مَنْ خَلَقَ الكَونَ؟ وَمَنْ خَلَقَنِي؟ وَلِمَاذَا؟
ಪ್ರಪಂಚವನ್ನು ಸೃಷ್ಟಿಸಿದ್ದು ಯಾರು? ನನ್ನನ್ನು ಸೃಷ್ಟಿಸಿದ್ದು ಯಾರು? ಏಕೆ?
اللَّجْنَةُ العِلْمِيَّةُ
بِرِئَاسَةِ الشُّؤُونِ الدِّينِيَّةِ بِالمَسْجِدِ الحَرَامِ وَالمَسْجِدِ النَّبَوِيِّ
ಮಸ್ಜಿದುಲ್-ಹರಾಮ್ ಮತ್ತು ಮಸ್ಜಿದು ನ್ನಬವಿಯ ಧಾರ್ಮಿಕ ವ್ಯವಹಾರಗಳ ಅಧ್ಯಕ್ಷತೆಯ ಅಡಿಯಲ್ಲಿರುವ ವೈಜ್ಞಾನಿಕ ಸಮಿತಿ
بِسْمِ اللهِ الرَّحمَنِ الرَّحِيمِ
ಪ್ರಪಂಚವನ್ನು ಸೃಷ್ಟಿಸಿದ್ದು ಯಾರು? ನನ್ನನ್ನು ಸೃಷ್ಟಿಸಿದ್ದು ಯಾರು? ಏಕೆ?
"ಈ ವಿಶ್ವವನ್ನು ಸೃಷ್ಟಿಸಿದ್ದು ಯಾರು? ನನ್ನನ್ನು ಸೃಷ್ಟಿಸಿದ್ದು ಯಾರು, ಮತ್ತು ಏಕೆ?" ಎಂಬ ಈ ಪುಸ್ತಕವು ವಿಶ್ವವನ್ನು ಮತ್ತು ಮಾನವನ ಅಸ್ತಿತ್ವದ ಮೂಲವನ್ನು ಚರ್ಚಿಸುತ್ತದೆ. ಈ ವಿಶ್ವವು ಆಕಸ್ಮಿಕವಾಗಿ ಅಥವಾ ಶೂನ್ಯದಿಂದ ಬಂದಿಲ್ಲ, ಬದಲಾಗಿ ಅದಕ್ಕೆ ಒಬ್ಬ ಮಹಾನ್ ಸೃಷ್ಟಿಕರ್ತನಿದ್ದಾನೆ, ಅವನೇ ಅಲ್ಲಾಹು, ಮತ್ತು ಅವನು ಜೀವನವನ್ನು ಮತ್ತು ವಿಶ್ವವನ್ನು ನಿಯಂತ್ರಿಸುವ ನಿಖರವಾದ ಕಾನೂನುಗಳನ್ನು ಸ್ಥಾಪಿಸಿದ್ದಾನೆ ಎಂದು ಅದು ಒತ್ತಿಹೇಳುತ್ತದೆ. ಈ ಪುಸ್ತಕವು ಅಲ್ಲಾಹುವಿನ ಗುಣಲಕ್ಷಣಗಳನ್ನು ಮತ್ತು ಪ್ರವಾದಿಗಳು ಹಾಗೂ ದೈವಿಕ ಗ್ರಂಥಗಳಲ್ಲಿ ವಿಶ್ವಾಸವಿಡುವುದರ ಮಹತ್ವವನ್ನು ವಿವರಿಸುತ್ತದೆ. ಅಷ್ಟೇ ಅಲ್ಲದೆ, ಇಸ್ಲಾಂ ಧರ್ಮವೇ ಎಲ್ಲಾ ಪ್ರವಾದಿಗಳ ಸಂದೇಶಗಳನ್ನು ಒಟ್ಟುಗೂಡಿಸಿದ ಸತ್ಯ ಧರ್ಮವಾಗಿದೆ ಎಂದು ದೃಢೀಕರಿಸುತ್ತದೆ ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ನಿಜವಾದ ಸಂತೋಷವನ್ನು ಪಡೆಯಲು ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಡಲು ಕರೆ ನೀಡುತ್ತದೆ.
ಪ್ರಪಂಚವನ್ನು ಸೃಷ್ಟಿಸಿದ್ದು ಯಾರು? ನನ್ನನ್ನು ಸೃಷ್ಟಿಸಿದ್ದು ಯಾರು? ಏಕೆ?
ನಾನು ಸರಿಯಾದ ಮಾರ್ಗದಲ್ಲಿದ್ದೇನೆಯೇ?
ಭೂಮ್ಯಾಕಾಶಗಳನ್ನು ಮತ್ತು ಅದರಲ್ಲಿರುವ ಊಹನಾತೀತ ಸೃಷ್ಟಿ ವೈಭವಗಳನ್ನು ಸೃಷ್ಟಿಸಿದ್ದು ಯಾರು?
ಭೂಮಿ ಮತ್ತು ಆಕಾಶದಲ್ಲಿ ಸೂಕ್ಷ್ಮ ಹಾಗೂ ನಿಖರವಾದ ವ್ಯವಸ್ಥೆಯನ್ನು ರಚಿಸಿದವರಾರು?
ಮನುಷ್ಯನನ್ನು ಸೃಷ್ಟಿಸಿದವರಾರು, ಅವನಿಗೆ ಶ್ರವಣ, ದೃಷ್ಟಿ ಮತ್ತು ಬುದ್ಧಿವಂತಿಕೆಯನ್ನು ನೀಡಿದವರಾರು ಮತ್ತು ಅವನಿಗೆ ಜ್ಞಾನವನ್ನು ಪಡೆಯಲು ಮತ್ತು ಸತ್ಯತೆಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದವರಾರು?
ನಿಮ್ಮ ದೇಹದ ಅಂಗಾಂಗಗಳಲ್ಲಿ ಈ ನಿಖರವಾದ ಕರಕುಶಲತೆಯನ್ನು ಮತ್ತು ನಿಮಗೆ ಸುಂದರವಾದ ಆಕಾರವನ್ನು ನೀಡಿದವರಾರು?
ವಿಭಿನ್ನ ರೀತಿಯ ಜೀವಿಗಳ ಸೃಷ್ಟಿಯ ಮೇಲೆ ಗಮನಹರಿಸಿ ನೋಡಿರಿ ಅವುಗಳನ್ನು ಮಿತಿ ಇಲ್ಲದ ಅನೇಕ ರೂಪಗಳು ಮತ್ತು ಬಣ್ಣಗಳೊಂದಿಗೆ ಸೃಷ್ಟಿಸಿದವರಾರು?
ಈ ಮಹಾನ್ ಪ್ರಪಂಚವು ನಿಖರವಾಗಿ ನಿಯಂತ್ರಿಸುವ ತನ್ನ ನಿಯಮಗಳೊಂದಿಗೆ ಇಷ್ಟು ವರ್ಷಗಳವರೆಗೆ ಕ್ರಮಬದ್ಧವಾಗಿ ಮತ್ತು ಸ್ಥಿರವಾಗಿ ಹೇಗೆ ನಡೆಯುತ್ತಿದೆ?
ಈ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆಗಳನ್ನು (ಜೀವನ ಮತ್ತು ಮರಣ, ಜೀವಿಗಳ ಸಂತಾನೋತ್ಪತ್ತಿ, ಹಗಲು ರಾತ್ರಿ, ಋತುಗಳ ಬದಲಾವಣೆ, ಇತ್ಯಾದಿ)ಸ್ಥಾಪಿಸಿದವರು ಯಾರು?
ಜಗತ್ತು ತನ್ನನ್ನು ತಾನೇ ಸೃಷ್ಟಿಸಿಕೊಂಡಿದೆಯೇ? ಅಥವಾ ಶೂನ್ಯದಿಂದ ಅಸ್ತಿತ್ವಕ್ಕೆ ಬಂದಿದೆಯೇ? ಅಥವಾ ಆಕಸ್ಮಿಕವಾಗಿ ಅಸ್ಥಿತ್ವಕ್ಕೆ ಬಂದಿದೆಯೇ? ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿أَمْ خُلِقُوا مِنْ غَيْرِ شَيْءٍ أَمْ هُمُ الْخَالِقُونَ ٣٥ أَمْ خَلَقُوا السَّمَاوَاتِ وَالْأَرْضَ بَلْ لَا يُوقِنُونَ 36﴾
ಅಥವಾ, ಯಾವುದೇ ವಸ್ತುವಿನಿಂದಲೂ ಅಲ್ಲದೆ ಅವರು ಸೃಷ್ಟಿಸಲ್ಪಟ್ಟಿರುವರೇ? ಅಥವಾ, ಸ್ವತಃ ಅವರೇ ಸೃಷ್ಟಿಕರ್ತರಾಗಿರುವರೇ?(35)
ಅಥವಾ, ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವರು ಅವರಾಗಿರುವರೇ? ಅಲ್ಲ, ಅವರು ದೃಢವಾಗಿ ವಿಶ್ವಾಸವಿಡುವುದಿಲ್ಲ.
[ಅತ್ತೂರ್:35-36].
ನಾವು ನಮ್ಮನ್ನು ಸೃಷ್ಟಿಸಿಕೊಳ್ಳಲಿಲ್ಲ ಎಂದಾದರೆ ಮತ್ತು ನಾವು ಶೂನ್ಯತೆಯಿಂದ ಅಥವಾ ಆಕಸ್ಮಿಕವಾಗಿ ಬಂದಿರುವುದು ಅಸಾಧ್ಯವಾದರೆ ಈ ಜಗತ್ತನ್ನು ಒಬ್ಬ ಮಹಾನ್ ಹಾಗೂ ಸಾಮರ್ಥ್ಯವುಳ್ಳ ಸೃಷ್ಟಿಕರ್ತ ಸೃಷ್ಟಿಸಿದ್ದಾನೆಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಒಂದು ಸತ್ಯ ಮಾತಾಗಿದೆ. ಹಾಗಾದರೆ ಈ ಜಗತ್ತು ತನ್ನನ್ನು ತಾನೇ ಸೃಷ್ಟಿಸಿಕೊಳ್ಳುವುದು ಅಥವಾ ಶೂನ್ಯದಿಂದ ಅಥವಾ ಆಕಸ್ಮಿಕವಾಗಿ ಅಸ್ತಿತ್ವಕ್ಕೆ ಬರುವುದು ಅಸಾಧ್ಯವಾಗಿದೆ.
ಮನುಷ್ಯನೇಕೆ ತಾನು ನೋಡದ ವಸ್ತುಗಳ ಮೇಲೆ ವಿಶ್ವಾಸವಿಡುತ್ತಾನೆ? ಉದಾಹರಣೆಗೆ: (ಗ್ರಹಿಕೆ, ಬುದ್ಧಿವಂತಿಕೆ, ಆತ್ಮ, ಭಾವನೆಗಳು ಮತ್ತು ಪ್ರೀತಿ) ಅವನು ಅದರ ಪ್ರಭಾವಗಳನ್ನು ನೋಡುತ್ತಾನೆ ಎಂದಲ್ಲವೇ? ಹೀಗಿರುವಾಗ ಈ ವಿಶಾಲ ಜಗತ್ತಿನ ಸೃಷ್ಟಿಕರ್ತನ ಅಸ್ತಿತ್ವವನ್ನು ಮನುಷ್ಯನು ಹೇಗೆ ನಿರಾಕರಿಸಲಿಕ್ಕೆ ಸಾಧ್ಯ? ಅವನೇನು ಅವನ ಸೃಷ್ಟಿಗಳ, ಅವನ ರಚನೆಯ ಮತ್ತು ಅವನ ಕರುಣೆಯ ಪ್ರಭಾವಗಳನ್ನು ನೋಡುವುದಿಲ್ಲವೇ?
ಈ ಕಟ್ಟಡವನ್ನು ಯಾರೂ ರಚಿಸದೆ ಸ್ವಂತವಾಗಿ ಅಸ್ತಿತ್ವಕ್ಕೆ ಬಂದಿದೆ ಅಥವಾ ಶೂನ್ಯವು ಈ ಕಟ್ಟಡವನ್ನು ಅಸ್ತಿತ್ವಕ್ಕೆ ತಂದಿದೆ ಎಂದು ಯಾವುದೇ ಬುದ್ಧಿವಂತ ವ್ಯಕ್ತಿಗೆ ಹೇಳಿದರೆ ಎಂದಿಗೂ ಅವನು ಈ ಮಾತನ್ನು ಸ್ವೀಕರಿಸುವುದಿಲ್ಲ ಪರಿಸ್ಥಿತಿ ಹೀಗಿರುವಾಗ ಈ ವಿಶಾಲ ಜಗತ್ತು ಯಾವುದೇ ಸೃಷ್ಟಿಕರ್ತನಿಲ್ಲದೆ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳುವರ ಮಾತನ್ನು ಅವನು ಹೇಗೆ ಸ್ವೀಕರಿಸುತ್ತಾನೆ ಜಗತ್ತಿನ ನಿಖರವಾದ ಈ ವ್ಯವಸ್ಥೆ ಆಕಸ್ಮಿಕವಾಗಿ ಅಸ್ಥಿತ್ವಕ್ಕೆ ಬಂದಿದೆ ಎಂದು ಓರ್ವ ಬುದ್ಧಿವಂತ ವ್ಯಕ್ತಿಗೆ ಹೇಳಿದರೆ ಅವನು ಇದನ್ನು ಹೇಗೆ ಸ್ವೀಕರಿಸಲಿಕ್ಕೆ ಸಾಧ್ಯ?
ಈ ಎಲ್ಲಾ ವಿಷಯಗಳು ನಮ್ಮನ್ನು ಒಂದು ತೀರ್ಮಾನಕ್ಕೆ ಕರೆದೊಯ್ಯುತ್ತವೆ ಅದೇನೆಂದರೆ ಈ ಜಗತ್ತಿಗೆ ಅದನ್ನು ನಿಯಂತ್ರಿಸುವ ಸರ್ವ ಶಕ್ತನಾದ ಓರ್ವ ಪರಿಪಾಲಕನಿದ್ದಾನೆ ಮತ್ತು ಅವನು ಮಾತ್ರ ಆರಾಧನೆಗೆ ಅರ್ಹನಾಗಿದ್ದಾನೆ ಅವನ ಹೊರೆತು ಆರಾಧಿಸಲಾಗುವ ಪ್ರತಿಯೊಬ್ಬರ ಆರಾಧನೆ ಮಿಥ್ಯವಾಗಿದೆ ಮತ್ತು ಅವರು ಆರಾಧನೆಗೆ ಅರ್ಹರಲ್ಲ.
ಮಹಾನ್ ಪರಿಪಾಲಕ ಸೃಷ್ಟಿಕರ್ತ
ಈ ಜಗತ್ತಿಗೆ ಒಬ್ಬ ಪರಿಪಾಲಕ ಮತ್ತು ಸೃಷ್ಟಿಕರ್ತನಿದ್ದಾನೆ ಅವನೇ ಇದರ ಒಡೆಯ, ನಿಯಂತ್ರಕ ಮತ್ತು ಅನ್ನಧಾರ ಒದಗಿಸುವವನಾಗಿದ್ದಾನೆ ಅವನೇ ಜೀವನ ಹಾಗೂ ಮರಣ ಕೊಡುವವನಾಗಿದ್ದಾನೆ, ಅವನೇ ಭೂಮಿಯನ್ನು ಸೃಷ್ಟಿಸಿದನು ಮತ್ತು ಅದನ್ನು ವಿನಮ್ರಗೊಳಿಸಿ ತನ್ನ ಸೃಷ್ಟಿಗಳಿಗೆ ಜೀವಿಸಲಿಕ್ಕೆ ಯೋಗ್ಯವನ್ನಾಗಿ ಮಾಡಿದನು ಅವನೇ ಆಕಾಶಗಳನ್ನು ಮತ್ತು ಅದರಲ್ಲಿರುವ ದೊಡ್ಡ ದೊಡ್ಡ ಸೃಷ್ಟಿಗಳನ್ನು ಸೃಷ್ಟಿಸಿದನು ಸೂರ್ಯ ಚಂದ್ರ ಹಗಲು ಮತ್ತು ರಾತ್ರಿಗಾಗಿ ಅವನ ಮಹೊನ್ನತೆಗೆ ಪುರಾವೆಯಾಗುವ ಈ ಸೂಕ್ಷ್ಮ ವ್ಯವಸ್ಥೆಯನ್ನು ಸ್ಥಾಪಿಸಿದನು.
