَّآ أَعۡتَدۡنَا لِلظَّٰلِمِينَ نَارًا أَحَاطَ بِهِمۡ سُرَادِقُهَا...﴾
"ಹೇಳಿರಿ: ‘ಸತ್ಯವು ನಿಮ್ಮ ಪ್ರಭುವಿನ ವತಿಯಿಂದಾಗಿದೆ’. ಆದ್ದರಿಂದ (ವಿಶ್ವಾಸವಿಡಲು) ಇಚ್ಛೆಯುಳ್ಳವರು ವಿಶ್ವಾಸವಿಡಲಿ ಮತ್ತು (ಅವಿಶ್ವಾಸವಿಡಲು) ಇಚ್ಛೆಯುಳ್ಳವರು ಅವಿಶ್ವಾಸವಿಡಲಿ. ಅಕ್ರಮಿಗಳಿಗೆ ನಾವು ನರಕಾಗ್ನಿಯನ್ನು ಸಿದ್ಧಗೊಳಿಸಿರುವೆವು. ಅದರ ಗೋಡೆಗಳು ಅವರನ್ನು ಆವರಿಸಿಕೊಂಡಿರುವುದು...." [ಅಲ್-ಕಹ್ಫ್:29] ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಯಾರಾದರೂ ಸತ್ಕರ್ಮವೆಸಗಿದರೆ ಅದರ ಒಳಿತು ಅವನಿಗೇ ಆಗಿದೆ. ಯಾರಾದರೂ ದುಷ್ಕರ್ಮವೆಸಗಿದರೆ ಅದರ ದೋಷವೂ ಅವನಿಗೇ ಆಗಿದೆ. ನಿಮ್ಮ ಪ್ರಭು ದಾಸರಿಗೆ ಅನ್ಯಾಯ ಮಾಡುವವನಲ್ಲ.” [ಫುಸ್ಸಿಲತ್:46]
﴿مَّنۡ عَمِلَ صَٰلِحٗا فَلِنَفۡسِهِۦۖ وَمَنۡ أَسَآءَ فَعَلَيۡهَاۗ وَمَا رَبُّكَ بِظَلَّٰمٖ لِّلۡعَبِيدِ 46﴾
"ಯಾರಾದರೂ ಸತ್ಕರ್ಮವೆಸಗಿದರೆ ಅದರ ಒಳಿತು ಅವನಿಗೇ ಆಗಿದೆ. ಯಾರಾದರೂ ದುಷ್ಕರ್ಮವೆಸಗಿದರೆ ಅದರ ದೋಷವೂ ಅವನಿಗೇ ಆಗಿದೆ. ತಮ್ಮ ಪ್ರಭು (ತನ್ನ) ದಾಸರೊಂದಿಗೆ ಅನ್ಯಾಯವೆಸಗುವವನೇ ಅಲ್ಲ." [ಫುಸ್ಸಿಲತ್:46].
ವಾಸ್ತವಿಕ ಉತ್ತರ: ಸ್ವಯಂಪ್ರೇರಿತವಾಗಿ ಮಾಡುವ ಮತ್ತು ಸ್ವಯಂಪ್ರೇರಿತವಲ್ಲದೆ ಸಂಭವಿಸುವ ಕೆಲಸಗಳ ನಡುವಿನ ವ್ಯತ್ಯಾಸವು ಎಲ್ಲರಿಗೂ ತಿಳಿದಿದೆ. ತಿನ್ನುವುದು, ಕುಡಿಯುವುದು, ಮಾರಾಟ ಮಾಡುವುದು, ಖರೀದಿಸುವುದು ಮುಂತಾದವುಗಳು ಸ್ವಯಂಪ್ರೇರಿತವಾಗಿ ಮಾಡುವ ಕೆಲಸಗಳಾಗಿವೆ. ಆದರೆ ಜ್ವರದಿಂದ ನಡುಗುವುದು, ತಾರಸಿಯಿಂದ ಬೀಳುವುದು ಮುಂತಾದವುಗಳು ಸ್ವಯಂ ಪ್ರೇರಿತವಾಗಿ ನಡೆಯುವ ಕೆಲಸಗಳಲ್ಲ. ಸ್ವಯಂಪ್ರೇರಿತವಾಗಿ ಮಾಡುವ ಕೆಲಸಗಳನ್ನು ಮನುಷ್ಯರು ತನ್ನ ಇಚ್ಛೆಯಿಂದಲೇ ಯಾವುದೇ ಬಲವಂತವಿಲ್ಲದೆ ಮಾಡುತ್ತಾನೆ. ಆದರೆ ಸ್ವಯಂಪ್ರೇರಿತವಲ್ಲದೆ ಸಂಭವಿಸುವ ಕೆಲಸಗಳು ಮನುಷ್ಯನ ಇಚ್ಛೆಯಿಲ್ಲದೆಯೇ ಸಂಭವಿಸುತ್ತದೆ.