ಅವನೇ ನಮಗಾಗಿ ಗಾಳಿಯನ್ನು ಸೃಷ್ಟಿಸಿದನು ಅದರ ಹೊರೆತು ನಾವು ಬದುಕಲು ಸಾಧ್ಯವಿಲ್ಲ ಅವನೇ ನಮಗಾಗಿ ಮಳೆಯನ್ನು ಸುರಿಸುತ್ತಾನೆ ಅವನೇ ನಮಗಾಗಿ ಸಮುದ್ರ ಮತ್ತು ನದಿಗಳನ್ನು ಹರಿಸಿದನು ನಾವು ನಮ್ಮ ತಾಯಂದಿರ ಗರ್ಭದಲ್ಲಿ ಯಾವುದೇ ಶಕ್ತಿ ಇಲ್ಲದೆ ಇದ್ದಾಗ ಅವನೇ ನಮಗೆ ಆಹಾರ ದಯಪಾಲಿಸಿದನು ಮತ್ತು ನಮ್ಮನ್ನು ರಕ್ಷಿಸಿದನು ಅವನೇ ನಮ್ಮ ಜನ್ಮದಿಂದ ಮರಣದವರೆಗೆ ನಮ್ಮ ರಕ್ತನಾಳಗಳಲ್ಲಿ ರಕ್ತವನ್ನು ಹರಿಸುತ್ತಾನೆ.
ಈ ಪರಿಪಾಲಕ ಸೃಷ್ಟಿಕರ್ತ ಅನ್ನದಾತ ಅವನೇ ಪರಮ ಪಾವನ ಸರ್ವಶಕ್ತ ಅಲ್ಲಾಹನಾಗಿದ್ದಾನೆ
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿إِنَّ رَبَّكُمُ اللَّهُ الَّذِي خَلَقَ السَّمَاوَاتِ وَالْأَرْضَ فِي سِتَّةِ أَيَّامٍ ثُمَّ اسْتَوَى عَلَى الْعَرْشِ يُغْشِي اللَّيْلَ النَّهَارَ يَطْلُبُهُ حَثِيثًا وَالشَّمْسَ وَالْقَمَرَ وَالنُّجُومَ مُسَخَّرَاتٍ بِأَمْرِهِ أَلَا لَهُ الْخَلْقُ وَالْأَمْرُ تَبَارَكَ اللَّهُ رَبُّ الْعَالَمِينَ 54﴾
ಖಂಡಿತವಾಗಿಯೂ ಆರು ದಿನಗಳಲ್ಲಿ ಆಕಾಶ ಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿದ ಅಲ್ಲಾಹುವಾಗಿ ರುವನು ನಿಮ್ಮ ಪ್ರಭು. ತರುವಾಯ ಅವನು ಸಿಂಹಾಸನಾ ರೂಢನಾದನು. ಅವನು ಹಗಲನ್ನು ರಾತ್ರಿಯಿಂದ ಮುಚ್ಚುವನು. ಕ್ಷಿಪ್ರಗತಿಯಲ್ಲಿ ಅದು ಹಗಲನ್ನು ಹುಡುಕುತ್ತಾ ಸಾಗುವುದು. ತನ್ನ ಆಜ್ಞೆಗೆ ವಿಧೇಯಗೊಳಿಸಲಾದ ರೀತಿಯಲ್ಲಿ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು (ಅವನು ಸೃಷ್ಟಿಸಿರುವನು). ತಿಳಿಯಿರಿ! ಸೃಷ್ಟಿ ಮತ್ತು ಆಜ್ಞಾಧಿಕಾರವು ಅವನಿಗೇ ಆಗಿವೆ. ಸರ್ವಲೋಕಗಳ ಪ್ರಭುವಾದ ಅಲ್ಲಾಹು ಅನುಗ್ರಹಪೂರ್ಣನಾಗಿರುವನು.
(ಅಲ್- ಅ'ಅರಾಫ್ 54)
ಅಲ್ಲಾಹನೇ ಸರ್ವ ಜಗತ್ತಿನ ನಾವು ನೋಡುವ ಮತ್ತು ನೋಡದೆ ಇರುವ ಎಲ್ಲಾ ವಸ್ತುಗಳ ಸ್ಪಷ್ಟಕರ್ತ ಮತ್ತು ಪರಿಪಾಲಕನಾಗಿದ್ದಾನೆ ಅವನ ಹೊರತಾಗಿರುವುದೆಲ್ಲವೂ ಅವನ ವಿಶಾಲ ಸೃಷ್ಟಿಯ ಒಂದು ಭಾಗವಾಗಿದೆ ಅವನೊಬ್ಬನೇ ಮಾತ್ರ ಆರಾಧನೆಗೆ ಅರ್ಹನಾಗಿದ್ದಾನೆ ಅವನ ಹೊರತು ಇನ್ನಾರು ಆರಾಧನೆಗೆ ಅರ್ಹರಿಲ್ಲ ಅವನ ಒಡೆತನ ಅಥವಾ ಅವನ ಸೃಷ್ಟಿ ಅಥವಾ ಅವನ ನಿಯಂತ್ರಿಕೆ ಅಥವಾ ಅವನ ಆರಾಧನೆಯಲ್ಲಿ ಅವನಿಗೆ ಯಾರೂ ಭಾಗೀದಾರರಿಲ್ಲ.
ಸರ್ವಶಕ್ತ ಅಲ್ಲಾಹನೊಂದಿಗೆ ಅನ್ಯ ಆರಾಧ್ಯರು ಇರುತ್ತಿದ್ದರೆ ಜಗತ್ತಿನ ವ್ಯವಸ್ಥೆ ಕೆಟ್ಟು ಹೋಗುತ್ತಿತ್ತು ಏಕೆಂದರೆ ಒಂದೇ ಸಮಯದಲ್ಲಿ ಜಗತ್ತಿನ ವ್ಯವಸ್ಥೆಯನ್ನು ಎರಡು ಆರಾಧ್ಯರು ನಿಯಂತ್ರಿಸುವುದು ಸೂಕ್ತವಲ್ಲ ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿لَوْ كَانَ فِيهِمَا آلِهَةٌ إِلَّا اللَّهُ لَفَسَدَتَا...﴾
ಅವುಗಳಲ್ಲಿ (ಆಕಾಶ ಭೂಮಿಗಳಲ್ಲಿ) ಅಲ್ಲಾಹು ವಿನ ಹೊರತು ಬೇರೆ ಆರಾಧ್ಯರಿರುತ್ತಿದ್ದರೆ ಅವೆರಡೂ ಸರ್ವನಾಶವಾಗಿ ಬಿಡುತ್ತಿದ್ದವು
ಅಲ್ ಅಂಬಿಯಾ:22
ಸೃಷ್ಟಿಕರ್ತ ಮತ್ತು ಪರಿಪಾಲಕ ಪ್ರಭುವಿನ ಗುಣಲಕ್ಷಣಗಳು
ಪರಮ ಪಾವನ ಪರಿಪಾಲಕ ಪ್ರಭುವಿಗೆ ಅಸಂಖ್ಯಾತ ಅತ್ಯಂತ ಸುಂದರ ಹೆಸರುಗಳಿವೆ ಅವನಿಗೆ ಅವನ ಪರಿಪೂರ್ಣತೆಯನ್ನು ಸೂಚಿಸುವ ಅನೇಕ ವಿಶಾಲ ಮತ್ತು ಶ್ರೇಷ್ಠ ಗುಣಲಕ್ಷಣಗಳಿವೆ ಅವನ ನಾಮಗಳಲ್ಲಿ ಕೆಲವು ಹೀಗಿವೆ: "ಅಲ್ ಖಾಲಿಖ್"(ಸೃಷ್ಟಿಕರ್ತ), "ಅಲ್ಲಾಹ್ "ಇದರರ್ಥ ಏಕೈಕ ಆರಾಧನೆಗೆ ಅರ್ಹನಾದವನು ಅವನ ಜೊತೆ ಯಾರು ಸಹಭಾಗಿಗಳಿಲ್ಲ,"ಅಲ್ ಹಯ್ಯು"(ಎಂದೆಂದಿಗೂ ಜೀವಂತನಿರುವವನು),ಅಲ್ ಖಯ್ಯಮ್,(ಸರ್ವವನ್ನೂ ನಿಯಂತ್ರಿಸುವವನು)ಅರ್ರಹೀಮ್(ವಿಶೇಷವಾಗಿ ದಯೆ ತೋರುವವನು)ಅರ್ರಜ್ಜಾಖ್ (ಜೀವನಾಧಾರ ನೀಡುವವನು) ಅಲ್ ಕರೀಮ್(ಮಹಾ ಉದಾರಿ).
ಸರ್ವಶಕ್ತನಾದ ಅಲ್ಲಾಹು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ:
﴿اللَّهُ لَا إِلَهَ إِلَّا هُوَ الْحَيُّ الْقَيُّومُ لَا تَأْخُذُهُ سِنَةٌ وَلَا نَوْمٌ لَهُ مَا فِي السَّمَوَاتِ وَمَا فِي الأَرْضِ مَنْ ذَا الَّذِي يَشْفَعُ عِنْدَهُ إِلَّا بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِشَيْءٍ مِنْ عِلْمِهِ إِلَّا بِمَا شَاءَ وَسِعَ كُرْسِيُّهُ السَّمَوَاتِ وَالأَرْضَ وَلَا يَئُودُهُ حِفْظُهُمَا وَهُوَ الْعَلِيُّ الْعَظِيمُ 255﴾
ಅಲ್ಲಾಹ್ ಚಿರಂತನು, ಸ್ವಯಂ ಜೀವಂತನು, ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾದಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆವಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನು ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಳಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವಶ್ರೇಷ್ಠನೂ ಆಗಿರುತ್ತಾನೆ.
[ಸೂರ ಬಕರ:255 ]
ಸರ್ವಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿قُلْ هُوَ اللَّهُ أَحَدٌ ١ اللَّهُ الصَّمَدُ ٢ لَمْ يَلِدْ وَلَمْ يُولَدْ ٣ وَلَمْ يَكُنْ لَهُ كُفُوًا أَحَدٌ4﴾
(ಓ ಪ್ರವಾದಿಯವರೇ!) ಹೇಳಿರಿ: ‘ಅವನು ಅಲ್ಲಾಹು! ಏಕಮೇವನಾಗಿರುವನು.(1)
ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು.(2)
ಅವನಿಗೆ ಯಾವ ಸಂತಾನವು ಇಲ್ಲ ಮತ್ತು ಅವನು ಯಾರ ಸಂತಾನವೂ ಅಲ್ಲ. (3)
ಮತ್ತು ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. (4)”
[ಅಲ್-ಇಖ್ಲಾಸ್:1-4]
ಪರಿಪಾಲಕ ಆರಾಧ್ಯನು ತನ್ನ ಎಲ್ಲಾ ಗುಣಲಕ್ಷಣಗಳಲ್ಲಿ ಪರಿಪೂರ್ಣನಾಗಿದ್ದಾನೆ.
ಅವನ ಒಂದು ಗುಣವೆಂದರೆ ಅವನು ಆರಾಧಿಸಲ್ಪಡುವ ಆರಾಧ್ಯನಾಗಿದ್ದಾನೆ ಮತ್ತು ಅವನ ಹೊರತಾಗಿರುವರೆಲ್ಲರೂ ಹೊಣೆಗಾರಿಕೆ ವಹಿಸಲ್ಪಟ್ಟ, ಆಜ್ಞಾಪಿಸಲ್ಪಟ್ಟ ಮತ್ತು ಅಧೀನವಾಗಿರುವ ಸೃಷ್ಟಿಯಾಗಿದ್ದಾರೆ.
ಅವನ ಒಂದು ಗುಣವೆಂದರೆ ಅವನು ಸದಾ ಜೀವಂತವಾಗಿರುವವನು, ಸರ್ವವನ್ನೂ ನಿಯಂತ್ರಿಸುವವನು ಆಗಿದ್ದಾನೆ ಜಗತ್ತಿನ ಪ್ರತಿಯೊಂದು ಜೀವಿಯನ್ನು ಅವನೇ ಜೀವಂತಗೊಳಿಸಿದನು ಮತ್ತು ಅವನೇ ಶೂನ್ಯದಿಂದ ಅಸ್ತಿತ್ವ ಒದಗಿಸಿದನು ಅವನೇ ಜೀವನಾಧಾರ ಒದಗಿಸುವವನಾಗಿದ್ದಾನೆ ಮತ್ತು ಅವರ ಎಲ್ಲಾ ಅಗತ್ಯಗಳನ್ನು ಪೂರೈಸುವವನಾಗಿದ್ದಾನೆ ಪರಿಪಾಲಕ ಪ್ರಭು ಸದಾ ಜೀವಂತನಾಗಿದ್ದಾನೆ ಅವನಿಗೆ ಮರಣ ಬರುವುದಿಲ್ಲ ಮತ್ತು ಅವನು ಶಾಶ್ವತನಾಗಿರುತ್ತಾನೆ ಅವನೇ ಈ ಜಗತ್ತಿನ ನಿಯಂತ್ರಕನಾಗಿದ್ದಾನೆ ಅವನು ನಿದ್ರಿಸುವುದಿಲ್ಲ ಮಾತ್ರವಲ್ಲ ತೂಕಡಿಕೆಯಾಗಲಿ ನಿದ್ರೆಯಾಗಲಿ ಅವನಿಗೆ ಬಾಧಿಸಲಾರದು.
ಅವನ ಗುಣಗಳಲ್ಲೊಂದು ಅವನು ಸರ್ವವನ್ನು ಅರಿಯುವವನಾಗಿದ್ದಾನೆ ಭೂಮಿಯಲ್ಲಿರುವ ಅಥವಾ ಆಕಾಶದಲ್ಲಿರುವ ಯಾವುದೇ ವಸ್ತುವೂ ಅಲ್ಲಾಹುವಿನಿಂದ ಮರೆಯಾಗಲಾರದು
ಅವನ ಗುಣಗಳಲ್ಲೊಂದು ಅವನು ಆಲಿಸುವವನು ಮತ್ತು ನೋಡುವವನಾಗಿದ್ದಾನೆ ಅವನು ಎಲ್ಲವನ್ನೂ ಆಲಿಸುವವನು ಮತ್ತು ಸೃಷ್ಟಿಗಳನ್ನು ನೋಡುವವನಾಗಿದ್ದಾನೆ ಅವನು ಹೃದಯಗಳಲ್ಲಿ ಉದ್ಭವಿಸುವ ಆಲೋಚನೆಗಳನ್ನು ಮತ್ತು ಮನಸ್ಸುಗಳಲ್ಲಿ ಅಡಗಿರುವ ಮಾತುಗಳನ್ನು ಅರಿಯುತ್ತಾನೆ ಭೂಮಿ ಮತ್ತು ಆಕಾಶಗಳಲ್ಲಿ ಆ ಪರಮಪಾನದಿಂದ ಯಾವುದೇ ವಸ್ತು ಮರೆಯಾಗಿಲ್ಲ.
ಅವನ ಗುಣಲಕ್ಷಣಗಳೆಲ್ಲೊಂದು ಅವನು ಸಾಮರ್ಥ್ಯವುಳ್ಳವನಾಗಿದ್ದಾನೆ ಅವನನ್ನು ಸೋಲಿಸಲು ಮತ್ತು ಅವನ ಉದ್ದೇಶವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಅವನು ಬಯಸಿದ್ದನ್ನು ಮಾಡುತ್ತಾನೆ ಮತ್ತು ಬಯಸಿದ್ದನ್ನು ತಡೆಯುತ್ತಾನೆ ಅವನು ಯಾರನ್ನು ಬೇಕಾದರೂ ಮುಂದಕ್ಕೆ ಮತ್ತು ಅವನ ಬಯಸಿದವನನ್ನು ಹಿಂತಿರುಗಿಸುತ್ತಾನೆ ಅವನು ಪರಿಪೂರ್ಣ ಯುಕ್ತಿವುಳ್ಳವನಾಗಿದ್ದಾನೆ.