ಎರಡನೇ ಪಂಗಡವಾದ ಖದರಿಯ್ಯಗಳಿಗೆ ನೀಡಲಾಗುವ ಧಾರ್ಮಿಕ ಮತ್ತು ವಾಸ್ತವಿಕ ಉತ್ತರವು ಹೀಗಿದೆ:
ಧಾರ್ಮಿಕ ಉತ್ತರ: ಎಲ್ಲಾ ವಸ್ತುಗಳನ್ನು ಸರ್ವಶಕ್ತನಾದ ಅಲ್ಲಾಹನು ಸೃಷ್ಟಿಸಿದ್ದಾನೆ. ಎಲ್ಲವೂ ಅವನ ಇಚ್ಛೆಯಿಂದಲೇ ಸಂಭವಿಸುತ್ತದೆ. ಮನುಷ್ಯನ ಕರ್ಮಗಳು ಅಲ್ಲಾಹನ ಇಚ್ಛೆಯಿಂದಲೇ ಸಂಭವಿಸುತ್ತದೆಯೆಂದು ಪವಿತ್ರ ಕುರ್ಆನ್ ಹೇಳುತ್ತದೆ:
﴿...وَلَوۡ شَآءَ ٱللَّهُ مَا ٱقۡتَتَلَ ٱلَّذِينَ مِنۢ بَعۡدِهِم مِّنۢ بَعۡدِ مَا جَآءَتۡهُمُ ٱلۡبَيِّنَٰتُ وَلَٰكِنِ ٱخۡتَلَفُواْ فَمِنۡهُم مَّنۡ ءَامَنَ وَمِنۡهُم مَّن كَفَرَۚ وَلَوۡ شَآءَ ٱللَّهُ مَا ٱقۡتَتَلُواْ وَلَٰكِنَّ ٱللَّهَ يَفۡعَلُ مَا يُرِيدُ﴾
“ಅಲ್ಲಾಹು ಇಚ್ಛಿಸುತ್ತಿದ್ದರೆ ಸ್ಪಷ್ಟವಾದ ಪುರಾವೆಗಳು ತಮ್ಮ ಬಳಿಗೆ ಬಂದ ಬಳಿಕವೂ ಅವರ (ಸಂದೇಶವಾಹಕರ) ಅನುಯಾಯಿಗಳು (ಪರಸ್ಪರ) ಕಾದಾಡುತ್ತಿರಲಿಲ್ಲ. ಆದರೆ ಅವರು ಭಿನ್ನರಾದರು. ಅವರ ಪೈಕಿ ವಿಶ್ವಾಸವಿಟ್ಟವರೂ ನಿಷೇಧಿಸಿದವರೂ ಉಂಟಾದರು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು (ಪರಸ್ಪರ) ಕಾದಾಡುತ್ತಿರಲಿಲ್ಲ. ಆದರೆ ಅಲ್ಲಾಹು ಅವನಿಚ್ಛಿಸುವುದನ್ನು ಮಾಡುವನು.” [ಅಲ್-ಬಖರ:253] ಅಲ್ಲಾಹನು ಹೇಳುತ್ತಾನೆ: “ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸನ್ಮಾರ್ಗವನ್ನು ನೀಡುತ್ತಿದ್ದೆವು. ಆದರೆ, ‘ಜಿನ್ ಮತ್ತು ಮಾನವರಿಂದ ಖಂಡಿತವಾಗಿಯೂ ನಾನು ನರಕವನ್ನು ತುಂಬುವೆನು’ ಎಂಬ ನನ್ನ ವತಿಯ ವಚನವು ಸ್ಥಿರೀಕರಣಗೊಂಡಿದೆ.” [ಅಸ್ಸಜ್ದ :13]
﴿وَلَوۡ شِئۡنَا لَأٓتَيۡنَا كُلَّ نَفۡسٍ هُدَىٰهَا وَلَٰكِنۡ حَقَّ ٱلۡقَوۡلُ مِنِّي لَأَمۡلَأَنَّ جَهَنَّمَ مِنَ ٱلۡجِنَّةِ وَٱلنَّاسِ أَجۡمَعِينَ 13﴾
"ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸನ್ಮಾರ್ಗವನ್ನು ನೀಡುತ್ತಿದ್ದೆವು. ಆದರೆ, ‘ಜಿನ್ನ್ ಮತ್ತು ಮಾನವರಿಂದ ಖಂಡಿತವಾಗಿಯೂ ನಾನು ನರಕವನ್ನು ತುಂಬುವೆನು’ ಎಂಬ ನನ್ನ ವತಿಯ ವಚನವು ಸ್ಥಿರೀಕರಣಗೊಂಡಿದೆ." [ಅಸ್ಸಜ್ದ:13]
ಬೌದ್ಧಿಕ ಉತ್ತರ: ಇಡೀ ವಿಶ್ವವು ಸರ್ವಶಕ್ತನಾದ ಅಲ್ಲಾಹನ ಒಡೆತನದಲ್ಲಿದೆ. ಮನುಷ್ಯನು ಈ ವಿಶ್ವದ ಒಂದು ಭಾಗವಾಗಿದ್ದಾನೆ. ಆದ್ದರಿಂದ ಅವನು ದಾಸನಾಗಿದ್ದಾನೆ. ದಾಸನಿಗೆ ಒಡೆಯನ ಅನುಮತಿ ಮತ್ತು ಇಚ್ಛೆಯಿಲ್ಲದೆ ಅವನ ಸಾಮ್ರಾಜ್ಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ.
ಇಸ್ಲಾಮೀ ಅಖೀದದ (ವಿಶ್ವಾಸ ಸಂಹಿತೆ) ಗುರಿಗಳು:
ಅರಬ್ಬಿ ಭಾಷೆಯಲ್ಲಿ "ಗುರಿ"ಅನೇಕ ಅರ್ಥಗಳಲ್ಲಿ ಬಳಸಲಾಗುತ್ತದೆ. ಅವುಗಳಲ್ಲಿ ಒಂದು ಅರ್ಥ ಏನೆಂದರೆ, ಬಾಣಕ್ಕೆ ಗುರಿಯಾಗಿ ಬಳಸುವ ವಸ್ತು. ಎಲ್ಲಾ ವಿಷಯಗಳಿಗೂ ಒಂದು ಗುರಿ ಅಥವಾ ಉದ್ದೇಶವಿರುತ್ತದೆ.