ಅವನ ಗುಣಲಕ್ಷಣಗಳೆಲ್ಲೊಂದು ಅವನೇ ಸೃಷ್ಟಿಕರ್ತ, ಅನ್ನದಾತ ಮತ್ತು ನಿಯಂತ್ರಕನಾಗಿದ್ದಾನೆ ಅವನೇ ಸೃಷ್ಟಿಗಳನ್ನು ಸೃಷ್ಟಿಸಿ ಅವುಗಳನ್ನು ನಿಯಂತ್ರಿಸುತ್ತಿದ್ದಾನೆ ಎಲ್ಲಾ ಪ್ರಶ್ನೆಗಳು ಅವನ ಅಧೀನ ಮತ್ತು ಹಿಡಿತದಲ್ಲಿವೆ.
ಅವನ ಗುಣಲಕ್ಷಣಗಳಲ್ಲೊಂದು ಅವನೇ ಕಷ್ಟದಲ್ಲಿರುವವನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಮತ್ತು ದುಃಖಿತ ವ್ಯಕ್ತಿಗೆ ಸಹಾಯವನ್ನು ಒದಗಿಸುತ್ತಾನೆ ಮತ್ತು ಸಂಕಟದಲ್ಲಿರುವ ವ್ಯಕ್ತಿಯ ಸಂಕಟವನ್ನು ಪರಿಹರಿಸುತ್ತಾರೆ ಯಾವುದೇ ಸೃಷ್ಟಿಯು ಯಾವುದೇ ತೊಂದರೆ ಅಥವಾ ಕಷ್ಟದಲ್ಲಿ ಸಿಲುಕಿದಾಗ ದಣಿದು ಅವನ ಬಳಿಯೇ ಆಶ್ರಯ ಪಡೆಯುತ್ತದೆ.
ಆರಾಧನೆ ಕೇವಲ ಅಲ್ಲಾಹನಿಗೆ ಮಾತ್ರ ಆಗಬೇಕು ಏಕೆಂದರೆ ಅವನೇ ಮಾತ್ರ ಪರಿಪೂರ್ಣ ಮತ್ತು ಏಕೈಕ ಆರಾಧನೆಗೆ ಅರ್ಹನಾಗಿದ್ದಾನೆ ಅವನ ಹೊರತು ಯಾರೂ ಆರಾಧನೆಗೆ ಅರ್ಹರಲ್ಲ ಅವನ ಹೊರತು ಯಾರು ಆರಾಧಿಸಲ್ಪಡುತ್ತಾನೋ ಅವನು ಮಿಥ್ಯ ಆರಾಧ್ಯನಾಗಿದ್ದಾನೆ ಮತ್ತು ಅವನು ಅಪೂರ್ಣ ಹಾಗೂ ಮರಣ ಹೊಂದುವವನು,ನಾಶವಾಗುವನಾಗಿದ್ದಾನೆ.
ಸರ್ವಶಕ್ತನಾದ ಅಲ್ಲಾಹನು ಅವನ ಹಿರಿಮೆಯನ್ನು ಅರಿಯುವ ಬುದ್ದಿಯನ್ನು ನಮಗೆ ದಯಪಾಲಿಸಿದ್ದಾನೆ ಒಳಿತನ್ನು ಪ್ರೀತಿಸುವ, ಕೆಡುಕನ್ನು ದ್ವೇಷಿಸುವ ಮತ್ತು ಸರ್ವ ಲೋಕಗಳ ಪರಿಪಾಲಕನೆಡೆಗೆ ಮರಳಿದಾಗ ಸಂತೃಪ್ತನಾಗುವ ಸ್ವಭಾವವನ್ನು ಅವನು ನಮಗೆ ನೀಡಿದ್ದಾನೆ ಮತ್ತು ಈ ಸ್ವಭಾವವು ಆ ಪರಿಪಾಲಕ ಪ್ರಭುವಿನ ಪರಿಪೂರ್ಣತೆಯನ್ನು ಹಾಗೂ ಅವನು ನ್ಯೂನ್ಯತೆಗಳಿಂದ ಪರಿಶುದ್ಧನಾಗಿದ್ದಾನೆಂದು ಸೂಚಿಸುತ್ತದೆ.
ಪರಿಪೂರ್ಣನಾದವನ ಹೊರತು ಇತರರನ್ನು ಆರಾಧಿಸುವುದು ಒಬ್ಬ ಬುದ್ಧಿವಂತ ವ್ಯಕ್ತಿಗೆ ಸೂಕ್ತವಲ್ಲ ತನ್ನಂತಹ ಅಥವಾ ತನಗಿಂತ ಕೆಳಮಟ್ಟದ ಅಪೂರ್ಣ ಸೃಷ್ಟಿ ಹೇಗೆ ಆರಾಧನೆಗೆ ಅರ್ಹನಾಗಲಿಕ್ಕೆ ಸಾಧ್ಯ.
ದೇವರನ್ನು ಮನುಷ್ಯ, ವಿಗ್ರಹ, ಮರ ಅಥವಾ ಪ್ರಾಣಿ ಎಂದು ಪರಿಗಣಿಸಲಾಗುವುದಿಲ್ಲ!
ಪರಿಪಾಲಕ ಸೃಷ್ಟಿಕರ್ತ ತನ್ನ ಆಕಾಶಗಳ ಮೇಲೆ ತನ್ನ ಅರ್ಶಿನ ಮೇಲೆ ರೂಢನಾಗಿದ್ದಾನೆ ತನ್ನ ಸೃಷ್ಟಿಗಳಿಂದ ಪ್ರತ್ಯೇಕನಾಗಿದ್ದಾನೆ ಅವನ ಯಾವುದೇ ಸೃಷ್ಟಿ ಅವನೊಳಗೆ ಪ್ರವೇಶಗೊಂಡಿಲ್ಲ ಮತ್ತು ಅವನೂ ಸಹ ಯಾವುದೇ ಸೃಷ್ಟಿಯೊಳಗೆ ಪ್ರವೇಶ ಗೊಂಡಿಲ್ಲ ಅವನು ಯಾವುದೇ ದೃಷ್ಟಿಯ ಆಕಾರದಲ್ಲಿ ರೂಪ ತಾಳುವುದಿಲ್ಲ
ಪರಿಪಾಲಕ ಸೃಷ್ಟಿಕರ್ತನಿಗೆ ಹೋಲಿಕೆಯಾಗುವ ಯಾವ ವಸ್ತುವೂ ಇಲ್ಲ ಅವನು ಎಲ್ಲವನ್ನೂ ಆಲಿಸುವವನು ಎಲ್ಲವನ್ನೂ ವೀಕ್ಷಿಸುವವನು ಆಗಿರುವನು ಅವನಿಗೆ ಸರಿ ಸಮಾನರಾಗಿ ಯಾರೂ ಇಲ್ಲ ಅವನು ತನ್ನ ಸೃಷ್ಟಿಗಳಿಂದ ನಿರಪೇಕ್ಷನಾಗಿದ್ದಾನೆ ಅವನು ತಿನ್ನುವುದೂ ಇಲ್ಲ ಮತ್ತು ಮಲಗುವುದೂ ಇಲ್ಲ ಅವನು ಮಹಾನನು ಅವನಿಗೆ ಹೆಂಡತಿ ಅಥವಾ ಮಕ್ಕಳಿರಲು ಸಾಧ್ಯವಿಲ್ಲ ಆ ಸೃಷ್ಟಿಕರ್ತನಿಗೆ ಅತ್ಯಂತ ಶ್ರೇಷ್ಠ ಗುಣಲಕ್ಷಣಗಳಿವೆ ಸೃಷ್ಟಿಕರ್ತನಾದ ಅಲ್ಲಾಹನಿಗೆ ಯಾವುದೇ ಅವಶ್ಯಕತೆ ಅಥವಾ ಅವನಲ್ಲಿ ಯಾವುದೇ ಕೊರತೆ ಇರಲು ಇಂದಿಗೂ ಸಾಧ್ಯವಿಲ್ಲ .
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿يَا أَيُّهَا النَّاسُ ضُرِبَ مَثَلٌ فَاسْتَمِعُوا لَهُ إِنَّ الَّذِينَ تَدْعُونَ مِنْ دُونِ اللَّهِ لَنْ يَخْلُقُوا ذُبَابًا وَلَوِ اجْتَمَعُوا لَهُ وَإِنْ يَسْلُبْهُمُ الذُّبَابُ شَيْئًا لَا يَسْتَنْقِذُوهُ مِنْهُ ضَعُفَ الطَّالِبُ وَالْمَطْلُوبُ ٧٣ مَا قَدَرُوا اللَّهَ حَقَّ قَدْرِهِ إِنَّ اللَّهَ لَقَوِيٌّ عَزِيزٌ 74﴾
“ಓ ಜನರೇ! ಒಂದು ಉದಾಹರಣೆಯನ್ನು ನೀಡಲಾಗುತ್ತದೆ. ಅದನ್ನು ಕಿವಿಗೊಟ್ಟು ಕೇಳಿರಿ. ಖಂಡಿತವಾಗಿಯೂ ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುವವರು ಒಂದು ನೊಣವನ್ನೂ ಸೃಷ್ಟಿಸಲಾರರು. ಅದಕ್ಕಾಗಿ ಅವರೆಲ್ಲರೂ ಒಟ್ಟುಗೂಡಿದರೂ ಸಹ! ನೊಣವು ಅವರಿಂದ ಏನನ್ನಾದರೂ ಕಸಿದುಕೊಂಡು ಹೋದರೆ ಅದರಿಂದ ಅದನ್ನು ಮರಳಿಪಡೆಯಲು ಅವರಿಗೆ ಸಾಧ್ಯವಾಗದು. ಪ್ರಾರ್ಥಿಸುವವನೂ ಪ್ರಾರ್ಥಿಸಲ್ಪಡುವವನೂ ಬಲಹೀನರಾಗಿರುವರು!”
[ಸೂರ ಅಲ್-ಹಜ್ಜ್: 73].
ಅಲ್ಲಾಹುವನ್ನು ಗಣನೆ ಮಾಡಬೇಕಾದ ರೀತಿಯಲ್ಲಿ ಅವರು ಗಣನೆ ಮಾಡಲಿಲ್ಲ. ಖಂಡಿತವಾಗಿಯೂ ಅಲ್ಲಾಹು ಬಲಿಷ್ಠನೂ ಪ್ರತಾಪಶಾಲಿಯೂ ಆಗಿರುವನು.
(ಅಲ್ ಹಜ್ಜ್:73-74)
ಈ ಮಹಾನ್ ಸೃಷ್ಟಿಕರ್ತ ನಮ್ಮನ್ನೇಕೆ ಸೃಷ್ಟಿಸಿದ್ದಾನೆ? ಅವನು ನಮ್ಮಿಂದ ಬಯಸುವುದೇನು?
ಅಲ್ಲಾಹನು ಈ ಎಲ್ಲಾ ಸೃಷ್ಟಿಗಳನ್ನು ಉದ್ದೇಶರಹಿತ ಸೃಷ್ಟಿಸಿದ್ದಾನೆಂದು ಅರ್ಥವಾಗಬಹುದೇ? ಅವನು ಯುಕ್ತಿಪೂರ್ಣನು, ಎಲ್ಲವನ್ನು ಅರಿಯುವವನಾಗಿರುವಾಗ ಅವನು ಅವರನ್ನು ವ್ಯರ್ಥವಾಗಿ ಸೃಷ್ಟಿಸಿದ್ದಾನೆಯೇ?
ಇಷ್ಟು ಕರಾರುವಾಕ್ಕಾಗಿ ಮತ್ತು ನಿಖರವಾಗಿ ನಮ್ಮನ್ನು ಸೃಷ್ಟಿಸಿದವನು ಮತ್ತು ಭೂಮಿ ಹಾಗೂ ಆಕಾಶಗಳಲ್ಲಿರುವ ಎಲ್ಲವನ್ನೂ ನಮ್ಮ ಅಧೀನದಲ್ಲಿರಿಸಿದವನು ನಮ್ಮನ್ನು ಯಾವುದೇ ಉದ್ದೇಶವಿಲ್ಲದೆ ಸೃಷ್ಟಿಸಿದ್ದಾನೆಯೇ ಅಥವಾ ನಮ್ಮನ್ನು ಕಾರ್ಯನಿರತರನ್ನಾಗಿ ಮಾಡುವ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸದೇ ಹಾಗೆ ಬಿಟ್ಟಿದ್ದಾನೆಯೇ ಉದಾಹರಣೆಗೆ: ನಾವಿಲ್ಲೇಕ್ಕಿದ್ದೇವೆ? ಮರಣ ನಂತರ ಏನಾಗುವುದು? ನಮ್ಮನ್ನು ಸೃಷ್ಟಿಸುವ ಉದ್ದೇಶವೇನು?
ದುಷ್ಕರ್ಮವೆಸಗುವವರಿಗೆ ಶಿಕ್ಷೆ ಮತ್ತು ಸತ್ಕರ್ಮವೆಗುವವರಿಗೆ ಪ್ರತಿಫಲ ಇರಬಾರದು ಎಂಬುದು ಸಮಂಜಸವಾದ ಮಾತಲ್ಲವೇ ?
ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
﴿أَفَحَسِبْتُمْ أَنَّمَا خَلَقْنَاكُمْ عَبَثًا وَأَنَّكُمْ إِلَيْنَا لَا تُرْجَعُونَ 115﴾
ನಾವು ನಿಮ್ಮನ್ನು ಉದ್ದೇಶರಹಿತವಾಗಿ ಸೃಷ್ಟಿಸಿರುವೆವು ಮತ್ತು ನೀವು ನಮ್ಮ ಬಳಿಗೆ ಮರಳಿ ಬರಲಾರಿರಿ ಎಂದೂ ನೀವು ಭಾವಿಸಿರುವಿರಾ?
[ಅಲ್-ಮುಅ್‌ಮಿನೂನ್:115]
ಸತ್ಯವೇನೆಂದರೆ ಅಲ್ಲಾಹನು ಸಂದೇಶವಾಹಕರನ್ನು ಕಳುಹಿಸಿ ಅವರ ಮೂಲಕ ನಮ್ಮ ಜೀವನದ ಉದ್ದೇಶವೇನು ನಾವು ನಮ್ಮ ಪರಿಪಾಲಕ ಸೃಷ್ಟಿಕರ್ತನನ್ನು ಹೇಗೆ ಆರಾಧಿಸಬೇಕು, ಅವನ ಸಾಮಿಪ್ಯವನ್ನು ಹೇಕೆ ಪಡೆಯಬೇಕು, ಅಲ್ಲಾಹನು ನಮ್ಮಿಂದ ಏನನ್ನು ಬಯಸುತ್ತಾನೆ, ನಾವು ಅವನ ಸಂತೃಪ್ತಿಯನ್ನು ಹೇಗೆ ಪಡೆಯಬಹುದು, ಮತ್ತು ಮರಣದ ನಂತರ ನಮ್ಮ ಪರಿಣಾಮ ಏನಾಗುತ್ತದೆ ಎಂದು ತಿಳಿಸಿದನು.
ಅಲ್ಲಾಹು ಏಕೈಕನೇ ಆರಾಧನೆಗೆ ಅರ್ಹನೆಂದು ನಮಗೆ ತಿಳಿಸಲು ಮತ್ತು ಅವನನ್ನು ಹೇಗೆ ಆರಾಧಿಸಬೇಕೆಂದು ನಾವು ಕಲಿಯಲು, ಅವನ ಆಜ್ಞೆಗಳನ್ನು ಮತ್ತು ನಿಷೇಧಗಳನ್ನು ನಮಗೆ ತಲುಪಿಸಲು ಹಾಗೂ ಸದ್ಗುಣಗಳನ್ನು ನಮಗೆ ಭೋದಿಸಲು ಅಲ್ಲಾಹನು ಸಂದೇಶವಾಹಕರನ್ನು ಕಳುಹಿಸಿದನು ಆ ಸದ್ಗುಣಗಳನ್ನು ನಾವು ಅಳವಡಿಸಿಕೊಂಡರೆ ನಮ್ಮ ಜೀವನವು ಒಳಿತು ಮತ್ತು ಸಮೃದ್ಧಿಗಳಿಂದ ತುಂಬಿಕೊಳ್ಳುತ್ತದೆ.
ಅಲ್ಲಾಹನು ಅನೇಕ ಸಂದೇಶವಾಹಕರನ್ನು ಕಳುಹಿಸಿದನು ಉದಾಹರಣೆಗೆ:ನೂಹ್,ಇಬ್ರಾಹೀಮ್,ಮೂಸಾ ಮತ್ತು ಈಸಾ ಮತ್ತು ಅವರ ಸತ್ಯತೆ ಹಾಗೂ ಅವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆಂದು ಸೂಚಿಸುವ ದೃಷ್ಟಾಂತ ಮತ್ತು ಪವಾಡಗಳೊಂದಿಗೆ ಅವರಿಗೆ ಬೆಂಬಲ ನೀಡಿದನು ಅವರಲ್ಲಿ ಅಂತಿಮ ಸಂದೇಶವಾಹಕರು ಮುಹಮ್ಮದ್ ﷺ ರವರಾಗಿದ್ದಾರೆ.
ಈ ಜೀವನವು ಒಂದು ಪರೀಕ್ಷೆಯಾಗಿದೆ ಮತ್ತು ನೈಜ ಜೀವನವು ಮರಣದ ನಂತರವಾಗಿದೆ ಎಂದು ಸಂದೇಶವಾಹಕರು ಸ್ಪಷ್ಟವಾಗಿ ನಮಗೆ ತಿಳಿಸಿದ್ದಾರೆ
ಯಾವುದೇ ಸಹಭಾಗಿತ್ವವಿಲ್ಲದೆ ಅಲ್ಲಾಹನನ್ನು ಮಾತ್ರ ಆರಾಧಿಸುವ ಮತ್ತು ಎಲ್ಲಾ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವ ಸತ್ಯ ವಿಶ್ವಾಸಿಗಳಿಗೆ ಅಲ್ಲಿ ಸ್ವರ್ಗವಿದೆ, ಅದೇ ರೀತಿ ಅಲ್ಲಾಹನೊಂದಿಗೆ ಇತರೆ ಮಿಥ್ಯ ಆರಾಧ್ಯರುಗಳನ್ನು ಆರಾಧಿಸಿ ಯಾವುದೇ ಸಂದೇಶವಾಹಕರನ್ನು ನಿಷೇಧಿಸಿದ ಸತ್ಯನಿಷೇಧಿಗಳಿಗೆ ಅಲ್ಲಿ ನರಕವಿದೆ.
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿يَا بَنِي آدَمَ إِمَّا يَأْتِيَنَّكُمْ رُسُلٌ مِنْكُمْ يَقُصُّونَ عَلَيْكُمْ آيَاتِي فَمَنِ اتَّقَى وَأَصْلَحَ فَلَا خَوْفٌ عَلَيْهِمْ وَلَا هُمْ يَحْزَنُونَ ٣٥ وَالَّذِينَ كَذَّبُوا بِآيَاتِنَا وَاسْتَكْبَرُوا عَنْهَا أُولَئِكَ أَصْحَابُ النَّارِ هُمْ فِيهَا خَالِدُونَ 36﴾
ಓ ಆದಮ್ ಸಂತತಿಗಳೇ! ನಿಮಗೆ ನನ್ನ ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾ ನಿಮ್ಮಿಂದಲೇ ನಿಮ್ಮ ಬಳಿಗೆ ಸಂದೇಶವಾಹಕರು ಬರುವಾಗ ಭಯಭಕ್ತಿ ಪಾಲಿಸುವವರು ಮತ್ತು ನಿಲುವನ್ನು ಸುಧಾರಿಸುವವರು ಯಾರೋ ಅವರು ಯಾವುದನ್ನೂ ಭಯಪಡಬೇಕಾಗಿಲ್ಲ. ಅವರು ದುಃಖಿಸಬೇಕಾಗಿಯೂ ಬರಲಾರದು(35)
ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರು ಮತ್ತು ಅವುಗಳಿಗೆದುರಾಗಿ ಅಹಂಕಾರಪಡುವವರು ಯಾರೋ ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
[ಅಲ್ ಅ'ಅರಾಫ್35-36]
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿يَا أَيُّهَا النَّاسُ اعْبُدُوا رَبَّكُمُ الَّذِي خَلَقَكُمْ وَالَّذِينَ مِنْ قَبْلِكُمْ لَعَلَّكُمْ تَتَّقُونَ ٢١ الَّذِي جَعَلَ لَكُمُ الْأَرْضَ فِرَاشًا وَالسَّمَاءَ بِنَاءً وَأَنْزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَكُمْ فَلَا تَجْعَلُوا لِلَّهِ أَنْدَادًا وَأَنْتُمْ تَعْلَمُونَ ٢٢ وَإِنْ كُنْتُمْ فِي رَيْبٍ مِمَّا نَزَّلْنَا عَلَى عَبْدِنَا فَأْتُوا بِسُورَةٍ مِنْ مِثْلِهِ وَادْعُوا شُهَدَاءَكُمْ مِنْ دُونِ اللَّهِ إِنْ كُنْتُمْ صَادِقِينَ ٢٣ فَإِنْ لَمْ تَفْعَلُوا وَلَنْ تَفْعَلُوا فَاتَّقُوا النَّارَ الَّتِي وَقُودُهَا النَّاسُ وَالْحِجَارَةُ أُعِدَّتْ لِلْكَافِرِينَ ٢٤ وَبَشِّرِ الَّذِينَ آمَنُوا وَعَمِلُوا الصَّالِحَاتِ أَنَّ لَهُمْ جَنَّاتٍ تَجْرِي مِنْ تَحْتِهَا الْأَنْهَارُ كُلَّمَا رُزِقُوا مِنْهَا مِنْ ثَمَرَةٍ رِزْقًا قَالُوا هَذَا الَّذِي رُزِقْنَا مِنْ قَبْلُ وَأُتُوا بِهِ مُتَشَابِهًا وَلَهُمْ فِيهَا أَزْوَاجٌ مُطَهَّرَةٌ وَهُمْ فِيهَا خَالِدُونَ 25﴾
"ಓ ಮನುಷ್ಯರೇ! ನೀವು ನಿಮ್ಮನ್ನು ಮತ್ತು ನಿಮ್ಮ ಪೂರ್ವಿಕರನ್ನು ಸೃಷ್ಟಿಸಿದ ನಿಮ್ಮ ಪ್ರಭುವನ್ನು ಆರಾಧಿಸಿರಿ. ನೀವು ಭಯಭಕ್ತಿ ಪಾಲಿಸುವವರಾಗುವ ಸಲುವಾಗಿ."
“ನಿಮಗೋಸ್ಕರ ಭೂಮಿಯನ್ನು ಹಾಸನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟಿರುವ, ಹಾಗೂ ಆಕಾಶದಿಂದ ನೀರನ್ನು ಇಳಿಸಿ ತನ್ಮೂಲಕ ನಿಮಗೆ ಭಕ್ಷ್ಯಯೋಗ್ಯ ಫಲಗಳನ್ನು ಉತ್ಪಾದಿಸಿಕೊಟ್ಟಿರುವ (ವನನ್ನು ಆರಾಧಿಸಿರಿ). ಆದ್ದರಿಂದ (ಇವೆಲ್ಲವನ್ನೂ) ಅರಿತವರಾಗಿದ್ದೂ ಸಹ ನೀವು ಅಲ್ಲಾಹನಿಗೆ ಪ್ರತಿಸ್ಪರ್ಧಿಗಳನ್ನು ಮಾಡಬೇಡಿ.”
“ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ (ಕುರ್‌ಆನ್‍ನ) ಬಗ್ಗೆ ನಿಮಗೆ ಸಂಶಯವಿದ್ದರೆ, ಅದಕ್ಕೆ ಸಮಾನವಾಗಿರುವ ಒಂದು ಅಧ್ಯಾಯವನ್ನು ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮ ಸಹಾಯಕರನ್ನು ಕರೆಯಿರಿ. ನೀವು ಸತ್ಯವಂತರಾಗಿದ್ದರೆ!
ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ—ಅದನ್ನು ಮಾಡಲು ನಿಮಗೆಂದೂ ಸಾಧ್ಯವಾಗದು—ಮನುಷ್ಯರನ್ನು ಮತ್ತು ಕಲ್ಲುಗಳನ್ನು ಇಂಧನವಾಗಿ ಉರಿಸಲಾಗುವ ನರಕಾಗ್ನಿಯನ್ನು ಭಯಪಡಿರಿ. ಅದನ್ನು ಸತ್ಯನಿಷೇಧಿಗಳಿಗಾಗಿ ಸಿದ್ಧಗೊಳಿಸಲಾಗಿದೆ. ”
(ಓ ಪ್ರವಾದಿಯವರೇ!) ವಿಶ್ವಾಸವಿಟ್ಟವರು ಮತ್ತು ಸತ್ಕರ್ಮವೆಸಗಿದವರಾರೋ ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ ಎಂಬ ಶುಭವಾರ್ತೆಯನ್ನು ತಿಳಿಸಿರಿ. ಅದರ ಒಂದೊಂದು ಫಲವನ್ನು ಅವರಿಗೆ ತಿನ್ನಲು ನೀಡಲಾದಾಗ ಅವರು ಹೇಳುವರು: ‘ಇದು ನಮಗೆ ಮುಂಚೆ ನೀಡಲಾಗಿರುವುದೇ ಆಗಿದೆ!’ ಆದರೆ ಅವರಿಗೆ ಅದನ್ನು ನೀಡಲಾಗಿರುವುದು ಪರಸ್ಪರ ಹೋಲಿಕೆಯಿರುವ ರೀತಿಯಲ್ಲಾಗಿದೆ. ಅವರಿಗೆ ಅಲ್ಲಿ ಪರಿಶುದ್ಧರಾದ ಸಂಗಾತಿಗಳಿರುವರು ಮತ್ತು ಅವರು ಅಲ್ಲಿ ಶಾಶ್ವತವಾಗಿ ವಾಸಿಸುವರು.
[ಅಲ್ ಬಖರ:21-25]
ಇಷ್ಟೊಂದು ಸಂದೇಶವಾಹಕರು ಏಕೆ ಬಂದರು?
ಅಲ್ಲಾಹನು ಎಲ್ಲಾ ಸಮುದಾಯಗಳ ಬಳಿ ತನ್ನ ಸಂದೇಶವಾಹಕರನ್ನು ಕಳುಹಿಸಿದನು ಅಲ್ಲಾಹು ತನ್ನ ಆರಾಧನೆಯೆಡೆಗೆ ಮಾನವರನ್ನು ಆಹ್ವಾನಿಸಲಿಕ್ಕೆ ಮತ್ತು ತನ್ನ ಆಜ್ಞೆಗಳನ್ನು ಮತ್ತು ನಿಷೇಧಗಳನ್ನು ಅವರಿಗೆ ತಲುಪಿಸಲಿಕ್ಕೆ ತನ್ನ ಸಂದೇಶವಾಹಕರನ್ನು ಕಳುಹಿಸದೆ ಇರುವ ಯಾವ ಸಮುದಾಯವೂ ಇಲ್ಲ ಎಲ್ಲಾ ಸಂದೇಶವಾಹಕರ ಆಹ್ವಾನದ ಉದ್ದೇಶ ಏಕೈಕ ಅಲ್ಲಾಹನ ಆರಾಧನೆಯಾಗಿತ್ತು ಯಾವುದೇ ಸಮುದಾಯವು ಸಂದೇಶವಾಹಕರು ತಂದ ಏಕದೇವತ್ವವನ್ನು ತೊರೆಯಲು ಅಥವಾ ಅದನ್ನು ವಿರೂಪಗೊಳಿಸಲು ಪ್ರಾರಂಭಿಸಿದಾಗ ಅಲ್ಲಾಹು ಅವರ ಮಾರ್ಗವನ್ನು ಸರಿಪಡಿಸಲು ಮತ್ತು ಅಲ್ಲಾಹನ ಏಕ ದೇವತ್ವ ಮತ್ತು ಅವನಿಗೆ ವಿಧೆಯನಾಗುವ ಮೂಲಕ ಸರಿಯಾದ ಪ್ರಕೃತಿಯೆಡೆಗೆ ಜನರನ್ನು ಮರಳಿಸಲು ಅಲ್ಲಾಹು ಇನ್ನೊಬ್ಬ ಸಂದೇಶವಾಹನನ್ನು ಕಳುಹಿಸಿದನು..
ಈ ಸರಣಿಯನ್ನು ಅಲ್ಲಾಹು ಪ್ರವಾದಿ ಮುಹಮ್ಮದ್ ﷺ ರವರೊಂದಿಗೆ ಕೊನೆಗೊಳಿಸಿದನು ಅವರು ಒಂದು ಸಂಪೂರ್ಣ ಧರ್ಮ ಮತ್ತು ಪುನರುತ್ಥಾನ ದಿನವರೆಗಿನ ಎಲ್ಲಾ ಮಾನವರಿಗೆ ಒಂದು ಶಾಶ್ವತ ಮತ್ತು ಹಿಂದಿನ ಎಲ್ಲಾ ಧರ್ಮ ನಿಯಮಾವಳಿಗಳನ್ನು ರದ್ದುಗೊಳಿಸುವ ಮತ್ತು ಪೂರಕವಾಗಿರುವ ಒಂದು ಧರ್ಮ ಸಂಹಿತೆಯನ್ನು ತಂದರು ಈ ಧರ್ಮವನ್ನು ಪುನರುತ್ಥಾನ ದಿನದವರೆಗೆ ನಿರಂತರವಾಗಿ ಉಳಿಸಲು ಸರ್ವಶಕ್ತನಾದ ಅಲ್ಲಾಹನು ಭರವಸೆಯನ್ನು ನೀಡಿರುವನು.
ಎಲ್ಲಾ ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವವರೆಗೆ ಒಬ್ಬ ವ್ಯಕ್ತಿ ಸತ್ಯವಿಶ್ವಾಸಿಯಾಗಲಾರ.
ಅಲ್ಲಾಹನೇ ಸಂದೇಶವಾಹಕರನ್ನು ಕಳುಹಿಸಿದನು ಮತ್ತು ಎಲ್ಲಾ ಮಾನವರಿಗೆ ಅವರನ್ನು ಅನುಸರಿಸಬೇಕೆಂದು ಆದೇಶ ನೀಡಿದನು ಯಾರಾದರೂ ಒಬ್ಬ ಸಂದೇಶವಾಹಕನನ್ನು ನಿಷೇಧಿಸಿದರೆ ವಾಸ್ತವಿಕತೆಯಲ್ಲಿ ಅವನು ಎಲ್ಲಾ ಸಂದೇಶವಾಹಕರನ್ನು ನಿಷೇಧಿಸಿದಂತೆ ಏಕೆಂದರೆ ಒಬ್ಬ ವ್ಯಕ್ತಿ ಅಲ್ಲಾಹನ ದಿವ್ಯವಾಣಿಯನ್ನು ತಿರಸ್ಕರಿಸುವುದಕ್ಕಿಂತ ದೊಡ್ಡ ಪಾಪ ಯಾವುದೂ ಇಲ್ಲ ಈ ರೀತಿಯಾಗಿ ಸ್ವರ್ಗ ಪ್ರವೇಶಿಸಲಿಕ್ಕೆ ಎಲ್ಲಾ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ.