ಇಸ್ಲಾಮೀ ಅಖೀದದ ಗುರಿಗಳು: ಇಸ್ಲಾಮೀ ಅಖೀದದ ಉದ್ದೇಶಗಳು ಮತ್ತು ಉನ್ನತ ಗುರಿಗಳು ಅದನ್ನು ಬಿಗಿಯಾಗಿ ಹಿಡಿಯುವುದನ್ನು ಅವಲಂಬಿಸಿಕೊಂಡಿದೆ. ಆ ಗುರಿಗಳು ಅನೇಕ ಇದ್ದು, ಅವುಗಳಲ್ಲಿ ಕೆಲವು ಹೀಗಿವೆ:
ಮೊದಲನೆಯದು: ಉದ್ದೇಶ ಮತ್ತು ಆರಾಧನೆಯನ್ನು ಏಕೈಕ ಅಲ್ಲಾಹನಿಗೆ ಮಾತ್ರ ನಿಷ್ಕಳಂಕಗೊಳಿಸುವುದು. ಏಕೆಂದರೆ ಅವನು ಸೃಷ್ಟಿಕರ್ತನು. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಆದ್ದರಿಂದ ಉದ್ದೇಶ ಮತ್ತು ಆರಾಧನೆ ಅವನಿಗೆ ಮಾತ್ರ ಸೀಮಿತವಾಗಿರುವುದು ಕಡ್ಡಾಯವಾಗಿದೆ.
ಎರಡನೆಯದು: ಇಸ್ಲಾಮೀ ಅಖೀದವಿಲ್ಲದಿರುವ ಹೃದಯದಿಂದ ಉದ್ಭವವಾಗುವ ಎಲ್ಲಾ ರೀತಿಯ ಗೊಂದಲಮಯ ಅರಾಜಕ ಆಲೋಚನೆಗಳಿಂದ ಬುದ್ಧಿಯನ್ನು ಸ್ವತಂತ್ರಗೊಳಿಸುವುದು. ಏಕೆಂದರೆ ಇಸ್ಲಾಮೀ ಅಖೀದವಿಲ್ಲದ ಹೃದಯವು ಒಂದೋ ಯಾವುದೇ ವಿಶ್ವಾಸವಿಲ್ಲದೆ ಖಾಲಿಯಾಗಿರುತ್ತದೆ, ಅಥವಾ ಭೌತಿಕ ವಸ್ತುಗಳನ್ನು ಆರಾಧಿಸುತ್ತದೆ, ಅಥವಾ ದಾರಿತಪ್ಪಿದ ವಿಶ್ವಾಸಗಳು ಮತ್ತು ಮೂಢನಂಬಿಕೆಗಳನ್ನು ಹೊಂದಿರುತ್ತದೆ.
ಮೂರನೆಯದು: ಮಾನಸಿಕ ಶಾಂತಿ ಮತ್ತು ನೆಮ್ಮದಿ. ಮನಸ್ಸಿನಲ್ಲಿ ಮತ್ತು ಆಲೋಚನೆಗಳಲ್ಲಿ ಯಾವುದೇ ತಳಮಳಗಳಿರುವುದಿಲ್ಲ. ಏಕೆಂದರೆ ಈ ಅಖೀದ ಸತ್ಯವಿಶ್ವಾಸಿಯನ್ನು ಅವನ ಸೃಷ್ಟಿಕರ್ತನೊಡನೆ ಸೇರಿಸುತ್ತದೆ. ಆಗ ಅವನು ಆ ಸೃಷ್ಟಿಕರ್ತನನ್ನು ತನ್ನ ಪರಿಪಾಲಕ, ನಿಯಂತ್ರಕ, ತೀರ್ಪುಗಾರ, ಶಾಸನಗಾರನೆಂದು ಒಪ್ಪಿಕೊಳ್ಳುತ್ತಾನೆ. ಅವನ ವಿಧಿ-ನಿರ್ಣಯವನ್ನು ಸಂತೋಷದಿಂದ ಸ್ವೀಕರಿಸುತ್ತಾನೆ ಮತ್ತು ಇಸ್ಲಾಂ ಧರ್ಮಕ್ಕಾಗಿ ತನ್ನ ಹೃದಯವನ್ನು ತೆರೆಯುತ್ತಾನೆ. ಆ ಸೃಷ್ಟಿಕರ್ತನ ಹೊರತು ಬೇರೊಬ್ಬ ದೇವನನ್ನು ಅವನು ಹುಡುಕುವುದಿಲ್ಲ.
ನಾಲ್ಕನೆಯದು: ಅಲ್ಲಾಹನ ಆರಾಧನೆಯಲ್ಲಿ ಅಥವಾ ಜನರೊಂದಿಗೆ ವ್ಯವಹರಿಸುವುದರಲ್ಲಿ ಉದ್ದೇಶ ಮತ್ತು ಕರ್ಮವು ದಾರಿತಪ್ಪದಂತೆ ರಕ್ಷಿಸುತ್ತದೆ. ಏಕೆಂದರೆ ಇಸ್ಲಾಮೀ ಅಖೀದದ ಒಂದು ಸ್ತಂಭವು ಪ್ರವಾದಿಗಳಲ್ಲಿ ವಿಶ್ವಾಸವಿಡುವುದಾಗಿದೆ. ಇದು ಉದ್ದೇಶ ಮತ್ತು ಕರ್ಮದಲ್ಲಿ ಅತ್ಯಂತ ಸುರಕ್ಷಿತವಾಗಿರುವ ಅವರ ಮಾರ್ಗವನ್ನು ಅನುಸರಿಸುವುದನ್ನು ಒಳಗೊಳ್ಳುತ್ತದೆ.