ಆದ್ದರಿಂದ ಇಂದು ಪ್ರತಿಯೊಬ್ಬ ವ್ಯಕ್ತಿಯು ಅಲ್ಲಾಹು, ಅವನ ಎಲ್ಲಾ ಸಂದೇಶವಾಹಕರು ಮತ್ತು ಪುನರುತ್ಥಾನ ದಿನದ ಮೇಲೆ ವಿಶ್ವಾಸವಿರಿಸುವುದು ಕಡ್ಡಾಯವಾಗಿದೆ ಇದಕ್ಕಾಗಿ ಅಲ್ಲಾಹನ ಅಂತಿಮ ಮತ್ತು ಕಟ್ಟ ಕಡೆಯ ಸಂದೇಶವಾಕ ಮುಹಮ್ಮದ್ ﷺ ರವರ ಮೇಲೆ ವಿಶ್ವಾಸವಿರಿಸಿ ಅವರ ಬೋಧನೆಗಳನ್ನು ಅನುಸರಿಸುವುದು ಅತ್ಯಾವಶ್ಯಕವಾಗಿದೆ ಅಲ್ಲಾಹು ಅವರಿಗೆ ಒಂದು ಶಾಶ್ವತವಾದ ಪವಾಡದೊಂದಿಗೆ ಬೆಂಬಲ ನೀಡಿದನು ಅದುವೇ ಪವಿತ್ರ ಕುರ್ ಆನ್ ಆಗಿದೆ ಪುನರುತ್ಥಾನ ದಿನದವರೆಗೆ ಅದರ ಸಂರಕ್ಷಣೆಯ ಹೊಣೆ ಸ್ವತಃ ಅಲ್ಲಾಹು ತೆಗೆದುಕೊಂಡಿದ್ದಾನೆ.
ಯಾರಾದರೂ ಯಾವೊಬ್ಬ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸುವುದನ್ನು ನಿರಾಕರಿಸಿದರೇ ಅವನು ಅಲ್ಲಾಹನಿಗೆ ಅವಿಶ್ವಾಸ ತೋರುವವನಾಗಿದ್ದಾನೆ ಮತ್ತು ಅವನ ದಿವ್ಯವಾಣಿಯನ್ನು ನಿರಾಕರಿಸುವವರಾಗಿದ್ದಾನೆಂದು ಅಲ್ಲಾಹನು ಪವಿತ್ರ ಕುರ್ ಆನಿನಲ್ಲಿ ಪ್ರಸ್ತಾಪಿಸಿದ್ದಾನೆ.
﴿إِنَّ الَّذِينَ يَكْفُرُونَ بِاللَّهِ وَرُسُلِهِ وَيُرِيدُونَ أَنْ يُفَرِّقُوا بَيْنَ اللَّهِ وَرُسُلِهِ وَيَقُولُونَ نُؤْمِنُ بِبَعْضٍ وَنَكْفُرُ بِبَعْضٍ وَيُرِيدُونَ أَنْ يَتَّخِذُوا بَيْنَ ذَلِكَ سَبِيلًا ١٥٠ أُولَئِكَ هُمُ الْكَافِرُونَ حَقًّا وَأَعْتَدْنَا لِلْكَافِرِينَ عَذَابًا مُهِينًا 151﴾
ಅಲ್ಲಾಹುವಿನಲ್ಲಿ ಮತ್ತು ಅವನ ಸಂದೇಶವಾಹಕ ರಲ್ಲಿ ಅವಿಶ್ವಾಸವಿಟ್ಟವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರ ಮಧ್ಯೆ (ವಿಶ್ವಾಸದಲ್ಲಿ) ವ್ಯತ್ಯಾಸ ಕಲ್ಪಿಸಲು ಬಯಸುವವರು ಮತ್ತು ‘ನಾವು ಕೆಲವರಲ್ಲಿ ವಿಶ್ವಾಸವಿಡು ವೆವು ಮತ್ತು ಕೆಲವರನ್ನು ನಿಷೇಧಿಸುವೆವು’ ಎಂದು ಹೇಳುವವರು, ತನ್ನಿಮಿತ್ತ ಅವುಗಳ ಮಧ್ಯೆ (ವಿಶ್ವಾಸ ಮತ್ತು ಅವಿಶ್ವಾಸದ ಮಧ್ಯೆ) ಭಿನ್ನ ಮಾರ್ಗವೊಂದನ್ನು ಸ್ವೀಕರಿಸಲು ಬಯಸುವವರು ಯಾರೋ,
ಸತ್ಯವಾಗಿಯೂ ಅವಿಶ್ವಾಸಿಗಳು ಅವರೇ ಆಗಿರುವರು. ಅವಿಶ್ವಾಸಿಗಳಿಗೆ ನಾವು ನಿಂದನೀಯ ಶಿಕ್ಷೆಯನ್ನು ಸಿದ್ಧಗೊಳಿಸಿರುವೆವು.
[ಅನ್ನಿಸಾ:150-151]
ಆದ್ದರಿಂದ ನಾವು ಮುಸ್ಲಿಮರು ಅಲ್ಲಾಹನ ಮೇಲೆ -ಅಲ್ಲಾಹು ಆದೇಶಿಸಿದ ಹಾಗೆ -ಪುನರುತ್ಥಾನ ದಿನದ ಮೇಲೆ ಎಲ್ಲಾ ಸಂದೇಶವಾಹಕರ ಮೇಲೆ ಮತ್ತು ಹಿಂದಿನ ಎಲ್ಲಾ ಗ್ರಂಥಗಳ ಮೇಲೆ ವಿಶ್ವಾಸವಿರಿಸುತ್ತೇವೆ ಸರ್ವ ಶಕ್ತನಾದ ಅಲ್ಲಾಹನು ಹೇಳುತ್ತಾನೆ:
﴿آمَنَ الرَّسُولُ بِمَا أُنْزِلَ إِلَيْهِ مِنْ رَبِّهِ وَالْمُؤْمِنُونَ كُلٌّ آمَنَ بِاللَّهِ وَمَلَائِكَتِهِ وَكُتُبِهِ وَرُسُلِهِ لَا نُفَرِّقُ بَيْنَ أَحَدٍ مِنْ رُسُلِهِ وَقَالُوا سَمِعْنَا وَأَطَعْنَا غُفْرَانَكَ رَبَّنَا وَإِلَيْكَ الْمَصِيرُ 285﴾
“ತಮ್ಮ ಪ್ರಭುವಿನ ವತಿಯಿಂದ ತಮಗೆ ಅವತೀರ್ಣಗೊಳಿಸಲಾಗಿರುವುದರಲ್ಲಿ ಸಂದೇಶವಾಹಕರು ವಿಶ್ವಾಸವಿಟ್ಟಿರುವರು. (ತರುವಾಯ) ಸತ್ಯವಿಶ್ವಾಸಿಗಳು ಸಹ ವಿಶ್ವಾಸವಿಟ್ಟಿರುವರು. ಅವರೆಲ್ಲರೂ ಅಲ್ಲಾಹನಲ್ಲಿ, ಅವನ ಮಲಕ್‌ಗಳಲ್ಲಿ, ಅವನ ಗ್ರಂಥಗಳಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿರುವರು. ಅವನ ಸಂದೇಶವಾಹಕರ ಪೈಕಿ ಯಾರ ನಡುವೆಯೂ ನಾವು ವ್ಯತ್ಯಾಸ ಕಲ್ಪಿಸಲಾರೆವು (ಎಂಬುದು ಅವರ ನಿಲುವಾಗಿದೆ). ನಾವು ಆಲಿಸಿರುವೆವು ಮತ್ತು ಅನುಸರಿಸಿರುವೆವು, ನಮ್ಮ ಪ್ರಭೂ! ನಮಗೆ ಪಾಪಮುಕ್ತಿಯನ್ನು ದಯಪಾಲಿಸು, (ನಮ್ಮ) ಮರಳುವಿಕೆಯು ನಿನ್ನ ಬಳಿಗೇ ಆಗಿದೆ ಎಂದು ಅವರು ಹೇಳುವರು.”
[ಅಲ್ ಬಖರ 285]
ಪವಿತ್ರ ಕುರ್‌ಆನ್ ಎಂದರೇನು?
ಪವಿತ್ರ ಕುರ್ ಆನ್ ಸರ್ವಶಕ್ತನಾದ ಅಲ್ಲಾಹನ ವಚನ ಮತ್ತು ಅಂತಿಮ ಪ್ರವಾದಿ ಮುಹಮ್ಮದ್ ﷺ ರವರ ಮೇಲೆ ಅವತೀರ್ಣಗೊಳಿಸಿದ ದಿವ್ಯ ವಾಣಿಯಾಗಿದೆ ದೇವರ ವಾಕ್ಯವಾಗಿದೆ ಮತ್ತು ಅವನು ಕೊನೆಯ ಸಂದೇಶವಾಹಕರಾದ ಮುಹಮ್ಮದ್ ಅವರಿಗೆ ಕಳುಹಿಸಿದನು ಮತ್ತು ಇದು ಅವನ ಭವಿಷ್ಯವಾಣಿಯ ಸತ್ಯವನ್ನು ಸೂಚಿಸುವ ದೊಡ್ಡ ಪವಾಡವಾಗಿದೆ, ಅವನ ಮೇಲೆ ಶಾಂತಿ ಮತ್ತು ದೇವರ ಆಶೀರ್ವಾದ. ಪವಿತ್ರ ಕುರಾನ್ ಅದರ ತೀರ್ಪುಗಳಲ್ಲಿ ಸತ್ಯ ಮತ್ತು ಅದರ ಮಾಹಿತಿಯಲ್ಲಿ ಸತ್ಯವಾಗಿದೆ.
ನಿರಾಕರಿಸುವವರಿಗೆ ಇದೇ ರೀತಿಯ ಕೇವಲ ಒಂದು ಅಧ್ಯಾಯವನ್ನು ರಚಿಸಿ ತರಲು ಅಲ್ಲಾಹನು ಸವಾಲು ಹಾಕಿದ್ದಾನೆ ಆದರೆ ಅದರ ವಿಷಯದ ಶ್ರೇಷ್ಠತೆ ಮತ್ತು ಮನುಷ್ಯನ ಇಹಪರ ಜೀವನದ ಎಲ್ಲದಕ್ಕೂ ಸಂಬಂಧಿಸಿದ ಅದರ ಪ್ರಬಂಧದ ಸಮಗ್ರತೆಯಿಂದಾಗಿ ಅವರು ಹಾಗೆ ಮಾಡಲು ಅಸಮರ್ಥರಾದರು ಇದರಲ್ಲಿ ಸತ್ಯವಿಶ್ವಾಸಕ್ಕೆ ಕಡ್ಡಾಯವಾಗುವ ಎಲ್ಲಾ ವಿಷಯಗಳನ್ನು ವಿವರಿಸಲಾಗಿದೆ.
ಅಂತೆಯೇ ಅದರೊಳಗೆ ಒಬ್ಬ ವ್ಯಕ್ತಿಯು ತನ್ನ ಮತ್ತು ಸೃಷ್ಟಿಕರ್ತನ ನಡುವೆ ಅಥವಾ ತನ್ನ ಮತ್ತು ತನ್ನ ಆತ್ಮದ ನಡುವೆ ಅಥವಾ ತನ್ನ ಮತ್ತು ಎಲ್ಲಾ ಸೃಷ್ಟಿಗಳ ನಡುವೆ ಪಾಲಿಸಬೇಕಾದ ಎಲ್ಲಾ ಆದೇಶ ಮತ್ತು ನಿಷೇಧಗಳನ್ನು ನೀಡಲಾಗಿದೆ ಅದೂ ಸಹ ಅತ್ಯಂತ ಸ್ಪಷ್ಟ ಮತ್ತು ಉನ್ನತ ಮಟ್ಟದ ವಾಕ್ಚಾತುರ್ಯದ ಶೈಲಿಯಲ್ಲಿ.
ಮನುಷ್ಯನು ಈ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲ ಬದಲಾಗಿ ಈ ಗ್ರಂಥವು ಮಾನವಕುಲದ ಸರ್ವಶಕ್ತ ಸೃಷ್ಟಿಕರ್ತನ ವಚನವಾಗಿದೆ ಎಂದು ಸೂಚಿಸುವ ಅನೇಕ ತಾರ್ಕಿಕ ಪುರಾವೆಗಳು ಮತ್ತು ವೈಜ್ಞಾನಿಕ ಸತ್ಯತೆಗಳು ಈ ಗ್ರಂಥದಲ್ಲಿವೆ.
ಇಸ್ಲಾಂ ಎಂದರೇನು?
ಇಸ್ಲಾಂ ಎಂದರೆ ಏಕದೇವಾರಾಧನೆಯ (ತೌಹೀದ್) ಮೂಲಕ ಸರ್ವಶಕ್ತನಾದ ಅಲ್ಲಾಹುವಿಗೆ ಶರಣಾಗುವುದು, ವಿಧೇಯತೆಯಿಂದ ಅವನಿಗೆ ತಲೆಬಾಗುವುದು, ಸಂಪೂರ್ಣ ತೃಪ್ತಿ ಮತ್ತು ಸ್ವೀಕಾರದೊಂದಿಗೆ ಅವನ ಧರ್ಮಶಾಸನವನ್ನು (ಶರಿಯತ್) ಪಾಲಿಸುವುದು, ಮತ್ತು ಅಲ್ಲಾಹುವಲ್ಲದೆ ಆರಾಧಿಸಲ್ಪಡುವ ಎಲ್ಲವನ್ನೂ ತಿರಸ್ಕರಿಸುವುದು.
ಅಲ್ಲಾಹು ತನ್ನ ಪ್ರವಾದಿಗಳನ್ನು ಒಂದೇ ಸಂದೇಶದೊಂದಿಗೆ ಕಳುಹಿಸಿದನು. ಅದೇನೆಂದರೆ, ಯಾವುದೇ ಸಹಭಾಗಿಗಳಿಲ್ಲದ ಏಕೈಕ ಅಲ್ಲಾಹುವನ್ನು ಮಾತ್ರ ಆರಾಧಿಸುವಂತೆ ಮತ್ತು ಅವನಲ್ಲದೆ ಆರಾಧಿಸಲಾಗುವ ಎಲ್ಲವನ್ನೂ ತಿರಸ್ಕರಿಸುವಂತೆ (ಜನರಿಗೆ) ಕರೆ ನೀಡುವುದು.
ಇಸ್ಲಾಂ ಎಲ್ಲಾ ಪ್ರವಾದಿಗಳ ಧರ್ಮವಾಗಿದೆ. ಅವರ ಕರೆ ಒಂದೇ ಆಗಿದ್ದರೂ, ಅವರ ಧರ್ಮಶಾಸನಗಳು (ಶರಿಯತ್) ವಿಭಿನ್ನವಾಗಿದ್ದವು. ಇಂದು ಮುಸ್ಲಿಮರು ಮಾತ್ರ ಎಲ್ಲಾ ಪ್ರವಾದಿಗಳು ತಂದಂತಹ ಸತ್ಯ ಧರ್ಮವನ್ನು ಅನುಸರಿಸುತ್ತಿದ್ದಾರೆ. ಈ ಕಾಲದಲ್ಲಿ ಇಸ್ಲಾಂ ಧರ್ಮದ ಸಂದೇಶವೇ ಸತ್ಯವಾಗಿದೆ ಮತ್ತು ಇದು ಸೃಷ್ಟಿಕರ್ತನಿಂದ ಮಾನವಕುಲಕ್ಕೆ ಬಂದ ಅಂತಿಮ ಸಂದೇಶವಾಗಿದೆ.
ಇಬ್ರಾಹೀಮ್, ಮೂಸಾ ಮತ್ತು ಈಸಾ (ಅವರೆಲ್ಲರ ಮೇಲೆ ಶಾಂತಿ ಇರಲಿ) ರವರನ್ನು ಕಳುಹಿಸಿದ ಅಲ್ಲಾಹುವೇ ಅಂತಿಮ ಪ್ರವಾದಿಯಾದ ಮುಹಮ್ಮದ್ (ﷺ) ರನ್ನೂ ಕಳುಹಿಸಿದ್ದಾನೆ. ಇಸ್ಲಾಂ ಧರ್ಮದ ಶಾಸನವು (ಶರಿಯತ್) ಹಿಂದಿನ ಎಲ್ಲಾ ಶಾಸನಗಳನ್ನು ನಿಷ್ಕ್ರಿಯಗೊಳಿಸಿದೆ.