ಐದನೆಯದು: ಕೆಲಸ-ಕಾರ್ಯಗಳಲ್ಲಿ ಗಂಭೀರವಾಗಿರುವಂತೆ ಮಾಡುತ್ತದೆ. ಇದರಿಂದ ಪ್ರತಿಫಲವನ್ನು ಬಯಸಿ ಯಾವುದೇ ಸತ್ಕರ್ಮಗಳನ್ನು ಮಾಡುವ ಅವಕಾಶವು ಕೈತಪ್ಪಿ ಹೋಗುವುದಿಲ್ಲ. ಅದೇ ರೀತಿ ಶಿಕ್ಷೆಯ ಭಯದಿಂದ ಎಲ್ಲಾ ರೀತಿಯ ಪಾಪಕೃತ್ಯಗಳಿಂದ ದೂರವಾಗುವಂತೆ ಮಾಡುತ್ತದೆ. ಏಕೆಂದರೆ ಇಸ್ಲಾಮೀ ಅಖೀದದ ಒಂದು ಸ್ತಂಭವು ಅಂತ್ಯದಿನದಲ್ಲಿ ಮತ್ತು ಕರ್ಮಗಳ ಪ್ರತಿಫಲದಲ್ಲಿ ವಿಶ್ವಾಸವಿಡುವುದಾಗಿದೆ.
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ: “ಪ್ರತಿಯೊಬ್ಬರಿಗೂ ಅವರು ಮಾಡಿರುವುದರ ಪ್ರತಿಫಲವಾಗಿ ಹಲವು ಪದವಿಗಳಿರುವುದು. ಅವರು ಮಾಡುತ್ತಿರುವುದರ ಬಗ್ಗೆ ತಮ್ಮ ಪ್ರಭು ಅಲಕ್ಷ್ಯನಲ್ಲ.”
[ಅಲ್-ಅನ್ಆಮ್:132]
﴿وَلِكُلّٖ دَرَجَٰتٞ مِّمَّا عَمِلُواْۚ وَمَا رَبُّكَ بِغَٰفِلٍ عَمَّا يَعۡمَلُونَ 132﴾
"ಪ್ರತಿಯೊಬ್ಬರಿಗೂ ಅವರು ಮಾಡಿರುವುದರ ಪ್ರತಿಫಲವಾಗಿ ಹಲವು ಪದವಿಗಳಿರುವುದು. ಅವರು ಮಾಡುತ್ತಿರುವುದರ ಬಗ್ಗೆ ತಮ್ಮ ಪ್ರಭು ಅಲಕ್ಷ್ಯನಲ್ಲ." [ಅಲ್-ಅನ್ಆಮ್:132] ಪ್ರವಾದಿ ﷺ ರವರು ಈ ಗುರಿಯನ್ನು ಸಾಧಿಸಲು ಪ್ರೇರಣೆ ನೀಡುತ್ತಾ ಹೇಳುತ್ತಾರೆ: "ಒಬ್ಬ ಬಲಶಾಲಿ ಸತ್ಯವಿಶ್ವಾಸಿ ಅಲ್ಲಾಹನ ಬಳಿ ಒಬ್ಬ ದುರ್ಬಲ ಸತ್ಯವಿಶ್ವಾಸಿಗಿಂತ ಹೆಚ್ಚು ಶ್ರೇಷ್ಠನು ಹಾಗೂ ಪ್ರೀತಿಪಾತ್ರನಾಗಿದ್ದಾನೆ. ಪ್ರತಿಯೊಬ್ಬ ಸತ್ಯವಿಶ್ವಾಸಿಯಲ್ಲೂ ಒಳಿತಿದೆ. ನಿನಗೆ ಪ್ರಯೋಜನಕರವಾಗಿರುವುದನ್ನು ಮಾಡಲು ಉತ್ಸಾಹ ತೋರು. ಅಲ್ಲಾಹನೊಂದಿಗೆ ಸಹಾಯ ಬೇಡು. ಅಸಹಾಯಕನಂತೆ ಕೂರಬೇಡ. ನಿನಗೇನಾದರೂ ಕೆಡುಕು ಸಂಭವಿಸಿದರೆ ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು ಎಂದು ಹೇಳಬೇಡ. ಬದಲಿಗೆ, ಇದು ಅಲ್ಲಾಹು ವಿಧಿಸಿದ್ದಾಗಿದೆ. ಅವನು ಇಚ್ಛಿಸುವುದನ್ನು ಮಾಡುತ್ತಾನೆ ಎಂದು ಹೇಳು. ಏಕೆಂದರೆ "ಒಂದು ವೇಳೆ" ಎಂಬ ಪದವು ಸೈತಾನನ ಕೆಲಸಕ್ಕೆ ಬಾಗಿಲು ತೆರೆದು ಕೊಡುತ್ತದೆ.
«الْمُؤْمِنُ الْقَوِيُّ خَيْرٌ وَأَحَبُّ إِلَى اللَّهِ مِنَ الْمُؤْمِنِ الضَّعِيفِ، وَفِي كُلٍّ خَيْرٌ، احْرِصْ عَلَى مَا يَنْفَعُكَ، وَاسْتَعِنْ بِاللَّهِ، وَلَا تَعْجِزْ، وَإِنْ أَصَابَكَ شَيْءٌ فَلَا تَقُلْ: لَوْ أَنِّي فَعَلْتُ كَذَا كَانَ كَذَا وَكَذَا، وَلَكِنْ قُلْ: قَدَّرَ اللَّهُ وَمَا شَاءَ فَعَلَ؛ فَإِنَّ (لَوْ) تَفْتَحُ عَمَلَ الشَّيْطَانِ».
"ಬಲಶಾಲಿ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮನು ಮತ್ತು ಅಲ್ಲಾಹನಿಗೆ ಹೆಚ್ಚು ಪ್ರಿಯನಾಗಿದ್ದಾನೆ. ಎಲ್ಲರಲ್ಲೂ ಒಳಿತಿದೆ. ನಿನಗೆ ಪ್ರಯೋಜನಕಾರಿಯಾದ ವಿಷಯದಲ್ಲಿ ಉತ್ಸುಕನಾಗು, ಅಲ್ಲಾಹನಲ್ಲಿ ಸಹಾಯ ಬೇಡು ಮತ್ತು ಅಸಹಾಯಕನಾಗಬೇಡ. ನಿನಗೇನಾದರೂ ಸಂಭವಿಸಿದರೆ, "ಒಂದು ವೇಳೆ ನಾನು ಹೀಗೆ ಮಾಡುತ್ತಿದ್ದರೆ ಹೀಗಾಗುತ್ತಿತ್ತು" ಎಂದು ಹೇಳಬೇಡ. ಬದಲಿಗೆ, "ಇದು ಅಲ್ಲಾಹು ವಿಧಿಸಿದ್ದು; ಅವನು ಇಚ್ಛಿಸುವುದನ್ನು ಅವನು ಮಾಡುತ್ತಾನೆ" ಎಂದು ಹೇಳು. ಏಕೆಂದರೆ ‘ಒಂದು ವೇಳೆ' ಎಂಬ ಮಾತು ಶೈತಾನನು ಕಾರ್ಯೋನ್ಮುಖನಾಗಲು ಬಾಗಿಲು ತೆರೆದುಕೊಡುತ್ತದೆ." [ಮುಸ್ಲಿಂ]23
ಆರನೆಯದು: ಇಸ್ಲಾಮ್ ಧರ್ಮವನ್ನು ಸ್ಥಾಪಿಸಲು ಮತ್ತು ಅದರ ಆಧಾರ ಸ್ತಂಭಗಳನ್ನು ಆಳವಾಗಿ ಬೇರೂರಿಸಲು ದುಬಾರಿ ಮತ್ತು ಅಗ್ಗವಾದ ಎಲ್ಲವನ್ನೂ ವ್ಯಯಿಸುವ ಒಂದು ಪ್ರಬಲ ಸಮುದಾಯವನ್ನು ನಿರ್ಮಿಸುವುದು. ಈ ಸಮುದಾಯವು ಅಲ್ಲಾಹನ ಮಾರ್ಗದಲ್ಲಿ ಎದುರಾಗುವ ಏನನ್ನೂ ಲೆಕ್ಕಿಸುವುದಿಲ್ಲ. ಇಂತಹ ಸಮುದಾಯದ ಬಗ್ಗೆ ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
﴿إِنَّمَا ٱلۡمُؤۡمِنُونَ ٱلَّذِينَ ءَامَنُواْ بِٱللَّهِ وَرَسُولِهِۦ ثُمَّ لَمۡ يَرۡتَابُواْ وَجَٰهَدُواْ بِأَمۡوَٰلِهِمۡ وَأَنفُسِهِمۡ فِي سَبِيلِ ٱللَّهِۚ أُوْلَٰٓئِكَ هُمُ ٱلصَّٰدِقُونَ 15﴾
“ಅಲ್ಲಾಹು ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟು, ತರುವಾಯ ಸಂದೇಹಪಡದೆ, ತಮ್ಮ ಸಂಪತ್ತು ಮತ್ತು ಶರೀರಗಳ ಮೂಲಕ ಅಲ್ಲಾಹನ ಮಾರ್ಗದಲ್ಲಿ ಹೋರಾಟ ಮಾಡುವವರು ಯಾರೋ ಅವರು ಮಾತ್ರ ಸತ್ಯವಿಶ್ವಾಸಿಗಳು. ಸತ್ಯಸಂಧರು ಸಹ ಅವರೇ ಆಗಿರುವರು.” [ಅಲ್-ಹುಜುರಾತ್:15].
ಏಳನೆಯದು: ವ್ಯಕ್ತಿಗಳನ್ನು ಮತ್ತು ಸಮಾಜಗಳನ್ನು ಸುಧಾರಣೆಗೊಳಿಸುವ ಮೂಲಕ ಇಹಪರ ಲೋಕಗಳ ಸೌಭಾಗ್ಯ, ಪ್ರತಿಫಲಗಳು ಮತ್ತು ಗೌರವಗಳನ್ನು ಪಡೆಯುವುದು. ಈ ಕುರಿತು ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿مَنۡ عَمِلَ صَٰلِحٗا مِّن ذَكَرٍ أَوۡ أُنثَىٰ وَهُوَ مُؤۡمِنٞ فَلَنُحۡيِيَنَّهُۥ حَيَوٰةٗ طَيِّبَةٗۖ وَلَنَجۡزِيَنَّهُمۡ أَجۡرَهُم بِأَحۡسَنِ مَا كَانُواْ يَعۡمَلُونَ 97﴾
“ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು.”