ಇಂದು, ಇಸ್ಲಾಂ ಹೊರತುಪಡಿಸಿ ಜನರು ಆಚರಿಸುತ್ತಿರುವ ಇತರ ಎಲ್ಲಾ ಧರ್ಮಗಳು ಮಾನವ ನಿರ್ಮಿತವಾಗಿವೆ, ಅಥವಾ ಅವು ಮೂಲತಃ ದೈವಿಕವಾಗಿದ್ದು ನಂತರ ಮಾನವ ಹಸ್ತಕ್ಷೇಪದಿಂದಾಗಿ ಮೂಢನಂಬಿಕೆಗಳು, ಪಾರಂಪರಿಕ ಕಟ್ಟುಕಥೆಗಳು ಮತ್ತು ಮಾನವ ಸಂಶೋಧನೆಗಳ ಕಲಬೆರಕೆಯಾಗಿ ಮಾರ್ಪಟ್ಟಿವೆ.
ಆದರೆ ಮುಸ್ಲಿಮರ ಧರ್ಮವು ಒಂದೇ. ಅದು ಸ್ಪಷ್ಟ ಮತ್ತು ಬದಲಾಗದ ಧರ್ಮವಾಗಿದೆ. ಅದೇ ರೀತಿ, ಅವರು ಅಲ್ಲಾಹುವಿಗೆ ಸಲ್ಲಿಸುವ ಆರಾಧನೆಗಳು ಕೂಡ ಒಂದೇ ಆಗಿವೆ. ಅವರೆಲ್ಲರೂ ದಿನಕ್ಕೆ ಐದು ಹೊತ್ತು ನಮಾಝ್ ಮಾಡುತ್ತಾರೆ, ತಮ್ಮ ಸಂಪತ್ತಿಗೆ ಝಕಾತ್ ನೀಡುತ್ತಾರೆ ಮತ್ತು ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೆ. ಅವರ ಸಂವಿಧಾನವಾದ ಪವಿತ್ರ ಕುರ್‌ಆನ್ ಬಗ್ಗೆ ಆಲೋಚಿಸಿರಿ. ಅದು ಎಲ್ಲಾ ದೇಶಗಳಲ್ಲಿಯೂ ಒಂದೇ ಗ್ರಂಥವಾಗಿದೆ.
﴿...ٱلۡيَوۡمَ أَكۡمَلۡتُ لَكُمۡ دِينَكُمۡ وَأَتۡمَمۡتُ عَلَيۡكُمۡ نِعۡمَتِي وَرَضِيتُ لَكُمُ ٱلۡإِسۡلَٰمَ دِينٗاۚ فَمَنِ ٱضۡطُرَّ فِي مَخۡمَصَةٍ غَيۡرَ مُتَجَانِفٖ لِّإِثۡمٖ فَإِنَّ ٱللَّهَ غَفُورٞ رَّحِيمٞ﴾
"ಇಂದು ನಾನು ನಿಮಗೆ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಮೇಲೆ ನನ್ನ ಅನುಗ್ರಹವನ್ನು ಸಂಪೂರ್ಣಗೊಳಿಸಿದ್ದೇನೆ ಮತ್ತು ನಿಮಗೆ ಇಸ್ಲಾಂ ಅನ್ನು ಧರ್ಮವಾಗಿ ತೃಪ್ತಿಪಟ್ಟಿದ್ದೇನೆ. ಇನ್ನು, ಹಸಿವಿನಿಂದ ಪೀಡಿತನಾದವನು, ಪಾಪದ ಕಡೆಗೆ ಒಲವು ತೋರದೆ (ನಿಷಿದ್ಧವಾದುದನ್ನು ತಿಂದರೆ), ಖಂಡಿತವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ."
[ಅಲ್-ಮಾಇದ: 3]
ಸರ್ವಶಕ್ತ ದೇವರು ಕುರಾನ್‌ನಲ್ಲಿ ಹೇಳಿದ್ದಾನೆ:
﴿قُلْ آمَنَّا بِاللَّهِ وَمَا أُنْزِلَ عَلَيْنَا وَمَا أُنْزِلَ عَلَى إِبْرَاهِيمَ وَإِسْمَاعِيلَ وَإِسْحَاقَ وَيَعْقُوبَ وَالْأَسْبَاطِ وَمَا أُوتِيَ مُوسَى وَعِيسَى وَالنَّبِيُّونَ مِنْ رَبِّهِمْ لَا نُفَرِّقُ بَيْنَ أَحَدٍ مِنْهُمْ وَنَحْنُ لَهُ مُسْلِمُونَ ٨٤ وَمَنْ يَبْتَغِ غَيْرَ الْإِسْلَامِ دِينًا فَلَنْ يُقْبَلَ مِنْهُ وَهُوَ فِي الْآخِرَةِ مِنَ الْخَاسِرِينَ 85﴾
“(ಓ ಪ್ರವಾದಿಯವರೇ!) ಹೇಳಿರಿ: ‘ಅಲ್ಲಾಹನಲ್ಲಿ, ನಮಗೆ ಅವತೀರ್ಣಗೊಂಡಿರುವುದರಲ್ಲಿ (ಕುರ್‌ಆನ್‌ನಲ್ಲಿ), ಇಬ್ರಾಹೀಮ್, ಇಸ್ಮಾಈಲ್, ಇಸ್‌ಹಾಕ್, ಯಅ್‌ಕೂಬ್ ಮತ್ತು ಯಅ್‌ಕೂಬ್ ಸಂತತಿಗಳಿಗೆ ಅವತೀರ್ಣಗೊಂಡಿರುವುದರಲ್ಲಿ, ಮೂಸಾ, ಈಸಾ ಹಾಗೂ ಇತರ ಪ್ರವಾದಿಗಳಿಗೆ ಅವರ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲಿ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ವ್ಯತ್ಯಾಸ ಕಲ್ಪಿಸಲಾರೆವು. ನಾವು ಅಲ್ಲಾಹನಿಗೆ ಶರಣಾದವರಾಗಿರುವೆವು.”
“ಯಾರಾದರೂ ಇಸ್ಲಾಂ ಅಲ್ಲದ (ಅಲ್ಲಾಹನಿಗಿರುವ ಶರಣಾಗತಿಯಲ್ಲದ) ಬೇರೆ ಧರ್ಮವನ್ನು ಹುಡುಕುವುದಾದರೆ, ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗುವುದಿಲ್ಲ; ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.”
[ಆಲು ಇಮ್ರಾನ್:84-85]
ಇಸ್ಲಾಂ ಧರ್ಮವು ಒಂದು ಸಮಗ್ರ ಜೀವನ ವಿಧಾನವಾಗಿದೆ. ಅದು ಮನುಷ್ಯನ ಸಹಜ ಪ್ರಕೃತಿ ಮತ್ತು ವಿವೇಕಕ್ಕೆ ಅನುಗುಣವಾಗಿದೆ. ಶುದ್ಧ ಮನಸ್ಸುಗಳು ಅದನ್ನು ಸ್ವೀಕರಿಸುತ್ತವೆ. ಮಹಾನ್ ಸೃಷ್ಟಿಕರ್ತನು ತನ್ನ ಸೃಷ್ಟಿಗಳಿಗಾಗಿ ಇದನ್ನು ನಿಯಮಗೊಳಿಸಿದ್ದಾನೆ. ಇದು ಇಹಲೋಕ ಮತ್ತು ಪರಲೋಕದಲ್ಲಿ ಎಲ್ಲಾ ಮಾನವರಿಗೂ ಒಳಿತು ಹಾಗೂ ಸಂತೋಷವನ್ನು ತರುವ ಧರ್ಮವಾಗಿದೆ. ಇದು ಜನಾಂಗಗಳ ಮಧ್ಯೆ ಅಥವಾ ವರ್ಣಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಅದರಲ್ಲಿ ಎಲ್ಲಾ ಜನರು ಸಮಾನರು. ಇಸ್ಲಾಂನಲ್ಲಿ, ಒಬ್ಬ ವ್ಯಕ್ತಿಯು ತನ್ನ ಸತ್ಕರ್ಮಗಳ ಆಧಾರದ ಮೇಲೆ ಮಾತ್ರ ಇನ್ನೊಬ್ಬನಿಗಿಂತ ಶ್ರೇಷ್ಠನಾಗುತ್ತಾನೆ.
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿مَنۡ عَمِلَ صَٰلِحٗا مِّن ذَكَرٍ أَوۡ أُنثَىٰ وَهُوَ مُؤۡمِنٞ فَلَنُحۡيِيَنَّهُۥ حَيَوٰةٗ طَيِّبَةٗۖ وَلَنَجۡزِيَنَّهُمۡ أَجۡرَهُم بِأَحۡسَنِ مَا كَانُواْ يَعۡمَلُونَ 97﴾
"ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು."
[ಅನ್ನಹ್ಲ್: 97].
ಇಸ್ಲಾಂ ಸಂತೋಷದ ಮಾರ್ಗವಾಗಿದೆ
ಇಸ್ಲಾಂ ಎಲ್ಲಾ ಪ್ರವಾದಿಗಳ ಧರ್ಮವಾಗಿದೆ ಮತ್ತು ಇದು ಎಲ್ಲಾ ಜನರಿಗಾಗಿ ಇರುವ ಅಲ್ಲಾಹುವಿನ ಧರ್ಮವಾಗಿದೆ. ಇದು ಕೇವಲ ಅರಬರಿಗೆ ಮಾತ್ರ ಸೀಮಿತವಾದ ಧರ್ಮವಲ್ಲ.
ಇಸ್ಲಾಂ ಈ ಜಗತ್ತಿನಲ್ಲಿ ನಿಜವಾದ ಸಂತೋಷ ಮತ್ತು ಪರಲೋಕದಲ್ಲಿ ಶಾಶ್ವತ ಸುಖಕ್ಕೆ ದಾರಿ.
ಇಸ್ಲಾಂ ಆತ್ಮ ಮತ್ತು ದೇಹದ ಅಗತ್ಯಗಳನ್ನು ಪೂರೈಸುವ ಮತ್ತು ಎಲ್ಲಾ ಮಾನವೀಯ ಸಮಸ್ಯೆಗಳನ್ನು ಪರಿಹರಿಸುವ ಏಕೈಕ ಧರ್ಮವಾಗಿದೆ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
﴿قَالَ اهْبِطَا مِنْهَا جَمِيعًا بَعْضُكُمْ لِبَعْضٍ عَدُوٌّ فَإِمَّا يَأْتِيَنَّكُمْ مِنِّي هُدًى فَمَنِ اتَّبَعَ هُدَايَ فَلَا يَضِلُّ وَلَا يَشْقَى 123 وَمَنْ أَعْرَضَ عَنْ ذِكْرِي فَإِنَّ لَهُ مَعِيشَةً ضَنْكًا وَنَحْشُرُهُ يَوْمَ الْقِيَامَةِ أَعْمَى 124﴾
"ಅವನು (ಅಲ್ಲಾಹು) ಹೇಳಿದನು: 'ನೀವಿಬ್ಬರೂ ಇಲ್ಲಿಂದ ಇಳಿದು ಹೋಗಿರಿ. ನೀವು ಪರಸ್ಪರ ಶತ್ರುಗಳಾಗಿದ್ದೀರಿ. ಇನ್ನು ನನ್ನ ಕಡೆಯಿಂದ ನಿಮ್ಮ ಬಳಿಗೆ ಸನ್ಮಾರ್ಗದರ್ಶನವು ಬಂದಾಗ, ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾರೋ, ಅವರು ದಾರಿ ತಪ್ಪುವುದೂ ಇಲ್ಲ, ಸಂಕಟಕ್ಕೀಡಾಗುವುದೂ ಇಲ್ಲ.
ಮತ್ತು ಯಾರು ನನ್ನ ಸ್ಮರಣಿಕೆಯಿಂದ ದೂರ ಸರಿಯುತ್ತಾರೋ ಅವರು ಸಂಕುಚಿತ ಜೀವನವನ್ನು ಹೊಂದಿರುತ್ತಾರೆ ಮತ್ತು ಪುನರುತ್ಥಾನದ ದಿನದಂದು ನಾವು ಅವರನ್ನು ಕುರುಡರನ್ನಾಗಿಸುತ್ತೇವೆ.
[ತ್ವಾಹಾ:123-124]
ಮುಸ್ಲಿಮನು ಇಹಲೋಕ ಮತ್ತು ಪರಲೋಕದಲ್ಲಿ ಯಾವ ಯಾವ ಪ್ರಯೋಜನಗಳನ್ನು ಪಡೆಯುತ್ತಾನೆ?
ಇಸ್ಲಾಂನಿಂದ (ಮುಸ್ಲಿಮನಿಗೆ) ಮಹತ್ತರವಾದ ಪ್ರಯೋಜನಗಳಿವೆ, ಅವು:
ಈ ಲೋಕದಲ್ಲಿ ಗೆಲುವು ಮತ್ತು ಗೌರವವನ್ನು ಪಡೆಯಲು ಮನುಷ್ಯನು ಅಲ್ಲಾಹನ ದಾಸನಾಗಬೇಕು. ಇಲ್ಲದಿದ್ದರೆ, ಅವನು ತನ್ನ ಆಸೆಗಳಿಗೆ, ಷೈತಾನನಿಗೆ ಮತ್ತು ಇಂದ್ರಿಯಗಳಿಗೆ ದಾಸನಾಗುತ್ತಾನೆ.
ಪರಲೋಕ ವಿಜಯವನ್ನು ಪಡೆಯುತ್ತಾನೆ. ಅದು ಹೇಗೆಂದರೆ, ಅಲ್ಲಾಹು ಅವನನ್ನು ಕ್ಷಮಿಸುತ್ತಾನೆ, ಅವನಿಗೆ ತನ್ನ ಸಂತೃಪ್ತಿಯನ್ನು ದಯಪಾಲಿಸುತ್ತಾನೆ, ಮತ್ತು ಅವನನ್ನು ಸ್ವರ್ಗಕ್ಕೆ ಸೇರಿಸುತ್ತಾನೆ. ಅಲ್ಲಿ ಅವನು ಶಾಶ್ವತವಾದ ಆನಂದ ಮತ್ತು ಸೌಭಾಗ್ಯವನ್ನು ಪಡೆಯುತ್ತಾನೆ ಹಾಗೂ ನರಕದ ಶಿಕ್ಷೆಯಿಂದ ಪಾರಾಗುತ್ತಾನೆ.
ಪುನರುತ್ಥಾನ ದಿನದಂದು, ಸತ್ಯವಿಶ್ವಾಸಿಯು ಪ್ರವಾದಿಗಳು, ಸತ್ಯವಂತರು, ಹುತಾತ್ಮರು ಮತ್ತು ಸಜ್ಜನರೊಂದಿಗೆ ಇರುತ್ತಾನೆ - ಅವರು ಎಂತಹ ಉತ್ತಮ ಸಹಚರರು! ಯಾರು ವಿಶ್ವಾಸವಿಡುವುದಿಲ್ಲವೋ, ಅವರು ದಬ್ಬಾಳಿಕೆಗಾರರು, ದುಷ್ಟರು, ಅಪರಾಧಿಗಳು ಮತ್ತು ಭ್ರಷ್ಟರೊಂದಿಗೆ ಇರುತ್ತಾರೆ.
ಅಲ್ಲಾಹು ಯಾರನ್ನು ಸ್ವರ್ಗಕ್ಕೆ ಸೇರಿಸುತ್ತಾನೋ, ಅವರು ಮರಣ, ರೋಗ, ನೋವು, ವೃದ್ಧಾಪ್ಯ ಅಥವಾ ದುಃಖವಿಲ್ಲದೆ ಶಾಶ್ವತ ಆನಂದದಲ್ಲಿ ಬದುಕುತ್ತಾರೆ. ಅವರ ಬಯಕೆಗಳೆಲ್ಲವನ್ನೂ ಅವರು ಬಯಸುವಾಗಲೆಲ್ಲಾ ಅವರಿಗೆ ಪೂರೈಸಲಾಗುತ್ತದೆ. ನರಕವನ್ನು ಪ್ರವೇಶಿಸುವವರು ಎಂದಿಗೂ ಮುಗಿಯದ, ನಿರಂತರವಾದ ಯಾತನೆಯಲ್ಲಿರುತ್ತಾರೆ.