[ಅನ್ನಹ್ಲ್: 97].
ಇವು ಇಸ್ಲಾಮೀ ಅಖೀದದ ಕೆಲವು ಗುರಿ ಮತ್ತು ಉದ್ದೇಶಗಳಾಗಿವೆ. ನಮಗೂ ಮತ್ತು ಎಲ್ಲಾ ಮುಸ್ಲಿಮರಿಗೂ ಇದನ್ನು ಸುಲಭಗೊಳಿಸಲು ನಾವು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇವೆ. ಅವನು ಅತ್ಯಧಿಕ ಕ್ಷಮಿಸುವವನು ಹಾಗೂ ಔದಾರ್ಯವಂತನಾಗಿದ್ದಾನೆ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.
ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಸಹಾಬಾಗಳೆಲ್ಲರ ಮೇಲೆ ಅಲ್ಲಾಹನ ಸಲಾತ್ ಮತ್ತು ಸಲಾಂ ಇರಲಿ.
ಈ ಪುಸ್ತಕದ ಲೇಖಕರು
ಮುಹಮ್ಮದ್ ಸ್ವಾಲಿಹ್ ಅಲ್-ಉಸೈಮೀನ್
***
ಪರಿವಿಡಿ
ಪರಿಚಯ 2
ಇಸ್ಲಾಮ್ ಧರ್ಮ 4
ಇಸ್ಲಾಮಿನ ಸ್ತಂಭಗಳು 12
ಇಸ್ಲಾಮೀ ಅಖೀದದ (ವಿಶ್ವಾಸ) ಬುನಾದಿಗಳು 19
ಅಲ್ಲಾಹನಲ್ಲಿ ವಿಶ್ವಾಸವಿಡುವುದು 21
ಮಲಕ್ಗಳಲ್ಲಿ ವಿಶ್ವಾಸವಿಡುವುದು 52
ಗ್ರಂಥಗಳಲ್ಲಿ ವಿಶ್ವಾಸವಿಡುವುದು 63
ಸಂದೇಶವಾಹಕರಲ್ಲಿ ವಿಶ್ವಾಸವಿಡುವುದು 66
ಅಂತ್ಯದಿನದಲ್ಲಿ ವಿಶ್ವಾಸವಿಡುವುದು 81
ವಿಧಿಯಲ್ಲಿ ವಿಶ್ವಾಸವಿಡುವುದು 120
ಇಸ್ಲಾಮೀ ಅಖೀದದ (ವಿಶ್ವಾಸ ಸಂಹಿತೆ) ಗುರಿಗಳು: 142
***
kn71v1.2 - 21/05/2026
ಸಹೀಹ್ ಬುಖಾರಿ,ಕಿತಾಬುಲ್ ಈಮಾನ್, ಸಂಖ್ಯೆ (8); ಮುಸ್ಲಿಮ್ ಕಿತಾಬುಲ್ ಈಮಾನ್, ಬಾಬು ಕೌಲಿನ್ನಬಿ ಸ್ವಲ್ಲಲ್ಲಾಹು ಅಲೈಹಿ ವ ಸ್ವಲ್ಲಮ್ ಬುನಿಯಲ್ ಇಸ್ಲಾಮು ಅಲಾ ಖಮ್ಸಿನ್, ಸಂಖ್ಯೆ (16)
ಮುಸ್ಲಿಮ್, ಕಿತಾಬುಲ್ ಈಮಾನ್, ಸಂಖ್ಯೆ (8); ಅಬೂ ದಾವೂದ್: ಕಿತಾಬುಸ್ಸುನ್ನಾ, ಬಾಬ್ ಫಿಲ್ ಖದ್ರ್, ಸಂಖ್ಯೆ (4695)
ಬುಖಾರಿ:ಕಿತಾಬುಲ್ ಜನಾಯಿಝ್ إذا أسلم الصبي فمات، هل يصلى عليه، وهل يعرض على الصبي الإسلام ಸಂಖ್ಯೆ (1292) ಮುಸ್ಲಿಮ್ ಕಿತಾಬುಲ್ ಖದ್ರ್ باب معنى كل مولود يولد على الفطرة، وحكم موت أطفال الكفار وأطفال المسلمين ಸಂಖ್ಯೆ (2658)
ಬುಖಾರಿ: ಸೂರ ತೂರ್, ಸಂಖ್ಯೆ (4854)
ಸಹೀಹ್ ಬುಖಾರಿ: كتاب الجمعة، باب الاستسقاء في الخطبة يوم الجمعة ಸಂಖ್ಯೆ (891)
ಸಹೀಹ್ ಬುಖಾರಿ: كتاب الجمعة باب الاستسقاء في الخطبة يوم الجمعةಸಂಖ್ಯೆ (891) ಮುಸ್ಲಿಮ್: كتاب صلاة الاستسقاء، باب الدعاء في الاستسقاء ಸಂಖ್ಯೆ (897)
ಇದನ್ನು ಮುಸ್ಲಿಮ್ ವರದಿ ಮಾಡಿದ್ದಾರೆ: ವಿಶ್ವಾಸದ ಪುಸ್ತಕ (ಕಿತಾಬ್ ಅಲ್-ಈಮಾನ್), ಈಮಾನ್, ಇಸ್ಲಾಮ್ ಮತ್ತು ಇಹ್ಸಾನ್ಗಳ ವಿವರಣೆ ಹಾಗೂ ಅಲ್ಲಾಹನ ವಿಧಿಯ ಮೇಲಿನ ನಂಬಿಕೆಯ ಅನಿವಾರ್ಯತೆಯ ಅಧ್ಯಾಯ, ಸಂಖ್ಯೆ (8).