ಸ್ವರ್ಗದಲ್ಲಿ ಎಂತಹ ಸುಖ-ಸಂತೋಷಗಳಿವೆ ಎಂದರೆ, ಅದನ್ನು ಯಾವ ಕಣ್ಣೂ ನೋಡಿಲ್ಲ, ಯಾವ ಕಿವಿಯೂ ಕೇಳಿಲ್ಲ ಮತ್ತು ಯಾವುದೇ ಮಾನವನ ಮನಸ್ಸು ಕಲ್ಪಿಸಿಯೂ ಇಲ್ಲ. ಇದಕ್ಕೆ ಪುರಾವೆ ಅಲ್ಲಾಹುವಿನ ಈ ವಚನ:
﴿مَنْ عَمِلَ صَالِحًا مِنْ ذَكَرٍ أَوْ أُنْثَى وَهُوَ مُؤْمِنٌ فَلَنُحْيِيَنَّهُ حَيَاةً طَيِّبَةً وَلَنَجْزِيَنَّهُمْ أَجْرَهُمْ بِأَحْسَنِ مَا كَانُوا يَعْمَلُونَ 97﴾
"ಗಂಡಾಗಲಿ, ಹೆಣ್ಣಾಗಲಿ ಸತ್ಯವಿಶ್ವಾಸಿಯಾಗಿರುತ್ತಾ ಯಾರು ಸತ್ಕರ್ಮಗಳನ್ನು ಮಾಡುವರೋ ಖಂಡಿತವಾಗಿಯೂ ನಾವು ಆ ವ್ಯಕ್ತಿಗೆ ಉತ್ತಮವಾದ ಬದುಕನ್ನು ನೀಡುವೆವು. ಅವರು ಮಾಡುತ್ತಿರುವ ಕರ್ಮಗಳಲ್ಲಿ ಅತ್ಯುತ್ತಮವಾಗಿರುವುದಕ್ಕೆ ಅನುಗುಣವಾಗಿ ನಾವು ಅವರಿಗಿರುವ ಪ್ರತಿಫಲವನ್ನು ನೀಡುವೆವು."
[ಅನ್ನಹ್ಲ್: 97].
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ:
﴿فَلَا تَعۡلَمُ نَفۡسٞ مَّآ أُخۡفِيَ لَهُم مِّن قُرَّةِ أَعۡيُنٖ جَزَآءَۢ بِمَا كَانُواْ يَعۡمَلُونَ 17﴾
"ಅವರು ಮಾಡುತ್ತಿದ್ದ ಕರ್ಮಗಳಿಗೆ ಪ್ರತಿಫಲವಾಗಿ, ಅವರ ಕಣ್ಣುಗಳನ್ನು ತಂಪುಗೊಳಿಸುವಂತಹ ಯಾವ ಯಾವ ವಸ್ತುಗಳನ್ನು ಅವರಿಗಾಗಿ ಗುಪ್ತವಾಗಿಡಲಾಗಿದೆ ಎಂಬುದು ಯಾವುದೇ ಆತ್ಮಕ್ಕೂ ತಿಳಿದಿಲ್ಲ."
[ಅಸ್ಸಜ್ದ: 17]
ಮುಸ್ಲಿಮೇತರರು ಏನನ್ನು ಕಳೆದುಕೊಳ್ಳುತ್ತಾರೆ?
ಮನುಷ್ಯನು ಅತ್ಯಂತ ದೊಡ್ಡ ಜ್ಞಾನವನ್ನು ಕಳೆದುಕೊಳ್ಳುತ್ತಾನೆ, ಅದು ದೇವರ ಬಗ್ಗೆ ಜ್ಞಾನ ಮತ್ತು ಅರಿವು. ಅವನು ದೇವರಲ್ಲಿನ ನಂಬಿಕೆಯನ್ನೂ ಕಳೆದುಕೊಳ್ಳುತ್ತಾನೆ, ಅದು ಈ ಜಗತ್ತಿನಲ್ಲಿ ಭದ್ರತೆ ಮತ್ತು ಶಾಂತಿಯನ್ನು ಮತ್ತು ಪರಲೋಕದಲ್ಲಿ ನಿರಂತರ ಸುಖವನ್ನು ನೀಡುತ್ತದೆ.
ಮನುಷ್ಯನು ಅಲ್ಲಾಹನು ಮಾನವರಿಗೆ ಕಳುಹಿಸಿದ ಅತ್ಯಂತ ಮಹತ್ವದ ಪುಸ್ತಕವನ್ನು ಓದಲು ಮತ್ತು ಅದನ್ನು ನಂಬಲು ವಿಫಲನಾದರೆ ಅವನು ದೊಡ್ಡ ನಷ್ಟವನ್ನು ಅನುಭವಿಸುತ್ತಾನೆ.
ಅವರು ಮಹಾನ್ ಪ್ರವಾದಿಗಳಲ್ಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಪುನರುತ್ಥಾನ ದಿನದಂದು ಸ್ವರ್ಗದಲ್ಲಿ ಅವರ ಒಡನಾಟವನ್ನೂ ಕಳೆದುಕೊಳ್ಳುತ್ತಾರೆ. ಅವರು ನರಕಾಗ್ನಿಯಲ್ಲಿ ಶೈತಾನರು, ಅಪರಾಧಿಗಳು ಮತ್ತು ದಬ್ಬಾಳಿಕೆಗಾರರ ಒಡನಾಡಿಗಳಾಗುತ್ತಾರೆ. ಅದೆಂತಹ ಕೆಟ್ಟ ನಿವಾಸ ಮತ್ತು ನೆರೆಹೊರೆ!
ಸರ್ವಶಕ್ತನಾದ ಉದಾಹರಣೆ ಹೇಳುತ್ತಾನೆ
﴿قُلْ إِنَّ الْخَاسِرِينَ الَّذِينَ خَسِرُوا أَنْفُسَهُمْ وَأَهْلِيهِمْ يَوْمَ الْقِيَامَةِ أَلا ذَلِكَ هُوَ الْخُسْرَانُ الْمُبِينُ 15 لَهُمْ مِنْ فَوْقِهِمْ ظُلَلٌ مِنَ النَّارِ وَمِنْ تَحْتِهِمْ ظُلَلٌ ذَلِكَ يُخَوِّفُ اللَّهُ بِهِ عِبَادَهُ يَا عِبَادِ فَاتَّقُونِ 16﴾
"ಹೇಳಿರಿ - ವಾಸ್ತವದಲ್ಲಿ , ಪುನರುತ್ಥಾನದ ದಿನದಂದು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ನಷ್ಟಕ್ಕೊಳಪಡಿಸಿಕೊಂಡವರೇ ನಿಜವಾದ ದಿವಾಳಿಕೋರರು. ಅದು ಸ್ಪಷ್ಟವಾದ ನಷ್ಟವಾಗಿದೆ."
ಅಗ್ನಿಯ ಕೊಡೆಗಳು ಅವರ ಮೇಲ್ಭಾಗದಲ್ಲೂ ಹರಡಿಕೊಂಡಿರುವವು ಮತ್ತು ಕೆಳಭಾಗದಲ್ಲೂ ಹರಡಿಕೊಂಡಿರುವವು. ಅಲ್ಲಾಹನು ತನ್ನ ದಾಸರನ್ನು ಎಚ್ಚರಿಸುತ್ತಿರುವುದು ಈ ಅಂತಿಮ ಗತಿಯ ಕುರಿತೇ ಆಗಿದೆ, ಆದುದರಿಂದ, 'ನನ್ನ ದಾಸರೇ ನನ್ನ ಕ್ರೋಧವನ್ನು ಭಯಪಡಿರಿ'.
[ಅಝ್ಝುಮರ್:15-16]
ಪರಲೋಕದಲ್ಲಿ ಮೋಕ್ಷವನ್ನು ಬಯಸುವವನು, ಅಲ್ಲಾಹುವಿಗೆ ವಿಧೇಯರಾಗಿರುವ ಮತ್ತು ಅವನ ಪ್ರವಾದಿ ಮುಹಮ್ಮದ್ (ﷺ) ರನ್ನು ಅನುಸರಿಸುವ ಮುಸ್ಲಿಮನಾಗಿರ ಬೇಕಾದುದು ಕಡ್ಡಾಯವಾಗಿದೆ.
ಎಲ್ಲಾ ಪ್ರವಾದಿಗಳು ಮತ್ತು ಸಂದೇಶವಾಹಕರು (ಅವರ ಮೇಲೆ ಶಾಂತಿ ಇರಲಿ) ಒಕ್ಕೊರಳಿನಿಂದ ಒಪ್ಪಿಕೊಂಡ ಸತ್ಯಗಳಲ್ಲಿ ಒಂದು ಏನೆಂದರೆ, ಪರಲೋಕದಲ್ಲಿ ಮುಸ್ಲಿಮರ ಹೊರತು ಬೇರೆ ಯಾರೂ ಮೋಕ್ಷವನ್ನು ಪಡೆಯಲಾರರು. ಅಂದರೆ, ಅಲ್ಲಾಹುವಿನಲ್ಲಿ ವಿಶ್ವಾಸವಿಟ್ಟು, ಅವನ ಆರಾಧನೆಯಲ್ಲಿ ಯಾರನ್ನೂ ಸಹಭಾಗಿಯನ್ನಾಗಿಸದೆ, ಮತ್ತು ಎಲ್ಲಾ ಪ್ರವಾದಿಗಳು ಹಾಗೂ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟ ಮುಸ್ಲಿಮರು. ಆದ್ದರಿಂದ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟ ಮತ್ತು ಅವರನ್ನು ಸತ್ಯವೆಂದು ಒಪ್ಪಿಕೊಂಡ ಎಲ್ಲಾ ಅನುಯಾಯಿಗಳು ಸ್ವರ್ಗವನ್ನು ಪ್ರವೇಶಿಸುವರು ಮತ್ತು ನರಕದಿಂದ ಪಾರಾಗುವರು.
ಪ್ರವಾದಿ ಮೂಸಾ ರವರ ಕಾಲದಲ್ಲಿದ್ದು, ಅವರಲ್ಲಿ ವಿಶ್ವಾಸವಿಟ್ಟು, ಅವರ ಬೋಧನೆಗಳನ್ನು ಅನುಸರಿಸಿದವರೆಲ್ಲರೂ ಮುಸ್ಲಿಮರು ಮತ್ತು ಸಜ್ಜನ ಸತ್ಯವಿಶ್ವಾಸಿಗಳಾಗಿದ್ದರು. ಆದರೆ, ಅಲ್ಲಾಹು ಈಸಾ ರನ್ನು ಕಳುಹಿಸಿದ ನಂತರ, ಮೂಸಾ ರ ಅನುಯಾಯಿಗಳು ಈಸಾ ರಲ್ಲಿ ವಿಶ್ವಾಸವಿಡುವುದು ಮತ್ತು ಅವರನ್ನು ಅನುಸರಿಸುವುದು ಕಡ್ಡಾಯವಾಗಿತ್ತು.
ಆದ್ದರಿಂದ, ಯಾರು ಈಸಾ ರಲ್ಲಿ ವಿಶ್ವಾಸವಿಟ್ಟರೋ ಅವರು ಸಜ್ಜನ ಮುಸ್ಲಿಮರಾದರು. ಯಾರು ಈಸಾ ರಲ್ಲಿ ವಿಶ್ವಾಸವಿಡಲು ನಿರಾಕರಿಸಿ, 'ನಾನು ಮೂಸಾ ರವರ ಧರ್ಮದಲ್ಲಿಯೇ ಉಳಿಯುತ್ತೇನೆ' ಎಂದು ಹೇಳಿದನೋ, ಅವನು ಸತ್ಯನಿಷೇಧಿಯಾದನು. ಏಕೆಂದರೆ ಅವನು ಅಲ್ಲಾಹು ಕಳುಹಿಸಿದ ಪ್ರವಾದಿಯನ್ನು ನಿರಾಕರಿಸಿದನು.
ನಂತರ, ಅಲ್ಲಾಹಹು ತನ್ನ ಅಂತಿಮ ಪ್ರವಾದಿಯಾದ ಮುಹಮ್ಮದ್ (ﷺ) ರನ್ನು ಕಳುಹಿಸಿದಾಗ, ಎಲ್ಲರೂ ಅವರಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಯಿತು. ಮೂಸಾ ಮತ್ತು ಈಸಾ ರನ್ನು ಕಳುಹಿಸಿದ ಅಲ್ಲಾಹುವೇ ಅಂತಿಮ ಪ್ರವಾದಿಯಾದ ಮುಹಮ್ಮದ್ ರನ್ನೂ ಕಳುಹಿಸಿದ್ದಾನೆ. ಆದ್ದರಿಂದ, ಯಾರು ಮುಹಮ್ಮದ್ (ﷺ) ರವರ ಸಂದೇಶವನ್ನು ತಿರಸ್ಕರಿಸಿ, 'ನಾನು ಮೂಸಾ ಅಥವಾ ಈಸಾ ರವರ ಅನುಯಾಯಿಯಾಗಿಯೇ ಉಳಿಯುತ್ತೇನೆ' ಎಂದು ಹೇಳುತ್ತಾನೋ ಅವನು ಸತ್ಯವಿಶ್ವಾಸಿಯಲ್ಲ.
ಒಬ್ಬ ವ್ಯಕ್ತಿಯು ತಾನು ಮುಸ್ಲಿಮರನ್ನು ಗೌರವಿಸುತ್ತೇನೆ ಎಂದು ಹೇಳಿದರೆ ಸಾಲದು. ಅಥವಾ ಪರಲೋಕದಲ್ಲಿ ಮೋಕ್ಷ ಪಡೆಯಲು ದಾನ ಮಾಡುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಕೂಡ ಸಾಕಾಗುವುದಿಲ್ಲ. ಬದಲಾಗಿ, ಅಲ್ಲಾಹು ಅವನಿಂದ (ಸತ್ಕರ್ಮಗಳನ್ನು) ಸ್ವೀಕರಿಸಬೇಕಾದರೆ, ಅವನು ಅಲ್ಲಾಹುವಿನಲ್ಲಿ, ಅವನ ಗ್ರಂಥಗಳಲ್ಲಿ, ಅವನ ಪ್ರವಾದಿಗಳಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಟ್ಟಿರಲೇಬೇಕು! ಅಲ್ಲಾಹುವಿನೊಂದಿಗೆ ಸಹಭಾಗಿತ್ವ ಮಾಡುವುದು (ಶಿರ್ಕ್), ಅವನನ್ನು ನಿಷೇಧಿಸುವುದು (ಕುಫ್ರ್), ಅವನು ಅವತೀರ್ಣಗೊಳಿಸಿದ ದೇವವಾಣಿಯನ್ನು (ಕುರ್‌ಆನ್) ತಿರಸ್ಕರಿಸುವುದು, ಅಥವಾ ಅವನ ಅಂತಿಮ ಪ್ರವಾದಿಯಾದ ಮುಹಮ್ಮದ್ (ﷺ) ರವರ ಪ್ರವಾದಿತ್ವವನ್ನು ನಿಷೇಧಿಸುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ.
ಅಲ್ಲಾಹುವಿನ ಪ್ರವಾದಿಯಾದ ಮುಹಮ್ಮದ್ (ﷺ) ರವರ ಆಗಮನದ ಬಗ್ಗೆ ಕೇಳಿಯೂ, ಅವರಲ್ಲಿ ವಿಶ್ವಾಸವಿಡಲು ನಿರಾಕರಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒಪ್ಪದ ಯಹೂದಿಗಳು, ಕ್ರೈಸ್ತರು ಮತ್ತು ಇತರರು ನರಕಾಗ್ನಿಯಲ್ಲಿ ಶಾಶ್ವತವಾಗಿ ಇರುವರು. ಇದು ಅಲ್ಲಾಹುವಿನ ತೀರ್ಪಾಗಿದೆಯೇ ಹೊರತು, ಯಾವುದೇ ಮಾನವನ ತೀರ್ಪಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:
﴿إِنَّ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ فِي نَارِ جَهَنَّمَ خَالِدِينَ فِيهَا ۚ أُولَـٰئِكَ هُمْ شَرُّ الْبَرِيَّة 6﴾
“ನಿಶ್ಚಯವಾಗಿಯೂ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವತ್ವವಾದಿಗಳು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿರುತ್ತಾರೆ. ಅವರೇ ಸೃಷ್ಟಿಗಳಲ್ಲಿ ಅತಿನಿಕೃಷ್ಟರು.”
[ಅಲ್-ಬಯ್ಯಿನ:6].
ಅಲ್ಲಾಹುವಿನ ಕಡೆಯಿಂದ ಮಾನವಕುಲಕ್ಕೆ ಅಂತಿಮ ಸಂದೇಶವು ಇಳಿಸಲ್ಪಟ್ಟಿರುವುದರಿಂದ, ಇಸ್ಲಾಂನ ಬಗ್ಗೆ ಮತ್ತು ಅಂತಿಮ ಪ್ರವಾದಿಯಾದ ಮುಹಮ್ಮದ್ (ﷺ) ರವರ ಸಂದೇಶದ ಬಗ್ಗೆ ಕೇಳುವ ಪ್ರತಿಯೊಬ್ಬ ವ್ಯಕ್ತಿಯ ಮೇಲೂ, ಅವರಲ್ಲಿ ವಿಶ್ವಾಸವಿಡುವುದು, ಅವರ ಧರ್ಮಶಾಸನವನ್ನು (ಶರೀಅತ್) ಅನುಸರಿಸುವುದು, ಮತ್ತು ಅವರ ಆದೇಶ ಹಾಗೂ ನಿಷೇಧಗಳಲ್ಲಿ ಅವರಿಗೆ ವಿಧೇಯರಾಗಿರುವುದು ಕಡ್ಡಾಯವಾಗಿದೆ. ಆದ್ದರಿಂದ, ಯಾರು ಈ ಅಂತಿಮ ಸಂದೇಶದ ಬಗ್ಗೆ ಕೇಳಿಯೂ ಅದನ್ನು ತಿರಸ್ಕರಿಸುತ್ತಾನೋ, ಅಲ್ಲಾಹು ಅವನಿಂದ ಏನನ್ನೂ ಸ್ವೀಕರಿಸುವುದಿಲ್ಲ, ಮತ್ತು ಪರಲೋಕದಲ್ಲಿ ಅವನಿಗೆ ಶಿಕ್ಷೆ ವಿಧಿಸುತ್ತಾನೆ.
ಇದಕ್ಕಿರುವ ಪುರಾವೆಗಳಲ್ಲೊಂದು ಅಲ್ಲಾಹುವಿನ ಈ ವಚನ:
﴿وَمَنْ يَبْتَغِ غَيْرَ الْإِسْلَامِ دِينًا فَلَنْ يُقْبَلَ مِنْهُ وَهُوَ فِي الْآخِرَةِ مِنَ الْخَاسِرِينَ85﴾
“ಯಾರಾದರೂ ಇಸ್ಲಾಂ ಅಲ್ಲದ (ಅಲ್ಲಾಹನಿಗಿರುವ ಶರಣಾಗತಿಯಲ್ಲದ) ಬೇರೆ ಧರ್ಮವನ್ನು ಹುಡುಕುವುದಾದರೆ, ಅದನ್ನು ಎಂದಿಗೂ ಅವನಿಂದ ಸ್ವೀಕರಿಸಲಾಗುವುದಿಲ್ಲ; ಮತ್ತು ಅವನು ಪರಲೋಕದಲ್ಲಿ ನಷ್ಟ ಹೊಂದಿದವರಲ್ಲಿ ಸೇರುವನು.”
[ಸೂರ ಆಲ್ ಇಮ್ರಾನ್: 180].
ಅತ್ಯುನ್ನತನಾದ ಅಲ್ಲಾಹು ಹೇಳುತ್ತಾನೆ:
﴿قُلْ يَا أَهْلَ الْكِتَابِ تَعَالَوْا إِلَى كَلِمَةٍ سَوَاءٍ بَيْنَنَا وَبَيْنَكُمْ أَلَّا نَعْبُدَ إِلَّا اللَّهَ وَلَا نُشْرِكَ بِهِ شَيْئًا وَلَا يَتَّخِذَ بَعْضُنَا بَعْضًا أَرْبَابًا مِنْ دُونِ اللَّهِ فَإِنْ تَوَلَّوْا فَقُولُوا اشْهَدُوا بِأَنَّا مُسْلِمُونَ 64﴾
“(ಓ ಪ್ರವಾದಿಯವರೇ!) ಹೇಳಿರಿ: ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಒಂದು ವಚನದೆಡೆಗೆ ಬನ್ನಿರಿ. ಅಂ
ದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಕೆಲವರು ಕೆಲವರನ್ನು ಅಲ್ಲಾಹನ ಹೊರತಾಗಿರುವ ಪ್ರಭುಗಳನ್ನಾಗಿ ಮಾಡದಿರೋಣ. ತರುವಾಯ ಅವರೇನಾದರೂ ವಿಮುಖರಾಗುವುದಾದರೆ ನಾವು (ಅಲ್ಲಾಹನಿಗೆ) ಶರಣಾಗತರಾಗಿರುವೆವು ಎಂಬುದಕ್ಕೆ ನೀವು ಸಾಕ್ಷ್ಯ ವಹಿಸಿರಿ ಎಂದು ಅವರೊಂದಿಗೆ ಹೇಳಿರಿ.
[ಆಲು ಇಮ್ರಾನ್: 64].
ಮುಸಲ್ಮಾನನಿಗೆ ಏನೆಲ್ಲಾ ಕಡ್ಡಾಯವಾಗಿದೆ?
ಒಬ್ಬ ಮುಸಲ್ಮಾನನು ಈ ಆರು ಸ್ತಂಭಗಳಲ್ಲಿ ವಿಶ್ವಾಸವಿಡುವುದು ಕಡ್ಡಾಯವಾಗಿದೆ:
ಸರ್ವಶಕ್ತನಾದ ಅಲ್ಲಾಹುವಿನಲ್ಲಿ ವಿಶ್ವಾಸವಿಡುವುದು: ಅಂದರೆ, ಅವನೇ ಸೃಷ್ಟಿಕರ್ತ, ಪೋಷಕ, ನಿಯಂತ್ರಕ ಮತ್ತು ಮಾಲೀಕ ಎಂದು ನಂಬುವುದು. ಅವನಿಗೆ ಸಮನಾದವರು ಯಾರೂ ಇಲ್ಲ, ಅವನಿಗೆ ಪತ್ನಿ ಅಥವಾ ಮಗನಿಲ್ಲ. ಆರಾಧನೆಗೆ ಅರ್ಹನು ಅವನು ಮಾತ್ರ. ಅವನೊಂದಿಗೆ ಬೇರೆ ಯಾರನ್ನೂ ಆರಾಧಿಸಬಾರದು, ಮತ್ತು ಅವನಲ್ಲದೆ ಆರಾಧಿಸಲಾಗುವ ಇತರ ದೇವರುಗಳಿಗೆ ಸಲ್ಲಿಸಲಾಗುವ ಎಲ್ಲಾ ಆರಾಧನೆಗಳು ವ್ಯರ್ಥ ಎಂದು ನಂಬುವುದು.
ದೇವದೂತರು ದೇವರ ಸೇವಕರು ಎಂದು ನಂಬುವುದು, ಅವರನ್ನು ಬೆಳಕಿನಿಂದ ಸೃಷ್ಟಿಸಲಾಗಿದೆ ಮತ್ತು ಪ್ರವಾದಿಗಳಿಗೆ ವಾಕ್ಯವನ್ನು ತರುವುದು ಅವರ ಕೆಲಸ ಎಂದು ನಂಬುವುದು.
ಅಲ್ಲಾಹು ತನ್ನ ಪ್ರವಾದಿಗಳ ಮೇಲೆ ಇಳಿಸಿಕೊಟ್ಟ ಎಲ್ಲಾ ಗ್ರಂಥಗಳಲ್ಲಿ (ಉದಾಹರಣೆಗೆ, ತೌರಾತ್ ಮತ್ತು ಇಂಜೀಲ್ - ಅವು ಪರಿವರ್ತನೆಗೊಳ್ಳುವುದಕ್ಕೆ ಮೊದಲಿದ್ದ ಸ್ಥಿತಿಯಲ್ಲಿ ವಿಶ್ವಾಸವಿಡುವುದು) ಮತ್ತು ಅಂತಿಮ ಗ್ರಂಥವಾದ ಪವಿತ್ರ ಕುರ್‌ಆನ್‌ನಲ್ಲಿ ವಿಶ್ವಾಸವಿಡುವುದು.
ನೂಹ್, ಇಬ್ರಾಹಿಂ, ಮೂಸಾ, ಈಸಾ ಮತ್ತು ಕೊನೆಯವರಾಗಿ ಮುಹಮ್ಮದ್ ಸೇರಿದಂತೆ ಎಲ್ಲಾ ರಸೂಲುಗಳನ್ನು ನಂಬುವುದು ಅತ್ಯಂತ ಮುಖ್ಯ. ಅವರೆಲ್ಲರೂ ಮಾನವರಾಗಿದ್ದರು ಮತ್ತು ಅಲ್ಲಾಹನಿಂದ ವಹಿಯನ್ನು ಪಡೆದರು. ಅಲ್ಲಾಹನು ಅವರಿಗೆ ತಮ್ಮ ಸತ್ಯವನ್ನು ಸಾಬೀತುಪಡಿಸಲು ಅನೇಕ ಚಿಹ್ನೆಗಳು ಮತ್ತು ಅದ್ಭುತಗಳನ್ನು ನೀಡಿದನು.
ಎಲ್ಲಾ ಮಾನವರು ಮರಣಾನಂತರ ಪುನರುತ್ಥಾನಗೊಳ್ಳುವ ದಿನ, ಅಂದರೆ ಪ್ರವಾದಿಗಳು ಮತ್ತು ಸಾಮಾನ್ಯ ಜನರು ಎಲ್ಲರೂ ಪುನರ್ಜೀವನಗೊಳ್ಳುವ ದಿನದಲ್ಲಿ ಅಲ್ಲಾಹನು ಎಲ್ಲಾ ಜೀವಿಗಳ ನಡುವೆ ನ್ಯಾಯಯುತವಾಗಿ ತೀರ್ಪು ನೀಡುತ್ತಾನೆ ಮತ್ತು ನಂಬಿಕೆಯುಳ್ಳವರನ್ನು ಸ್ವರ್ಗಕ್ಕೆ ಮತ್ತು ನಂಬಿಕೆಯಿಲ್ಲದವರನ್ನು ನರಕಕ್ಕೆ ಕಳುಹಿಸುತ್ತಾನೆ ಎಂಬ ನಂಬಿಕೆ.
ವಿಧಿಯಲ್ಲಿ (ಖದ್ರ್) ವಿಶ್ವಾಸವಿಡುವುದು. ಅಂದರೆ, ಭೂತಕಾಲದಲ್ಲಿ ಏನಾಗಿತ್ತು ಮತ್ತು ಭವಿಷ್ಯದಲ್ಲಿ ಏನಾಗಲಿದೆ ಎಂಬ ಪ್ರತಿಯೊಂದು ವಿಷಯವನ್ನು ಅಲ್ಲಾಹು ತಿಳಿದಿದ್ದಾನೆ, ಅವನು ಅದನ್ನು ಈಗಾಗಲೇ ತಿಳಿದಿದ್ದಾನೆ, ಬರೆದಿದ್ದಾನೆ, ಇಚ್ಛಿಸಿದ್ದಾನೆ ಮತ್ತು ಎಲ್ಲವನ್ನೂ ಸೃಷ್ಟಿಸಿದ್ದಾನೆ ಎಂದು ನಂಬುವುದು.
ಅಲ್ಲಾಹು ವಿಧಿಸಿದಂತೆ ನಮಾಝ್, ಝಕಾತ್, ಉಪವಾಸ, ಮತ್ತು ಸಾಧ್ಯವಾದರೆ ಹಜ್ ಮಾಡುವ ಮೂಲಕ ಅವನನ್ನು ಆರಾಧಿಸುವುದು. ನಂತರ, ಮನುಷ್ಯನು, ಇಹಲೋಕದಲ್ಲಿ ತನ್ನ ಸಂತೋಷಕ್ಕೆ ಮತ್ತು ಪರಲೋಕದಲ್ಲಿ ತನ್ನ ಮೋಕ್ಷಕ್ಕೆ ಕಾರಣವಾಗುವ ತನ್ನ ಧರ್ಮವನ್ನು ಕಲಿಯುವುದು.
***
ಪರಿವಿಡಿ
ಈ ಪರಿಪಾಲಕ ಸೃಷ್ಟಿಕರ್ತ ಅನ್ನದಾತ ಅವನೇ ಪರಮ ಪಾವನ ಸರ್ವಶಕ್ತ ಅಲ್ಲಾಹನಾಗಿದ್ದಾನೆ 8
ಸೃಷ್ಟಿಕರ್ತ ಮತ್ತು ಪರಿಪಾಲಕ ಪ್ರಭುವಿನ ಗುಣಲಕ್ಷಣಗಳು 10
ಪರಿಪಾಲಕ ಆರಾಧ್ಯನು ತನ್ನ ಎಲ್ಲಾ ಗುಣಲಕ್ಷಣಗಳಲ್ಲಿ ಪರಿಪೂರ್ಣನಾಗಿದ್ದಾನೆ. 12
ಈ ಮಹಾನ್ ಸೃಷ್ಟಿಕರ್ತ ನಮ್ಮನ್ನೇಕೆ ಸೃಷ್ಟಿಸಿದ್ದಾನೆ? ಅವನು ನಮ್ಮಿಂದ ಬಯಸುವುದೇನು? 18
ಇಷ್ಟೊಂದು ಸಂದೇಶವಾಹಕರು ಏಕೆ ಬಂದರು? 24
ಎಲ್ಲಾ ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವವರೆಗೆ ಒಬ್ಬ ವ್ಯಕ್ತಿ ಸತ್ಯವಿಶ್ವಾಸಿಯಾಗಲಾರ. 25
ಪವಿತ್ರ ಕುರ್‌ಆನ್ ಎಂದರೇನು? 28
ಇಸ್ಲಾಂ ಎಂದರೇನು? 30
ಇಸ್ಲಾಂ ಸಂತೋಷದ ಮಾರ್ಗವಾಗಿದೆ 35
ಮುಸ್ಲಿಮನು ಇಹಲೋಕ ಮತ್ತು ಪರಲೋಕದಲ್ಲಿ ಯಾವ ಯಾವ ಪ್ರಯೋಜನಗಳನ್ನು ಪಡೆಯುತ್ತಾನೆ? 36
ಮುಸ್ಲಿಮೇತರರು ಏನನ್ನು ಕಳೆದುಕೊಳ್ಳುತ್ತಾರೆ? 38
ಪರಲೋಕದಲ್ಲಿ ಮೋಕ್ಷವನ್ನು ಬಯಸುವವನು, ಅಲ್ಲಾಹುವಿಗೆ ವಿಧೇಯರಾಗಿರುವ ಮತ್ತು ಅವನ ಪ್ರವಾದಿ ಮುಹಮ್ಮದ್ (ﷺ) ರನ್ನು ಅನುಸರಿಸುವ ಮುಸ್ಲಿಮನಾಗಿರ ಬೇಕಾದುದು ಕಡ್ಡಾಯವಾಗಿದೆ. 40
ಮುಸಲ್ಮಾನನಿಗೆ ಏನೆಲ್ಲಾ ಕಡ್ಡಾಯವಾಗಿದೆ? 45
kn443v1.0 - 02/10/2026