ಇದನ್ನು ಬುಖಾರಿ ವರದಿ ಮಾಡಿದ್ದಾರೆ: ಸೃಷ್ಟಿಯ ಆರಂಭದ ಪುಸ್ತಕ, ಮಲಕ್ಗಳ ಪ್ರಸ್ತಾಪದ ಅಧ್ಯಾಯ, ಸಂಖ್ಯೆ (3037); ಮತ್ತು ಮುಸ್ಲಿಮ್: ಸದ್ಗುಣ, ಸಂಬಂಧ ಮತ್ತು ಶಿಷ್ಟಾಚಾರದ ಪುಸ್ತಕ, ಅಲ್ಲಾಹನು ಓರ್ವ ದಾಸನನ್ನು ಪ್ರೀತಿಸಿದರೆ ಅವನನ್ನು ತನ್ನ ದಾಸರಿಗೆ ಪ್ರಿಯನನ್ನಾಗಿ ಮಾಡುವ ಬಗ್ಗೆ ಇರುವ ಅಧ್ಯಾಯ, ಸಂಖ್ಯೆ (2637).
ಇದನ್ನು ಬುಖಾರಿ ವರದಿ ಮಾಡಿದ್ದಾರೆ: ಜುಮುಆ ಪುಸ್ತಕ, ಖುತ್ಬಾವನ್ನು ಆಲಿಸುವ ಅಧ್ಯಾಯ, ಸಂಖ್ಯೆ (887); ಮತ್ತು ಮುಸ್ಲಿಮ್: ಜುಮುಆ ಪುಸ್ತಕ, ಶುಕ್ರವಾರದಂದು (ಪ್ರಾರ್ಥನೆಗೆ) ಬೇಗನೆ ತೆರಳುವ ಶ್ರೇಷ್ಠತೆಯ ಅಧ್ಯಾಯ, ಸಂಖ್ಯೆ (850).
ಬುಖಾರಿ: ತೌಹೀದ್ ಪುಸ್ತಕ, ಅಲ್ಲಾಹನ ವಾಣಿ: "ನನ್ನ ಕೈಗಳಿಂದ ನಾನು ಸೃಷ್ಟಿಸಿದವನಿಗೆ" ಎಂಬ ಅಧ್ಯಾಯ, ಸಂಖ್ಯೆ (7410); ಮತ್ತು ಮುಸ್ಲಿಮ್: ಈಮಾನ್ ಪುಸ್ತಕ, ಸ್ವರ್ಗವಾಸಿಗಳಲ್ಲಿ ಅತ್ಯಂತ ಕೆಳಮಟ್ಟದ ಸ್ಥಾನದ ಬಗೆಗಿನ ಅಧ್ಯಾಯ, ಸಂಖ್ಯೆ (193).
ಬುಖಾರಿ: ಕಿಬ್ಲಾ , ಎಲ್ಲಿದ್ದರೂ ಕಿಬ್ಲಾದ ಕಡೆಗೆ ಮುಖಮಾಡುವ ಅಧ್ಯಾಯ, ಸಂಖ್ಯೆ (392); ಮತ್ತು ಮುಸ್ಲಿಮ್: ಮಸೀದಿಗಳು ಮತ್ತು ನಮಾಝ್ ಸ್ಥಳಗಳ ಪುಸ್ತಕ, ನಮಾಝ್ನಲ್ಲಿ ಮರೆವು ಮತ್ತು ಅದಕ್ಕಾಗಿರುವ ಸಾಷ್ಟಾಂಗದ ಅಧ್ಯಾಯ, ಸಂಖ್ಯೆ (572).
ಇದನ್ನು ಮುಸ್ಲಿಮ್ ಕಿತಾಬುಲ್ ಜನ್ನ ವ ನಯೀಮಿಹಾ ವ ಅಹ್ಲಿಹಾ, ಬಾಬು ಫನಾಯಿದ್ದುನ್ಯಾ, ವ ಬಯಾನಿಲ್ ಹಶ್ರಿ ಯೌಮಲ್ ಖಿಯಾಮ ಸಂಖ್ಯೆ 2859 ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಬುಖಾರಿಯವರು ಕಿತಾಬುಲ್ ಮಝಾಲಿಮ್ ಬಾಬು ಕೌಲಿಲ್ಲಾಹಿ ತಆಲಾ ''ಅಲಾ ಲಅನತುಲ್ಲಾಹಿ ಅಲಝ್ಝಾಲಿಮೀನ್ ಸಂಖ್ಯೆ (2309)ಯಲ್ಲಿ ವರದಿ ಮಾಡಿದ್ದಾರೆ ಮತ್ತು ಇಮಾಮ್ ಮುಸ್ಲಿಮ್ ರವರು ಕಿತಾಬುತ್ತೌಬ ಬಾಬು ಖಬೂಲಿ ತೌಬತಿಲ್ ಖಾತಿಲಿ ವ ಇನ್ ಕಸುರ ಖತ್ಲುಹು ಸಂಖ್ಯೆ (2768) ನಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಈಮಾನ್ ಬಾಬು ಇಝಾ ಹಮ್ಮಲ್ ಅಬ್ದು ಬಿ ಹಸನತಿನ್ ಕುತಿಬತ್ ವ ಇಝಾ ಹಮ್ಮ ಬಿ ಸಯ್ಯಿಅತಿನ್ ಲಮ್ ತುಕ್ತಬ್ ಸಂಖ್ಯೆ (131) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುತ್ತಫ್ಸೀರ್ ಬಾಬು ಕೌಲಿಹಿ "ಫಲಾ ತಅಲಮು ನಫ್ಸುನ್ ಮಾ ಉಖ್ಫಿಯ ಲಹುಮ್ ಮಿನ್ ಖುರ್ರತಿ ಅಅಯುನ್" ಸಂಖ್ಯೆ (4501) ರಲ್ಲಿ ಮತ್ತು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಜನ್ನತಿ ವ ಸಿಫತಿ ನಈಮಿಹಾ ವ ಅಹ್ಲಿಹಾ ಸಂಖ್ಯೆ (2824) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಜನ್ನತಿ ವ ಸಿಫತಿ ನಈಮಿಹಾ ವ ಅಹ್ಲಿಹಾ, ಬಾಬು ಅರ್ಝಿ ಮಖ್ಅದಿಲ್ ಮಯ್ಯಿತಿ ಮಿನಲ್ ಜನ್ನತಿ ಅವಿನ್ನಾರಿ ಅಲೈಹಿ ವ ಇಸ್ಬಾತಿ ಅಝಾಬಿಲ್ ಖಬ್ರಿ ವತ್ತಅವ್ವುದಿ ಮಿನ್ಹು ಸಂಖ್ಯೆ (2867) ರಲ್ಲಿ ವರದಿ ಮಾಡಿದ್ದಾರೆ
ಈ ಹದೀಸನ್ನು ಅಬೂದಾವೂದ್ ರವರು ಕಿತಾಬುಸ್ಸುನ್ನ ಬಾಬುಲ್ ಮಸ್ಅಲತಿ ಫಿಲ್ ಖಬರಿ ವ ಅಝಾಬಿಲ್ ಖಬರಿ, ಸಂಖ್ಯೆ (4753) ರಲ್ಲಿ ಮತ್ತು ಇಮಾಮ್ ಅಹ್ಮದ್ ರವರು ಮುಸ್ನದುಲ್ ಕೂಫಿಯ್ಯೀನ್ ಹದೀಸುಲ್ ಬರಾ ಇಬ್ನು ಆಝಿಬ್ ಸಂಖ್ಯೆ (18534) ರಲ್ಲಿ ವರದಿ ಮಾಡಿದ್ದಾರೆ
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುಲ್ ವುದೂ ಬಾಬು ಮಾ ಜಾಅ ಫಿ ಗುಸ್ಲಿಲ್ ಬೌಲಿ ಸಂಖ್ಯೆ (215) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಖದ್ರ್ ಬಾಬು ಹಿಜಾಜಿ ಆದಮ್ ವ ಮೂಸಾ ಅಲೈಹಿಮಸ್ಸಲಾಮ್ ಸಂಖ್ಯೆ (2653) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಬುಖಾರಿ ರವರು ಕಿತಾಬುಲ್ ಖದ್ರ್, ಬಾಬು ವ ಕಾನ ಅಮ್ರುಲ್ಲಾಹಿ ಖದರಮ್ ಮಖ್ದೂರಾ, ಸಂಖ್ಯೆ (6605) ರಲ್ಲಿ ಮತ್ತು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಖದ್ರ್, ಬಾಬು ಕೈಫಿಯ್ಯತಿ ಖಲ್ಖಿಲ್ ಆದಮಿಯ್ಯಿ ಫಿ ಬತ್ನಿ ಉಮ್ಮಿಹಿ ವ ಕಿತಾಬತಿ ರಿಝ್ಖಿಹಿ ವ ಅಜಲಿಹಿ ವ ಅಮಲಿಹಿ ವ ಶಖಾವತಿಹಿ ವ ಸಆದತಿಹಿ ಸಂಖ್ಯೆ (2647) ರಲ್ಲಿ ವರದಿ ಮಾಡಿದ್ದಾರೆ
ಈ ಹದೀಸನ್ನು ಇಮಾಮ್ ಮುಸ್ಲಿಮ್ ರವರು ಕಿತಾಬು ಝ್ಝಹ್ದ್ ವ ರ್ರಖಾಯಿಖ್, ಬಾಬುಲ್ ಮುಅಮಿನಿ ಅಮ್ರುಹು ಕುಲ್ಲುಹು ಖೈರ್, ಸಂಖ್ಯೆ (2999) ರಲ್ಲಿ ವರದಿ ಮಾಡಿದ್ದಾರೆ.
ಈ ಹದೀಸನ್ನು ಇಮಾಮ್ ಮುಸ್ಲಿಮ್ ರವರು ಕಿತಾಬುಲ್ ಖದ್ರ್, ಬಾಬು ಫಿಲ್ ಅಮ್ರಿ ಬಿಲ್ ಖುವ್ವತಿ ವ ತರ್ಕಿಲ್ ಅಜ್ಝಿ ವಲ್ ಇಸ್ತಆನತಿ ಬಿಲ್ಲಾಹಿ ವ ತಫ್ವೀಝಿಲ್ ಮಖಾದೀರಿ ಲಿಲ್ಲಾಹಿ ಸಂಖ್ಯೆ (2664) ರಲ್ಲಿ ವರತೆ ಮಾಡಿದ್ದಾರೆ
ಮುಸ್ಲಿಮ್: ಕಿತಾಬುಲ್ ಈಮಾನ್ باب وجوب الإيمان برسالة نبينا محمد صلى الله عليه وسلم إلى جميع الناس ونسخ الملل بملته ಸಂಖ್ಯೆ (153).